Breaking News

ತಿರುಪತಿಗೆಂದು ಕರೆದೊಯ್ದು ರೈಲಿನಲ್ಲಿ ಲೈಂಗಿಕ ದೌರ್ಜನ್ಯ – ಯುವಕನಿಗೆ 5 ವರ್ಷ ಜೈಲು!

ಚಾಮರಾಜನಗರ: ದೇಗುಲ ದರ್ಶನಕ್ಕೆಂದು ಅಪ್ರಾಪ್ತೆಯನ್ನು ತಿರುಪತಿಗೆ ಕರೆದೊಯ್ದು ರೈಲಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್ ಸುಲ್ತಾನಪುರಿ 5 ವರ್ಷ ಸಜೆ ವಿಧಿಸಲು ಆದೇಶಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣ ನಿವಾಸಿ ಕುಮಾರ್ ಅಲಿಯಾಸ್ ಧ್ರುವ(19) ಎಂಬ ಯುವಕ ಶಿಕ್ಷೆಗೊಳಗಾದವ. ಕುಮಾರನು ಕೂಲಿ ಕಾರ್ಮಿಕನಾಗಿದ್ದು, 17 ವರ್ಷದ ಅಪ್ರಾಪ್ತೆಯನ್ನು ಪುಸಲಾಯಿಸಿ ಪ್ರೀತಿಸುವುದಾಗಿ ಪೀಡಿಸಿ ಕೊನೆಗೇ ದೇಗುಲಕ್ಕೆ ಹೋಗೋಣವೆಂದು 2019 ಫೆ.24 ರಂದು ತಿರುಮಲ …

Read More »

ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವು ಪ್ರಕರಣ; ಗ್ರಾಮ ತೊರೆದ ಜನರು, ಶಾಲೆಗೆ ರಜೆ ಘೋಷಣೆ

ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವನ್ನಪ್ಪಿರುವ ಕಾರಣ ಆತಂಕಗೊಂಡ ಕೆಲ ಕುಟುಂಬಗಳು ಗ್ರಾಮವನ್ನು ತೊರೆದು ಹೋಗಿವೆ. ಕೆಲ ಜನರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡ ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕರಬ್ಬಿ ಗ್ರಾಮದಲ್ಲಿ ಶಾಲೆಗೆ ತಾತ್ಕಾಲಿಕವಾಗಿ ರಜೆ ಘೋಷಣೆ ಮಾಡಲಾಗಿದೆ. ವಾಂತಿಭೇದಿಯಿಂದ ಅಸ್ವಸ್ಥರಾಗಬಹುದೆಂಬ ಆತಂಕದಲ್ಲಿ ತಮ್ಮ ತಮ್ಮ ಮಕ್ಕಳನ್ನು …

Read More »

ಬಾಲಬ್ರೂಯಿಯಲ್ಲೇ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌: ಕಾಗೇರಿ

ಬೆಂಗಳೂರು: ದಿಲ್ಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ ಅನ್ನು ಬಾಲಬ್ರೂಯಿ ಅತಿಥಿ ಗೃಹ ಆವರಣದಲ್ಲೇ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾಲಬ್ರೂಯಿ ಕಟ್ಟಡದ ಪಾರಂಪರಿಕ ವೈಶಿಷ್ಟéಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದರು. ಶಾಸಕರಿಗಾಗಿಯೇ ಒಂದು ಕ್ಲಬ್‌ ಆರಂಭಿ ಸುವ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇತ್ತು. ಕ್ಲಬ್‌ ಅಗತ್ಯವೂ ಆಗಿದೆ ಎಂದು …

Read More »

WhatsApp, Facebook, Instagram ಬಂದ್ – 9 ಗಂಟೆಯಲ್ಲಿ ಜುಕರ್‌ಬರ್ಗ್‌ಗೆ 44 ಸಾವಿರ ಕೋಟಿ ನಷ್ಟ

ಬೆಂಗಳೂರು: ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ (WhatsApp), ಫೇಸ್‍ಬುಕ್ (Facebook) ಮತ್ತು ಇನ್‍ಸ್ಟಾಗ್ರಾಂ (Instagram) ಜಗತ್ತಿನಾದ್ಯಂತ ರಾತ್ರಿ 9 ಗಂಟೆಯಿಂದ ಸ್ಥಗಿತಗೊಂಡಿದ್ದವು. ಮಧ್ಯರಾತ್ರಿ 3.30ರ ವೇಳೆಗೆ ವಾಟ್ಸಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಜಗತ್ತಿನಲ್ಲಿ 200 ಕೋಟಿ ಫೇಸ್‍ಬುಕ್ ಬಳಕೆದಾರರಿದ್ದಾರೆ. ಭಾರತದಲ್ಲಿ 53 ಕೋಟಿ ವಾಟ್ಸಪ್ ಬಳಕೆದಾರರು, 41 ಕೋಟಿ ಫೇಸ್‍ಬುಕ್ ಬಳಕೆದಾರರು ಮತ್ತು 21 ಕೋಟಿ ಇನ್‍ಸ್ಟಾಗ್ರಾಂ ಬಳಕೆದಾರರು ಇದ್ದಾರೆ. ವಾಟ್ಸಪ್ ಮತ್ತು ಇನ್‍ಸ್ಟಾಗ್ರಾಂ ಕೂಡಾ …

Read More »

ಹೈಕಮಾಂಡ್ ನಿಂದ ಸಿದ್ದುಗೆ ಬುಲಾವ್: ಇಂದು ದೆಹಲಿಗೆ ಪ್ರಯಾಣ ಸಾಧ್ಯತೆ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರೆ ಮಾಡಿದ್ದು, ದೆಹಲಿಗೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ. ಇಂದು ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ನಡೆಯುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಚರ್ಚಿಸಲು ಹೈಕಮಾಂಡ್, ಸಿದ್ದರಾಮಯ್ಯರನ್ನು ದೆಹಲಿಗೆ ಬರುವಂತೆ ಬುಲಾವ್ ನೀಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್​ ಟಿಕೆಟ್ ಫೈನಲ್ ಆಗಿದ್ದು, ಅಶೋಕ್​ …

