Breaking News

ಮೋದಿ, ಶಾ ಭೇಟಿಗಾಗಿ ಸಿಎಂ ಯಡಿಯೂರಪ್ಪ ದೆಹಲಿಗೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್‌ರಚನೆಗೆ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಶುಕ್ರವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಅವರು ದೆಹಲಿಗೆ ತೆರಳಲಿದ್ದಾರೆ. ಸಂಜೆ 7 ಕ್ಕೆ ಪ್ರಧಾನಿ ಮೋದಿಯವರು ಸಮಯ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಅವರು ಮೇಕೆದಾಟು ಸಮತೋಲನ ಅಣೆಕಟ್ಟೆ ಯೋಜನೆಗೆ ಅನುಮತಿ …

Read More »

ಹುಟ್ಟಿನಲ್ಲಿ ಮಕ್ಕಳಿಗೆ ಆಯ್ಕೆ ಇರದು; 2ನೇ ಪತ್ನಿಯ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನಿರ್ಬಂಧ ಸುತ್ತೋಲೆ ರದ್ದುಗೊಳಿದ ಕೋರ್ಟ್

ಬೆಂಗಳೂರು: 2ನೇ ಪತ್ನಿಯ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವುದನ್ನು ನಿರ್ಬಂಧಿಸಿದ್ದ ಕೆಪಿಟಿಸಿಎಲ್ ನ ಸುತ್ತೋಲೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ. ತಂದೆ ತಾಯಿ ಇಲ್ಲದೇ ಮಕ್ಕಳು ಜನಿಸುವುದಿಲ್ಲ. ತಂದೆ ತಾಯಿ ಮಧ್ಯೆ ಅನೈತಿಕ ಸಂಬಂಧವಿರಬಹುದು. ಆದರೆ ಅನೈತಿಕ ಮಕ್ಕಳಿರುವುದಿಲ್ಲ. ಹುಟ್ಟಿನಲ್ಲಿ ಮಕ್ಕಳಿಗೆ ಆಯ್ಕೆ ಇರುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹಿಂದೂ ವಿವಾಹ ಕಾಯ್ದೆಯಲ್ಲಿ ಈ ತಾರತಮ್ಯ ಮಾಡದೇ 1 ನೇ ಮತ್ತು 2 ನೇ ಪತ್ನಿಯ ಮಕ್ಕಳಿಗೆ …

Read More »

ಮೆಟ್ರೋ ಕಾಮಗಾರಿ: 350 ಮರಗಳನ್ನು ಕಡಿಯಲು ಹೈಕೋರ್ಟ್ ಸಮ್ಮತಿ

ಬೆಂಗಳೂರು, ಜುಲೈ 16: ನಮ್ಮ ಮೆಟ್ರೋ ಕಾಮಗಾರಿಗಾಗಿ 350 ಮರಗಳನ್ನು ಕಡಿಯಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಹೈಕೋರ್ಟ್ ಆದೇಶದಿಂದಾಗಿ ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಮಾರ್ಗ ಕಾಮಗಾರಿ ಪುನಾರಂಭವಾಗಲಿದೆ. ಆದರೆ ಷರತ್ತೊಂದನ್ನು ವಿಧಿಸಿತ್ತು, ಅದರ ಬದಲಾಗಿ 4 ಸಾವಿರ ಗಿಡಗಳನ್ನು ನೆಡುವಂತೆ ಸೂಚಿಸಲಾಗಿದೆ ನಾಗವಾರ-ಗೊಟ್ಟಿಗೆರೆ ಮಾರ್ಗದ ಮೆಟ್ರೊ ರೈಲು ಯೋಜನೆಗೆ ಮರಗಳನ್ನು ಕಡಿಯಲು ಒಪ್ಪಿಗೆ ನೀಡಿರುವ ಹೈಕೋರ್ಟ್, ಅದಕ್ಕೆ ಪರಿಹಾರವಾಗಿ 4 ಸಾವಿರ ಗಿಡಗಳನ್ನು ನೆಡುವಂತೆ ಬಿಎಂಆರ್‌ಸಿಎಲ್‌ಗೆ …

