ವಿಜಯಪುರ: ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ 50 ಕೆಜಿ ಗಾಂಜಾ ಸಹಿತ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ನಾಗಠಾಣ ಗ್ರಾಮದಲ್ಲಿ ದಾಳಿ ನಡೆಸಿ ಮಂಜುನಾಥ ಪಾಟೀಲ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ತಕರಣ ದಾಖಲಾಗಿದೆ.
Read More »ಹದಿನೇಳು ದಿನಗಳ ಅಂತರದಲ್ಲಿ ಮದುವೆಯಾದ ಇಬ್ಬರು ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಸಾವು!
ಹಾಸನ: ಅದೊಂದು ಬಡಕುಟುಂಬ. ಆದರೆ ಅವರ ಸಂಸಾರದಲ್ಲಿ ಸುಖ, ಸಂತೋಷಕ್ಕೇನು ಕಡಿಮೆಯಿರಲಿಲ್ಲ. ತಂದೆ – ತಾಯಿ ಕೂಲಿ ಮಾಡಿ ತಮ್ಮ ನಾಲ್ಕು ಹೆಣ್ಣು ಮಕ್ಕಳಿಗೆ ಯಾವುದಕ್ಕೂ ಕೊರತೆಯಾಗದಂತೆ ಸಾಕುತ್ತಿದ್ದರು. ಆದರೆ ಆ ಸುಂದರ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಒಂದೇ ತಿಂಗಳಲ್ಲಿ ಮದುವೆಯಾಗಿದ್ದ ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು, ಇಡೀ ಕುಟುಂಬದ ಕಣ್ಣೀರಿನಲ್ಲಿ ಮುಳುಗಿದೆ. ಹಾಗಾದ್ರೆ ಆ ಕುಟುಂಬದಲ್ಲಿ ಅಂತಹದ್ದು ಏನಾಯಿತು. ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು ಹೇಗೆ ಈ …
Read More »ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದುವೆ ನಡೆಸಲು ಅನುಮತಿ: ಜಿಲ್ಲಾಧಿಕಾರಿ
ಮಂಗಳೂರು: ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಛತ್ರ, ಹೊಟೇಲ್, ರೆಸಾರ್ಟ್, ಸಭಾಂಗಣಗಳಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಇಂದಿನಿಂದ ಜಿಲ್ಲೆಯಾದ್ಯಂತ ಅವಕಾಶ ಕಲ್ಪಿಸಲಾಗಿದೆ. ಆದರೆ, 40ಕ್ಕಿಂತ ಹೆಚ್ಚು ಜನರು ಭಾಗವಹಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ,ವಿ. ಆದೇಶ ನೀಡಿದ್ದಾರೆ. ಮದುವೆ ನಡೆಸುವವರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ ಆಯುಕ್ತರು, ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಸ್ಥೆಯ ಮುಖ್ಯಾಧಿಕಾರಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು. ಸಂಬಂಧಪಟ್ಟ ಅಧಿಕಾರಿ 40 ಜನರ ಹೆಸರು …
Read More »ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ 8 ವರ್ಷದ ಬಾಲಕಿ
ಹಾವೇರಿ: ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಗುಂಡಗಟ್ಟಿ ಗ್ರಾಮದ ಕುಮಾರ ಗುಡದಳ್ಳಿ ಹಾಗೂ ಪೂರ್ಣಿಮಾ ದಂಪತಿಯ ಮಗಳಾದ 8 ವರ್ಷದ ನಮ್ರತಾ ಕುಮಾರ ಗುಡದಳ್ಳಿ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ನಮ್ರತಾ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಅಕ್ಕಿಆಲೂರಿನಲ್ಲಿ ಓದುತ್ತಿದ್ದಾಳೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ತನ್ನ ಹೆಸರನ್ನು ದಾಖಲಿಸಲು ಹಲವರು ವಿಷಯಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದಾಳೆ. 28 ರಾಜ್ಯಗಳು ಅವುಗಳ ರಾಜಧಾನಿಗಳು, 9 …
