ಬೆಳಗಾವಿ: ಸೇವೆಯಿಂದ ವಜಾಗೊಂಡಿದ್ದ ಕೆಎಸ್ಆರ್ಪಿ ಕಾನ್ಸ್ಟೇಬಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗೋಕಾಕ ತಾಲೂಕಿನ ಸಂಗನಕೇರಿ ಕ್ರಾಸ್ ಬಳಿ ನಡೆದಿದೆ. ಗೋಕಾಕ್ ತಾಲೂಕಿನ ನಲ್ಲಾನಟ್ಟಿ ಗ್ರಾಮದ ನಿವಾಸಿ ರಮೇಶ್ ಬಿಲಕುಂದಿ (26) ಮೃತಪಟ್ಟವರು. ಆದರೆ ಮಗ ಅಪಘಾತದಲ್ಲಿ ಮೃತಪಟ್ಟಿಲ್ಲ, ಸೊಸೆಯೇ ಕೊಲೆ ಮಾಡಿಸಿದ್ದಾಳೆ ಎಂದು ಮೃತನ ತಾಯಿ ಲಕ್ಷ್ಮಿಬಾಯಿ ಆರೋಪಿಸಿದ್ದಾರೆ. ಮಗನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ತಾಯಿ ಕಣ್ಣೀರಿಡುತ್ತಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ …
Read More »ಬಸವರಾಜ ಬೊಮ್ಮಾಯಿ ಕುಟುಂಬ ಸಮೇತವಾಗಿ ಯಲ್ಲಮ್ಮನಗುಡ್ಡಕ್ಕೆ ಭೇಟಿ
ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬ ಸಮೇತವಾಗಿ ಭೇಟಿ ನೀಡಿದರು. ತಮ್ಮ ಕುಲದೇವತೆ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು. ಎಣ್ಣೆಹೊಂಡ ಹಾಗೂ ಪರಶುರಾಮ ಮತ್ತು ಯಲ್ಲಮ್ಮ ದೇವಸ್ಥಾನ ಪ್ರಾಂಗಣದಲ್ಲಿರುವ ದೇವಸ್ಥಾನಗಳಿಗೂ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲರ ಅಮ್ಮ ಯಲ್ಲಮ್ಮ ದೇವಿ ದರ್ಶನ ಪಡೆದು, ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ. ದೀಪಾವಳಿ ಎಲ್ಲರ ಬಾಳಲ್ಲೂ …
Read More »ಭಜರಂಗಿ 2′ ಪ್ರೀ ರಿಲೀಸ್ ಇವೆಂಟ್ ದಿನ ಪುನೀತ್ ಡಲ್ ಆಗಿದ್ದರು’;; ಶಿವರಾಜ್ಕುಮಾರ್
ಅನೇಕ ಸ್ಟಾರ್ಗಳು ಕೂಡ ಅವರ ಅಂತಿಮ ದರ್ಶನ ಪಡೆದು ಹೋಗಿದ್ದಾರೆ. ಇದು ಕನಸೋ ಅಥವಾ ನನಸೋ ಎನ್ನುವ ಪ್ರಶ್ನೆ ಅವರಲ್ಲೂ ಇದೆ. ಶಿವರಾಜ್ಕುಮಾರ್ ಅವರು ಈಗ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ.ಪುನೀತ್ ರಾಜ್ಕುಮಾರ್ ನಿಧನ ಹೊಂದಿದ್ದಾರೆ ಎನ್ನುವ ವಿಚಾರವನ್ನು ಯಾರಿಂದಲೂ ನಂಬೋಕೆ ಸಾಧ್ಯವಾಗುತ್ತಿಲ್ಲ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಅವರು ತೊರೆದು ಹೋಗಿದ್ದಾರೆ. ಅನೇಕ ಸ್ಟಾರ್ಗಳು ಕೂಡ ಅವರ ಅಂತಿಮ ದರ್ಶನ ಪಡೆದು ಹೋಗಿದ್ದಾರೆ. ಇದು ಕನಸೋ ಅಥವಾ ನನಸೋ ಎನ್ನುವ …
Read More »ವಿಧಿ ಇನ್ನೊಂದು 10 ನಿಮಿಷ ಕೊಟ್ಟಿದ್ದರೆ ಪುನೀತ್ ರಾಜ್ ಕುಮಾರ್ ಉಳಿದುಕೊಳ್ಳುತ್ತಿದ್ದ
ವಿಧಿ ಇನ್ನೊಂದು 10 ನಿಮಿಷ ಕೊಟ್ಟಿದ್ದರೆ ಪುನೀತ್ ರಾಜ್ ಕುಮಾರ್ ಉಳಿದುಕೊಳ್ಳುತ್ತಿದ್ದ. ದಿಢೀರ್ ಹೀಗೆ ಆದಾಗ ಕೊನೆ ಕ್ಷಣದಲ್ಲಿ ಏನು ಮಾಡಬೇಕು ಎಂದು ತೋಚುವುದಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ ತೆಲುಗು ಸ್ಟಾರ್ ನಟ ರಾಮ್ ಚರಣ್ ಬೆಂಗಳೂರಿಗೆ ಆಗಮಿಸಿ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ದುಃಖ ಹಂಚಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ಗಣ್ಯರು ನಮ್ಮನ್ನು ಭೇಟಿ ಮಾಡಿ …
Read More »ಶುಭ್ಮನ್ ಗಿಲ್ಗೆ ಕೈ ಕೊಟ್ರಾ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್?