Read More »

ಮಹಾ ಮಳೆಗೆ ಕೊಡಗು ಜಿಲ್ಲೆಯಲ್ಲಿ ಮೊದಲ ಬಲಿ

ಕೊಡಗು : ಮಹಾ ಮಳೆಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಮಡಿಕೇರಿಯ ಆವಂದೂರು ಗ್ರಾಮದ ಕಿರು ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಮೃತದೇಹ ಪತ್ತೆಯಾಗಿದೆ. ಬಾಬಿ ಚಿಣ್ಣಪ್ಪ(70) ಮೃತರಾಗಿದ್ದಾರೆ. ಬಾಬಿ ಚಿಣ್ಣಪ್ಪ ನಿನ್ನೆ ಸಂಜೆ ಕಿರು ಹೊಳೆ ದಾಟುವಾಗ ಆಯತಪ್ಪಿ ಬಿದ್ದು, ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳ, ಪೊಲೀಸರು ಶೋಧ ಕಾರ್ಯಚರಣೆ ಮುಂದುವರೆಸಿದ್ದರು. ಆದ್ರೆ ಮಳೆ ಹೆಚ್ಚಾದ ಕಾರಣ ಕಾರ್ಯಚರಣೆ ಸ್ಥಗಿತಗೊಳಿಸಿದ್ದರು. ಇಂದು …

Read More »

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 38,949 ಕೋವಿಡ್ ಪ್ರಕರಣ ಪತ್ತೆ, 542 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಕಳೆದ 24ಗಂಟೆಯಲ್ಲಿ 39,949 ಕೋವಿಡ್ ಪ್ರಕರಣ ವರದಿಯಾಗಿದೆ. ಅಲ್ಲದೇ 542 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ (ಜುಲೈ 16) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.   ದೇಶದಲ್ಲಿ ಸಕ್ರಿಯ ಕೋವಿಡ್ 19 ಪ್ರಕರಣಗಳ ಸಂಖ್ಯೆ 4,30,422ಕ್ಕೆ ಏರಿಕೆಯಾಗಿದೆ. ಕಳೆದ 24ಗಂಟೆಯಲ್ಲಿ 542 ಮಂದಿ ಸಾವನ್ನಪ್ಪಿದ್ದು, 40,026 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ …

Read More »

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಧಾರವಾಡ ನಗರದ ಲಕಮನಹಳ್ಳಿ ಬಡಾವಣೆಯಲ್ಲಿ ಸುಮಾರು 10 ಎಕರೆ ಅನಧಿಕೃತ ಲೇಔಟ್‌ಗಳ ತೆರವು

ಧಾರವಾಡ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಧಾರವಾಡ ನಗರದ ಲಕಮನಹಳ್ಳಿ ಬಡಾವಣೆಯಲ್ಲಿ ಸುಮಾರು 10 ಎಕರೆ ಅನಧಿಕೃತ ಲೇಔಟ್‌ಗಳನ್ನು ತೆರವುಗೊಳಿಸಲಾಯಿತು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತ್ರತ್ವದಲ್ಲಿ ನಡೆದ ಈ ಕಾರ್ಯಾಚರಣೆ ವೇಳೆ ಲೇಔಟ್ನ ಕಲ್ಲುಗಳನ್ನು, ವಿದ್ಯುತ್‌ಕಂಬಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಯಿತು. ಒಂದು ವಾರದ ಹಿಂದೆ ಇದೇ ಲೇಔಟ್ ತೆರವುಗೊಳಿಸಿದ್ದರೂ ಸಹ ಪ್ಲಾಟ್ ಕಲ್ಲುಗಳನ್ನು ಹಾಕಲಾಗಿತ್ತು. ಹೀಗಾಗಿ ಇದಿಗ ಮತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಈ ಬಗ್ಗೆ ಟಿವಿ-9 ಡಿಜಿಟಲ್ …

Read More »

ವಿಶೇಷ ವಿಮಾನದಲ್ಲಿ ದಿಢೀರ್ ದೆಹಲಿಗೆ ಸಿಎಂ ಯಡಿಯೂರಪ್ಪ, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಭೇಟಿ -ಚರ್ಚೆ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಸಂಝೆ 6.30 ರಿಂದ ರಾತ್ರಿ 8 ಗಂಟೆಯ ಒಳಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮೇಕೆದಾಟು ಜಲಾಶಯ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲಿದ್ದಾರೆ. ಈಗಾಗಲೇ ಅಧಿಕಾರಿಗಳು ದೆಹಲಿಗೆ ತೆರಳಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಸಿಎಮ ಚರ್ಚಿಸಲಿದ್ದಾರೆ. ರಾಜ್ಯದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ, ಡಿಸಿಎಂ ಗೋವಿಂದ …

Read More »

ಈ ವರ್ಷ ಜಿ.ಪಂ., ತಾ.ಪಂ. ಚುನಾವಣೆ ಇಲ್ಲ

ಬೆಂಗಳೂರು: ಕೊರೊನಾ 3ನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಜಿ.ಪಂ. ಮತ್ತು ತಾ. ಪಂ. ಚುನಾವಣೆಗಳನ್ನು ಈ ವರ್ಷಾಂತ್ಯದ ವರೆಗೆ ನಡೆಸದಿರಲು ಸರಕಾರ ನಿರ್ಧರಿಸಿದೆ. ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿ.ಪಂ., ತಾ.ಪಂ. ಚುನಾವಣೆ ನಡೆಯದಿದ್ದರೂ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸಲು ಸರಕಾರ ಮುಂದಾಗಿದೆ. ಇಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಚುನಾವಣೆಗೆ ಅವಕಾಶ ನೀಡಲು ಸಚಿವ ಸಂಪುಟ …

Read More »

ಎಸಿಬಿ ದಾಳಿ: 9 ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತು ಬಯಲು

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಮೇಲೆ ಸಮರ ಸಾರಿದ್ದ ಎಸಿಬಿ ಅಧಿಕಾರಿಗಳು ಇಂದು ಒಟ್ಟು 9 ಸರ್ಕಾರಿ ನೌಕರರಿಗೆ ಸೇರಿದ 43 ಸ್ಥಳಗಳಲ್ಲಿ ಒಟ್ಟು 310 ಅಧಿಕಾರಿಗಳಿಂದ 43 ತಂಡಗಳಾಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಬೆಳಕಿಗೆ ಬಂದಿದೆ. ದಾಳಿಯಲ್ಲಿ ಸಿಕ್ಕ ಆಸ್ತಿ-ಪಾಸ್ತಿ, ಚಿನ್ನ ಹಣದ ಅಂಕಿ ಅಂಶಗಳು ಹೀಗಿವೆ.. 1. ಜಿ ಶ್ರೀಧರ್- ಕಾರ್ಯ ಪಾಲಕ ಅಭಿಯಂತರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಡಿಸಿ ಕಚೇರಿ ಮಂಗಳೂರು. …

Read More »

ಎಸಿಬಿ ದಾಳಿ; ಸರ್ಕಾರಿ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ನೋಟು, ಚಿನ್ನಾಭರಣ ಪತ್ತೆ

ಬೀದರ್​​: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇರೆಗೆ ಇಂದು ಎಸಿಬಿ ಅಧಿಕಾರಿಗಳು ಜಿಲ್ಲೆಯ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಿರಿಯ ಅಭಿಯಂತರ ಸುರೇಶ್ ಮೋರೆ ಮನೆ ಹಾಗೂ ಅವರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ. ಸುರೇಶ್ ಮೋರೆ ಮೂಲತಃ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದ ನಿವಾಸಿಯಾಗಿದ್ದಾರೆ. ಹೀಗಾಗಿ …

Read More »