Read More »ಬಿಜೆಪಿ ಸರ್ಕಾರ ಪಾಪದ ಹಣದಿಂದಲೇ ಈ ದಿನ ಅಧಿಕಾರ ನಡೆಸುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಬಿಜೆಪಿ ಸರ್ಕಾರ ಪಾಪದ ಹಣದಿಂದಲೇ ಈ ದಿನ ಅಧಿಕಾರಕ್ಕೆ ಬಂದು ರಾಜಕಾರಣ ಮಾಡುತ್ತಿದೆ. ವಿಧಾನಸಭೆಯಿಂದ ಪಂಚಾಯಿತಿ ಮೆಂಬರ್ ವರೆಗೆ ಖರೀದಿ ಮಾಡುವ ನಡವಳಿಕೆ ಇಟ್ಟುಕೊಂಡಿರುವ ಬಿಜೆಪಿ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದ್ದಾರೆ. ಇಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಿ.ಕೆ ಪಾಳ್ಯದಲ್ಲಿ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಹಾಗೂ ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ …
Read More »‘ಕಬ್ಜ’ ನ್ಯೂ ಲುಕ್ ರಿಲೀಸ್ : ಉಪ್ಪಿ-ಕಿಚ್ಚನ ಅಭಿಮಾನಿಗಳು ಫುಲ್ ಖುಷ್
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟರಾಗಿ ಅಭಿನಯಿಸುತ್ತಿರುವ ಹಾಗೂ ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ಕಬ್ಜ’ ಸಿನಿಮಾದ ಹೊಸ ಪೋಸ್ಟರ್ ಇಂದು ( ಜೂನ್ 27) ಬಿಡುಗಡೆಯಾಗಿದೆ. ‘ಐ ಲವ್ ಯು’ ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಆರ್.ಚಂದ್ರು ಕಾಂಬಿನೇಶನ್ ನಲ್ಲಿ ‘ಕಬ್ಜ’ ಸಿನಿಮಾ ರೆಡಿಯಾಗುತ್ತಿದೆ. ಭೂಗತ ಲೋಕದ ಕಥಾಹಂದರ ಹೊಂದಿರುವ ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ …
Read More »ಆರಾಧನಾ ಸಮಿತಿಗೆ ಸರ್ಕಾರೇತರ ಸದಸ್ಯರನ್ನಾಗಿ ಮೇದಾರ ಓಣಿ ಬೆಳಗಾವಿಯ ಸತೀಶ ಕಾಕತಿಕರ ನೇಮಕ..!
ಬೆಳಗಾವಿ ಮಹಾನಗರ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಹಾಗೂ ಯುವ ಮುಖಂಡರಾದ ಸತೀಶ ಕಾಕತಿಕರ ಅವರನ್ನು ರಾಜ್ಯ ಸರ್ಕಾರ ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಆರಾಧನಾ ಸಮಿತಿಗೆ ಸರ್ಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ (nominate) ಮಾಡಿ ಆದೇಶ ಜಾರಿಗೊಳಿಸಿದೆ. ಮಾನ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಮುಜರಾಯಿ) ಇವರ ಆದೇಶ ಅನುಸಾರ ಕಳೆದ ವಾರದಲ್ಲಿ ಬೆಳಗಾವಿ ತಹಶಿಲ್ದಾರ ಕಚೇರಿಯಿಂದ ಸತೀಶ ಕಾಕತಿಕರ ಅವರಿಗೆ ಆದೇಶ ಪತ್ರವನ್ನು ಅಂಚೆ ಇಲಾಖೆ …
Read More »ವೀಕೆಂಡ್ ಕರ್ಫ್ಯೂಗೂ ಡೋಂಟ್ ಕೇರ್: ಮಾರುಕಟ್ಟೆಗಳಲ್ಲಿ ಖರೀದಿಗೆ ಮುಗಿಬಿದ್ದ ಜನರು..!
