ನವ ದೆಹಲಿ : ಕಾಂಗ್ರೆಸ್ ಪ್ರಮುಖ ಮತ್ತು ಪ್ರಬಲ ಪ್ರತಿ ಪಕ್ಷವಾಗಿ ಬೆಳೆಯಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಒಂದು ಗಣರಾಜ್ಯ ಯಶಸ್ವಿಯಾಗಬೇಕೆಂದರೆ ಅದರಲ್ಲಿ ಆಡಳಿತ ಪಕ್ಷದ ಜತೆ ಪ್ರತಿಪಕ್ಷವೂ ಮುಖ್ಯ. ಅವರೆಡೂ ಚಕ್ರವಿದ್ದರೆ ಮಾತ್ರ ಗಣರಾಜ್ಯ ಉತ್ತಮವಾಗಿ ಸಾಗುತ್ತದೆ ಎಂದು ಅವರು ಹೇಳಿದ್ದಾರೆ. ಅದೇ ಕಾರಣಕ್ಕೆ ಮೊದಲ ಪ್ರಧಾನಿ ನೆಹರೂ ಕೂಡ ಅಟಲ್ ಜಿಗೆ ಹೆಚ್ಚಿನ ಗೌರವ ಕೊಡುತ್ತಿದ್ದರು ಎಂದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ನಾನು ಹಲವು ವರ್ಷಗಳ ಕಾಲ ಪ್ರತಿಪಕ್ಷದಲ್ಲಿದ್ದೆ. …
Read More »ಏರಿಕೆಯತ್ತ ಮುಖ ಮಾಡಿದ ಚಿನ್ನದ ದರ, ಬೆಳ್ಳಿ ಬೆಲೆ ಇಳಿಕೆ; ಪ್ರಮುಖ ನಗರಗಳಲ್ಲಿ ದರ ವಿವರ ಪರಿಶೀಲಿಸಿ
Gold Silver Rate Today, 21st August: ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,250 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,42,500 ರೂಪಾಯಿಗೆ ಏರಿದೆ. ದೈನಂದಿನ ದರ ಏರಿಕೆಯಲ್ಲಿ 1,500 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. Gold Silver Rate Today |ಬೆಂಗಳೂರು: ಚಿನ್ನದ ದರ ನಿನ್ನೆ ಇಳಿಕೆಯತ್ತ ಮುಖ ಮಾಡಿತ್ತು. ಆದರೆ ಇಂದು (ಆಗಸ್ಟ್ 21, ಶನಿವಾರ) ಚಿನ್ನದ ದರ (Gold …
Read More »ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ; ಎಲ್ಲೆಲ್ಲಿ ಎಷ್ಟೆಷ್ಟು ?
Petrol Diesel Price Today: ಕಳೆದ 3 ದಿನಗಳಲ್ಲಿ ಲೀಟರ್ ಡೀಸೆಲ್ ದರದಲ್ಲಿ 60 ಪೈಸೆ ಇಳಿಕೆ ಕಂಡು ಬಂದಿದ್ದು, ಇಂದು ಸ್ಥಿರವಾಗಿದೆ. ಆದೆ ಪೆಟ್ರೋಲ್ ದರ ಸತತವಾಗಿ 34 ದಿನಗಳಿಂದಲೂ ಸ್ಥಿರತೆಯಲ್ಲಿಯೇ ಇದೆ. ಜುಲೈ 18 ರಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. Petrol Diesel Rate Today | ದೆಹಲಿ: ಸತತ 3 ದಿನಗಳಿಂದ ಡೀಸೆಲ್ ಬೆಲೆ ಇಳಿಕೆ ಕಂಡಿತ್ತು. ಆದರೆ ಇಂದು (ಆಗಸ್ಟ್ 21, ಶನಿವಾರ) …
Read More »ಹಬ್ಬದ ಪ್ರಯುಕ್ತ ನಂದಿನಿ ಉತ್ಪನ್ನಗಳ ಮೇಲೆ ಶೇಕಡಾ 10 ರಿಯಾಯ್ತಿ
ಬೆಂಗಳೂರು, – ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗೆ ಕೆಎಂಎಫ್ ಸಿಹಿ ಸುದ್ದಿ ನೀಡಿದ್ದು, ಸಿಹಿ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ರಿಯಾಯ್ತಿ ನೀಡಿದೆ. ಆ.19ರಿಂದ 15 ದಿನ ಗಳ ಕಾಲ ರಾಜ್ಯಾದ್ಯಾಂತ ನಂದಿನಿ ಉತ್ಸವಕ್ಕೆ ಚಾಲನೆ ನೀಡಿರುವ ಕೆಎಂಎಫ್ ಸಿಹಿ ಉತ್ಪನ್ನಗಳ ಮೇಲೆ ರಿಯಾಯ್ತಿ ನೀಡಿದೆ. ಅಲ್ಲದೆ ಮಧುಮೇಹಿಗಳು ಮತ್ತು ಆಹಾರ ಕಾಳಜಿ ಇರುವರ ಅನುಕೂಲಕ್ಕಾಗಿ ಹೊಸದಾಗಿ ಸಿಹಿ ತಿನಿಸುಗಳನ್ನು ಬಿಡುಗಡೆ ಮಾಡಿದೆ ಎಂದು ಎಂದು ಕೆ ಎಂಎಫ್ ವ್ಯವಸ್ಥಾಪಕ …
