Breaking News

ಚಲಿಸುತ್ತಿದ್ದ ಬಸ್‌ ಡ್ರೈವರ್‌ಗೆ ಫಿಟ್ಸ್‌… ಈ ಮಹಿಳೆ ತೋರಿದ ಧೈರ್ಯಕ್ಕೆ ಎಲ್ಲ ಪ್ರಯಾಣಿಕರು ಸೇಫ್‌..!

ಪುಣೆ (ಮಹಾರಾಷ್ಟ್ರ): ಚಲಿಸುತ್ತಿದ್ದ ಮಿನಿ ಬಸ್‌ ಚಾಲಕನಿಗೆ ಫಿಟ್ಸ್‌ ಬಂದ ಹಿನ್ನೆಲೆಯಲ್ಲಿ ಕೂಡಲೇ ಆತನ ನೆರವಿಗೆ ಬಂದ ಮಹಿಳೆಯೊಬ್ಬರು ಬಸ್‌ ಅನ್ನು ಚಾಲನೆ ಮಾಡಿ ಮಕ್ಕಳು ಸಹಿತ ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಬಸ್ಸಿನಲ್ಲಿದ್ದ ಮಕ್ಕಳು ಹಾಗೂ ಮಹಿಳೆಯರು ಪುಣೆ ಸಮೀಪದ ಶಿರೂರ್‌ನಲ್ಲಿ ಇರುವ ಕೃಷಿ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ ವಾಪಸ್‌ ಬರುತ್ತಿದ್ದಾಗ ಬಸ್‌ನ ಚಾಲಕನಿಗೆ ಮೂರ್ಛೆ ಬಂದು ಏಕಾಏಕಿ …

Read More »

ಒಂದು ಕಡೆ ಕುಡಿಯೋಕ್ಕೆ ನೀರಿಲ್ಲ ಇನ್ನೊಂದು ಕಡೆ ನೀರು ಚರಂಡಿ ಪಾಲು ಕ್ರಮ ಕೈಗೊಳ್ಳ ದಿದ್ದರೆ ಜನ ನಿಮ್ಮ ಕಚೇರಿಗೆ ನುಗ್ಗೋದು ಗ್ಯಾರಂಟಿ

ವಾಲಮನ್‍ಗಳ ಮುಷ್ಕರದಿಂದ ಬೆಳಗಾವಿ ನಗರದಾಧ್ಯಂತ ನೀರು ಪೂರೈಕೆ ಆಗದೇ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಆದರೆ ಮತ್ತೊಂದೆಡೆ ಸ್ಮಾರ್ಟಸಿಟಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕುಡಿಯುವ ನೀರಿನ ಪೈಪ್‍ಲೈನ್ ಒಡೆದು ಒಂದು ವಾರದಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಹೌದು ಬೆಳಗಾವಿಯಲ್ಲಿ ಸಧ್ಯ ನೀರಿಗಾಗಿ ಹಾಹಾಕಾರ ಶುರುವಾಗಿದೆ. ವಾಲಮನ್‍ಗಳ ಧರಣಿಯಿಂದ ಜನ ನೀರಿಗಾಗಿ ಕೊಡಗಳನ್ನು ಹಿಡಿದುಕೊಂಡು ಬೀದಿ, ಬೀದಿ ಸುತ್ತುತಿದ್ದಾರೆ. ಆದರೆ ಇದೇ ನಗರದಲ್ಲಿ ಸಿವಿಲ್ ಆಸ್ಪತ್ರೆ ಮುಂಭಾಗದ ರಸ್ತೆಯ ಡಾ.ಭಾತೆ ಕ್ಲಿನಿಕ್ ಬಳಿ …

Read More »

ನಾಳಿಂದ ಮತ್ತ ಸಾಲಿ ಶುರು : ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ

ಸೋಮವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಾ ಶಾಲೆಗಳು ಆರಂಭವಾಗುತ್ತವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರು ತಿಳಿಸಿದ್ದಾರೆ. ಹೌದು ಯಾವ ಶಾಲೆಯಲ್ಲಿ ಶೇ.10ಕ್ಕಿಂತ ಹೆಚ್ಚು ಕೊರೊನಾ ಕೇಸ್‍ಗಳು ಕಂಡು ಬರುತ್ತವೆಯೋ ಆ ಶಾಲೆಗಳಿಗೆ ಮಾತ್ರ ರಜೆ ನೀಡಲಾಗುವುದು. ಬೇರೆ ಶಾಲೆಗಳು ಎಂದಿನಂತೆ ನಡೆಯಲಿವೆ. ರಾಜ್ಯ ಸರ್ಕಾರದ ಆದೇಶದಂತೆ ಪೂರ್ಣ ತಾಲೂಕು, ಜಿಲ್ಲೆಗೆ ರಜೆ ಘೋಷಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಜ.11ರಿಂದ 18ವರೆಗೆ ಒಂದು …

Read More »

ಜನೇವರಿ 26 ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ರಾಜ್ಯದ ಸ್ತಬ್ಧಚಿತ್ರ

ನವದೆಹಲಿ-   ಕೊರೊನಾ ಪ್ರಕರಣಗಳು ದೇಶದಲ್ಲಿ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜ.26ಕ್ಕೆ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಕೇವಲ 24,000 ಜನರು ಮಾತ್ರ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ.   ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ಧಚಿತ್ರ ಸತತವಾಗಿ 13ನೇ ಬಾರಿ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾಗಿದೆ, 12 ರಾಜ್ಯಗಳ ಪೈಕಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಕರ್ನಾಟಕದ್ದಾಗಿದೆ.       …

Read More »

TRP ಲಿಸ್ಟ್​ ರಿಲೀಸ್​: ಟಾಪ್​ 5 ಲಿಸ್ಟ್​ನಲ್ಲಿರೋ ಕನ್ನಡದ ಧಾರಾವಾಹಿಗಳು ಯಾವುವು..?

ಧಾರಾವಾಹಿಯ ತಂಡದವರು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಹೊಸ ವರ್ಷದ ಮೊದಲ ವಾರದ ಟಿಆರ್​ಪಿ ಲಿಸ್ಟ್​ ಹೊರ ಬಂದಿದ್ದು, ನಿಮ್ಮ ಕುತೂಹಲದ ಕಣ್ಗಳಿಗೆ ಉತ್ತರ ಇಲ್ಲಿದೇ. ಒಂದೊಳ್ಳೆಯ ಕಂಟೆಂಟ್​ನ್ನ ಜನರಿಗೆ ತಲುಪಿಸಲು ಸಾಕಷ್ಟು ಪರಿಶ್ರಮಪಡುವ ಧಾರಾವಾಹಿಗಳು ಏನೇ ಎಫರ್ಟ್​ ಹಾಕಿದ್ರು ಕೊನೆಯದಾಗಿ ಆ ಸೀರಿಯಲ್​ ಎಷ್ಟರಮಟ್ಟಿಗೆ ವೀಕ್ಷಕರು ಮನ ಗೆದ್ದಿದೆ ಅನ್ನೋದು ಇಂಪಾರ್ಟಂಟ್​. ಟಾಪ್​ 5 ಲಿಸ್ಟ್​ನಲ್ಲಿ ಯಾವೆಲ್ಲ ಸೀರಿಯಲ್​ಗಳು ಸ್ಥಾನ ಪಡೆದುಕೊಂಡಿವೆ ಎಂಬುದ್ರ ಬಗ್ಗೆ ಮಾಹಿತಿ ಇಲ್ಲಿದೇ ನೋಡಿ. ​ …

Read More »

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಸಲುವಾಗಿ ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ

ವಿಜಯಪುರ ಜಿಲ್ಲೆಯ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಡೆದಾಡುವ ದೇವರು ಎಂದೇ ಖ್ಯಾತಿ. ತಮ್ಮ ಪ್ರವಚನಾಮೃತದಿಂದ ವಿಶ್ವದೆಲ್ಲೆಡೆ ಖ್ಯಾತಿ ಹೊಂದಿದ್ದಾರೆ. ಉತ್ತರ ಕರ್ನಾಟಕದ ಆರಾಧ್ಯದೈವರು ಇತ್ತಿಚೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಬೇಗ ಗುಣಮುಖರಾಗಲೆಂದು ಮುಸ್ಲಿಂ ಬಾಂಧವರು ಬಸವನಾಡು ವಿಜಯಪುರದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.  ನಡೆದಾಡುವ ದೇವರು ಭಕ್ತರ ಆರಾಧ್ಯ ದೈವ ಸಿದ್ದೇಶ್ವರ ಸ್ಮಾಮಿಜಿಗಳು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿ ಮುಸ್ಲಿಂ ‌ಬಾಂಧವರು ದರ್ಗಾದಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಿದ್ದೇಶ್ವರ …

Read More »

ಗೋಕಾಕ ತಾಲೂಕಿನ ಕೊಣ್ಣೂರಿನ ಬೈಕ್ ಸವಾರ. ಪೋಲಿಸ ಸಿಬ್ಬಂದಿಗೆ ಎಕವಚನದಲ್ಲಿ ವಾಗ್ವಾದ

ಎರಡನೆಯ ವಾರದ ವಿಕೆಂಡ್ ಕರ್ಪ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಕೊರೊನಾ ನಿಯಮ ಪಾಲಿಸದೆ ಇರುವವರಿಗೆ ದಂಡ ವಿಧಿಸುವ ಸಮಯದಲ್ಲಿ ಪೋಲಿಸನ ಜೊತೆಯಲ್ಲಿ ಕಿರಿಕ್ ಮಾಡಿಕೊಂಡು ನಾವು ದುಡಿಯೋದು ಹತ್ತುರೂಪಾಯಿ,ದಿನಾಲು ದುಡಿದ್ದನ್ನ ನಿಮಗೆ ಕೊಡಬೇಕಾ,ಯಾವದ್ರಿ ಗವರ್ನಮೆಂಟ್,ನಾನು ದಂಡ ನೀಡೊದಿಲ್ಲ ನನ್ನ ಹತ್ತಿರ ಹಣವಿಲ್ಲ. ನೀನು ಬೇಕಾದರೆ ಕೊರ್ಟಿಗೆ ಹಾಕೊಗು ಎಂದು ಪೋಲಿಸ ಸಿಬ್ಬಂದಿಗೆ ಎಕವಚನದಲ್ಲಿ ವಾಗ್ವಾದಕ್ಕಿಳಿದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಿನ ನಡೆದಿದೆ, ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳು ಹರಡದಂತೆ ತಡೆಯಲು ರಾಜ್ಯಾದ್ಯಂತ …

Read More »

ಜಿಲ್ಲೆಯಲ್ಲಿ ಇಂದು ಮತ್ತೆ 393 ಪಾಸಿಟಿವ್ ಕೇಸ್

ರಾಜ್ಯದಲ್ಲಿ ಇಂದು ಮತ್ತೆ ಮಹಾಮಾರಿ ಕೊರೊನಾ ರಣಕೇಕೆ ಹಾಕಿದೆ. ಇಂದು ಹೊಸದಾಗಿ 32,793 ಪಾಸಿಟಿವ್ ಕೇಸ್‍ಗಳು ದೃಢಪಟ್ಟಿವೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 393 ಕೇಸ್‍ಗಳು ಪತ್ತೆಯಾಗಿವೆ. ಶನಿವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ರಾಜ್ಯದಲ್ಲಿ 32,793 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ 7 ಜನರು ಇಂದು ಸಾವನ್ನಪ್ಪಿದ್ದಾರೆ. ಇಂದು ಶೇ.15ರಷ್ಟು ಪಾಸಿಟಿವಿಟಿ ರೇಟ್ ದಾಖಲಾಗಿದೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 393 …

Read More »

ಒಂದೇ ವಾರದಲ್ಲಿ 5 ರಿಂದ 155ಕ್ಕೇರಿದ ಸೋಂಕಿತರ ಸಂಖ್ಯೆ ಏರಿಕೆ; ನವೋದಯ ವಿದ್ಯಾಲಯಲ್ಲಿ ಕೊರೊನಾ ಸ್ಫೋಟ

ಕೊಪ್ಪಳ: ಕೊರೊನಾ ಮೊದಲು ಹಾಗೂ ಎರಡನೆಯ ಅಲೆಯು (Corona Wave) ಕೊಪ್ಪಳ (Koppal) ಜಿಲ್ಲೆಗೆ ಸ್ವಲ್ಪ ತಡವಾಗಿ ಎಂಟ್ರಿ ಕೊಟ್ಟರೂ ನಂತರ ಅಬ್ಬರಕ್ಕೆ ಇಡೀ ಜಿಲ್ಲೆ ನಲುಗುವಂತೆ ಮಾಡಿತ್ತು ಇದೇ ರೀತಿ ರಾಜ್ಯದಲ್ಲಿ ಕೊರೊನಾ ಮೂರನೆಯ ಅಲೆಯ (Corona Third Wave) ಅಬ್ಬರ ಆರಂಭವಾಗಿದ್ದರೂ, ಅತ್ಯಂತ ಕಡಿಮೆ ಇದ್ದ ಸೋಂಕಿತರ ಪ್ರಕರಣಗಳು ಕಳೆದೊಂದು ವಾರದಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ಅದರಲ್ಲಿಯೂ ಕುಕನೂರಿನಲ್ಲಿ ನವೋದಯ ವಿದ್ಯಾಲಯದಲ್ಲಿ (Navodaya Vidyalaya) ಕೊರೊನಾ ಸ್ಫೋಟವಾಗಿದೆ. ಜಿಲ್ಲೆಯಲ್ಲಿ …

Read More »

ಬ್ರಿಟನ್ ಪ್ರಧಾನಿ ಹುದ್ದೆಗೆ ಇನ್ಪೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್?

ಲಂಡನ್: ಇನ್ಪೋಸಿಸ್ ಸಂಸ್ಥಾಪಕ ಡಾ. ಎನ್.ಆರ್ ನಾರಾಯಣ ಮೂರ್ತಿ ಅವರ ಅಳಿಯ, ಬ್ರಿಟನ್ ನ ವಿತ್ತ ಸಚಿವ ರಿಷಿ ಸುನಕ್ ಆ ದೇಶದ ಪ್ರಧಾನ ಮಂತ್ರಿಯಾಗಲಿದ್ದಾರೆಯೇ? ಹೀಗೊಂದು ಸುದ್ದಿ ಬ್ರಿಟನ್ ನಲ್ಲಿ ಹರಿದಾಡುತ್ತಿವೆ. ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ಲಾಕ್ ಡೌನ್ ಜಾರಿಯಲ್ಲಿದ್ದಾಗ 2020 ಮೇ ನಲ್ಲಿ ಅವರ ಅಧಿಕೃತ ನಿವಾಸದಲ್ಲಿ ಮದ್ಯದ ಪಾರ್ಟಿ ಮಾಡಿದ ಆರೋಪಕ್ಕೆ ಸಂಬಂಧಿಸಿ ಆಡಳಿತ ರೂಢ ಕನ್ಸರ್ವೆಟಿವ್ ಪಕ್ಷದಿಂದ ಹಾಗೂ ವಿಪಕ್ಷದಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. …

Read More »