ನವದೆಹಲಿ: ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಮತ್ತು ಟೀಮ್ ಇಂಡಿಯಾ ಹಾಗೂ ಕೋಲ್ಕತ ತಂಡದ ಆಟಗಾರ ಶುಭ್ಮನ್ ಗಿಲ್ ನಡುವೆ ಲವ್ ಇದೆ ಎಂಬ ವಿಚಾರ ಬಹಳ ದಿನಗಳಿಂದ ಹರಿದಾಡುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಇಬ್ಬರು ಕೆಲವೊಮ್ಮೆ ಒಟ್ಟಿಗೆ ಸಹ ಕಾಣಿಸಿಕೊಂಡಿದ್ದಾರೆ. ಅಚ್ಚರಿಯೆಂದರೆ ಗೂಗಲ್ನಲ್ಲಿ ಶುಭ್ಮನ್ ಗಿಲ್ ಪತ್ನಿಯ ಹೆಸರು ಸರ್ಚ್ ಮಾಡಿದ್ರೆ ಸಾರಾ ತೆಂಡೂಲ್ಕರ್ ಹೆಸರು ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯ ಮೇಲೆ ತೋರುತ್ತದೆ. …
Read More »ನಿಲ್ಲದ ಅಭಿಮಾನಿಗಳ ಆತ್ಮಹತ್ಯೆ ಸರಣಿ: ಪುನೀತ್ ನಿಧನದಿಂದ ಖಿನ್ನತೆಗೆ ಜಾರಿದ್ದ ಅಭಿಮಾನಿ ನೇಣಿಗೆ ಶರಣು
ದಾವಣಗೆರೆ: ಕನ್ನಡ ಚಿತ್ರರಂಗದಲ್ಲಿ ರಾಜಕುಮಾರನಂತೆ ಮೆರೆದಿದ್ದ ನಟ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಮರಣ ಅಭಿಮಾನಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಅಪ್ಪು ಇನ್ನಿಲ್ಲ ಎಂಬುದನ್ನು ಅಭಿಮಾನಿಗಳ ಕೈಯಲ್ಲಿ ಈ ಕ್ಷಣವೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನೆಚ್ಚಿನ ನಟ ಸಾವಿನಿಂದ ಹೊರಬರಲಾಗದೇ ಅದೇ ನೋವಿನಲ್ಲಿ ಸಾವಿನ ಹಾದಿ ಹಿಡಿಯುತ್ತಿರುವವರ ಸಂಖ್ಯೆ ನಿಲ್ಲುತ್ತಿಲ್ಲ. ಹೌದು, ಪುನೀತ್ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಆಘಾತದಿಂದ ಕೆಲವರು ಸ್ಥಳದಲ್ಲೇ ಪ್ರಾಣ ಬಿಟ್ಟಿರೆ, ಇನ್ನು ಕೆಲವು ಅಪ್ಪು ಕೊರಗಿನಲ್ಲೇ ತಮ್ಮ …
Read More »ಸಿದ್ದರಾಮಯ್ಯ ಪ್ರತಿಕೃತಿ ದಹನ,ಪೊಲೀಸ್ ಕೆನ್ನೆಗೆ ಬಾರಿಸಿದ ಮಾಜಿ ಶಾಸಕ!
