ಚಿಕ್ಕಮಗಳೂರು : ಬಿಜೆಪಿ ಸರಕಾರ ಸುಭದ್ರ ಹಾಗೂ ಸುಸ್ಥಿರವಾಗಿದೆ, ನಮ್ಮ ಸರಕಾರ ಬೀಳುತ್ತೆ ಎಂಬ ವಿಚಾರದಲ್ಲಿ ಯಾರು ಕನಸು ಕಂಡರೂ ಅದು ನನಸಾಗುವುದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು ಇನ್ನು ಆರು ತಿಂಗಳಲ್ಲಿ ಬಿಜೆಪಿ ಸರಕಾರ ಬಿದ್ದು ಹೋಗುತ್ತದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರೀಯಿಸಿದ ಅವರು ಕನಸು ಕಾಣುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಕನಸು ಕಾಣುವುದು ತಪ್ಪಲ್ಲ, …
Read More »2022ರ ದಸರಾ ಹಬ್ಬದ ಮೊದಲೇ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಪೂರ್ಣ : ಪ್ರತಾಪ್ ಸಿಂಹ
ಮೈಸೂರು: ಮುಂದಿನ 2022ರ ದಸರಾ ಹಬ್ಬಕ್ಕೆ ಮುಂಚಿತವಾಗಿ ಬೆಂಗಳೂರು-ಮೈಸೂರು ಹತ್ತು ಪಥದ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನ ಮೊದಲ ಹಾಗೂ ಎರಡನೇ ಅಲೆ ಹಿನ್ನೆಲೆ ರಸ್ತೆ ಕಾಮಗಾರಿ ನಡೆಯೋದಿಲ್ಲ ಎಂಬ ಭಾವನೆ ಇತ್ತು. ಆದರೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 2022ರ ಮೈಸೂರು ದಸರಾ ವೇಳೆಗೆ ಸಿದ್ಧಗೊಳ್ಳಲಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದ ನೆರವು ಇಲ್ಲದೆ, ಸಂಪೂರ್ಣ ಕೇಂದ್ರ …
Read More »ಸರಕಾರಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸಿ : ಅಧಿಕಾರಿಗಳಿಗೆ ಸಚಿವೆ ಜೊಲ್ಲೆ ಸೂಚನೆ
ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸುವಂತೆ ಮುಜರಾಯಿ, ವಕ್ಪ್ ಮತ್ತು ಹಜ್ ಸಚಿವರಾದ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆಯಾದ ಮೇಲೆ ಬುಧವಾರ ಶಶಿಕಲಾ ಜೊಲ್ಲೆಯವರು ನೂತನ ಕಚೇರಿ ಪೂಜೆ ನೆರವೇರಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಮುಜರಾಯಿ ಇಲಾಖೆಯ ಅಧಿಕಾರಿಗಳಿಂದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಎ. ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳ ಜಿಲ್ಲಾವಾರು ದೇವಸ್ಥಾನಗಳ …
Read More »ಸುಸೈಡ್ ನೋಟ್ ಬರೆದು ನಾಪತ್ತೆ ಆದ ಕುಟುಂಬ
ಬೆಂಗಳೂರು ;ಕೋವಿಡ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆ ಬಲು ಕಷ್ಟವಾಗಿದೆ. ಇದರ ಜೊತೆ ಅವಮಾನಗಳು ಇನ್ನಷ್ಟು ಬರೆ ಎಳೆದಿದ್ದು, ಬದುಕಲು ಆಗದು ಎಂದು ಕುಟುಂಬವೊಂದು ಸೂಸೈಡ್ ನೋಟ್ ಬರೆದು ನಾಪತ್ತೆಯಾಗಿರುವ ಪ್ರಕರಣ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬದ ಹುಡುಕಾಟಕ್ಕೆ ಮುಂದಾಗಿದ್ದಾರೆ. ಗಾಂಧಿ ಎಂಬ 43 ವರ್ಷದ ವ್ಯಕ್ತಿ ಟಿ ದಾಸರಹಳ್ಳಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಹೆಂಡತಿ …
Read More »ಭೂ ಕಬಳಿಕೆಗೆ ನಕಲಿ ದಾವೆ: ವಕೀಲರ ಪರಿಷತ್ತು, ಸಂಘವೂ ಪಾರ್ಟಿ
ಬೆಂಗಳೂರು: ವಾರಸುದಾರರು ಉಪಯೋಗಿಸದ ಖಾಲಿ ಜಾಗವನ್ನು ಕೊಳ್ಳೆ ಹೊಡೆಯಲು ನಕಲಿ ಕಕ್ಷಿದಾರ-ಪ್ರತಿವಾದಿಗಳನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಲಪಟಾಯಿಸುತ್ತಿದ್ದ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಿರುವ ಹೈಕೋರ್ಟ್, ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮತ್ತು ಬೆಂಗಳೂರು ವಕೀಲರ ಸಂಘವನ್ನು ಪಾರ್ಟಿಗಳಾಗಿ ಒಳಗೊಳ್ಳುವಂತೆ ನಿರ್ದೇಶನ ನೀಡಿದೆ. ಮೋಸದ ಮಾರ್ಗದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆಯುತ್ತಿದ್ದ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ನ್ಯಾಯಮೂರ್ತಿ …
Read More »ಸಾಂತ್ವನ ಕೇಂದ್ರದಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾದ ಮಹಿಳಾ ಕೈದಿಗಳು!
ಬೆಂಗಳೂರು: ಇಲ್ಲಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದ ಐವರು ವಿದೇಶಿ ಮಹಿಳಾ ಕೈದಿಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಿರುವ ಕೈದಿಗಳು ಆಫ್ರಿಕಾದ ಕಾಂಗೊ, ನೈಜೀರಿಯ ದೇಶದ ಮೂಲದವರೆಂದು ತಿಳಿದುಬಂದಿದೆ. ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ 15 ಕೈದಿಗಳನ್ನು ಬಂಧಿಸಿದ್ದರು. ಅವರಲ್ಲಿ ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಸಂಬಂಧ 5 ಮಂದಿ ವಿದೇಶಿ ಮಹಿಳೆಯರನ್ನೂ ಬಂಧಿಸಲಾಗಿತ್ತು. ಈ ಐವರನ್ನು ಅವರ ದೇಶನ್ನೆ ವಾಪಸ್ ಕಳುಹಿಸುವ …
Read More »ಮಾಡದ ತಪ್ಪಿಗೆ ಸೌದಿ ಜೈಲಿನಲ್ಲಿದ್ದ ಕನ್ನಡಿಗ ಕೊನೆಗೂ ಬಂಧಮುಕ್ತ…!
ತಾನು ಮಾಡದ ತಪ್ಪಿಗೆ ಸೌದಿಯಲ್ಲಿ ಬಂಧನಕ್ಕೊಳಗಾಗಿದ್ದ ಕನ್ನಡಿಗ ಹರೀಶ್ ಬಂಗೇರ 2 ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ್ದಾರೆ. ಸೌದಿ ದೊರೆ ಮತ್ತು ಧರ್ಮ ನಿಂದನೆ ಆರೋಪದ ಅಡಿಯಲ್ಲಿ ಹರೀಶ್ ಬಂಗೇರರನ್ನು ಬಂಧಿಸಲಾಗಿತ್ತು. ಹರೀಶ್ ಬಂಗೇರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದ ಮೂಡಬಿದಿರೆ ಮೂಲಕ ಮುಸ್ಲಿಂ ಸಹೋದರರು ಸೌದಿ ದೊರೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಉಡುಪಿ ಸೆಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. …
Read More »ಮಹಿಳೆಯರಿಗೆ ಗುಡ್ ನ್ಯೂಸ್: 30 ಸಾವಿರ ರೂ. ಪ್ರೋತ್ಸಾಹಧನಕ್ಕೆ ವಿವಿಧ ಯೋಜನೆಯಡಿ ಅರ್ಜಿ
ಬೀದರ: 2021-22ನೇ ಸಾಲಿನ ಚೇತನಾ, ಧನಶ್ರೀ, ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಡಿ ಪ್ರೋತ್ಸಾಹಧನ ಪಡೆಯಲು ಆಸಕ್ತಿವುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಚೇತನಾ ಯೋಜನೆ ಚೇತನಾ ಯೋಜನೆಯಡಿ ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳಲು 30,000 ರೂ. ಪ್ರೋತ್ಸಾಹಧನ ನೀಡಲಾಗುವುದು. ಧನಶ್ರೀ ಯೋಜನೆ ಧನಶ್ರೀ ಯೋಜನೆಯಡಿ ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳಲು 30,000 ರೂ. ಪ್ರೋತ್ಸಾಹಧನ ನೀಡಲಾಗುವುದು. ಅದೇ ರೀತಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು …
Read More »ದೇವಸ್ಥಾನಗಳಿಗೆ ಆರ್ಥಿಕ ನೆರವು: ಚೆಕ್ ವಿತರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಬೀರದೇವರ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಆಯಾ ದೇವಸ್ಥಾನಗಳ ಕಮೀಟಿಯವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಧನಸಹಾಯದ ಚೆಕ್ ಗಳನ್ನು ವಿತರಿಸಿದರು. ಗ್ರಾಮೀಣ ಕ್ಷೇತ್ರದ ಎಲ್ಲ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಶಾಸಕರ ಅನುದಾನದಲ್ಲಿ ಹಾಗೂ ಕೆಲವೆಡೆ ವೈಯಕ್ತಿಕವಾಗಿ ಕೂಡ ಲಕ್ಷ್ಮಿ ಹೆಬ್ಬಾಳಕರ್ ನೆರವು ನೀಡುತ್ತಿದ್ದಾರೆ. ಶ್ರೀ ಬೀರದೇವರ ದೇವಸ್ಥಾನಕ್ಕೆ 6.50 ಲಕ್ಷ ರೂ,ಗಳ ಪೈಕಿ ಮೊದಲ ಕಂತಾಗಿ 3.50 …
Read More »ಉಣಕಲ್ ಕೆರೆಗೆ ಚನ್ನಬಸವ ಸಾಗರವೆಂದು ನಾಮಕರಣಕ್ಕೆ ಹೈಕೋರ್ಟ್ ಆದೇಶ
ಧಾರವಾಡ: ಹುಬ್ಬಳ್ಳಿಯ ಐತಿಹಾಸಿಕ ಉಣಕಲ್ ಕೆರೆಗೆ ಚನ್ನಬಸವ ಸಾಗರವೆಂದು ನಾಮಕರಣ ಮಾಡಬೇಕು ಎಂದು ಮಹಾನಗರ ಪಾಲಿಕೆಗೆ ಹೈಕೋರ್ಟ್ ಆದೇಶ ನೀಡಿದೆ . 2003 ರ ಜನವರಿ 16 ರಂದು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಿದ್ದರೂ ನಿರ್ಣಯ ಜಾರಿಗೆ ಕ್ರಮ ಕೈಗೊಳ್ಳದ ಪಾಲಿಕೆ ವಿರುದ್ಧ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಧಾರವಾಡ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ. ಹುಬ್ಬಳ್ಳಿ- ಧಾರವಾಡ ಮಧ್ಯದ ಪ್ರಮುಖ …
Read More »