Breaking News

ಇಂದಿನಿಂದ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ : ದೇಶಾದ್ಯಂತ ನಡೆಯಲಿದೆ ಯಾತ್ರೆ

ಬೆಂಗಳೂರು: ರಾಷ್ಟ್ರಾದ್ಯಂತ ಕೇಂದ್ರದ ನೂತನ ಸಚಿವರಿಂದ ಜನಾಶೀರ್ವಾದ ಯಾತ್ರೆಗೆ ಸೋಮವಾರ ಚಾಲನೆ ದೊರೆಯಲಿದ್ದು, ರಾಜ್ಯದ ನಾಲ್ವರು ಕೇಂದ್ರ ಸಚಿವರು ತಮ್ಮ ವಿಭಾಗ ವ್ಯಾಪ್ತಿಯಲ್ಲಿ ಯಾತ್ರೆ ನಡೆಸಲಿದ್ದಾರೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಳೇ ಮೈಸೂರು ಭಾಗದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಹಾಯಕ ಸಚಿವ ನಾರಾಯಣಸ್ವಾಮಿ, ಬೆಂಗಳೂರು ವಿಭಾಗದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌, ಕರಾವಳಿ ಭಾಗದಲ್ಲಿ (ದಕ್ಷಿಣ ಕನ್ನಡ) …

Read More »

ಪ್ರಧಾನಿ ನುಡಿದಂತೆ ನಡೆಯುವುದಿಲ್ಲ : ಮಲ್ಲಿಕಾರ್ಜುನ್ ಖರ್ಗೆ

ನವದೆಹಲಿ : ಅಧಿಕಾರಕ್ಕೆ ಬಂದಾಗಿನಿAದ ಪ್ರಧಾನಮಂತ್ರಿ ಮೋದಿ ಬರೀ ಭಾಷಣ ಮಾಡುತ್ತಿದ್ದಾರೆ ಹೊರತು ಯಾವುದನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಇಂದು ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ಕುರಿತು ಪ್ರತಿಕ್ರಿಯೆ ನೀಡಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನುಡುಯುವುದೊಂದು ನಡೆಯುವುದೊಂದು ಎಂದು ಅಸಮಾಧಾನ ಹೊರ ಹಾಕಿದರು. ರೈತರ ಭವಿಷ್ಯಕ್ಕೆ ಹಾನಿಯಾಗುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು …

Read More »

ಮಹದಾಯಿ ಹೋರಾಟದಿಂದ ಅಧಿಕಾರಕ್ಕೆ ಬಂದಿದ್ದೇವೆ,ಮಹದಾಯಿ ಕೈತಪ್ಪಲು ಬಿಡುವುದಿಲ್ಲ : ಸಚಿವ ಮುನೇನಕೊಪ್ಪ

ಹುಬ್ಬಳ್ಳಿ : ಮಹದಾಯಿ ವಿಷಯದಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ರಾಜ್ಯದ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಹುಬ್ಬಳ್ಳಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಮಹದಾಯಿ ಮೂರು ರಾಜ್ಯಗಳ ಅಂತರಾಜ್ಯ ಸಮಸ್ಯೆ. ಹೀಗಾಗಿ ಕಾನೂನಾತ್ಮಕವಾಗಿ ಆ ಪ್ರಕ್ರಿಯೆ ಮುಂದುವರೆದಿದೆಈಗಾಗಲೇ 1677 ಕೋಟಿ ಮಹದಾಯಿಗಾಗಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಡಿಪಿಆರ್ ಮಾಡಲು ಸಿಡಬ್ಲ್ಯುಸಿಗೆ ಅನುಮತಿ ಕೇಳುವ ಪ್ರಯತ್ನದಲ್ಲಿದ್ದೇವೆ ಎಂದರು. ಮಹದಾಯಿ ಹೋರಾಟದಿಂದ …

Read More »

ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ ಸಿಎಂ

ಬೆಂಗಳೂರು: ವಿರೋಧಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ವೇದಿಕೆಯಿಂದಲೇ ಖಡಕ್ ಸಂದೇಶ ರವಾನಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ನನ್ನ ಬಗ್ಗೆ ಅನುಮಾನ, ಟೀಕೆಗಳು ವ್ಯಕ್ತವಾಗುತ್ತಿದೆ. ನನ್ನ ಬಗೆಗಿನ ಟೀಕೆಗಳು ನನಗೆ ಆಶಿರ್ವಾದ, ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಹೊಸ ಚಿಂತನೆ, ಹೊಸ ಹಾದಿ, ಹೊಸ ದಿಕ್ಸೂಚಿಯೊಂದಿಗೆ ನವ ಕರ್ನಾಟಕ ನಿರ್ಮಾಣದ ಸಂಕಲ್ಪ ಮಾಡಿದರು. ನನಗೆ ಕೇವಲ 20 …

Read More »

ನಾನು ಕೂಡ ಇದೇ ಅವಧಿಯಲ್ಲಿ ಸಿಎಂ ಆಗ್ತೀನಿ; ಉಮೇಶ್ ಕತ್ತಿ

ಬಾಗಲಕೋಟೆ: ಬಿಜೆಪಿಯಲ್ಲಿ ಖಾತೆ ಹಂಚಿಕೆ ಕ್ಯಾತೆ ಆರಂಭವಾಗಿರುವಾಗಲೇ ಇದೀಗ ಸಚಿವ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದು, ಇದೇ ಅವಧಿಯಲ್ಲಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಉಮೇಶ್ ಕತ್ತಿ, ಬರುವ ಅವಧಿಯಲ್ಲಿ ನಾನೂ ಕೂಡ ಸಿಎಂ ಆಗಬಹುದು. ಅದು ಕೂಡ ಇದೇ ಅವಧಿಯಲ್ಲಿ ಆಗುತ್ತೇನೆ. ನಾನೂ ಹಿರಿಯನಿದ್ದೇನೆ. ಸಾಕಷ್ಟು ರಾಜಕೀಯ ಅನುಭವಗಳಿವೆ. ಹಾಗಾಗಿ ಜೀವಂತ ಇದ್ದರೆ ಇದೇ ಅವಧಿಯಲ್ಲಿ ಸಿಎಂ ಆಗ್ತೇನೆ. ಸತ್ತರೆ …

Read More »

ಸಿದ್ದರಾಮಯ್ಯ ಹೇಳುವುದೆಲ್ಲ ಉಲ್ಟಾ ಆಗುತ್ತೆ; ಅವರ ಬಾಯಲ್ಲಿ ಉಲ್ಟಾ ಮಚ್ಚೆಯಿದೆ ಎಂದ ಸಿ.ಟಿ.ರವಿ

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿದ್ದು, ಸಿದ್ದರಾಮಯ್ಯ ಹೇಳುವುದೆಲ್ಲ ತದ್ವಿರುದ್ಧವಾಗುತ್ತೆ ಎಂದಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಸಿದ್ದರಾಮಯ್ಯ ಏನೇ ಹೇಳಿದರೂ ಅದು ಈವರೆಗೂ ಉಲ್ಟಾ ಆಗಿದೆ. ಇನ್ಮುಂದೆಯೂ ಹಾಗೇ ಆಗುತ್ತೆ. ಅವರ ಬಾಯಲ್ಲಿ ಉಲ್ಟಾ ಮಚ್ಚೆಯಿದೆ ಎಂದು ವ್ಯಂಗ್ಯವಾಡಿದ್ದಾರೆ. ಮೀನು ಹಿಡಿಯಲು ಹೋದವರಿಗೆ ಕಾದಿತ್ತು ಶಾಕ್…! ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದರು, ಆದರೆ ಮೋದಿ ಎರಡನೇ …

Read More »

ನಕಲಿ ಅಂಕಪಟ್ಟಿ ಸರಕಾರಿ, ಖಾಸಗಿ ಕೆಲಸ ಗಿಟ್ಟಿಸಿಕೊಂಡ ಹಲವರು ! ತನಿಖೆಯಲ್ಲಿ ಗೊತ್ತಾಗಿದೆ.

ಬೆಂಗಳೂರು, ಆ.14: ನಕಲಿ ಅಂಕಪಟ್ಟಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಪಂಜಾಬಿ ದಂಪತಿ ಬಂಧನ ಪ್ರಕರಣ ಸಂಬಂಧ ನಕಲಿ ಪದವಿ ಸ್ನಾತಕೋತ್ತರ ಅಂಕಪಟ್ಟಿ ಪಡೆದ ಕೆಲವರು ಖಾಸಗಿ ಹಾಗೂ ಸರಕಾರಿ ಕೆಲಸ ಗಿಟ್ಟಿಸಿಕೊಂಡಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ದಂಪತಿಯ ವಿಚಾರಣೆ ವೇಳೆ ನಕಲಿ ಅಂಕಪಟ್ಟಿಯ ಬೃಹತ್ ಜಾಲಪತ್ತೆಯಾಗಿದ್ದು, ದಂಪತಿಯಿಂದ ನಕಲಿ ಅಂಕಪಟ್ಟಿ ಪಡೆದವರ ಸಂಪೂರ್ಣ ಮಾಹಿತಿಯನ್ನು ಸಿಸಿಬಿ ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಪಿಯುಸಿ …

Read More »

ಬಸವನಾಡಿನಲ್ಲಿ ಭ್ರಷ್ಟರಿಗೆ ಅವಕಾಶ ಇಲ್ಲ, ನೀವು ಧ್ವಜಾರೋಹಣ ಮಾಡಬಾರದು; ಸಚಿವೆ ಶಶಿಕಲಾ‌ ಜೊಲ್ಲೆ ವಿರುದ್ಧ ಮಹಿಳೆಯರ ಆಕ್ರೋಶ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬರುತ್ತಿದ್ದ ಶಶಿಕಲಾ‌ ಜೊಲ್ಲೆಯವರನ್ನು ಮಹಿಳೆಯರು ತಡೆದು, ಭ್ರಷ್ಟಾಚಾರ ಆರೋಪ ಹೊತ್ತಿರುವ ನೀವು ಧ್ವಜಾರೋಹಣ ಮಾಡಬಾರದು ಎಂದು ಆಕ್ರೋಶ ಹೊರ ಹಾಕಿದ್ದಾರೆ. ವಿಜಯಪುರ: ಜಿಲ್ಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಚ್ ಮತ್ತು ವಕ್ಫ್ ಹಾಘೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ‌ ಜೊಲ್ಲೆ ಅವರಿಂದ ರಾಷ್ಟ್ರ ಧ್ವಜಾರೋಹಣ ನೆರವೇರಿಸಬಾರದೆಂದು ಒತ್ತಾಯಿಸಿ ಮಹಿಳೆಯರು …

Read More »

21 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಬ್ಬರು ಐಪಿಎಸ್‌ ಅಧಿಕಾರಿಗಳು ಸೇರಿ ರಾಜ್ಯದ 21 ಮಂದಿ ಪೊಲೀಸ್‌ ಅಧಿಕಾರಿಗಳು ಪ್ರಸಕ್ತ ಸಾಲಿನ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ. ಬೆಂಗಳೂರು ನಗರದ ಸಿಐಡಿಯ ಆರ್ಥಿಕ ವಿಭಾಗದ ಎಡಿಜಿಪಿ ಉಮೇಶ್‌ ಕುಮಾರ್‌, ರಾಜ್ಯದ ಆಂತರಿಕಾ ಭದ್ರತಾ ದಳ (ಐಎಸ್‌ಡಿ) ಎಡಿಜಿಪಿ ಜೆ. ಅರುಣ್‌ ಚಕ್ರವರ್ತಿ, ಕೆಎಸ್‌ಆರ್‌ಪಿ 3ನೇ ಬೆಟಾಲಿಯನ್‌ ಕಮಾಂಡೆಂಟ್‌ ಎಂ.ವಿ. ರಾಮಕೃಷ್ಣ ಪ್ರಸಾದ್‌, ಮಲ್ಲೇಶ್ವರಂ ಉಪವಿಭಾಗ ಎಸಿಪಿ ಕೆ.ಎಸ್‌.ವೆಂಕಟೇಶ್‌ ನಾಯ್ಡು, ಚಿಕ್ಕಪೇಟೆ ಉಪವಿಭಾಗದ ಎಸಿಪಿ …

Read More »

ಲ್ಲಾಡಳಿತದಿಂದ ಸರಳ 75ನೇ ಸ್ವಾತಂತ್ರ್ಯೋತ್ಸವ ಆಚರಣೆ;

ಬೆಳಗಾವಿ:  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ರವಿವಾರ (ಆ.೧೫) ೭೫ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭವನ್ನು ಆಚರಿಸಲಾಯಿತು. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಆಕರ್ಷಕ ಪಥಸಂಚಲನ: ಕವಾಯತ ಕಮಾಂಡರ್ ಆಡಿವೆಪ್ಪ ಎಸ್ ವಾರದ ಹಾಗೂ ಸಹಾಯಕ ಕವಾಯತ ಕಮಾಂಡರ್ ಎ.ಎಸ್ ಬೂದಿಗೊಪ್ಪ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ …

Read More »