Breaking News

ಚಾಮರಾಜನಗರ: ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ರಾಜ್ಯದಲ್ಲಿ ಯಾರೂ ನಿರೀಕ್ಷೆ ಮಾಡದ ವ್ಯಕ್ತಿ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಯತ್ನಾಳ್ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರಬೇಕು: ಬಸವರಾಜ್ ದಡೇಸಗೂರು ಚಾಮರಾಜನಗರದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಕುರಿತು ಹೈಕಮಾಂಡ್ ಕಾದು ನೋಡುತ್ತಿದೆ. ಎಷ್ಟು ಬೇಗ ಸಿಎಂ ಬಗಲಾಗುತ್ತಾರೋ ಅಷ್ಟು ಬೇಗ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರೂ ನಿರೀಕ್ಷೆ ಮಾಡದ ವ್ಯಕ್ತಿ ಸಿಎಂ ಆಗುತ್ತಾರೆ. ಒಳ್ಳೆಯವರು, ಪ್ರಾಮಾಣಿಕರು, ಹಿಂದುತ್ವದ ಪರ ಇರುವವರು ಸಿಎಂ ಆಗುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಕೆಟ್ಟವರೊಂದಿಗೆ ಒಳ್ಳೆಯವರ ಸೇರ್ಪಡೆ – ಬಿಎಸ್‍ವೈ ವಿರುದ್ಧ ಗುಡುಗಿದ ಯತ್ನಾಳ್ ಹೈಕಮಾಂಡ್ ಒಂದು ವೇಳೆ ನನಗೆ ಅವಕಾಶ ಕೊಟ್ಟರೆ ಬೇಡ ಅನ್ನಲ್ಲ. ಅಲ್ಲದೇ ಕೆಲವು ಶಾಸಕರು ಟಿಕೆಟ್ ಕೊಡಲ್ಲ ಅನ್ನೋ ಭಯದಿಂದ ಮಾತನಾಡುತ್ತಿಲ್ಲ ಅಂತಾ ತಮ್ಮದೇ ಪಕ್ಷದವರ ಬಗ್ಗೆ ಕಿಡಿಕಾರಿದ್ದಾರೆ. ಅಖಿಲ ಭಾರತ ಪಂಚಮಶಾಲಿ ಮಠಾಧೀಶರ ಒಕ್ಕೂಟ ಸ್ಥಾಪನೆ ರಾಜಕೀಯ ಪ್ರೇರಿತವಾಗಿದೆ. ನಿನ್ನೆ ಸಭೆ ಸೇರಿದ್ದವರು ಪಂಚಮಶಾಲಿ ಪೀಠಾದಿಪತಿಗಳಲ್ಲ, ಅವರೆಲ್ಲ ವಿರಕ್ತ ಮಠದ ಸ್ವಾಮೀಜಿ ಎಂದು ಹೇಳಿದ್ದಾರೆ.

ಚಾಮರಾಜನಗರ: ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ರಾಜ್ಯದಲ್ಲಿ ಯಾರೂ ನಿರೀಕ್ಷೆ ಮಾಡದ ವ್ಯಕ್ತಿ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಕುರಿತು ಹೈಕಮಾಂಡ್ ಕಾದು ನೋಡುತ್ತಿದೆ. ಎಷ್ಟು ಬೇಗ ಸಿಎಂ ಬಗಲಾಗುತ್ತಾರೋ ಅಷ್ಟು ಬೇಗ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರೂ ನಿರೀಕ್ಷೆ ಮಾಡದ ವ್ಯಕ್ತಿ ಸಿಎಂ ಆಗುತ್ತಾರೆ. ಒಳ್ಳೆಯವರು, ಪ್ರಾಮಾಣಿಕರು, ಹಿಂದುತ್ವದ ಪರ ಇರುವವರು …

Read More »

ಪೆಂಡಾಲ್ ಕೆಲಸದಲ್ಲೂ ನಂ.1,ಕುಲ ಭಾಂದವರಿಗೆ ಸಹಾಯ ಮಾಡೊದ್ರಲ್ಲೂ ನಂ.1ಬೆಳಗಾವಿಯ ಪಕ್ಕಿರಪ್ಪ ಮುರಗೋಡ..!!

ಪಕ್ಕಿರಪ್ಪ ಮುರಗೋಡ ಅಂದ್ರೆ ಬೆಳಗಾವಿ ಜಿಲ್ಲೆಯ ಪ್ರತಿಯೊಬ್ಬರ ಬಾಯಲ್ಲಿ ಬರೊದು ನಂ.1 ಪೆಂಡಾಲ್ ಗುತ್ತಿಗೆದಾರ ಅಂತ.ಮೇದಾರರಿಂದಲೇ ಮೇದಾರಿಕೆ ಕಲಿತು ಪೆಂಡಾಲ್ ಗುತ್ತಿಗೆದಾರರಾಗಿ, ಮೇದಾರರಿಗೆ ಹಿಂದಕ್ಕೆ ಹಾಕುತ್ತಿದ್ದ ಅನ್ಯ ಸಮಾಜದವರಿಗೆ ಪೈಪೋಟಿ ನೀಡಿ ನಂ.1 ಗುತ್ತಿಗೆದಾರ ಸ್ಥಾನ ಪಡೆಯುವಲ್ಲಿ ಕಿತ್ತೂರು ತಾಲೂಕಿನ ನಿವಾಸಿ ಪಕ್ಕಿರಪ್ಪ ಮುರಗೋಡ ಅವರು ಯಶಸ್ವಿಯಾಗಿದ್ದಾರೆ. ಸಾಕಷ್ಟು ಏಳು ಬೀಳು, ಕಷ್ಟ ನಷ್ಟಗಳನ್ನು ಅನುಭವಿಸಿ ಬೆಳಗಾವಿ ಜಿಲ್ಲೆಯಲ್ಲಿ ನಂ.1 ಗುತ್ತಿಗೆದಾರರಾಗಿ ಗುರುತಿಸಿಕೊಂಡಿದ್ದಾರೆ.ತಾವು ಗುತ್ತಿಗೆ ಹಿಡಿದ ಕೆಲಸದಲ್ಲಿ ತಾವಷ್ಟೇ ಅಲ್ಲದೆ …

Read More »

ಕಿತ್ತೂರಿನ ಅಮಾಯಕ ಮುದುಕಿಯ ಜಮೀನು ಕಿತ್ತು ಕೊಂಡ್ರ ಪ್ರಭಾವಿ ಗಳು…..? ನ್ಯಾಯ ಕೊಡಿಸಿ ಎಂದು ಅಂಗಲಾಚಿದ ಹಿರಿಯ ಜೀವ…

ಕಿತ್ತೂರ: ಕಿತ್ತೂರು ರಾಣಿ ಚೆನ್ನಮ್ಮನ ಕಿತ್ತೂರ ಇಲ್ಲಿ ಒಂದು ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ .ಚೆನ್ನಮನ ನಾಡಲ್ಲಿ ಇಂಥದೊಂದು ಘಟನೆ ನಡೆದದ್ದು ಎಲ್ಲರಿಗೂ ಒಂತರ ಆಶ್ಚರ್ಯ ತಂದಿದೆ. ಒಬ್ಬ ಹಿರಿಯ ಜೀವಿಯ ಆಸ್ತಿಯನ್ನ ಕೆಲವೊಂದಿಷ್ಟು ಜನ ಅವರಿಗೆ ಗೊತ್ತಾಗದಂತೆ ದಾಖಲಾತಿ ಗಳನ್ನ ತಿರುಚಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ ಎಂಬ ಆರೋಪ . ಹೌದು ಕಿತ್ತೂರಿನ ನಿವಾಸಿ ಇವರು ಸ್ವಲ್ಪ ಜನ ಕಿರಾತಕ ಜನ ಇವರನ್ನ ಯಾಮಾರಿಸಿ ತಮ್ಮ ಹೆಸರಿನಲ್ಲಿ ಇವರ …

Read More »

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

ಬೆಂಗಳೂರು : ಕರ್ನಾಟಕದ ನೂತನ ರಾಜ್ಯಪಾಲರಾಗಿ ಕೇಂದ್ರ ಸಚಿವರಾಗಿದ್ದ ತಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ಸೇರಿ 8ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದೆ. ತಾವರ್ ಚಂದ್ ಗೆಹ್ಲೋಟ್ ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. 73ವರ್ಷದ ಗೆಹ್ಲೋಟ್ ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕರಾಗಿದ್ದಾರೆ.

Read More »

ನನ್ನ ಮಗ ಡ್ರೈವಿಂಗ್ ಮಾಡುತ್ತಿರಲಿಲ್ಲ; ಮಂತ್ರಿ ಮಗನ ಹೆಸರು ಕೇಳಿಬಂದಾಗ ಚರ್ಚೆ ಸಹಜ: ಡಿಸಿಎಂ ಲಕ್ಷ್ಮಣ ಸವದಿ

ಬೆಂಗಳೂರು: ಪುತ್ರ ಚಿದಾನಂದ ಕಾರು ಅಪಘಾತ ಪ್ರಕರಣದಲ್ಲಿ ರೈತ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ, “ನನ್ನ ಮಗ ಡ್ರೈವಿಂಗ್ ಮಾಡಲ್ಲ. ಕಾರನ್ನು ಚಾಲಕ ಓಡಿಸುತ್ತಿದ್ದ” ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, “ನನ್ನ ಮಗ ಚಿದಾನಂದ ಡ್ರೈವಿಂಗ್ ಮಾಡಲ್ಲ. ಅವನಿಗೆ ಡ್ರೈವರ್ ಇದ್ದಾನೆ. ಮೊದಲಿನಿಂದಲೂ ಆತನೇ ಕಾರು ಓಡಿಸುವುದು. ನನ್ನ ಮಗ ಮುಂದೆ ಫಾರ್ಚುನ್ ಕಾರಲ್ಲಿದ್ದ. ಆತನ ಸ್ನೇಹಿತರು ಇನ್ನೊಂದು ಗಾಡಿಯಲ್ಲಿದ್ದರು. ಡಿವೈಡರ್ …

Read More »

ನಲಪಾಡ್‌ಗೂ ಯುವ ಕಾಂಗ್ರೆಸ್‌ ಅಧ್ಯಕ್ಷ ಪಟ್ಟ : ಹುದ್ದೆ ಕೊಡಿಸುವಲ್ಲಿ ಡಿಕೆಶಿ ಯಶಸ್ವಿ

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷಗಿರಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್‌ ಮೇಲುಗೈ ಸಾಧಿಸಿದ್ದು, ಮುಂದಿನ ಜನವರಿಯಲ್ಲಿ ಮಹಮದ್‌ ನಲಪಾಡ್‌ಗೆ ಪಟ್ಟ ಸಿಗಲಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಈ ಕುರಿತು ಅಧಿಕೃತ ಪ್ರಕಟನೆ ಹೊರಡಿಸಿದ್ದು, ರಕ್ಷಾ ರಾಮಯ್ಯ 2022ರ ಜ. 31ರ ವರೆಗೆ ಅಧ್ಯಕ್ಷರಾಗಿರಲಿದ್ದು, ಅನಂತರ ನಲಪಾಡ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ವಾರದ ಹಿಂದೆ ರಾಜಿ ಸಂಧಾನ ಏರ್ಪಟ್ಟು ಡಿಸೆಂಬರ್‌ವರೆಗೆ ರಕ್ಷಾ ರಾಮಯ್ಯ …

Read More »

ಶಾಲಾ ದಾಖಲಾತಿಗೆ ಕೋವಿಡ್ ಅಡ್ಡಿ : 20 ದಿನ ಕಳೆದರೂ 1ನೇ ತರಗತಿಗೆ ಶೇ. 20 ದಾಖಲಾತಿಯಾಗಿಲ್ಲ

ಬೆಂಗಳೂರು : ದೇಶಾದ್ಯಂತ ಸತತ ಎರಡನೇ ವರ್ಷ ಕೊರೊನಾ ಕಾಡುತ್ತಿದ್ದು, ಇದು ಪ್ರಾಥಮಿಕ ಶಿಕ್ಷಣದ ಮೇಲೆಯೂ ಅಡ್ಡ ಪರಿಣಾಮ ಬೀರಿದೆ. ರಾಜ್ಯದಲ್ಲಿ ಶಾಲಾ ದಾಖಲಾತಿ ಆರಂಭವಾಗಿ ಆಗಲೇ 20 ದಿನ ಕಳೆದರೂ ಇದುವರೆಗೆ ಶೇ. 20ರಷ್ಟೂ ದಾಖಲಾತಿ ಆಗಿಲ್ಲ. ಅಷ್ಟೇ ಅಲ್ಲ, ಸರಕಾರಿ, ಖಾಸಗಿ, ಅನುದಾನಿತ ಶಾಲೆಗಳನ್ನು ಒಟ್ಟಾಗಿ ಸೇರಿಸಿದರೂ ಶೇ. 50ರ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಜು. 5ರ ವರೆಗೆ ರಾಜ್ಯಾದ್ಯಂತ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ದಾಖಲಾತಿಗೆ …

Read More »

ವಕೀಲರ ವೇಷದಲ್ಲಿ ಕೋರ್ಟಿಗೆ ಬಂದು ಶರಣಾದ ಕೊಲೆ ಆರೋಪಿಗಳು

ಬೆಂಗಳೂರು: ಹಾಡುಹಗಲೇ ಬನಶಂಕರಿ‌ ದೇವಾಲಯ‌ದ ಮುಂದೆ ಫೈನಾನ್ಸಿಯರ್ ಮದನ್​ ಎಂಬುವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ 7 ಮಂದಿ ಆರೋಪಿಗಳು ವಕೀಲರ ವೇಷದಲ್ಲಿ ನ್ಯಾಯಾಲಯದ‌ ಮುಂದೆ ಶರಣಾದರು.ವಕೀಲರ ವೇಷದಲ್ಲಿ ಕೋರ್ಟಿಗೆ ಬಂದ ‘ಬನಶಂಕರಿ’ ಹಂತಕರುಬೆಳಗ್ಗೆ 37ನೇ ಎಸಿಎಂಎಂ ಕೋರ್ಟ್ ಆವರಣದಲ್ಲಿ ವಕೀಲರ ಸೋಗಿನಲ್ಲಿ ಏಳು ಮಂದಿ ಆರೋಪಿಗಳು ಪ್ರತ್ಯಕ್ಷರಾಗಿದ್ದಾರೆ. ಜುಲೈ 2 ರಂದು ಬನಶಂಕರಿ ಮೆಟ್ರೋ ಸ್ಟೇಷನ್ ಬಳಿ ಫೈನಾನ್ಸಿಯರ್ ಆಗಿದ್ದ ಲಕ್ಕಸಂದ್ರ ನಿವಾಸಿ‌ ಮದನ್​ನನ್ನು ಹಿಂಬಾಲಿಸಿ ಮೂರು …

Read More »

ನೇತ್ರಾವತಿ ನದಿಗೆ ಸ್ನಾನಕ್ಕೆ ಇಳಿದ ಗದಗದ ಸಹೋದರರು ನೀರುಪಾಲು

ಮಂಗಳೂರು: ಇಲ್ಲಿನ ನೇತ್ರಾವತಿ ನದಿ ನೀರಿಗೆ ಸ್ನಾನಕ್ಕೆ ಇಳಿದ ಗದಗ ಮೂಲಕದ ಇಬ್ಬರು ಸಹೋದರರು ಸೋಮವಾರ ನೀರುಪಾಲಾಗಿ ಮೃತಪಟ್ಟಿದ್ದಾರೆ. ಉಪ್ಪಿನಂಗಡಿಯಲ್ಲಿ ತೋಟದ ಕಾರ್ಮಿಕರಾದ, ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸುಬ್ಬನಹಳ್ಳಿ ನಿವಾಸಿಯಾದ ಧರ್ಮ ಮತ್ತು ಮೀನಾಕ್ಷಿ ದಂಪತಿಯ ಮಕ್ಕಳಾದ ನಿಂಗರಾಜು (16) ಮತ್ತು ಸತೀಶ್ (14) ಮೃತರು. ‌ಬೆಳ್ತಂಗಡಿ ತಾಲ್ಲೂಕು ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿಂಗರಾಜು ಹತ್ತನೇ ತರಗತಿಯಲ್ಲಿ, ಆತನ ಸಹೋದರ ಸತೀಶ್, ಪುತ್ತೂರು ಬಲ್ನಾಡು …

Read More »

ಬೈಕ್‍ಗೆ ಡಿಕ್ಕಿ ಹೊಡೆದ ಲಕ್ಷ್ಮಣ್ ಸವದಿ ಪುತ್ರನ ಕಾರ್- ಸವಾರ ,ಚಿಕಿತ್ಸೆ ಫಲಕಾರಿಯಾಗದೇ ಕೂಡ್ಲೆಪ್ಪ ಸಾವನ್ನಪ್ಪಿದ್ದಾರೆ

ಬಾಗಲಕೋಟೆ: ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ್ ಕಾರ್ ಅಪಘಾತಕ್ಕೆ ಒಳಗಾಗಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಚಿತ್ರದುರ್ಗ-ಸೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಕೊಡ್ಲೆಪ್ಪ ಬೋಳಿ ಮೃತ ಬೈಕ್ ಸವಾರ. ಕುಡ್ಲೆಪ್ಪ ಹೊಲದಿಂದ ಮನೆಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಕಾರ್ ಡಿಕ್ಕಿಯಾಗುತ್ತಿದ್ದಂತೆ ಕೂಡ್ಲೆಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೂಡ್ಲೆಪ್ಪ ಸಾವನ್ನಪ್ಪಿದ್ದಾರೆ.ಬೈಕ್‍ಗೆ ಕಾರ್ ಡಿಕ್ಕಿಯಾಗುತ್ತಿದ್ದಂತೆ ಡಿಸಿಎಂ ಪುತ್ರ ಚಿದಾನಂದ್ …

Read More »