Breaking News

ರಾಜ್ಯಕ್ಕೆ ಕಲ್ಲಿದ್ದಲು ಸಿಕ್ಕಿದೆ, ವಿದ್ಯುತ್ ಅಭಾವ ಸೃಷ್ಟಿಯಾಗದು: ಸಚಿವ ಸುನಿಲ್ ಕುಮಾರ್

ಬೆಂಗಳೂರು : ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗದು ಮತ್ತು ವಿದ್ಯುತ್ ಅಭಾವ ಸೃಷ್ಟಿಯಾಗದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಮುತುವರ್ಜಿಯಿಂದ ರಾಜ್ಯಕ್ಕೆ ಹಂಚಿಕೆಯಾಗಬೇಕಿದ್ದ ಕಲ್ಲಿದ್ದಲು ಸಿಕ್ಕಿದೆ ಎಂದರು. ದೇಶದಲ್ಲಿ ವಿದ್ಯುತ್‌ ಪೂರೈಕೆ ಸರಾಗವಾಗಿದ್ದು, ಕೊರತೆ ಉಂಟಾಗುವ ಯಾವುದೇ ಸ್ಥಿತಿಯಿಲ್ಲ. ಕೋಲ್‌ ಇಂಡಿಯಾ ಲಿ.ನಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು …

Read More »

ಹಾಫ್ ಮೆಂಟ್ಲು ಚಿತ್ರದ ನಿರ್ಮಾಪಕ ಅರೆಸ್ಟ್

: ಸಿನಿಮಾ ಸ್ಟೈಲ್ ನಲ್ಲೇ ಕಿಡ್ನ್ಯಾಪ್ ಮಾಡಲು ಹೋಗಿ ನಿರ್ಮಾಪಕನೊಬ್ಬ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಹಾಫ್ ಮೆಂಟ್ಲು ಸಿನಿಮಾ ನಿರ್ಮಾಪಕ ಶಶಿಕುಮಾರ್ ಬಂಧಿತ ಆರೋಪಿ. ಐಟಿ ಅಧಿಕಾರಿಗಳೆಂದು ಹೇಳಿ ಈರುಳ್ಳಿ ವ್ಯಾಪಾರಿ ಶ್ರೀನಿವಾಸ್ ಎಂಬುವವರನ್ನು ಶಶಿಕುಮಾರ್ ಹಾಗೂ ಗ್ಯಾಂಗ್ ಕಿಡ್ನ್ಯಾಪ್ ಮಾಡಿತ್ತು. 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಾಗ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿ ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಬಿಟ್ಟು ಹೋಗಿದ್ದರು. …

Read More »

ಶ್ರೀ ಸಿದ್ಧೇಶ್ವರ ಮಂದಿರ ಪುನರೊದ್ಧಾರ ಹಾಗೂ ಪ್ರವಾಸಿ ತಾಣವಾಗಿ ಮಾರ್ಪಡಿಸಲು ಮನವಿ

ಬೆಳಗಾವಿ: ಬೆಳಗಾವಿಗೆ ಭೇಟಿ ನೀಡಿದ ಪ್ರವಾಸೋದ್ಯಮ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀಪಾದ ನಾಯ್ಕರವರನ್ನು ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ರವರು ಭೇಟಿ ಮಾಡಿ ಕಣಬರ್ಗಿಯಲ್ಲಿರುವ ಶ್ರೀ ಸಿದ್ಧೇಶ್ವರ ಮಂದಿರದ ಪುನರೊದ್ಧಾರ ಹಾಗೂ ಮಂದಿರದ ಪರಿಸರವನ್ನು ಪ್ರವಾಸಿ ಸ್ಥಾನವಾಗಿ ಮಾರ್ಪಡಿಸುವಂತೆ ಮನವಿ ಪತ್ರ ಸಲ್ಲಿಸಿದರು. ಚೋಳ ಸಾಮ್ರಾಜ್ಯದ ವಾಸ್ತು ಶೀಲ್ಪದ ಉದಹಾರಣೆಯಾಗಿರುವ ಈ ಭವ್ಯ ಹಾಗೂ ಶ್ರದ್ಧೆ ಪ್ರತೀಕವಾಗಿರುವ ಈ ಐತಿಹಾಸಿಕ ದೇವಸ್ಥಾನದ ಪುನರೊದ್ಧಾರದಿಂದ ಉತ್ತರಕರ್ನಾಟಕ, …

Read More »

ಮಾತುಕತೆ ವೇಳೆಯೂ ಚೀನಾ ಉದ್ಧಟತನ.. ಯಾವುದೇ ಸಲಹೆ ಒಪ್ಪಿಕೊಳ್ಳದ ಡ್ರ್ಯಾಗನ್

ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಡ್ರ್ಯಾಗನ್ ಮತ್ತೆ ಕಿರಿಕ್ ಮಾಡಿದ ಬೆನ್ನಲ್ಲೇ, ಭಾರತ ಮತ್ತು ಚೀನಾ ಮಧ್ಯೆ 13ನೇ ಬಾರಿಗೆ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆದಿದೆ. ಪೂರ್ವ ಲಡಾಖ್​​ನ ಲೈನ್​ ಆಫ್​ ಆಯಕ್ಚುವಲ್ ಕಂಟ್ರೋಲ್​​ನಲ್ಲಿ ಇರುವ ಸಮಸ್ಯೆಗಳನ್ನ ಪರಿಹರಿಸುವ ಸಂಬಂಧ ನಿನ್ನೆ ಎರಡೂ ದೇಶಗಳ ಕಮಾಂಡರ್​ಗಳು ಮುಖಾಮುಖಿಯಾಗಿದ್ದವು.     ಆದರೆ ಈ ಮಾತುಕತೆಯಲ್ಲಿ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲು ನಾವು ನೀಡಿದ ಸಲಹೆಯನ್ನ ಚೀನಾ ಒಪ್ಪಿಕೊಳ್ಳಲಿಲ್ಲ ಎಂದು ಭಾರತ ಹೇಳಿದೆ. ಈ …

Read More »

ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ

ವಿಜಯಪುರ: ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಡಿಎನ್‌ಎ. ಪರೀಕ್ಷೆಗಾಗಿ ತಿಪ್ಪೆ ಗುಂಡಿಯಲ್ಲಿ ಹೂತಿದ್ದ ಮಗುವಿನ ಮೃತ ದೇಹವನ್ನು ಉಪವಿಭಾಗಾಧಿಕಾರಿ ಅನುಮತಿ ಪಡೆದು ತಹಶೀಲ್ದಾರ್‌ ಸಮ್ಮುಖದಲ್ಲಿ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಶ್ರೀನಿವಾಸ್‌ ಮಾಹಿತಿ ನೀಡಿದರು. ಪಟ್ಟಣ ಸಮೀಪದ ಹಳಿಯೂರು ಗ್ರಾಮದಲ್ಲಿ ಗಾರೆ ಕೆಲಸಕ್ಕೆಂದು ಬಂದಿದ್ದ ಚಿಂತಾಮಣಿ ತಾಲೂಕಿನ ಯುವಕನೊಬ್ಬ ಇದೇ ಗ್ರಾಮದ ಅಪ್ರಾಪ್ತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ವಿಟ್ಟುಕೊಂಡು ಪರಾರಿಯಾಗಿರುವ ಘಟನೆ …

Read More »

ಒಂದೇ ರೀತಿ ಚೀಟಿ ಬರೆದಿಟ್ಟು ಕಾಣೆಯಾಗಿದ್ದ ಮೂವರು ಮಕ್ಕಳ ರಕ್ಷಣೆ -ಎಲ್ಲಿಗೆ ಹೋಗ್ತಿದ್ರು ಗೊತ್ತಾ ಕಿಲಾಡಿಗಳು..?

ಬೆಂಗಳೂರು: ಬಾಗಲುಗುಂಟೆ ಠಾಣೆ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ನಿಗೂಢವಾಗಿ ನಾಪತ್ತೆಯಾಗಿದ್ದ ಬಾಗಲುಗುಂಟೆಯಮಕ್ಕಳನ್ನ ಉಪ್ಪಾರಪೇಟೆ ಠಾಣೆ ಪೊಲೀಸರು ರಕ್ಷಿಸಿ, ಪೋಷಕರ ಆತಂಕ ದೂರ ಮಾಡಿದ್ದಾರೆ. ಪೊಲೀಸರಿಗೆ ಸುಳಿವು ಕೊಟ್ಟ ಚಿಂದಿ ಆಯುವ ವ್ಯಕ್ತಿ ನಂದನ್, ಕಿರಣ್, ಪರೀಕ್ಷಿತ್ ಎಂಬ ಮೂವರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಈ ಮೂವರು ವಿದ್ಯಾರ್ಥಿಗಳು SSLC ವ್ಯಾಸಾಂಗ ಮಾಡುತ್ತಿದ್ದಾರೆ. ಆನಂದ್ ರಾವ್ ಸರ್ಕಲ್ ಬಳಿ ತೆರಳುತ್ತಿದ್ದ ಮಕ್ಕಳನ್ನ ಚಿಂದಿ ಆಯುವ ವ್ಯಕ್ತಿಯೊಬ್ಬ ನೋಡಿದ್ದಾನೆ ಎನ್ನಲಾಗಿದೆ. …

Read More »

ಜೂಜು ಅಡ್ಡೆ ಮೇಲೆ ಪೊಲೀಸ್​​ ದಾಳಿ -ತಪ್ಪಿಸಿಕೊಳ್ಳಲು ನೀರಿಗೆ ಹಾರಿದ್ದ ವ್ಯಕ್ತಿ ಸಾವು

ಮೈಸೂರು: ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ನೀರಿಗೆ ಜಿಗುದಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ನಡೆದಿದೆ. ನಂಜುಂಡ (37) ಮೃತ ವ್ಯಕ್ತಿಯಾಗಿದ್ದು, ನಿನ್ನೆ ಸಂಜೆ 6.00 ಗಂಟೆ ಸಮಯದಲ್ಲಿ 5 ರಿಂದ 6 ಜನ ಸೇರಿ ಜೂಜು ಆಡುತ್ತಿದ್ದಾಗ ಪೊಲೀಸರ ದಾಳಿ ನಡೆಸಿದ್ದರು. ಈ ವೇಳೆ ಆತಂಕಗೊಂಡ ಎಲ್ಲರೂ ತಲಾ ಒಂದು ದಿಕ್ಕಿಗೆ ಓಡಿ ಪರಾರಿಯಾಗಲು …

Read More »

ಉತ್ಸಾಹದಿಂದ ತೇಲಾಡುತ್ತಿದ್ದೇನೆ: 79 ನೇ ವಸಂತಕ್ಕೆ ಕಾಲಿಟ್ಟ ಅಮಿತಾಬ್ ಬಚ್ಚನ್

ಮುಂಬಯಿ : ‘ಅಭಿಮಾನಿಗಳು ಮತ್ತು ಹಿತೈಷಿಗಳ ಪ್ರೀತಿಯಿಂದಾಗಿ ನಾನು ಉತ್ಸಾಹದಿಂದ ತೇಲಾಡುತ್ತಿದ್ದೇನೆ’ ಎಂದು 79 ನೇ ಜನ್ಮದಿನಾಚರಣೆಯ ಸಂಭ್ರಮದಂದು ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಅಮಿತಾಬ್ ಅವರ ಮುಂಬಯಿಯ ನಿವಾಸದ ಎದುರು ಸೋಮವಾರ ನೂರಾರು ಅಭಿಮಾನಿಗಳು ಆಗಮಿಸಿ ಸಂಭ್ರಮಿಸಿದರು. ಅಮಿತಾಬ್ ಅವರು ಅಭಿಮಾನಿಗತ್ತ ಕೈ ಬೀಸಿ ಪ್ರೀತಿ ವ್ಯಕ್ತಪಡಿಸಿದರು. ಜನಪ್ರಿಯ ಕಾರ್ಯಕ್ರಮವಾಗಿರುವ ‘ಕೌನ್ ಬನೇಗಾ ಕ್ರೋರ್ ಪತಿ’ ಕಾರ್ಯಕ್ರಮದ ಸೆಟ್ನಲ್ಲಿ ಅಮಿತಾಬ್ ಅವರಿಗೆ ಕೆಂಪು ಹಾಸಿನ ವಿಶೇಷ …

Read More »

‘ಮಾ’ ಚುನಾವಣೆಯಲ್ಲಿ ಸೋಲು ಕಂಡ ನಟ ಪ್ರಕಾಶ್ ರಾಜ್

ಹೈದರಾಬಾದ್: ಭಾನುವಾರ ನಡೆದ ‘ತೆಲುಗು ಮೂವೀಸ್‌ ಆರ್ಟಿಸ್ಟ್ಸ್ ಅಸೋಶಿಯೇಷನ್’ (MAA) ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ಸೋಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು, ನಟ ಹಾಗೂ ನಿರ್ಮಾಪಕ ಮೋಹನ್‌ ಬಾಬು ಅವರ ಮಗ ಮಂಚು ವಿಷ್ಣು ವಿರುದ್ಧ ಸುಮಾರು 400 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. 900 ಮತಗಳು ಚಲಾವಣೆಗೊಂಡಿದ್ದು, ಮತ ಎಣಿಕೆ ತಡರಾತ್ರಿವರೆಗೂ ನಡೆದು ಫಲಿತಾಂಶ ಪ್ರಕಟಗೊಂಡಿದೆ. ಪ್ರಕಾಶ್ ರಾಜ್ ಪ್ಯಾನೆಲ್‌ನ ನಟ ಶ್ರೀಕಾಂತ್ ಅವರು ಉಪಾಧ್ಯಕ್ಷ …

Read More »

ಗಗನಕ್ಕೇರಿದ ತೈಲಬೆಲೆ: ಶಾಸಕರ ಕಾರು ದುರ್ಬಳಕೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಮಾಸ್ಟರ್​ ಪ್ಲಾನ್​

ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಷ್ಟು ದಿನ ಪೆಟ್ರೋಲ್​ ದರ ಮಾತ್ರ ಶತಕ ದಾಟಿತ್ತು. ಇದೀಗ ಡೀಸೆಲ್​ ದರ ಕೂಡ ಶತಕ ಬಾರಿಸಿದೆ. ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆಯು ಕೇವಲ ಜನಸಾಮಾನ್ಯನಿಗೆ ಮಾತ್ರವಲ್ಲದೇ ಸರ್ಕಾರದ ಪಾಲಿಗೂ ಚಿಂತಾಜನಕ ವಿಷಯವಾಗಿ ಬದಲಾಗಿದೆ. ತೈಲೋತ್ಪನ್ನಗಳ ದರ ಏರಿಕೆಯ ಹಿನ್ನೆಲೆಯಲ್ಲಿ ಶಾಸಕರ ಕಾರುಗಳು ದುರ್ಬಳಕೆಯಾಗದಂತೆ ತಡೆಯಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್​ ರೂಪಿಸಿದೆ. ಮಿತವ್ಯಯ ಮಾಡಲು ನಿರ್ಧರಿಸಿರುವ ಆರ್ಥಿಕ …

Read More »