Read More »

ಶಾಸಕ ಸ್ಥಾನದ ಸ್ಪರ್ಧಿ ಪಕ್ಕಾ: ದೇಶಪಾಂಡೆಗೆ ಘೋಟ್ನೇಕರ್ ಶಾಕ್

ಶಿರಸಿ: ವಿಧಾನ ಪರಿಷತ್ ಸ್ಥಾನಕ್ಕೆ ದಮ್ಮಿಲ್ಲ,ಹೀಗಾಗಿ ನಾನು ಶಾಸಕ ಆಗಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳದಿಂದ ಸ್ಪರ್ಧಿಸುವುದು ಖಂಡಿತ ಎಂದು ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ್ ಅವರು ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಾಕ್ ನೀಡಿದ್ದಾರೆ. ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಹಳಿಯಾಳದಲ್ಲಿ ಬಲವಾಗಿಯೇ ಇದೆ. ಯಾವುದೇ ಬಿರುಕು ಇಲ್ಲ. ಬಿರುಕು ಅವರು …

Read More »

ಶಾಸಕರ ನಿಧಿ’ ಬಳಕೆಯಲ್ಲಿ ಬೆಳಗಾವಿ ಜಿಲ್ಲೆ ಶಾಸಕರು ಮುಂದು

ಬೆಳಗಾವಿ: ರಾಜ್ಯ ಸರ್ಕಾರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ (ಶಾಸಕರ ನಿಧಿ) ನಿಗದಿಪಡಿಸಿರುವ ಅನುದಾನವನ್ನು ಬಳಸುವಲ್ಲಿ ಬೆಳಗಾವಿ ಜಿಲ್ಲೆಯ ಶಾಸಕರು ಮುಂದಿದ್ದಾರೆ. ಬಹುತೇಕರು ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡು ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಶಾಸಕರ ವೇಗಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಆಗದಿರುವುದು ಕೂಡ ಅಲ್ಲಲ್ಲಿ ಕಂಡುಬಂದಿದೆ! ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಅವುಗಳಲ್ಲಿನ ಶಾಸಕರಿಗೆ 2018-19ರಲ್ಲಿ ತಲಾ ₹2 ಕೋಟಿ, 2019-20ರಲ್ಲಿ ತಲಾ ₹2 ಕೋಟಿ ಬಿಡುಗಡೆ ಆಗಿತ್ತು. 2020-21ರಲ್ಲಿ ಕೋವಿಡ್‌ …

Read More »

ರೈತರ ಆದಾಯ ದ್ವಿಗುಣಗೊಳಿಸಲು ಉನ್ನತಮಟ್ಟದ ಸಮಿತಿ ರಚನೆ : ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು : 2023ರ ವೇಳೆಗೆ ರಾಜ್ಯದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನ‌ ಜಿಕೆವಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಸಮಗ್ರ ಕೃಷಿ ಪದ್ದತಿಯ ವಿಸ್ತರಣೆ ಹಾಗೂ ಜನಪ್ರೀಯ ಕಾರ್ಯಕ್ರಮವನ್ನು ಅಳವಡಿಸಲು ಆರ್‌ಕೆವಿವೈ ಯೋಜನೆಯಡಿ ರೂ 72‌34 ಕೋಟಿಗಳ ಅನುದಾನವನ್ನು ಒದಗಿಸಲಾಗಿದ್ದು …

Read More »

ದಸರಾ ಬಳಿಕ ಎಲ್ಲ ತರಗತಿಯವರಿಗೂ ಬಿಸಿಯೂಟ

ಬೆಂಗಳೂರು: ದಸರಾ ರಜೆ ಬಳಿಕ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೂ ಭೌತಿಕ ತರಗತಿ ಆರಂಭದ ಜತೆಗೆ 1ರಿಂದ 10ನೇ ತರಗತಿ ವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಬಿಸಿಯೂಟ ಸಿಗಲಿದೆ. ಅ. 10ರಿಂದ ಅ. 20ರ ವರೆಗೆ ದಸರಾ ರಜೆ ಇರಲಿದೆ. ಈಗಾಗಲೇ ಸರಕಾರ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಿದೆ. ಆದರೆ ಬಿಸಿಯೂಟ ಆರಂಭಿಸಿಲ್ಲ. ದಸರಾ ರಜೆ ಮುಗಿಯುತ್ತಿದ್ದಂತೆ 1ರಿಂದ 5ನೇ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಯ ಜತೆಗೆ …

Read More »

ಕಾಲೇಜು ವಿದ್ಯಾರ್ಥಿಗಳಿದ್ದ ಬಸ್​​​, ಟ್ರ್ಯಾಕ್ಟರ್​​ ಅಪಘಾತ

ಕೋಲಾರ: ವಿದ್ಯಾರ್ಥಿಗಳಿದ್ದ ಕಾಲೇಜು ಬಸ್‌ ಹಾಗೂ ಟ್ರಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದ ರಭಸಕ್ಕೆ ಟ್ರಾಕ್ಟರ್ ಎರಡು ಭಾಗಗಳಾಗಿದೆ. ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ ಚಾಲಕರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಲಾರದ ವಿಜಯ ಚೇತನ ಪಿಯು ಕಾಲೇಜಿಗೆ ಸೇರಿದ ಖಾಸಗೀ ಬಸ್ ಇದಾಗಿದ್ದು, ಬಸ್ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.     …

Read More »