ನವದೆಹಲಿ: 1,561.31 ಎಕರೆ ಜಮೀನಿನ ಒಡೆತನ ಮೈಸೂರಿನ ಮಹಾರಾಜರ ವಂಶಸ್ಥರಿಗೆ ಸೇರಿದ್ದು ಎಂದು ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ, ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಈ ಹಿಂದೆ ತಿರಸ್ಕರಿಸಿದ್ದ ಜುಲೈ 26ರ ತನ್ನ ಆದೇಶವನ್ನು ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಅಜಯ್ ರಸ್ತೋಗಿ ಅವರ ಪೀಠ ತಿರಸ್ಕರಿಸಿದೆ. ‘ಮೇಲ್ಮನವಿಯಲ್ಲಿ ಸರ್ಕಾರ ಪ್ರಸ್ತಾಪಿಸಿರುವ ಅಂಶಗಳನ್ನು ಗಮನಿಸಿದ್ದೇವೆ. ಇದರಲ್ಲಿ ಮಧ್ಯಪ್ರವೇಶಿಸುವಂತಹ ಯಾವುದೇ …
Read More »28 ಮನೆ, ₹18 ಕೋಟಿ ಒಡೆಯ ವಾಸು’ದೇವ’: ಬಿವಿ ಗಿರಿ ಬಳಿ ₹6.24 ಕೋಟಿ ಮೌಲ್ಯದ ಆಸ್ತಿ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದ ನಿವೃತ್ತ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ ಅವರು 28 ಮನೆ ಸೇರಿ ₹18.20 ಕೋಟಿ ಮೌಲ್ಯದ ಆಸ್ತಿಗೆ ಒಡೆಯನಾಗಿದ್ದರೆ, ಬಿಬಿಎಂಪಿ ಶಾಲೆಯ ಡಿ ಗ್ರೂಪ್ ನೌಕರ ಬಿ.ವಿ. ಗಿರಿ ₹6.24 ಕೋಟಿ ಮೌಲ್ಯದ ಆಸ್ತಿಗೆ ಮಾಲೀಕ..! ಆದಾಯ ಮೀರಿ ಆಸ್ತಿ ಸಂಪಾದನೆ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಜ್ಯದ 15 ಅಧಿಕಾರಿಗಳು, ಸಿಬ್ಬಂದಿ ಮನೆ ಮೇಲೆ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ …
Read More »ಬೆಳೆ ಹಾನಿ ಪ್ರದೇಶಕ್ಕೆ ಕಾಟಾಚಾರದ ಭೇಟಿ: ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಮುಖ್ಯಮಂತ್ರಿ ಹಾಗೂ ಸಚಿವರ ಅತಿವೃಷ್ಟಿಯ ವೀಕ್ಷಣೆ ‘ಬಂದ ಪುಟ್ಟ ಹೋದ ಪುಟ್ಟ’ ಎಂಬಂತಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಮನೆ ಮತ್ತು ಬೆಳೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಶಿಡ್ಲಘಟ್ಟದ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್. ರವಿಕುಮಾರ್ ಅವರ ಮನೆಗೆ ಗುರುವಾರ ಭೇಟಿ ನೀಡಿದ್ದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸೌಹಾರ್ದ ಭೇಟಿ ಇದಾದರೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ …
Read More »ಕಳೆದ ಎರಡ್ಮೂರು ದಿನಗಳಿಂದ ಬ್ರೇಕ್ ನೀಡಿದ್ದ ಮಳೆ (Rainfall) ಮತ್ತೆ ರಾಜ್ಯಕ್ಕೆ
ಕಳೆದ ಎರಡ್ಮೂರು ದಿನಗಳಿಂದ ಬ್ರೇಕ್ ನೀಡಿದ್ದ ಮಳೆ (Rainfall) ಮತ್ತೆ ರಾಜ್ಯಕ್ಕೆ (Karnataka Rains) ಎಂಟ್ರಿಯಾಗಲಿದ್ದಾನೆ. ಇಂದಿನಿಂದ ಮುಂದಿನ ಎರಡು ದಿನ ರಾಜ್ಯದಲ್ಲಿ ಮಳೆಯಾಗಲಿದ್ದು, ಎಲ್ಲ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ಸಹ ನೀಡಲಾಗಿದೆ. ಮತ್ತೆ ಬಂಗಾಳ ಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತಗೊಂಡಿರುವ ಪರಿಣಾಮ ಮೊದಲು ತಮಿಳುನಾಡಿನ (Tamilnadu) ರಾಜಧಾನಿ ಚೆನ್ನೈ (Chennai Rains) ಎದುರಿಸಲಿದೆ. ನಂತರ ಕರ್ನಾಟಕದ ಮೈಸೂರು ಭಾಗ ಸಹ ಸೈಕ್ಲೋನ್ ಗೆ (Cyclone) …
Read More »ಒಂದೇ ಕುಟುಂಬದ 11 ಸದಸ್ಯರು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥ
ಖಾನಾಪುರ: ತಾಲ್ಲೂಕಿನ ಬಂಕಿ ಗ್ರಾಮದ ಒಂದೇ ಕುಟುಂಬದ 11 ಸದಸ್ಯರು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಹೀರ್ ಮಹಮ್ಮದ್ ಜಮಾದಾರ (14) ಮೃತಪಟ್ಟಿದ್ದಾನೆ. “ತೀವ್ರ ವಾಂತಿ ಮತ್ತು ಬೇಧಿಯಿಂದ ನಿತ್ರಾಣವಾಗಿದ್ದ ಸಾಹೀರ್ ಎಂಬ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಆತ ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾನೆ” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ ಮಾಹಿತಿ ನೀಡಿದರು. ಈ ಘಟನೆಯ …
Read More »ಬ್ರಾ ಸೈಜ್, ಸೊಂಟದ ಸುತ್ತಳತೆ ಹಾಕಿ ಹುಡುಗಿ ಬೇಕು ಎಂದ ಭೂಪ! ಕಮೆಂಟ್ ಬಾಕ್ಸ್ನಲ್ಲೇ ಹಿಗ್ಗಾಮುಗ್ಗಾ ತರಾಟೆ
ನವದೆಹಲಿ: ಹುಡುಗಿ ನೋಡೋಕೆ ಸುಂದರವಾಗಿರಬೇಕು, ವಿದ್ಯಾವಂತೆ, ಗುಣವಂತೆ, ಬುದ್ಧಿವಂತೆ ಆಗಿದ್ರೆ ಸಾಕಪ್ಪ. ಅಂತಹ ಹುಡುಗಿ ಓಕೆ ಅಂದ್ರೆ ಕಣ್ಮುಂಚಿ ತಾಳಿ ಕಟ್ಟಿಬಿಡ್ತೀನಿ. ಕಣ್ಣಲ್ಲಿ ಕಣ್ಣಿಟ್ಟು ಅವಳನ್ನು ಕಾಪಾಡ್ತೀನಿ, ಸುಖವಾಗಿ ಸಂಸಾರ ಮಾಡಿಕೊಂಡು ಇರ್ತೀನಿ ಎಂದು ಯುವಕರು ಹೇಳೋದನ್ನು ಕೇಳಿದ್ದೀವಿ. ಆದ್ರೆ ಇಲ್ಲೊಬ್ಬ ಭೂಪ, ತನ್ನನ್ನು ಮದುವೆ ಆಗುವ ಹುಡುಗಿಯ ಬ್ರಾ ಸೈಜ್, ಸೊಂಟದ ಸುತ್ತಳತೆ, ಪಾದದ ಉದ್ದ, ಎತ್ತರ, ಗಾತ್ರ ಇಂತಿಷ್ಟೇ ಇರಬೇಕು ಎಂದು ಪಟ್ಟಿ ಮಾಡಿ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ …
Read More »ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಹೇಗೆ ಎಂಬ ಚಿಂತೆನಾ…? ನೋ..ವರಿ ಈ ವೈರಲ್ ವಿಡಿಯೋ ನೋಡಿ
ನಮ್ಮ ದೇಶ, ರಾಜ್ಯದಲ್ಲಿ ಹವಾಮಾನ ಸರಿಯಿಲ್ಲ. ಚಳಿಗಾಲದ ಋತುವಿನಲ್ಲೂ ಮಳೆಗಾಲದಂತೆ ಆಗಿದೆ. ಹೀಗಾಗಿ ಇಂತಹ ವಾತಾವರಣದಿಂದ ಆರೋಗ್ಯ ಹದಗೆಡುತ್ತಿರುತ್ತದೆ. ಅದಕ್ಕಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಹಾರದಲ್ಲಿ ಬೆಳ್ಳುಳ್ಳಿಯನ್ನು ಉಪಯೋಗಿಸಿದ್ರೆ, ರೋಗನಿರೋಧಕ ಶಕ್ತಿ ಬಲಪಡಿಸುವಲ್ಲಿ ಇದು ಸಹಾಯ ಮಾಡುತ್ತದೆ. ಪ್ರತಿಯೊಂದು ಭಾರತೀಯ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಕಂಡು ಬರುತ್ತದೆ. ಅದರಲ್ಲೂ ನಾನ್ ವೆಜ್ ಪದಾರ್ಥ ತಯಾರಿಸಲಂತೂ ಬೆಳ್ಳುಳ್ಳಿ ಇಲ್ಲದಿದ್ರೆ ಅಡುಗೆಯೇ ಅಪೂರ್ಣ. ಅಂದ ಹಾಗೆ, ನೀವು ನಿಯಮಿತವಾಗಿ ಅಡುಗೆ …
Read More »ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ
ಧಾರವಾಡ: ಮಹಾಮಾರಿ ಕೊರೊನಾ(Coronavirus) ಮತ್ತೆ ತನ್ನ ಆಟ ಶುರು ಮಾಡಿದಂತಿದೆ. ಧಾರವಾಡದ ಸತ್ತೂರು ಬಡಾಣೆಯಲ್ಲಿರೋ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ(SDM Medical College) 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಕೊಂಚ ವಿರಾಮ ಕೊಟ್ಟಿದ್ದ ಕೊರೊನಾ ರಾಜ್ಯದಲ್ಲಿ ಮತ್ತೆ ಮೂರಂಕಿ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದೆ. ಆರಂಭದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿತ್ತು. ಹೀಗಾಗಿ 300 ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ತಪಾಸಣೆ ವೇಳೆ 66 ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಇನ್ನೂ 200 …
Read More »ಇಬ್ಬರನ್ನು ಬಲಿ ಪಡೆದ ದುಬಾರಿ ಟೊಮ್ಯಾಟೊ: ತೋಟದ ