ಬೆಳಗಾವಿ: ರಾಜ್ಯದಲ್ಲಿ ವಿಶ್ವವಿದ್ಯಾಲಯಗಳು ಇಲ್ಲದ ಜಿಲ್ಲೆಗಳಲ್ಲಿ ಆದಷ್ಟು ತ್ವರಿತವಾಗಿ ವಿ.ವಿ.ಗಳನ್ನು ಸ್ಥಾಪಿಸಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಲೆ ಎತ್ತಲಿರುವ ಈ ವಿ.ವಿ.ಗಳಲ್ಲಿ ಕುಲಪತಿಯೂ ಸೇರಿದಂತೆ ಗರಿಷ್ಠ 25 ಸಿಬ್ಬಂದಿ ಮಾತ್ರ ಇರಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಆವರಣದಲ್ಲಿ ಬುಧವಾರ ನಡೆದ `ಜ್ಞಾನಯಜ್ಞ ಫೆಲೋಶಿಪ್ ವಿತರಣೆ ಮತ್ತು ವಿದ್ಯುನ್ಮಾನ ಪ್ರಮಾಣ ಪತ್ರಗಳ ಸೇವಾ ವ್ಯವಸ್ಥೆ’ (ಎಲೆಕ್ಟ್ರಾನಿಕ್ ಡಾಕ್ಯುಮೆಂಟರಿ ಡೆಲಿವರಿ) ಹಾಗೂ ಟ್ರ್ಯಾಕಿಂಗ್ …
Read More »ಬಿಜೆಪಿಗೆ ಸೋಲಾದ ಕ್ಷೇತ್ರಗಳಲ್ಲಿ ಏನಾಗಿದೆ? ಯಾರೆಲ್ಲ ಕೆಲಸ ಮಾಡಿಲ್ಲ ಎಂಬುದರ ಬಗ್ಗೆ ಸಂಪೂರ್ಣ ವರದಿ ತರಿಸಿಕೊಂಡು ಪರಿಶೀಲನೆ : B.S.Y.
ಬೆಳಗಾವಿ: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಕ್ಷೇತ್ರಗಳಲ್ಲಿ ಏನಾಗಿದೆ? ಯಾರೆಲ್ಲ ಕೆಲಸ ಮಾಡಿಲ್ಲ ಎಂಬುದರ ಬಗ್ಗೆ ಸಂಪೂರ್ಣ ವರದಿ ತರಿಸಿಕೊಂಡು ಪರಿಶೀಲನೆ ನಡೆಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಬೆಳಗಾವಿ ಹಾಗೂ ಮೈಸೂರಿನಲ್ಲಿ ಪರಿಷತ್ ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಬೆಳಗಾವಿಯಲ್ಲಿ ಸೋಲಿನ ಬಗ್ಗೆ ಸುದೀರ್ಘ ಚರ್ಚೆಯಾಗಲಿದೆ. ಹೆಚ್ಚು ಮಂದಿ ಶಾಸಕರು, ಸಂಸದರು ಇದ್ದರೂ ಗೆಲ್ಲಲು ಸಾಧ್ಯವಾಗಿಲ್ಲ. ಎಲ್ಲಿ ಏನಾಗಿದೆ ಎಂಬುದರ ಬಗ್ಗೆ ಚರ್ಚಿಸಿ …
Read More »1 ಟ್ರಕ್ ಗೋವುಗಳ ಹಾಗೂ ಎಮ್ಮೆಗಳ ಚರ್ಮ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಬುಧವಾರ ಮಾರಿಹಾಳ ಪೊಲೀಸ್ ಠಾಣೆಗೆ ಭೇಟಿ
ಬೆಳಗಾವಿ – ಇತ್ತೀಚಿಗೆ ಸಾರ್ವಜನಿಕರು ಮಾರಿಹಾಳ ಪೊಲೀಸ್ ಠಾಣೆಗೆ ನೀಡಿದ ಖಚಿತ ಮಾಹಿತಿ ಆಧಾರದಿಂದ 1 ಟ್ರಕ್ ಗೋವುಗಳ ಹಾಗೂ ಎಮ್ಮೆಗಳ ಚರ್ಮ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಬುಧವಾರ ಮಾರಿಹಾಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದರು. ಡಿ10 ರಂದು ರಾತ್ರಿ ಸಾರ್ವಜನಿಕರು ಪೆಟ್ರೋಲ್ ಬಂಕ್ ನಲ್ಲಿ ಡಿಸೈಲ್ ಹಾಕಿಸುತ್ತಿದ್ದ ಟ್ರಕ್ ನಿಂದ ರಕ್ತದ ನೀರು ಹರಿಯುತ್ತಿರುವುದನ್ನು ಕಂಡು ಪೊಲೀಸರಿಗೆ ವಿಷಯ …
Read More »1000ರುಪಾಯಗೆ ಎರಡು ಜೀಪ ಖರೀದಿಸಿದ ಬೊಮ್ಮಾಯಿ
ಬೆಳಗಾವಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಬೆಳಗಾವಿಯಲ್ಲಿ 2 ಜೀಪ್ ಖರೀದಿಸಿದರು. ಅವುಗಳ ಬಿಲ್ ನ್ನು ಸಹ ತಾವೇ ಸ್ವತಃ ನಗದು ರೂಪಿದಲ್ಲಿ ಪಾವತಿಸಿದರು. ಬೆಳಗಾವಿಯಲ್ಲಿ ಇಂದು ವಸ್ತು ಪ್ರದರ್ಶನ ಮಳಿಗೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಚನ್ನಪಟ್ಟಣದ ಬೊಂಬೆ ಮಾರಾಟ ಮಳಿಗೆಯಲ್ಲಿ ಎರಡು ಪ್ರಕಾರದ ಕಟ್ಟಿಗೆಯ ಜೀಪುಗಳನ್ನು ಖರೀದಿಸಿದರು. ಇದಕ್ಕೆ ೧೦೦೦ ರೂಪಾಯಿ ಪಾವತಿಸಿದರು.
Read More »ಆಸ್ತಿಯ ಆಸೆಗಾಗಿ ಸಂಬಂಧಿಕರೊಬ್ಬರು 98 ವರ್ಷದ ಅಜ್ಜಿಯನ್ನೇ ಹೊತ್ತೊಯ್ದಿರೋ ಘಟನೆ ಹಾವೇರಿಯ ಹಾನಗಲ್ ನಲ್ಲಿ ನಡೆದಿದೆ.
ಹಾವೇರಿ: ಇದುವರೆಗೆ ತಂದೆ-ತಾಯಿಗಳನ್ನು ಮಕ್ಕಳು ಆಸ್ತಿಗಾಗಿ ಹಿಂಸೆಗೊಳಿಸೋದನ್ನು ಕಂಡಿದ್ದೀರಿ. ಅಲ್ಲಲ್ಲಿ ಆ ರೀತಿಯ ಪ್ರಕರಣಗಳು ನಡೆಯೋದನ್ನು ಕೇಳಿದ್ದೀರಿ. ಇದಕ್ಕೆ ತದ್ವಿರವೆನ್ನುವಂತೆ ರಾಜ್ಯದಲ್ಲೊಂದು ಭೀಕರ ನೀಚ ಕೃತ್ಯವೊಂದು ನಡೆದಿದೆ. ಆಸ್ತಿಯ ಆಸೆಗಾಗಿ ಸಂಬಂಧಿಕರೊಬ್ಬರು 98 ವರ್ಷದ ಅಜ್ಜಿಯನ್ನೇ ಹೊತ್ತೊಯ್ದಿರೋ ಘಟನೆ ಹಾವೇರಿಯ ಹಾನಗಲ್ ನಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿಯೇ ರಾಜ್ಯದಲ್ಲೇ ಬೆಚ್ಚಿ ಬೀಳುವಂತ ನೀಚ ಕೃತ್ಯವೊಂದು ನಡೆದಿರೋದು. 38 ಗುಂಟೆ ಆಸ್ತಿಯ ಆಸೆಗಾಗಿ 98 ವರ್ಷದ …
Read More »ಮನೆ ಕಟ್ಟುವವರಿಗೆ ಸಿಹಿ ಸುದ್ದಿ: 5 ಲಕ್ಷ ಮನೆಗಳ ನಿರ್ಮಾಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಭರವಸೆ
ಬೆಳಗಾವಿ: ರಾಜ್ಯ ವ್ಯಾಪಿ ಬರೋಬ್ಬರಿ ಐದು ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, ಶೀಘ್ರದಲ್ಲೇ ಪಂಚಾಯಿತಿವಾರು ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ನಗರದಲ್ಲಿಂದು ಪರಿಷತ್ತಿನ ಪ್ರಶ್ನೋತ್ತರ ವೇಳೆ ಕೆ.ಹರೀಶ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಸಿ-ಎಸ್ಟಿ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಮನೆ ಹಂಚಿಕೆಗೆ ಸರ್ಕಾರ ನಿರ್ಧಾರ ಕೈಗೊಂಡಿದ್ದು,ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರೊಂದಿಗೆ ಚರ್ಚೆ ನಡೆಸಿ ಐದು ಲಕ್ಷ ಮನೆಗಳ …
Read More »ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಶಾಸಕಾಂಗ ನಿರ್ಧಾರ
ಬೆಳಗಾವಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಜಾರಿ ಮಾಡಲು ಮುಂದಾಗಿರುವ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿ ಹೋರಾಟ ನಡೆಸಲು ಇಂದಿಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ ನಿರ್ಧರಿಸಿದೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಇದನ್ನು ಪಕ್ಷದ ಎಲ್ಲಾ ಶಾಸಕರು ಒಗ್ಗೂಡಿ ಎದುರಿಸಲು ಮುಂದಾಗೋಣ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಶಾಸಕರಿಗೆ ಸಲಹೆ ನೀಡಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಸಭೆಯ …
Read More »ಸಾರಿಗೆ ಸಂಸ್ಥೆ ಸುಧಾರಿಸಿ ಆದಾಯ ಹೆಚ್ಚಳಕ್ಕೆ ತೀರ್ಮಾನ: ಬಿ. ಶ್ರೀರಾಮುಲು
ಬೆಳಗಾವಿ: ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯನ್ನು ಸುಧಾರಿಸಿ ಆದಾಯ ಹೆಚ್ಚಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಧಾನಸಭೆಯಲ್ಲಿ ಬುಧವಾರ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಶರತ್ ಬಚ್ಚೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ೪ ವರ್ಷಗಳಿಂದ ಸಾರಿಗೆ ಪ್ರಯಾಣ ದರ ಏರಿಕೆ ಮಾಡಿಲ್ಲ. ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಇದನ್ನು ಸುಧಾರಿಸಲು ನಿವೃತ್ತ ಐ.ಎ.ಎಸ್. ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯನ್ನು ಮುಖ್ಯಮಂತ್ರಿಗಳು ರಚಿಸಿದ್ದಾರೆ ಎಂದರು. ಈ …
Read More »ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಮುಹೂರ್ತ ಫಿಕ್ಸ್: ಸೋಮವಾರ ಸದನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ, ಗೃಹ ಸಚಿವ ಅರಗ ಜ್ಞಾನೇಂದ್ರ
ಬೆಳಗಾವಿ: ಸೋಮವಾರ ಸದನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಲಿದೆ ಎನ್ನಲಾಗಿದೆ, ಈ ಬಗ್ಗೆ ಇಂದು ಸಿಎಂ ಗೃಹ ಸಚಿವ ಸಭೆ ನಡೆಸಿದ್ದು, ಸೋಮವಾರ ಸೋಮವಾರ ಸದನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಲಿದೆ ಎನ್ನಲಾಗಿದೆ. ಈ ನಡುವೆ ಕರಡಿನ ಅಂತಿಮ ಅಂಶಗಳ ಬಗ್ಗೆ, ಕಾನೂನು ತಜ್ಞರ ಸೇರಿದಂತೆ ಸಂಬಂಧಪಟ್ಟವರ ಜೊತೆಗೆ ಚರ್ಚೆ ನಡೆಸಲಾಗಿದೆಯಂತೆ. ಮೂಸೂದೆಯನ್ನು ಕಾನೂನಿನ ಅಡಿಯಲ್ಲಿ ತರುವುದಾಗಿ, ರಾಜ್ಯ ಸರ್ಕಾರ ಹೇಳಿದ್ದು, ಬಲವಂತದ ಮತಾಂತರ ವಿರುದ್ದ ರಾಜ್ಯ ಸರ್ಕಾರ ಮಹತ್ವದ …
Read More »ಸಭಾಪತಿಗಳ ಆದೇಶ ಉಲ್ಲಂಘನೆ : ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಸೇರಿ ವಿಧಾನಪರಿಷತ್ ʼ14 ಸದಸ್ಯರುʼ ಅಮಾನತು
ಬೆಳಗಾವಿ : ಸಭಾಪತಿಗಳ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಸೇರಿ ವಿಧಾನಪರಿಷತ್ನ 14 ಸದಸ್ಯರನ್ನ ಅಮಾನತುಗೊಳಿಸಲಾಗಿದೆ. ಸದನ ಬಾವಿಗೆ ಇಳಿದು ಪ್ರತಿಭಟನೆ ಮಾಡದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವ್ರು ವಿಪಕ್ಷ ನಾಯಕರಿಗೆ ಮನವಿ ಮಾಡಿದ್ರು. ಆದ್ರೆ, ಸಭಾಪತಿಗಳ ಮನವಿಗೆ ಸ್ಪಂದಿಸದ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮುಂದುವರೆಸಿದ್ರು. ನಂತ್ರ ಸಭಾಪತಿ ಬಸವರಾಜ ಹೊರಟ್ಟಿ, ಸದನದ ಬಾವಿಗಿಳಿದು ಪ್ರತಿಭಟಿಸಿದ 14 ಸದಸ್ಯರನ್ನ ಒಂದು ದಿನದ ಮಟ್ಟಿಗೆ ಕಲಾಪದಿಂದ …
Read More »