ರಾಯಚೂರು: ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಎಸ್ಸಿ ಮೋರ್ಚಾದ ವತಿಯಿಂದ ಇಂದು ರಾಯಚೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಶಾಸಕ ಎ.ಪಾಪರೆಡ್ಡಿ ಅವರು ಮುಫ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ. ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪಾಪರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಹಲವು ಬಿಜೆಪಿ ಕಾರ್ಯಕರ್ತರು ದಲಿತರು ಹೊಟ್ಟೆಪಾಡಿಗಾಗಿ …
Read More »ದಲಿತರ ವಿರುದ್ಧ ಸಿದ್ದರಾಮಯ್ಯ ಹೇಳಿಕೆ: ಬಿಜೆಪಿ ಪ್ರತಿಭಟನೆ
ಶಿವಮೊಗ್ಗ: ‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿಯ ನಾಯಕರ ಬಗ್ಗೆ ಅವಹೇಳನಕಾರಿ ಮಾತುಗಳಾಡುವುದನ್ನೇ ಸಿದ್ದರಾಮಯ್ಯ ವೃತ್ತಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶವನ್ನು ಸಿದ್ಧರಾಮಯ್ಯ ತಪ್ಪಿಸಿದರು. ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದು ಬ್ಲ್ಯಾಕ್ ಮೇಲ್ ಮಾಡಿ ಮುಖ್ಯಮಂತ್ರಿಯಾದರು. ಅವರೊಬ್ಬ ಕಪಟ ರಾಜಕಾರಣಿ. 2006 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕೇವಲ 257 ಮತಗಳ ಅಂತರದಲ್ಲಿ …
Read More »6 ಗಂಟೆಗೆ ಅವರು ಸವದತ್ತಿಗೆ ಆಗಮಿಸಿ ಯಲ್ಲಮ್ಮ ದೇವಿಯ ದರ್ಶನ ಪಡೆಯಲಿದ್ದಾರೆ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನು ಕೆಲವೇ ಕ್ಷಣಗಳಲ್ಲಿ ಸವದತ್ತಿಗೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಅವರು ಸವದತ್ತಿಗೆ ಆಗಮಿಸಿ ಯಲ್ಲಮ್ಮ ದೇವಿಯ ದರ್ಶನ ಪಡೆಯಲಿದ್ದಾರೆ. ಹುಬ್ಬಳ್ಳಿಯಿಂದ ಆಗಮಿಸಲಿರುವ ಬೊಮ್ಮಾಯಿ ದೀಪಾವಳಿ ಹಿನ್ನೆಲೆಯಲ್ಲಿ ಯಲ್ಲಮ್ಮ ದೇವಿಯ ದರ್ಶನ ಪಡೆಯಲಿದ್ದಾರೆ. ನಂತರ ಶಾಸಕ, ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಅವರ ಮನೆಗೆ ಭೇಟಿ ನೀಡಿ ಹುಬ್ಬಳ್ಳಿಗೆ ವಾಪಸ್ಸಾಗಲಿದ್ದಾರೆ.
Read More »ಮನೆ ಮನೆಗೆ ತೆರಳಿ ಕರೋನ ಲಸಿಕೆ ಹಾಕಿ: ಜಿಲ್ಲಾಧಿಕಾರಿಗಳ ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ
ನವದೆಹಲಿ: ಮನೆ ಮನೆಗೆ ತೆರಳಿ ಕರೋನ ಲಸಿಕೆಯನ್ನು ಹಾಕಿ ಅಂತ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅವರು ಇಂದು ಕೋವಿಡ್-19 ಲಸಿಕೆ ವ್ಯಾಪ್ತಿಯಲ್ಲಿ ಹಿಂದುಳಿದಿರುವ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವ್ರು ಬುಧವಾರ ಕೋವಿಡ್-19 ಲಸಿಕೆಯ ಎರಡನೇ ಡೋಸ್ ತೆಗೆದುಕೊಳ್ಳುವ ಅಗತ್ಯವನ್ನ ಒತ್ತಿ ಹೇಳಿದರು. ಇನ್ನು ಈ ಸಡಿಲತೆ …
Read More »