Breaking News

ಯಾವುದೇ ಸಂಘದ ಅಭಿವೃದ್ಧಿಯಲ್ಲಿ ಅಧ್ಯಕ್ಷರು, ಅಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ: ಸತೀಶ ಜಾರಕಿಹೊಳಿ

        ಗೋಕಾಕ: ಸಮೀಪದ ಸತ್ತಿಗೇರಿ ತೋಟದಲ್ಲಿ ಇಂದು ಹಮ್ಮಿಕೊಂಡಿದ್ದ ಚಕ್ರವರ್ತಿ ದಾನೇಶ್ವರ ಕೃಪಾ ಸಂಚಾರಿ ಕುರುಬರ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು.   ನಂತರ ಮಾತನಾಡಿದ ಅವರು, ಸಂಘದವರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಕುರಿಗಾಹಿಗಳು ಹಾಗೂ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಹೇಳಿದರು.   ಯಾವುದೇ ಸಂಘ …

Read More »

ಕ್ಯೂ ಜಾಸ್ತಿ ಇದ್ದರು ಮೊದಲು ನನ್ನ ಗಾಡಿಗೆ ಪೆಟ್ರೋಲ್ ಹಾಕೆಂದು ಹಲ್ಲೆ..!

ಬೆಂಗಳೂರು: ಪೆಟ್ರೋಲ್ ಬಂಕ್ ನಲ್ಲಿ ಮೊದಲು ನನ್ನ ಗಾಡಿಗೆ ಪೆಟ್ರೋಲ್ ಹಾಕಬೇಕೆಂದು ಹಲ್ಲೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಹಂಚಿಪುರದ ಪುಂಡರಿಂದ ಈ ಹಲ್ಲೆ ನಡೆದಿದೆ. ಪೆಟ್ರೋಲ್ ಬಂಕ್ ನಲ್ಲಿ ತುಂಬಾ ಕ್ಯೂ ಇತ್ತು. ಕಾರಣ ಕ್ಯೂನಲ್ಲಿ ಬರದೆ ನನ್ನ ಗಾಡಿಗೆ ಪೆಟ್ರೋಲ್ ಹಾಕಬೇಕೆಂದು ಹಂಚಿಪುರದ ಡೈರಿ ರಾಮಚಂದ್ರಪ್ಪನ ಮಗ ಗುಣ ಎಗರಾಡಿದ್ದನಂತೆ. ಆ ಬಳಿಕ ಮಾತಿಗೆ ಮಾತು ಬೆಳೆದು ಗುಣನಿಂದ ಹಲ್ಲೆ ನಡೆದಿದ್ದು, ಗುಣನ ಜೊತೆಗೆ ಬಿಎಂಟಿಸಿ …

Read More »

ಜಿಎಸ್​ಟಿ ಬಾಕಿ ಹಣ 11,400 ಕೋಟಿ ರೂ. ನೀಡಲು ಕೇಂದ್ರ ಒಪ್ಪಿಗೆ; ಕೊರೊನಾ ಲಸಿಕೆ ಪೂರೈಕೆ ಹೆಚ್ಚಿಸುವ ಭರವಸೆ: ಸಿಎಂ ಬೊಮ್ಮಾಯಿ

ದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಅಲ್ಲಿ ಕೇಂದ್ರ ಆರೋಗ್ಯ ಸಚಿವ ಮನಸುಖ್​ ಮಾಂಡವೀಯ ಜತೆ ಚರ್ಚೆ ನಡೆಸಿ ಮುಂದಿನ ತಿಂಗಳಿಂದ ರಾಜ್ಯಕ್ಕೆ 1.5 ಕೋಟಿ ಡೋಸ್​ ಕೊರೊನಾ ಲಸಿಕೆ ಪೂರೈಸಲು ಮನವಿ ಸಲ್ಲಿಸಿದ್ದಾರೆ. ಕೊರೊನಾ ಲಸಿಕೆ ಬಗ್ಗೆ ಆರೋಗ್ಯ ಸಚಿವರ ಜತೆ ಚರ್ಚಿಸಿರುವ ಅವರು, ಪ್ರಸ್ತುತ 60ರಿಂದ 65 ಲಕ್ಷ ಡೋಸ್​ ಲಸಿಕೆಯಷ್ಟಿರುವ ಪೂರೈಕೆಯನ್ನು 1.5 ಕೋಟಿ ಡೋಸ್​ಗೆ ಹೆಚ್ಚಳ ಮಾಡಲು ಬೇಡಿಕೆ ಇಟ್ಟಿದ್ದಾಗಿ …

Read More »

ಚಿಕ್ಕೋಡಿ: ಕಾಲೇಜು ಕಾಂಪೌಂಡ್​ ಗೋಡೆಗೆ ಅಳವಡಿಸಿದ್ದ ಗೇಟ್​​ ಆಕಸ್ಮಿಕವಾಗಿ ಬಿದ್ದ ಕಾರಣ 10 ವರ್ಷದ ಬಾಲಕ ಸ್ಥಳದಲ್ಲಿಯೇ ಸಾವು

ಚಿಕ್ಕೋಡಿ: ಕಾಲೇಜು ಕಾಂಪೌಂಡ್​ ಗೋಡೆಗೆ ಅಳವಡಿಸಿದ್ದ ಗೇಟ್​​ ಆಕಸ್ಮಿಕವಾಗಿ ಬಿದ್ದ ಕಾರಣ 10 ವರ್ಷದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಚಿಕ್ಕೋಡಿಯ ಆರ್.ಡಿ ಕಾಲೇಜಿನಲ್ಲಿ ನಡೆದಿದೆ. ಚಿಕ್ಕೋಡಿ ನಗರದ ಇಂದಿರಾನಗರ ನಿವಾಸಿಯಾಗಿದ್ದ ಸೂಫಿಯಾನ್ ರಾಜು ಮುಲ್ಲಾ (10) ಮೃತ ದುರ್ದೈವಿ. ಬಾಲಕ ಗೇಟ್ ದಾಟಿ ಮನೆಗೆ ಹೊರಟಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಮಹಿಳೆಯರ ಜೊತೆ ಅಸಭ್ಯ ವರ್ತನೆ; ಸಾರ್ವಜನಿಕರಿಂದ ಧರ್ಮದೇಟು

ರಾಯಚೂರು: ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಗರದ ನಗರದ ಆಶಾಪುರ ರಸ್ತೆಯಲ್ಲಿ ನಡೆದಿದೆ. ರಸ್ತೆಯಲ್ಲಿ ಒಂಟಿಯಾಗಿ ಓಡಾಡ್ತಿದ್ದ ಒಂಟಿ ಮಹಿಳೆಯರನ್ನು ಹಿಂಬಾಲಿಸುತ್ತಿದ್ದ ಅಪರಿಚಿತನೋರ್ವ, ಮಹಿಳೆಯರ ಸೀರೆ ಎಳೆಯಲು ಪ್ರಯತ್ನ ಮಾಡ್ತಿದ್ದ ಎನ್ನಲಾಗಿದೆ. ಇದರಿಂದ ಗಾಬರಿಗೊಂಡಿದ್ದ ಕೆಲವು ಮಹಿಳೆಯರು ಈತ ಮೇಲೆ ಆರೋಪ ಮಾಡಿದ್ದರು. ವ್ಯಕ್ತಿಯ ಅಸಭ್ಯ ವರ್ತನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಆತನನ್ನು ಮರಕ್ಕೆ ಕಟ್ಟಿ ಹಾಕಿ ಧರ್ಮದೇಟು ಕೊಟ್ಟು ಪೊಲೀಸ​ರ ವಶಕ್ಕೆ ನೀಡಿದ್ದಾರೆ.

Read More »

ಗುರುತು ಸಿಗದ ರೀತಿಯಲ್ಲಿರುವ ಮೃತದೇಹ ಘಟಪ್ರಭಾ ನದಿಯಲ್ಲಿ ತೇಲಿ ಬಂದಿರುವ ಘಟನೆ ಗೋಕಾಕ್ ನಲ್ಲಿ ನಡೆದಿದೆ.

ಬೆಳಗಾವಿ: ಘಟಪ್ರಭಾ ಹಾಗೂ ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಮುಂದುವರೆದಿದ್ದು, ಅಪರಿಚಿತ ವ್ಯಕ್ತಿಯೊಬ್ಬರ ಶವ ಘಟಪ್ರಭಾ ನದಿಯಲ್ಲಿ ತೇಲಿ ಬಂದಿರುವ ಘಟನೆ ಗೋಕಾಕ್ ನಲ್ಲಿ ನಡೆದಿದೆ. ಗೋಕಾಕ್ ತಾಲೂಕಿನ ಮಳವಂಕಿ ಗ್ರಾಮದಲ್ಲಿ ಘಟಪ್ರಭಾ ನದಿಯಲ್ಲಿ ಶವವೊಂದು ತೇಲಿ ಬಂದಿದ್ದು, ಕೊಳೆತು ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗಿದೆ.

Read More »

ಸೋಮವಾರ ಸಂಪುಟ ರಚನೆ ಬಗ್ಗೆ ಫೈನಲ್ ಆಗುವುದು ಬಹುತೇಕ ಖಚಿತ

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕರ ಸ್ವೀಕರಿಸಿರುವ ಬೆನ್ನಲ್ಲೇ ದೆಹಲಿಗೆ ತೆರಳಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ರಚನೆ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. ಈ ನಡುವೆ ಸೋಮವಾರ ಸಂಪುಟ ರಚನೆ ಬಗ್ಗೆ ಫೈನಲ್ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ. ನಿನ್ನೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ, ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸಚಿವ …

Read More »

ಅಕ್ರಮ ಗಣಿಗಾರಿಕೆ ವಿರುದ್ಧ ಅಮಿತ್ ಶಾಗೆ ದೂರು; ತನಿಖೆಗೆ ಒತ್ತಾಯಿಸಿದ ಸುಮಲತಾ

ನವದೆಹಲಿ: ಕೆ.ಆರ್.ಎಸ್. ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಂಸದೆ ಸುಮಲತಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ. ನವದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ಸುಮಲತಾ, ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್ ಗೆ ಆಗುತ್ತಿರುವ ಅಪಾಯ, ಸುತ್ತಮುತ್ತಲಿನ ರೈತರು, ಪರಿಸರ, ಅರಣ್ಯ ಹಾಗೂ ಪ್ರಾಣಿ ಸಂಕುಲಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.   ಕೆ.ಆರ್.ಎಸ್ ಡ್ಯಾಂ ಬಿರುಕು …

Read More »

ದೊಡ್ಡ ಗಂಡಾಂತರದ ಬಗ್ಗೆ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀಗಳಿಂದ ಶಾಕಿಂಗ್ ಮಾಹಿತಿ

ಕೋಲಾರ: ದೇಶಕ್ಕೆ ಸಂಕ್ರಾಂತಿಯೊಳಗೆ ದೊಡ್ಡ ಗಂಡಾಂತರವಿದೆ ಎಂದು ತಮ್ಮ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಕಾರ್ತಿಕ ಮಾಸದವರೆಗೆ ಜಲ ಗಂಡಾಂತರವಿದೆ. ದೇಶದಲ್ಲಿ ದೊಡ್ಡ ಅವಘಡ ಉಂಟಾಗಲಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಲಿದ್ದು ಕೆರೆ ಕಟ್ಟೆಗಳೆಲ್ಲ ತುಂಬಲಿವೆ ಎಂದು ಅವರು ತಿಳಿಸಿದ್ದಾರೆ. ರಾಜಕಾರಣದ ಬಗ್ಗೆ ಆಷಾಢದಲ್ಲಿ ಅಶುಭ ಹೇಳುವುದು ಬೇಡ. ಪೂರ್ಣ ಪ್ರಮಾಣದ ಮಂತ್ರಿಮಂಡಲ ರಚನೆಯಾದ ನಂತರ, ಕಾರ್ತಿಕಮಾಸ ಕಳೆದ ನಂತರ ಹೇಳುತ್ತೇನೆ. ಕೊರೋನಾ …

Read More »

ಬಿ ಎಸ್ ವೈ ಬಿಜೆಪಿಯಲ್ಲಿಯೇ ಇದ್ದವರು. ಅವರ ಮಾತನ್ನೇ ಕೇಳಿಲ್ಲ, ಇನ್ನು ಜನತಾದಳದಿಂದ ಬಿಜೆಪಿಗೆ ಹೋದ ಬೊಮ್ಮಾಯಿ ಮಾತು ಕೇಳ್ತಾರಾ?

ಮೈಸೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯವಾದರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರೇ ಏನೂ ಮಾಡಲು ಸಾಧ್ಯವಾಗಿಲ್ಲ. ಇನ್ನು ಹೊಸ ಸಿಎಂ ಬಸವರಾಜ ಬೊಮ್ಮಾಯಿ ಏನು ಮಾಡುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರುವ ವಿಚಾರವಾಗಿ ಮಾತನಾಡುತ್ತಾ, ಕೇಂದ್ರದಿಂದ ಜಿ ಎಸ್ ಟಿ ಪಾಲು ತರಲಾಗಿಲ್ಲ. ಜನರಿಗೆ ಈವರೆಗೆ ಪರಿಹಾರದ ಹಣವೂ ಸಿಕ್ಕಿಲ್ಲ. ಮಾಜಿ ಸಿಎಂ ಯಡಿಯೂರಪ್ಪನವರಿಂದಲೇ ಏನೂ ಸಾಧ್ಯವಾಗಿಲ್ಲ …

Read More »