ವಿಜಯಪುರ: ತಂದೆ, ತಾಯಿ, ಅಜ್ಜಿ ಎಲ್ಲರನ್ನೂ ಕಳೆದುಕೊಂಡು ಅನಾಥಳಾಗಿದ್ದ ಹಿಂದೂ ಹುಡುಗಿಯೊಬ್ಬಳನ್ನು (Hindu) ಮಗಳಂತೆಯೇ ಸಾಕಿದ ಮುಸ್ಲಿಂ (Muslim) ವ್ಯಕ್ತಿ ಇದೀಗ ಆಕೆಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ (Marriage) ಮಾಡಿಸಿಕೊಟ್ಟು ಕೋಮು ಸೌಹಾರ್ದ ಮೆರೆದ ಘಟನೆ ವಿಜಯಪುರದಲ್ಲಿ ನಡೆದಿದೆ. ಕಳೆದ 13 ವರ್ಷಗಳ ಹಿಂದೆ ಬಾಲಕಿಯ ತಂದೆ ತಾಯಿ ಮೃತಪಟ್ಟಿದ್ದರು. ಬಳಿಕ ಆಕೆ ಅಜ್ಜಿಯೊಂದಿಗೆ ವಾಸವಿದ್ದಳು. ಆದರೆ ಕೆಲಕಾಲದ ನಂತರ ಅಜ್ಜಿಯೂ ತೀರಿಕೊಂಡಿದ್ದರಿಂದ ದಿಕ್ಕಿಲ್ಲದೇ ಅನಾಥಳಾಗಿದ್ದಳು. ಈ ಸಂದರ್ಭದಲ್ಲಿ ಪತ್ನಿ …
Read More »ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವರಿಗೆ ಮಾತ್ರ ಅವಕಾಶ : ಸುರ್ಜೆವಾಲಾ
ಮೈಸೂರು : ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವವರಿಗೆ ಮಾತ್ರ ಅವಕಾಶಗಳನ್ನು ನೀಡಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರು ಸಂಘಟಿಸುವ ಕುರಿತು ಸಭೆ ನಡೆಸಿದ ಅವರು ಬಿಜೆಪಿ ಪಕ್ಷದ ಆಡಳಿತದ ಕುರಿತು ಕಿಡಿಕಾರಿದ್ದಾರೆ. ಪೋನ್ ದುರ್ಬಳಕೆ ಸ್ಪೈ ಆರೋಪ ವಿಚಾರದಲ್ಲಿ ಮಾತನಾಡಿದ ಅವರು ಚುನಾಯಿತ ಸರ್ಕಾರವನ್ನು ಬೀಳಿಸಲು ಬಳಸಿದೆ ಎಂದು ಆರೋಪಿಸಿದರು, ಸರಕಾರ ಕಳೆದ ಎರಡು …
Read More »ಉತ್ತರ ಪ್ರದೇಶ ಚುನಾವಣೆ ಹಿನ್ನಲೆ ಮೀಸಲಾತಿ: ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪಾಠ!
ಬೆಂಗಳೂರು, ಜು. 31: ಮೀಸಲಾತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಜೊತೆಗೆ ಇದೇ ಸಂದರ್ಭದಲ್ಲಿ “ಮೀಸಲಾತಿ ಕುರಿತು ನಮಗೆ ಪಾಠ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ. “ಈ ಹಿಂದೆ ಹತ್ತು ವರ್ಷಗಳ ಕಾಲ ಯುಪಿಎ ಸರ್ಕಾರವಿದ್ದಾಗ ಹಿಂದುಳಿದ ವರ್ಗಕ್ಕೆ ಮೀಸಲು ಕೊಡುವ ಬಗ್ಗೆ ಎಐಸಿಸಿ ಅಧ್ಯಕ್ಷೆ …
Read More »ಅಣ್ಣಾಮಲೈ ಉಪವಾಸ ಕೂರುವುದಕ್ಕೂ ನಮಗೂ ಏನೂ ಸಂಬಂಧವಿಲ್ಲ
ಬೆಂಗಳೂರು: ಮೇಕೆದಾಟು ವಿಚಾರವಾಗಿ ಆಗಸ್ಟ್ 5ರಂದು ಉಪವಾಸ ಸತ್ಯಾಗ್ರಹ ಕೂರುವುದಾಗಿ ಹೇಳಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕ ಕೆಡಾರ್‍ನ ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕ ಸಿಂಗಂ ಅಂತಲೇ ಹೆಸರಾಗಿದ್ದ ಅಣ್ಣಾಮಲೈಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ, ಅವರು ಅವರ ಕೆಲಸ ಮಾಡುತ್ತಾರೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಅಣ್ಣಾಮಲೈ ಉಪವಾಸ ಕೂರುವುದಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. …
Read More »ಸಿಎಂ ಬದಲಾಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ!