ಬೆಂಗಳೂರು : ಬೆಂಗಳೂರಿನಲ್ಲಿ ಹಂತ ಹಂತವಾಗಿ ಅನ್ ಲಾಕ್ ಘೋಷಣೆ ಬೆನ್ನಲ್ಲೇ ಜನರು ಕೋವಿಡ್ ನಿಯಮಾವಳಿಯನ್ನ ಗಾಳಿಗೆ ತೂರಿದ್ದಾರೆ. ರಾಜಧಾನಿಯ ಮಾರುಕಟ್ಟೆಗಳಲ್ಲಿ ಕೊರೊನಾ ಭಯವಿಲ್ಲದೆ ಜನರು ಖರೀದಿಯಲ್ಲೇ ಫುಲ್ ಬ್ಯುಸಿ ಆಗಿದ್ರು. ವೀಕೆಂಡ್ ಕರ್ಫ್ಯೂ ಇದ್ರೂ ಕೂಡ ಶಿವಾಜಿನಗರದಲ್ಲಿ ಜನಜಂಗುಳಿಯೇ ಸೇರಿತ್ತು. ಇಂದು ಭಾನುವಾರವಾದ ಹಿನ್ನೆಲೆಯಲ್ಲಿ ಮಟನ್, ಚಿಕ್ಕನ್ ಖರೀದಿಗೆ ಜನರು ಮುಗಿಬಿದ್ರು. ಸಣ್ಣ ಪುಟ್ಟ ರಸ್ತೆಗಳಲ್ಲೂ ಜನರು ತುಂಬಿದ್ರು. ಬೈಕ್, ಆಟೋ ಸಂಚಾರಕ್ಕೆ ಬ್ರೇಕ್ ಅನ್ನೋದೆ ಇರಲಿಲ್ಲ.. ಸಾಮಾಜಿಕ …
Read More »ಉತ್ತರ ಕನ್ನಡದ ಮಹಿಳೆಯಿಂದ ಅಂಗಾಂಗ ದಾನ; ಧಾರವಾಡದಿಂದ ಬೆಂಗಳೂರಿಗೆ ಮಹಿಳೆಯ ಲಿವರ್ ಏರ್‌ಲಿಫ್ಟ್
ಧಾರವಾಡ: ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಲಿವರ್ನ್ನು ಏರ್‌ಲಿಫ್ಟ್ ಧಾರವಾಡದ ಎಸ್ಡಿಎಂ ಆಸ್ಪತ್ರೆಯಿಂದ ಬೆಂಗಳೂರಿಗೆ ಮೂಲಕ ರವಾನಿಸಲಾಗಿದೆ. ಲೀವರ್ನ್ನು ಹುಬ್ಬಳಿಯ ವಿಮಾನ ನಿಲ್ದಾಣಕ್ಕೆ ರವಾನಿಸಲು ಗ್ರೀನ್ ಕಾರಿಡಾರ್ ಮೂಲಕ ಅಂಬ್ಯುಲೆನ್ಸ್‌ಗೆ ಪೊಲೀಸರು ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಅಂಗಾಗ ದಾನ ಮಾಡಿದ ಮಹಿಳೆಯ ಜತೆ ಪೊಲೀಸ್ ಇಲಾಖೆಯೂ ಮಾನವೀಯ ಕಾರ್ಯದಲ್ಲಿ ಕೈಜೋಡಿಸಿದೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಗ ದಾನ ಮಾಡಲಾಗಿದೆ. ಉತ್ತರ …
Read More »ಹುಬ್ಬಳ್ಳಿಯಲ್ಲಿ 10 ಜನರ ಕಣ್ಣು ಕಿತ್ತುಕೊಂಡ ಬ್ಲ್ಯಾಕ್ ಫಂಗಸ್- ಒಟ್ಟು 46 ಮಂದಿಗೆ ದೃಷ್ಟಿ ದೋಷ
ಹುಬ್ಬಳ್ಳಿ: ಕೊರೊನಾ ಎರಡನೇ ಅಲೆಯಲ್ಲಿ ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡಿರುವ ಸೋಂಕಿನ ತೀವ್ರತೆ ಕಡಿಮೆಯಾಗುವ ಮೊದಲೇ ಕರಿ ಮಾರಿ ಬ್ಲ್ಯಾಕ್ ಫಂಗಸ್ ತನ್ನ ಕರಾಳತೆಯನ್ನು ತೋರುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೂ 10 ಮಂದಿ ಫಂಗಸ್ನಿಂದ ಸಂಪೂರ್ಣ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 46 ಜನರಿಗೆ ದೃಷ್ಟಿ ದೋಷ ಕಂಡು ಬಂದಿತ್ತು. ಕೊರೊನಾದಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಂಡು ಬರುತ್ತಿದ್ದು, ಹಲವರಿಗೆ ಮೂಗಿನ ಮೂಲಕವೂ ಬ್ಲ್ಯಾಕ್ ಹಬ್ಬಿ, ಕಣ್ಣಿನ ನರಗಳಿಗೆ …
Read More »