Breaking News

ಅಕ್ರಮ ಆರೋಪ: ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಸ್ಥಗಿತ

ಬೆಂಗಳೂರು: ‘545 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿಯಲ್ಲಿ ಅಕ್ರಮ ನಡೆದಿದೆ’ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್ ಅವರು ರಾಜ್ಯದ ಹಿರಿಯ ಅಧಿಕಾರಿಗಳಿಗೆ ಸೋಮವಾರ ತುರ್ತು ಸಂದೇಶ ಕಳುಹಿಸಿದ್ದಾರೆ.   ‘ಸಿವಿಲ್ ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡು, ಅರ್ಹ ಅಭ್ಯರ್ಥಿಗಳ ಘಟಕವಾರು ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ವೈದ್ಯಕೀಯ …

Read More »

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಪ್ರಧಾನಿ ಉತ್ತರ : ಇಲ್ಲಿದೆ ಮೋದಿ ಮಾತಿನ ಹೈಲೈಟ್ಸ್

ದೆಹಲಿ : ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ಸಂಸತ್ತನ್ನುದ್ದೇಶಿಸಿ ಮಾತನಾಡಿದರು. ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2022ರ ಮಂಡನೆಯ ನಂತ್ರ ಪ್ರಧಾನಿ ಮೋದಿ ಅವ್ರು ರಾಷ್ಟ್ರಪತಿ ಕೋವಿಂದ್ ಭಾಷಣವನ್ನ ಶ್ಲಾಘಿಸಿದ್ದರು. ಸಂಸತ್ತಿನ ಪ್ರಸ್ತುತ ಬಜೆಟ್ ಅಧಿವೇಶನವು ಜನವರಿ 31ರಂದು ಪ್ರಾರಂಭವಾಯಿತು. ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ಫೆಬ್ರವರಿ 2ರಂದು ಪ್ರಾರಂಭವಾಯಿತು. ಬಜೆಟ್ ಅಧಿವೇಶನದ …

Read More »

ಶಾರೂಖ್ ಖಾನ್ ವಿನಾಕಾರಣ ಸೋಶಿಯಲ್ ಮೀಡಿಯಾದಲ್ಲಿ ಗುರುತರ ಆರೋಪಗಳಿಗೆ ಒಳಗಾಗಿದ್ದಾರೆ.

ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಫಲಿಸದೇ ನಿಧನರಾದ ದೇಶಕಂಡ ಹಿರಿಯ ಗಾಯಕಿ ಲತಾ ಮಂಗೇಶ್ಕರ್, ಅವರನ್ನ ನಿನ್ನೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಳುಹಿಸಿಕೊಡಲಾಯಿತು. ಮುಂಬೈನ ಶಿವಾಜಿ ಪಾರ್ಕ್​​​ನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದಕ್ಕೂ ಮುನ್ನ ದೇಶದ ಗಣ್ಯರು ಅಗಲಿದ ಮಂಗೇಶ್ಕರ್​ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅದರಂತೆ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಬಾಲಿವುಡ್ ಸ್ಟಾರ್​, ಶಾರೂಖ್ ಖಾನ್ ವಿನಾಕಾರಣ ಸೋಶಿಯಲ್ ಮೀಡಿಯಾದಲ್ಲಿ ಗುರುತರ ಆರೋಪಗಳಿಗೆ ಒಳಗಾಗಿದ್ದಾರೆ. ಇದು ಸೋಶಿಯಲ್ ಮಿಡಿಯಾ ಯುಗ.. …

Read More »

ಮುಸ್ಲಿಮರ ಢಾಬಾದಲ್ಲಿ ಬಸ್‌ ನಿಲ್ಲಿಸುವ ಚಾಲಕರಿಗೆ ಹಿಂದುತ್ವ ಸಂಘಟನೆಗಳಿಂದ ಬೆದರಿಕೆ

ಗುಜರಾತಿನಲ್ಲಿ ಮುಸ್ಲಿಮರ ವಿರುದ್ಧ ವ್ಯಾಪಕವಾಗಿ ಹೆಚ್ಚುತ್ತಿರುವ ಜನಾಂಗೀಯ ಧ್ವೇಷವು ಅಲ್ಪಸಂಖ್ಯಾತರನ್ನು ಆತಂಕಕ್ಕೆ ದೂಡಿವೆ. ಹೈವೇಗಳಲ್ಲಿರುವ ಮುಸ್ಲಿಮರ ಮಾಲಕತ್ವದ ಸ್ನಾಕ್‌ ಅಂಗಡಿಗಳಲ್ಲಿ, ಢಾಬಾಗಳಲ್ಲಿ ಬಸ್ಸುಗಳನ್ನು ನಿಲ್ಲಿಸುವುದು ಕಂಡು ಬಂದರೆ ಮಾಹಿತಿ ನೀಡುವಂತೆ ಅಂತರಾಷ್ಟ್ರೀಯ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಪ್ರಚಾರ ಮಾಡುತ್ತಿರುವುದರಿಂದ ಸಣ್ಣಪುಟ್ಟ ಢಾಬಾಗಳನ್ನು, ರೆಸ್ಟೋರೆಂಟ್‌ಗಳನ್ನು ಹೊಂದಿರುವ ಮುಸ್ಲಿಮರು ಭಯಭೀತಗೊಂಡಿದ್ದಾರೆ.

Read More »

ವಿವಾದಾತ್ಮಕ ಹೇಳಿಕೆ: ಎಐಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ಬಂಧನ

ಬಾಗಲಕೋಟೆ: ಭಾರತ ಮಾತೆ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಎಐಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ನಡೆದಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ವೃತ್ತ ಉದ್ಘಾಟನೆ ಕಾರ್ಯಕ್ರದಲ್ಲಿ ಉಸ್ಮಾನಗಣಿ ಹುಮನಾಬಾದ್, ಭಾರತ ಮಾತೆ ತಾಯಿ ಎನ್ನುವ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ.   ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಘಟನೆ ಬೆನ್ನಲ್ಲ ಉಸ್ಮಾನಗಣಿ ಹುಮ್ನಾಬಾದ್ …

Read More »

ಮಿನಿ ವಿಧಾನಸೌಧವನ್ನೇ ಮಾರಾಟಕ್ಕಿಟ್ಟಿದ್ದ ರೈತನ ಸಾವು..!

ವಿಜಯಪುರ: ನಾಪತ್ತೆಯಾಗಿದ್ದ ರೈತ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಹೂವಿನಡಗಲಿಯಲ್ಲಿ ನಡೆದಿದೆ. ಬಣಕಾರ್ ಮಲ್ಲಪ್ಪ ಮೃತ ರೈತ. ಬಣಕಾರ್ ಮಲ್ಲಪ್ಪ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.   ಬಣಕಾರ್ ಮಲ್ಲಪ್ಪ ಹೂವಿನಡಗಲಿಯ ನಂದಿಹಳ್ಳಿ ಗ್ರಾಮದವರು. ಇವರ ಜಮೀನಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣವನ್ನ ವಿರೋಧಿಸಿದ್ದರು. ಅದಕ್ಕಾಗಿ ಸಾಕಷ್ಟು ಹೋರಾಟವನ್ನು ಮಾಡಿದ್ದವರು. ಅಷ್ಟೇ ಅಲ್ಲ ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಿದ್ದವರ ವಿರುದ್ಧ ಹೋರಾಟ ಮಾಡುತ್ತಿದ್ದರು. ಇದೀಗ ಇದ್ದಕ್ಕಿದ್ದ ಹಾಗೇ ಶವವಾಗಿ ಪತ್ತೆಯಾಗಿದ್ದಾರೆ. ತಮ್ಮ …

Read More »

ಸಿಬಿಐ ತನಿಖೆಯ ಸಿಂಧುತ್ವ ಪ್ರಶ್ನಿಸಿದ್ದ ಮೇಲ್ಮನವಿ: ವಿನಯ್ ಕುಲಕರ್ಣಿ ಅರ್ಜಿ ವಜಾ

ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣದ ಸಿಬಿಐ ತನಿಖೆಯ ಸಿಂಧುತ್ವವನ್ನು ಪ್ರಶ್ನಿಸಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ರವೀಂದ್ರ ಭಟ್ ಹಾಗೂ‌ ಪಿ.ಎಸ್.ನರಸಿಂಹ ಅವರಿದ್ದ ಪೀಠವು ಕೊಲೆ ಪ್ರಕರಣದ ಸಿಬಿಐ ತನಿಖೆಯನ್ನು ಪ್ರಶ್ನಿಸಿ ಕುಲಕರ್ಣಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾ‌ ಮಾಡಿತು.   ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು 2019ರಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು. …

Read More »

ಜಿಲ್ಲಾ ಕಾರ್ಯಾಧ್ಯಕ್ಷರಾಗಿ ವೈಶಾಲಿ ಭರಭರಿ ನೇಮಕ

ಗೋಕಾಕ ಫೆ, 7 :- ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಆಯೋಗದ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಕರದಂಟು ನಾಡು       ಗೋಕಾಕದ ವೈಶಾಲಿ ಭರಭರಿ ಅವರು ನೇಮಕಗೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಗೋಕಾಕ ತಾಲೂಕಿನಲ್ಲಿ ಮಾಡುತ್ತಿರುವ ಸಾಮಾಜಿಕ ಸೇವೆಯನ್ನು ಗುರುತಿಸಿ ಬೆಳಗಾವಿ ಜಿಲ್ಲಾಧ್ಯಕ್ಷ ಅಶೋಕ ಕೆಂಗಣ್ಣವರ ಮತ್ತು ರಾಜ್ಯಾಧ್ಯಕ್ಷ ಡಿ.ಶೇಖರರೆಡ್ಡಿ ಅವರ ಶಿಫಾರಸಿನ ಮೇರೆಗೆ ರಾಷ್ಟ್ರೀಯ ಅಧ್ಯಕ್ಷ ಮೆಹತಾಬ ರಾಯ ಆದೇಶ ಹೊರಡಿಸಿದ್ದಾರೆ.

Read More »

ಯಾದಗಿರಿಯ ಶಿಕ್ಷಕ ಒಂದಲ್ಲ, ಎರಡಲ್ಲ, ಮೂವರು ಹೆಂಡ್ತೀರ ಗಂಡ! ಇಬ್ಬರಿಗೆ ಕೈ ಕೊಟ್ಟು 3ನೇ ಹೆಂಡ್ತಿ ಜತೆ ಸಂಸಾರ.

ಯಾದಗಿರಿ: ಇಲ್ಲೊಬ್ಬ ಶಿಕ್ಷಕ ಸುಳ್ಳು ಹೇಳಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂವರನ್ನು ಮದ್ವೆ ಆಗಿದ್ದಾನೆ. ಈ ವಿಚಾರ ಪರಸ್ಪರ ಪತ್ನಿಯರಿಗೂ ಗೊತ್ತಾಗದಂತೆ ಹಲವು ವರ್ಷ ಸಂಸಾರ ನಡೆಸಿದ ಇದೀಗ ಸಿಕ್ಕಿಬಿದ್ದಿದ್ದಾನೆ. ಆ ಭೂಪನ ಹೆಸರು ಮೋಹನರೆಡ್ಡಿ ಪಾಟೀಲ್. ಯಾದಗಿರಿ ತಾಲೂಕಿನ ನಿಲನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಮೂರು ಮದ್ವೆಯಾದ ವಿಚಾರ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮೋಹನರೆಡ್ಡಿ ಪಾಟೀಲ್ 1988ರಲ್ಲಿ ಮದುವೆ ಆಗಿದ್ದ. 1992ರಲ್ಲಿ ಎರಡನೇ ಮದುವೆ ಆಗಿದ್ದ. …

Read More »

ಎಲ್ಲಿದ್ದೀರಾ ಕಾಮನ್‌ಮ್ಯಾನ್‌ ಸಿಎಂ ಸಾರ್‌.. ನಿಮ್ಮ ಪಕ್ಷದ ಶಾಸಕನಿಂದ ನನಗೆ ಮಗುವಾಗಿದೆ, ನ್ಯಾಯ ಕೊಡ್ಸಿ..

ಕಲಬುರಗಿ: ಶಾಸಕರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಇದೀಗ ಕಲಬುರಗಿ ಬಿಜೆಪಿ ಶಾಸಕರ ಸರದಿ. ಸಾಮಾಜಿಕ ಜಾಲತಾಣದ ಮೂಲಕ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪದ ಮೇಲೆ ವಿಧಾನಸೌಧ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.   ‘ನಿಮ್ಮ ಪಕ್ಷದ ಶಾಸಕರಿಂದ ಮೋಸ ಹೋದ ಮಹಿಳೆ ನಾನು. ನಮಗೆ ಮತ್ತು ನಿಮ್ಮ ಶಾಸಕರಿಗೆ ಹುಟ್ಟಿರುವ ಮಗುವಿಗೆ ನ್ಯಾಯಕ್ಕಾಗಿ ಹೋರಾಡಲು ಮುಂದೆ ಬಂದಿದ್ದೇನೆ. ನಿಮ್ಮ ಭೇಟಿ ಮಾಡಲು ಸಾಕಷ್ಟು ಬಾರಿ ಬಂದಿದ್ದು, …

Read More »