Read More »ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕುಟುಂಬ ಸಮೇತ ತುಂಗಭದ್ರಾ ಆಣೆಕಟ್ಟೆಗೆ ಭೇಟಿ
ಬಳ್ಳಾರಿ ; ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಕುಟುಂಬ ಸಮೇತರಾಗಿ ತುಂಗಭದ್ರಾ ಆಣೆಕಟ್ಟಿಗೆ ಭೇಟಿ ಕೊಟ್ಟು ವಿಹಂಗಮ ನೋಟವನ್ನು ಕಣ್ತುಂಬಿಸಿಕೊಂಡರು. ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಆಗಮನದಿಂದ ಸ್ಥಳಿಯರ ಮತ್ತು ತುಂಗಭದ್ರಾ ಜಲಾಶಯದ ಅಧಿಕಾರಿಗಳ ಮನಸ್ಸು ಸಂತಸಗೊಂಡಿತ್ತು. ಕಳೆದ ನಾಲ್ಕು ವರ್ಷಗಳಿಂದ ಜಲಾಶಯ ಭರ್ತಿಯಾಗಿದೆ. ತುಂಗಭದ್ರಾ ಜಲಾಶಯವು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ರೈತರ ಜೀವನಾಡಿಯಾಗಿದೆ. ಈ ಭಾಗಗಳ ರೈತರು ಕೃಷಿಗೆ ಪೂರಕವಾಗಿದೆ ಎಂದು ಇದೇ ಸಂದರ್ಭದಲ್ಲಿ …
Read More »ನೀರಜ್ ಈಗ ನ್ಯಾಷನಲ್ ಕ್ರಶ್! ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಮನಸೋತ ಕಿಯಾರಾ ಅಡ್ವಾಣಿ
ಭಾರತದ ಬಹುತೇಕ ಪ್ರತಿಯೊಬ್ಬ ಹುಡುಗಿರ ಕ್ರಶ್ ಆಗಿದ್ದಾರೆ ನೀರಜ್. ಅದೇ ಸಮಯದಲ್ಲಿ, ಈಗ ಕಿಯಾರಾ ಅಡ್ವಾಣಿ ಕೂಡ ತನ್ನ ಕ್ರಶ್ ಯಾರೆಂಬುದನ್ನು ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯರ ಮನೆ ಮಾತಾಗಿರುವ ನೀರಜ್ ಚೋಪ್ರಾ ಅಭಿಮಾನಿಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸೇರಿದ್ದಾರೆ. ಸೋಶಿಯಲ್ ಮೀಡಿಯಾದಿಂದ ಹಿಡಿದು ನೀರಜ್ ವರೆಗೂ ಅವರನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚಿನ್ನದ ಪದಕ ಗೆದ್ದಾಗಿನಿಂದ, ಅವರ ಗೆಲುವಿನ ಬಗ್ಗೆ ಚರ್ಚೆಗಳು …
Read More »ಬ್ಯಾಂಕ್ ಸಿಬ್ಬಂದಿ ಕೊಂಚ ಯಾಮಾರಿದ್ದರೂ ಸಾಕಿತ್ತು ಯುವರಾಜ ಬಿರಾದಾರ ಎಂಬಾತ ಎರಡೂವರೆ ಕೋಟಿ ರೂಪಾಯಿಯನ್ನು ತನ್ನದಾಗಿಸಿಕೊಂಡು ಹೋಗುತ್ತಿದ್ದ
ಧಾರವಾಡ: ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂಬ ಮಾತಿದೆ. ಯಾರದ್ದೋ ದುಡ್ಡಿನಲ್ಲಿ ಮೋಜು-ಮಸ್ತಿ ಮಾಡುವವರನ್ನು ಕಂಡು ಈ ಮಾತು ರೂಢಿಯಲ್ಲಿ ಬಂದಿದೆ. ಇಂಥ ಮಾತಿಗೆ ಧಾರವಾಡದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಆದರೆ ಇಲ್ಲಿ ದುಡ್ಡು ಸಿಗೋದಕ್ಕೂ ಮುನ್ನಾ ಖದೀಮರ ಮರ್ಮ ಗೊತ್ತಾಗಿ, ಅವರೆಲ್ಲಾ ಸಿಕ್ಕಿಬಿದ್ದಿದ್ದಾರೆ. ಬ್ಯಾಂಕ್ ನ ಮ್ಯಾನೇಜರ್ ಕೊಂಚ ಯಾಮಾರಿದ್ದರೂ ಖದೀಮರ ದಂಡು ಕೋಟಿ ಕೋಟಿ ರೂಪಾಯಿ ಹಣವನ್ನು ಎಗರಿಸಿಕೊಂಡು ಪರಾರಿಯಾಗುತ್ತಿತ್ತು. ಆದರೆ ಹಾಗಾಗಲಿಲ್ಲ ಅನ್ನುವುದೇ ಸಮಾಧಾನದ ಸಂಗತಿ. …