ಬೆಂಗಳೂರು: ರಾಜ್ಯದಲ್ಲಿ ಹೊಸ ಸಿಎಂ ಅಧಿಕಾರ ವಹಿಸಿಕೊಂಡ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಆಗಲಿದೆ. ನಗರ ಪೊಲೀಸ್ ಆಯುಕ್ತ ಸ್ಥಾನಕ್ಕೇರಲು ನಾಲ್ವರು ಅಧಿಕಾರಿಗಳು ರೇಸ್ ನಲ್ಲಿದ್ದಾರೆ. ಆಗಸ್ಟ್ಗೆ ಪೊಲೀಸ್ ಆಯುಕ್ತರ ಅಧಿಕಾರ ಅವಧಿ ಅಂತ್ಯಗೊಳ್ಳಲಿದೆ. ಹೀಗಾಗಿ ಮುಂದಿನ ಪೊಲೀಸ್ ಆಯುಕ್ತರ ಹುದ್ದೆಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪ್ರತಾಪ್ ರೆಡ್ಡಿ, ಗುಪ್ತಚರ ವಿಭಾಗದ ಬಿ. ದಯಾನಂದ್, ಪೊಲೀಸ್ ತರಬೇತಿ ವಿಭಾಗದ ಅಮೃತ್ ಪೌಲ್, ರಾಜ್ಯ …
Read More »ಕುಡಿದ ಅಮಲಿನಲ್ಲಿ ಟೋಲ್ ಅನ್ನೆ ಗುದ್ದಿಕೊಂಡು ಹೋದ ಲಾರಿ ಚಾಲಕ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ದೇವನಹಳ್ಳಿ: ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 07 ರಲ್ಲಿ ಆಗಮಿಸಿದ ಲಾರಿ ಚಾಲಕನೋರ್ವ ಕುಡಿದ ಅಮಲಿನಲ್ಲಿ ಲಾರಿ ನಿಲ್ಲಿಸದೆ ಟೋಲ್ಗೆ ಗುದ್ದಿಕೊಂಡು ಹೋಗುವ ಮೂಲಕ ಅಟ್ಟಹಾಸ ಮೆರೆದಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಏರ್ ಪೋರ್ಟ್ ರಸ್ತೆಯ ಟೋಲ್ನಲ್ಲಿ ಬೆಂಗಳೂರಿನಿಂದ ದೇವನಹಳ್ಳಿ ಕಡೆ ಖಾಲಿ ಲಾರಿಯೊಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ಆಗಮಿಸಿದೆ. ಶುಲ್ಕ ವಸೂಲಿಗೆ ಅಡ್ಡ ಹಾಕಿದಾಗ, ಚಾಲಕ ಗಾಡಿಯನ್ನು ನಿಲ್ಲಿಸದೆ ಟೋಲ್ಗೆ ಗುದ್ದಿಕೊಂಡು ಹೋಗಿದ್ದಾನೆ. ಎಲ್ಲಾ ವಾಹನಗಳಿಂದ …
Read More »ಯಾವುದೇ ಸಂಘದ ಅಭಿವೃದ್ಧಿಯಲ್ಲಿ ಅಧ್ಯಕ್ಷರು, ಅಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ: ಸತೀಶ ಜಾರಕಿಹೊಳಿ
ಗೋಕಾಕ: ಸಮೀಪದ ಸತ್ತಿಗೇರಿ ತೋಟದಲ್ಲಿ ಇಂದು ಹಮ್ಮಿಕೊಂಡಿದ್ದ ಚಕ್ರವರ್ತಿ ದಾನೇಶ್ವರ ಕೃಪಾ ಸಂಚಾರಿ ಕುರುಬರ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸಂಘದವರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಕುರಿಗಾಹಿಗಳು ಹಾಗೂ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಹೇಳಿದರು. ಯಾವುದೇ ಸಂಘ …
Read More »ಕ್ಯೂ ಜಾಸ್ತಿ ಇದ್ದರು ಮೊದಲು ನನ್ನ ಗಾಡಿಗೆ ಪೆಟ್ರೋಲ್ ಹಾಕೆಂದು ಹಲ್ಲೆ..!
ಬೆಂಗಳೂರು: ಪೆಟ್ರೋಲ್ ಬಂಕ್ ನಲ್ಲಿ ಮೊದಲು ನನ್ನ ಗಾಡಿಗೆ ಪೆಟ್ರೋಲ್ ಹಾಕಬೇಕೆಂದು ಹಲ್ಲೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಹಂಚಿಪುರದ ಪುಂಡರಿಂದ ಈ ಹಲ್ಲೆ ನಡೆದಿದೆ. ಪೆಟ್ರೋಲ್ ಬಂಕ್ ನಲ್ಲಿ ತುಂಬಾ ಕ್ಯೂ ಇತ್ತು. ಕಾರಣ ಕ್ಯೂನಲ್ಲಿ ಬರದೆ ನನ್ನ ಗಾಡಿಗೆ ಪೆಟ್ರೋಲ್ ಹಾಕಬೇಕೆಂದು ಹಂಚಿಪುರದ ಡೈರಿ ರಾಮಚಂದ್ರಪ್ಪನ ಮಗ ಗುಣ ಎಗರಾಡಿದ್ದನಂತೆ. ಆ ಬಳಿಕ ಮಾತಿಗೆ ಮಾತು ಬೆಳೆದು ಗುಣನಿಂದ ಹಲ್ಲೆ ನಡೆದಿದ್ದು, ಗುಣನ ಜೊತೆಗೆ ಬಿಎಂಟಿಸಿ …
Read More »ಜಿಎಸ್ಟಿ ಬಾಕಿ ಹಣ 11,400 ಕೋಟಿ ರೂ. ನೀಡಲು ಕೇಂದ್ರ ಒಪ್ಪಿಗೆ; ಕೊರೊನಾ ಲಸಿಕೆ ಪೂರೈಕೆ ಹೆಚ್ಚಿಸುವ ಭರವಸೆ: ಸಿಎಂ ಬೊಮ್ಮಾಯಿ
ದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಅಲ್ಲಿ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಜತೆ ಚರ್ಚೆ ನಡೆಸಿ ಮುಂದಿನ ತಿಂಗಳಿಂದ ರಾಜ್ಯಕ್ಕೆ 1.5 ಕೋಟಿ ಡೋಸ್ ಕೊರೊನಾ ಲಸಿಕೆ ಪೂರೈಸಲು ಮನವಿ ಸಲ್ಲಿಸಿದ್ದಾರೆ. ಕೊರೊನಾ ಲಸಿಕೆ ಬಗ್ಗೆ ಆರೋಗ್ಯ ಸಚಿವರ ಜತೆ ಚರ್ಚಿಸಿರುವ ಅವರು, ಪ್ರಸ್ತುತ 60ರಿಂದ 65 ಲಕ್ಷ ಡೋಸ್ ಲಸಿಕೆಯಷ್ಟಿರುವ ಪೂರೈಕೆಯನ್ನು 1.5 ಕೋಟಿ ಡೋಸ್ಗೆ ಹೆಚ್ಚಳ ಮಾಡಲು ಬೇಡಿಕೆ ಇಟ್ಟಿದ್ದಾಗಿ …
Read More »ಚಿಕ್ಕೋಡಿ: ಕಾಲೇಜು ಕಾಂಪೌಂಡ್ ಗೋಡೆಗೆ ಅಳವಡಿಸಿದ್ದ ಗೇಟ್ ಆಕಸ್ಮಿಕವಾಗಿ ಬಿದ್ದ ಕಾರಣ 10 ವರ್ಷದ ಬಾಲಕ ಸ್ಥಳದಲ್ಲಿಯೇ ಸಾವು
ಚಿಕ್ಕೋಡಿ: ಕಾಲೇಜು ಕಾಂಪೌಂಡ್ ಗೋಡೆಗೆ ಅಳವಡಿಸಿದ್ದ ಗೇಟ್ ಆಕಸ್ಮಿಕವಾಗಿ ಬಿದ್ದ ಕಾರಣ 10 ವರ್ಷದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಚಿಕ್ಕೋಡಿಯ ಆರ್.ಡಿ ಕಾಲೇಜಿನಲ್ಲಿ ನಡೆದಿದೆ. ಚಿಕ್ಕೋಡಿ ನಗರದ ಇಂದಿರಾನಗರ ನಿವಾಸಿಯಾಗಿದ್ದ ಸೂಫಿಯಾನ್ ರಾಜು ಮುಲ್ಲಾ (10) ಮೃತ ದುರ್ದೈವಿ. ಬಾಲಕ ಗೇಟ್ ದಾಟಿ ಮನೆಗೆ ಹೊರಟಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »