Breaking News

“ನೀತಿ ಸಮಿತಿಯಲ್ಲೇ ಸಿ.ಟಿ.ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗಲಾಟೆ ಪ್ರಕರಣ ಪರಿಹಾರ: ಹೊರಟ್ಟಿ

ಬೆಂಗಳೂರು: “ನೀತಿ ಸಮಿತಿಯಲ್ಲೇ ಸಿ.ಟಿ.ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗಲಾಟೆ ಪ್ರಕರಣ ಪರಿಹಾರವಾಗುವ ವಿಶ್ವಾಸವಿದೆ” ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ಮಾತನಾಡಿದ ಅವರು, “ಸದನದಲ್ಲಿ ನಡೆದಿದ್ದನ್ನು ಅಲ್ಲೇ ಮುಗಿಸಬೇಕಿತ್ತು. ಸದನ ನಡೆದಾಗ ನಡೆದಿದ್ದರೆ ಹೀಗೆ ಆಗುತ್ತಿರಲಿಲ್ಲ. ಹೀಗಾಗಿ ಘಟನೆ ಇಷ್ಟು ದೊಡ್ಡದಾಗಿದೆ. ಇದನ್ನು ಎಥಿಕ್ಸ್ ಕಮಿಟಿಗೆ ಕೊಡಲಾಗಿದ್ದು, ವರದಿ ಬರಬೇಕಿದೆ. ಎಥಿಕ್ಸ್ ಕಮಿಟಿಯಲ್ಲಿಯೇ ಶೇ 99ರಷ್ಟು ಸಮಸ್ಯೆ ಪರಿಹಾರವಾಗೋ ವಿಶ್ವಾಸವಿದೆ. ಇಲ್ಲದೇ …

Read More »

ಬಳ್ಳಾರಿಯಲ್ಲಿ ಕೋಳಿಗಳ ಸಾವು 8 ಸಾವಿರ ಕೋಳಿಗಳು ಮೃತಪಟ್ಟಿದ್ದು, ಹಕ್ಕಿ ಜ್ವರ ಕಾರಣವಾಗಿರಬಹುದು ಎಂಬ ಶಂಕೆ?

ಬಳ್ಳಾರಿ: ತಾಲೂಕಿನ ಕಪ್ಪಗಲ್ಲು ಗ್ರಾಮದ ಕೋಳಿ ಫಾರಂವೊಂದರಲ್ಲಿ ಕಳೆದ ವಾರದಿಂದ 8 ಸಾವಿರ ಕೋಳಿಗಳು ಮೃತಪಟ್ಟಿದ್ದು, ಹಕ್ಕಿ ಜ್ವರ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರವಿ ಎಂಬವರಿಗೆ ಸೇರಿದ ಫಾರಂನಲ್ಲಿ ಮೊದಲು 15 ಸಾವಿರ ಕೋಳಿಗಳಿದ್ದವು. ಈವರೆಗೆ 8 ಸಾವಿರ ಕೋಳಿಗಳು ಮೃತಪಟ್ಟಿವೆ. ಇದೀಗ 7 ಸಾವಿರ ಕೋಳಿಗಳು ಮಾತ್ರ ಉಳಿದಿವೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೋಳಿಗಳು ಸಾಯುವ ಸಾಧ್ಯತೆಗಳಿವೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. …

Read More »

ಚಲನಚಿತ್ರ ವಾಣಿಜ್ಯ ಮಂಡಳಿ, ಈ ಸಿನಿಮಾ ನಟರ ಬಗ್ಗೆ ನನಗೆ ಬಹಳ ಸಿಟ್ಟು ಬಂದುಬಿಟ್ಟಿದೆ:ಡಿಕೆ ಶಿ

ಬೆಂಗಳೂರು ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಷಣದ ವೇಳೆ ಸಿನಿಮಾ ನಟ, ನಟಿಯರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಅಲ್ಲದೆ, ನಿಮ್ಮ ಚಲನ ವಲನ, ಹಾವ ಭಾವ ಎಲ್ಲವೂ ನಮಗೆ ಅರ್ಥವಾಗುತ್ತದೆ, ಎಲ್ಲವನ್ನು ಗಮನಿಸುತ್ತಿರುತ್ತೇನೆ’ ಎಂದು ಹೇಳಿದರು. ಅಷ್ಟು ಮಾತ್ರವೇ ಅಲ್ಲದೆ ಸಿನಿಮಾ ರಂಗದವರ ಮೇಲೆ ವಿಶೇಷವಾಗಿ ನಮ್ಮ ನಟ, ನಟಿಯರ ಮೇಲೆ ನನಗೆ ಬಹಳ ಸಿಟ್ಟಿದೆ ಎಂದು ನೇರವಾಗಿಯೇ ಸಿಟ್ಟು ಹೊರಹಾಕಿದರು. ಕಾರ್ಯಕ್ರಮದಲ್ಲಿ …

Read More »

ಬೆಮುಲ್ ದಿಂದ ರೈತ ಫಲಾನುಭವಿಗಳಿಗೆ ೭.೧೫ ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಹೈನುಗಾರ ರೈತರಿಗೆ ಅನುಕೂಲವಾಗಲು ಸರ್ಕಾರದ ಸಹಯೋಗದಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಆರ್ಥಿಕ ಬಲವರ್ಧನೆಯನ್ನು ಹೆಚ್ಚಳ ಮಾಡಿಕೊಳ್ಳುವಂತೆ ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತ ಸಮುದಾಯಕ್ಕೆ ಸಲಹೆ ಮಾಡಿದರು. ಶನಿವಾರದಂದು ಇಲ್ಲಿಯ ಎನ್‌ಎಸ್‌ಎಫ್ ಕಾರ್ಯಾಲಯದಲ್ಲಿ ಗೊಕಾಕ- ಮೂಡಲಗಿ ಉಪ ಕೇಂದ್ರದಿಂದ ರೈತ ಫಲಾನುಭವಿಗಳಿಗೆ ಒಟ್ಟು ೭.೧೫ ಲಕ್ಷ ರೂಪಾಯಿಗಳ ಚೆಕ್‌ಗಳನ್ನು ವಿತರಿಸಿ …

Read More »

ಬೆಳಗಾವಿಯಲ್ಲಿ ಗ್ಯಾರೇಜ್‌‌ಗೆ ಬೆಂಕಿ, 10ಕ್ಕೂ ಹೆಚ್ಚು ವಾಹನ ಬೆಂಕಿಗಾಹುತಿ

ಬೆಳಗಾವಿಯಲ್ಲಿ ಗ್ಯಾರೇಜ್‌‌ಗೆ ಬೆಂಕಿ, ತಪ್ಪಿದ ಭಾರಿ ಅನಾಹುತ ಬೆಳಗಾವಿಯ ಆಟೋ ನಗರದಲ್ಲಿರುವ ಖಾಸಗಿ ಗ್ಯಾರೇಜ್‌ಗೆ ಬೆಂ*ಕಿ ಶಾರ್ಟ್ ಸರ್ಕ್ಯೂ*ಟ್ ನಿಂದ ಬೆಂಕಿ ಹೊತ್ತಿಕೊಂಡ ಶಂಕೆ ಗ್ಯಾರೇಜ್‌ನಲ್ಲಿದ್ದ 10ಕ್ಕೂ ಹೆಚ್ಚು ವಾಹನ ಬೆಂಕಿಗಾಹುತಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

Read More »

ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬೀರೇಶ್ವರ ಸಮುದಾಯ ಭವನ ಉದ್ಘಾಟನೆ

ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬೀರೇಶ್ವರ ಸಮುದಾಯ ಭವನ ಉದ್ಘಾಟನೆ ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಬೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಗ್ರಾಮದಲ್ಲಿ‌ ನೂತನ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬೀರೇಶ್ವರ ಸಮುದಾಯ ಭವನ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಬೆಂಗಳೂರು ಹಡಗಿನಾಳದ ಶ್ರೀ ತಪೋನಿಧಿ ಮುತ್ತೇಶ್ವರ ಮಹಾಸ್ವಾಮಿಗಳು, ಕಲ್ಲಪ್ಪ ಪಾಲ್ಕರ್, …

Read More »

ರೈತರ ಬೆಳೆಗೆ ನಿಜವಾದ ಬೆಲೆ ಸಿಕ್ಕಾಗ ಮಾತ್ರ ರೈತರಿಗೆ ಸ್ವಾತಂತ್ರ್ಯ ಸಿಕ್ಕ ಹಾಗೆ: ಚೂನಪ್ಪ ಪೂಜೇರಿ

ರೈತರ ಬೆಳೆಗೆ ನಿಜವಾದ ಬೆಲೆ ಸಿಕ್ಕಾಗ ಮಾತ್ರ ರೈತರಿಗೆ ಸ್ವಾತಂತ್ರ್ಯ ಸಿಕ್ಕ ಹಾಗೆ: ಚೂನಪ್ಪ ಪೂಜೇರಿ ಗೋಕಾಕ ತಾಲೂಕಿನ ಕೊಣ್ಣೂರಿನ ನಗರಸಭೆಯ ಆವರಣದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಣ್ಣೂರ ಘಟಕವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಇವರು ನಾಮಫಲಕ ಮತ್ತು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿದರು. ಕೊಣ್ಣೂರಿನ ರೈತ ಸಂಘಟನೆಯ ಪದಾದಿಕಾರಿಗಳಿಗೆ ರೈತ ದೀಕ್ಷಾ ನೀಡಿ ಉದ್ಗಾಟಿಸಿ ಮಾತನಾಡಿದ ರಾಜ್ಯಾದಕ್ಷ ಚೂನಪ್ಪ …

Read More »

ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿದ ಶಾಸಕ ವಿಠ್ಠಲ ಹಲಗೇಕರ

ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿದ ಶಾಸಕ ವಿಠ್ಠಲ ಹಲಗೇಕರ ಖಾನಾಪೂರ ತಾಲೂಕಿನ ಶೇಕಡಾ 75 ಕ್ಕಿಂತ ಹೆಚ್ಚು ದೈಹಿಕವಾಗಿ ಅಂಗವಿಕಲರು ಮತ್ತು ದೈಹಿಕ ಅಶಕ್ತ ನಾಗರೀಕರಿಗೆ 2023-24 ನೇ ಸಾಲಿನ ಸರ್ಕಾರಿ ಯೋಜನೆಯಡಿ ಅನುಮೋದಿಸಲಾದ 20 ದ್ವಿಚಕ್ರ ವಾಹನಗಳನ್ನು ಖಾನಾಪೂರ ತಾಲೂಕಾ ಪಂಚಾಯತ್ ಆವರಣದಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ವಿತರಣೆ ಮಾಡಿದರು. ಈ ಯೋಜನೆಯ ಫಲಾನುಭವಿಗಳಾದ ಬಾಹುಬಲಿ ಮುತಗಿ (ಹಿರೇಹಟ್ಟಿಹೋಳಿ), ಮಹಾಂತೇಶ ಹಲಸಗಿ (ಬೀಡಿ), ತಾನಾಜಿ ಠೋಂಬ್ರೆ(ನಾಗೂರ್ಡಾ),ವಿಜಯ ಪಾಟೀಲ್ …

Read More »

ಗ್ಯಾರಂಟಿಗಾಗಿ ದಲಿತರ ಹಣ ಬಳಸಿ ಸರ್ಕಾರ ಬೆನ್ನಿಗೆ ಚೂರಿ ಹಾಕುತ್ತಿದೆ

ಕಾಂಗ್ರೆಸ್ ಸರ್ಕಾರ ದಲಿತರಿಗೆ ಮಾಡಿದೆ ಅನ್ಯಾಯ; ಮಾಜಿ ಸಚಿವ ಎಂ.ಮಹೇಶ್ ಬೆಳಗಾವಿ: ಪಂಚ ಗ್ಯಾರಂಟಿ ಯೋಜನೆಯ ಮೂಲಕ ಅಧಿಕಾರಕ್ಕೆ ಬಂದಿರುವ ರಾಜ್ಯ ಸರಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಕೋಟ್ಯಾಂತರ ರೂ. ಅನುದಾನದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಿ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಮಹೇಶ್ ಹೇಳಿದರು. ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಘೋಷಣೆ ಮಾಡಿ ಗೆಲುವು …

Read More »

ಕಂಡಕ್ಟರ್ ಬೆಂಬಲಕ್ಕೆ ನಿಂತ ಕನ್ನಡಪರ ಹೋರಾಟಗಾರರು ನಾಲಾಯಕ್ ಎಂದಿದ್ದ ಎಂಇಎಸ್ ಪುಂಡನಿಗೆ ಜಾಮೀನು!

ಕಂಡಕ್ಟರ್ ಬೆಂಬಲಕ್ಕೆ ನಿಂತ ಕನ್ನಡಪರ ಹೋರಾಟಗಾರರು ನಾಲಾಯಕ್ ಎಂದಿದ್ದ ಎಂಇಎಸ್ ಪುಂಡನಿಗೆ ಜಾಮೀನು! ಕಂಡಕ್ಟರ್ ಬೆಂಬಲಕ್ಕೆ ನಿಂತ ಕನ್ನಡಪರ ಹೋರಾಟಗಾರರನ್ನು ಟೀಕಿಸಿದ್ದ ಎಂಇಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಶುಭಂ ಶೇಳಕೆಗೆ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ನೀಡಿದೆ. ಫೆಬ್ರವರಿ 23 ರಂದು ಟಿಕೇಟಗೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಭಾಷಾ ವಿವಾದ ನಡೆದಾಗ ಕಂಡಕ್ಟರ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಎಂಇಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಶುಭಂ ಶೇಳಕೆ …

Read More »