Read More »ಆತ್ಮಹತ್ಯೆಗೆ ಅವಕಾಶ ಕೊಡಿ ಎಂದ ಅನ್ವರ್ ಕಟುಂಬಸ್ಥರು; ಗೃಹ ಸಚಿವರಿಗೆ ಮನವಿ
ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷನ ಕೊಲೆ ರಾಜಾರೋಷವಾಗಿ ನಗರದ ಹೃದಯಭಾಗದಲ್ಲೂ ನಡೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಇಲ್ಲಿವರೆಗೂ ಯಶಸ್ಸು ಕಂಡಿಲ್ಲ. ಚಿಕ್ಕಮಗಳೂರು: ಕಾಫಿನಾಡನ್ನು ಬೆಚ್ಚಿಬೀಳಿಸಿದ ಬಿಜೆಪಿ ಮುಖಂಡ ಅನ್ವರ್ ಕೊಲೆಯಾಗಿ ಬರೋಬ್ಬರಿ 3 ವರ್ಷ 2 ತಿಂಗಳಾಯ್ತು. ಪ್ರಕರಣ ಭೇದಿಸುವ ಪೊಲೀಸರು ದಿನ-ವಾರ-ತಿಂಗಳು-ವರ್ಷ ಎಂದು ನೆಪ ಹೇಳುತ್ತಿದ್ದಾರೆ. ಇದರಿಂದ ಅನ್ವರ್ ಕುಟುಂಬಸ್ಥರು ಪೊಲೀಸ್ ಇಲಾಖೆ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಇದೇ ಆಗಸ್ಟ್ 15ರಂದು ಜಿಲ್ಲೆಗೆ ಬಂದಿದ್ದ ಗೃಹ …
Read More »ಮಧ್ಯ ರೈಲ್ವೇಯಿಂದ ಡಿಜಿ ಲಾಕರ್ ಸೌಲಭ್ಯ
ಮುಂಬಯಿ: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ರೈಲ್ವೇ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ನಿಲ್ದಾಣದಲ್ಲಿ “ಡಿಜಿ’ ಲಾಕರ್ ಸೌಲಭ್ಯವನ್ನು ಆರಂಭಿಸಿದೆ. ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಿದ ದೇಶದ ಮೊದಲ ಡಿಜಿ ಲಾಕರ್ ಸೌಲಭ್ಯ ಇದಾಗಿದ್ದು, ಈ ಸೌಲಭ್ಯವನ್ನು ದಾದರ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್‌ನಲ್ಲಿಯೂ ಶೀಘ್ರ ಆರಂಭಿಸಲಾಗುವುದು ಎಂದು ಮಧ್ಯ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ ಹೆಸರು, ಮೊಬೈಲ್ ಸಂಖ್ಯೆ, ಪಿಎನ್‌ಆರ್ ಸಂಖ್ಯೆ ಮತ್ತು ಇ-ಮೇಲ್ ಐಡಿ ತುಂಬಿದ …
Read More »ಗಣಿಗಾರಿಕೆಯನ್ನು ಮುಂದಿನ ಮೂರು ತಿಂಗಳಲ್ಲಿ ಆರಂಭ : ಪ್ರಮೋದ್ ಸಾವಂತ್
ಪಣಜಿ : ರಾಜ್ಯದಲ್ಲಿ ಗಣಿಗಾರಿಕೆಯನ್ನು ಮುಂದಿನ ಮೂರು ತಿಂಗಳಲ್ಲಿ ಗೋವಾ ಸರ್ಕಾರಿ ಖನಿಜ ಅಭಿವೃದ್ಧಿ ನಿಗಮದ ಅಡಿಯಲ್ಲಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ. ಇಂದು(ಶುಕ್ರವಾರ, ಆಗಸ್ಟ್ 20) ದಕ್ಷಿಣ ಗೋವಾದ ಧಾರಬಾಂದೋರಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಸಾವಂತ್, ಹೊಸದಾಗಿ ರಚನೆಯಾದ ಗೋವಾ ಖನಿಜ ಅಭಿವೃದ್ಧಿ ನಿಗಮದ ಅಡಿಯಲ್ಲಿ ಮುಂದಿನ ಮೂರು ತಿಂಗಳಲ್ಲಿ ಈಗಾಗಲೇ ಹರಾಜು ಮಾಡಿದ ಕಬ್ಬಿಣದ ಅದಿರು ಸಾಗಾಟದಂತಹ ಚಟುವಟಿಕೆಯನ್ನು ಆರಂಭಿಸಲಾಗುವುದು ಎಂದು ಮಾಹಿತಿ …
Read More »