Breaking News

ಸಾರ್ವಜನಿಕ ಸ್ಥಳಗಳು, ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ಸಂಘ ಸಂಸ್ಥೆ, ಸಂಘಟನೆಗಳ ಚಟುವಟಿಕೆ ಪರಿಶೀಲಿಸುವ ನಿಯಮ: ಸಂಪುಟದ ಮಹತ್ವದ ನಿರ್ಧಾರ

ಬೆಂಗಳೂರು : ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ದವಾಗಿ ನಡೆಸಲು ಅನುಮತಿ ನೀಡಲು ಮಾರ್ಗಸೂಚಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಿ ಸ್ಥಳಗಳು, ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ RSS ಸಂಘಟನೆಯು ಶಾಖೆ, ಸಾಂಘಿಕ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ …

Read More »

ಕಾರವಾರದಲ್ಲಿ ವಿಚಿತ್ರ ಘಟನೆ: ಹಾರಿ ಬಂದ ಕಾಂಡೈ ಮೀನು ಹೊಟ್ಟೆಗೆ ಚುಚ್ಚಿ ಯುವ ಮೀನುಗಾರ ಸಾವು!

ಕಾರವಾರ(ಉತ್ತರ ಕನ್ನಡ): ಜಿಲ್ಲೆಯ ಕಾರವಾರದಲ್ಲಿ ಅತಿ ವಿರಳ ಘಟನೆಯಲ್ಲಿ ಕಾಂಡೈ ಮೀನೊಂದು ಹಾರಿ ಬಂದು ಚುಚ್ಚಿದ ಪರಿಣಾಮ ಯುವ ಮೀನುಗಾರನೊಬ್ಬ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಮತ್ತು ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ದಾಂಡೇಭಾಗ ನಿವಾಸಿ 24 ವರ್ಷದ ಅಕ್ಷಯ ಅನಿಲ ಮಾಜಾಳಿಕರ್ ಮೃತ ಯುವಕ. ಅಕ್ಷಯ ಮಂಗಳವಾರ (ಅ.14) ಎಂದಿನಂತೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಮೀನುಗಾರಿಕೆ …

Read More »

ಜನತೆಗೆ ಉಡುಗೊರೆ ಕೊಡುತ್ತಾರೋ, ಬಿ ಖಾತೆಯವರಿಂದ ದೀಪಾವಳಿ ಉಡುಗೊರೆ ಪಡೆಯುತ್ತಾರೋ ಗೊತ್ತಿಲ್ಲ: ಹೆಚ್​ಡಿಕೆ

ಮಂಡ್ಯ : ಈ ಸರ್ಕಾರ ಬಂದ ಮೇಲೆ ಗೈಡೆನ್ಸ್​ ವ್ಯಾಲ್ಯೂ ಜಾಸ್ತಿ ಮಾಡಿಕೊಂಡರು. ಬಿ ಖಾತಾದಿಂದ ಎ ಖಾತಕ್ಕೆ 5 ಲಕ್ಷದಿಂದ 10 ಲಕ್ಷ ಎಲ್ಲಿ ಕಟ್ಟುತ್ತಾರೋ ಗೊತ್ತಿಲ್ಲ. ಅದರಿಂದ 10-15 ಸಾವಿರ ಕೋಟಿ ವಸೂಲಿ ಮಾಡುತ್ತಾರೋ ಅಥವಾ ಇದು ಜನತೆಗೆ ಉಡುಗೊರೆ ಕೊಡುತ್ತಾರೋ, ಇಲ್ಲವೇ, ಬಿ ಖಾತೆಯವರಿಂದ ದೀಪಾವಳಿ ಉಡುಗೊರೆಯನ್ನು ಪಡೆಯುತ್ತಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಲೇವಡಿ ಮಾಡಿದ್ದಾರೆ. ಮಂಡ್ಯದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಆಟೋ …

Read More »

RSS, ಬಿಜೆಪಿ ಬೈಯ್ಯೋ ಸಲುವಾಗಿ ಪ್ರಿಯಾಂಕ್​ ಖರ್ಗೆಗೆ ಪ್ರತ್ಯೇಕ ಇಲಾಖೆ ಮಾಡಿ: ಬಸನಗೌಡ ಪಾಟೀಲ್ ಯತ್ನಾಳ್ ಗರಂ

ಬೆಂಗಳೂರು: “ಆರ್​ಎಸ್​ಎಸ್​​​​, ಬಿಜೆಪಿ ಬೈಯ್ಯುವ ಸಲುವಾಗಿಯೇ ಪ್ರಿಯಾಂಕ್​​​​​ ಖರ್ಗೆಗೆ ಪ್ರತ್ಯೇಕ ಇಲಾಖೆ ಮಾಡಿ” ಎಂದು ಶಾಸಕ ಬಸನಗೌಡ ಪಾಟೀಲ್​​​​​​​ ಯತ್ನಾಳ್​​ ಸಿಎಂ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, “ಪ್ರಿಯಾಂಕ್​ ಖರ್ಗೆ ಅವರೇ ನಿಮಗೆ ನೂರಾರು ಕೆಲಸಗಳಿವೆ. ಗೂಗಲ್​ ಎಐ ಹೋಯ್ತು. ನೀವೇನು ಆರ್​ಎಸ್ಎಸ್​ ​ವಿರೋಧಿ ಮಂತ್ರಿಯೋ?. ತಾಲಿಬಾನಿ ಮಂತ್ರಿಯೋ?. ಅಥವಾ ಐಟಿ ಬಿಟಿ ಮಂತ್ರಿಯೋ?. ಹೊಸ‌ ಇಲಾಖೆ ಸೃಷ್ಟಿ ಮಾಡಿ. ಆರ್​ಎಸ್​​ಎಸ್​,‌ ಬಿಜೆಪಿ, ಹಿಂದೂಗಳನ್ನು ಬೈಕೋತಾ ಹೋಗಿ. ಮಲ್ಲಿಕಾರ್ಜುನ …

Read More »

ಹಾಡಹಗಲೇ ವಿದ್ಯಾರ್ಥಿನಿ ಹತ್ಯೆ

ಬೆಂಗಳೂರು: ಹಾಡಹಾಗಲೇ ಕಾಲೇಜು ವಿದ್ಯಾರ್ಥಿನಿಯನ್ನು ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ ಹತ್ಯೆಮಾಡಿರುವ ಘಟನೆ ಮಂತ್ರಿಮಾಲ್ ಹಿಂಭಾಗದ ರೈಲ್ವೇ ಟ್ರ್ಯಾಕ್ ಬಳಿ ನಡೆದಿದೆ. ಶ್ರೀರಾಮಪುರ ಪೊಲೀಸ್​ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ಧಾರೆ. ಘಟನೆ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ: ಯಾಮಿನಿ ಪ್ರಿಯಾ (20) ಹತ್ಯೆಯಾದ ವಿದ್ಯಾರ್ಥಿನಿ. ಬನಶಂಕರಿಯ ಖಾಸಗಿ ಕಾಲೇಜೊಂದರಲ್ಲಿ ಬಿಫಾರ್ಮ್ ವ್ಯಾಸಂಗ ಮಾಡುತ್ತಿದ್ದ ಯಾಮಿನಿ ಕಾಲೇಜು ಮುಗಿಸಿ ಇಂದು ಮಧ್ಯಾಹ್ನ ಸ್ವಾತಂತ್ರ್ಯ ನಗರದಲ್ಲಿರುವ ನಿವಾಸಕ್ಕೆ ಬರುವಾಗ ಮಂತ್ರಿಮಾಲ್ ಹಿಂಭಾಗದ ರೈಲ್ವೇ …

Read More »

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹೊತ್ತಿ ಉರಿದ ಕಬ್ಬು.

ರಾಯಬಾಗ :ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹೊತ್ತಿ ಉರಿದ ಕಬ್ಬು. ಅಂದಾಜು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ಸುಟ್ಟುಕರಕಲು. ಬೆಕ್ಕೇರಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಉಂಟಾದ ಅವಘಡ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮ. ಬೆಂಕಿ ಹೊತ್ತುತ್ತಿದ್ದಂತೆ ಅಗ್ನಿಶಾಮಕ ದಳದವರಿಗೆ ಮಾಹಿತಿ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ‌್ಯ ಯಶಸ್ವಿ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

Read More »

ಟಾಟಾ ಏಸ್ ಪಲ್ಟಿ…10 ಮಂದಿಗೆ ಗಾಯ…ಚಾಲಕನ ನಿಯಂತ್ರಣ ತಪ್ಪಿ ಘಟನೆ…

ಟಾಟಾ ಏಸ್ ಪಲ್ಟಿ…10 ಮಂದಿಗೆ ಗಾಯ…ಚಾಲಕನ ನಿಯಂತ್ರಣ ತಪ್ಪಿ ಘಟನೆ… ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸ್ ಪಲ್ಟಿಯಾದ ಪರಿಣಾಮ ಹತ್ತು ಮಂದಿ ಗಾಯಗೊಂಡ ಘಟನೆ ಸರಗೂರು ಟೌನಿನ ಕಬಿನಿ ನದಿ ಚಾನೆಲ್‌ ಬಳಿ ನಡೆದಿದೆ.ಶುಂಠಿ ಕೆಲಸಕ್ಕಾಗಿ ತೆರಳುತ್ತಿದ್ದ ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿದ ಟಾಟಾ ಎಸ್ ವಾಹನ. ಮೂರು ಬಾರಿ ಪಲ್ಟಿಯಾಗಿದೆ. ಗೊಂತಗಲಗುಂಡಿ ಗ್ರಾಮದಿಂದ ಸರಗೂರಿಗೆ ತೆರಳುತ್ತಿದ್ದ ವೇಳೆ ಪಲ್ಟಿಯಾಗಿದೆ. ಚಾಲಕ ಸೇರಿ ಹತ್ತು …

Read More »

ಅಜ್ಮೀರ್ ದರ್ಗಾದಲ್ಲಿ ಜಾರಕಿಹೊಳಿ ಕುಟುಂಬದ ಕ್ಷೇಮಕ್ಕಾಗಿ ಅಭಿಮಾನಿಗಳ ದುಆ. (ಪ್ರಾರ್ಥನೆ)

ಅಜ್ಮೀರ್ ದರ್ಗಾದಲ್ಲಿ ಜಾರಕಿಹೊಳಿ ಕುಟುಂಬದ ಕ್ಷೇಮಕ್ಕಾಗಿ ಅಭಿಮಾನಿಗಳ ದುಆ. (ಪ್ರಾರ್ಥನೆ) ಸಲ್ಲಿಸಿದರು. ರಾಜಸ್ಥಾನದ ಪವಿತ್ರ ಅಜ್ಮೀರ್ ಶರೀಫ್ ದರ್ಗಾ, ಖ್ವಾಜಾ ಗರೀಬ್ ನವಾಜ್‌ ಅವರ ದಿವ್ಯ ಸಮಾಧಿಯು, ದೇಶದಾದ್ಯಂತದ ಜನರ ನಂಬಿಕೆಯ ಕೇಂದ್ರವಾಗಿದೆ. ಇತ್ತೀಚೆಗೆ ಕರ್ನಾಟಕದ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಈ ಪವಿತ್ರ ತಾಣಕ್ಕೆ ಭೇಟಿ ನೀಡಿ, ಕುಟುಂಬದ ಆರೋಗ್ಯ, ರಾಜಕೀಯ ಸ್ಥಿರತೆ ಮತ್ತು ಜನಪರ ಸೇವೆಗೆ ಶಕ್ತಿ ದೊರೆಯಲಿ ಎಂಬ ಉದ್ದೇಶದಿಂದ ವಿಶೇಷ ದುಆ (ಪ್ರಾರ್ಥನೆ) ಸಲ್ಲಿಸಿದರು. ಅಭಿಮಾನಿಗಳ …

Read More »

ಡಾ. ದೀಪ್ತಿ ಅಭಿಜಿತ್ ಪನೋರೆ ಅವರ ಪ್ರಕೃತಿ ಸ್ಪಾ ಲೋಕಾರ್ಪಣೆ

ಡಾ. ದೀಪ್ತಿ ಅಭಿಜಿತ್ ಪನೋರೆ ಅವರ ಪ್ರಕೃತಿ ಸ್ಪಾ ಲೋಕಾರ್ಪಣೆ ಡಾ. ದೀಪ್ತಿ ಅಭಿಜಿತ್ ಪನೋರೆ ಅವರ ಪ್ರಕೃತಿ ಸ್ಪಾ ಲೋಕಾರ್ಪಣೆ ಡಾ. ಆನಂದಮಹಾರಾಜ ಗೋಸಾವಿ ಮತ್ತು ಗಣ್ಯರಿಂದ ಉದ್ಘಾಟನೆ ಆಯೂರ್ವೇದಿಕ್ ಪದ್ಧತಿಯಿಂದ ಉಪಚಾರ ಸೌಂದರ್ಯ ವರ್ಧನೆಗೂ ಚಿಕಿತ್ಸೆ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಬಳಸಿ ಬೆಳಗಾವಿಯಲ್ಲಿ ಡಾ. ದೀಪ್ತಿ ಅಭಿಜಿತ್ ಪನೋರೆ ಅವರು ಆರಂಭಿಸಿರುವ ಪ್ರಕೃತಿ ಸ್ಪಾ ವನ್ನು ಹತ್ತ ರಕಿ ಶ್ರೀ ಹರಿಕಾಕಾ ಗೋಸಾವಿ ಭಾಗವತ ಮಠದ ಪೀಠಾಧೀಶರಾದ …

Read More »

ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ಖಂಡಿಸಿ ಬಸವ ಜನ್ಮ ಸ್ಥಳದಲ್ಲಿ ಪ್ರತಿಭಟನೆ

ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ಖಂಡಿಸಿ ಬಸವ ಜನ್ಮ ಸ್ಥಳದಲ್ಲಿ ಪ್ರತಿಭಟನೆ ನೆರೆಯ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ-ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗಾಯತ ಮಠಾಧೀಶರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ವಿಜಯಪುರ ಜಿಲ್ಲೆಯ ಬಸವ ಜನ್ಮ ಸ್ಥಳ ಬಸವನಬಾಗೇವಾಡಿ ಪಟ್ಟಣದಲ್ಲಿ ವಿವಿಧ ಬಸವಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಕನೇರಿ ಸ್ವಾಮೀಜಿ ಪ್ರತಿಕೃತಿ ದಹಿಸಿ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು, ಕೂಡಲೇ …

Read More »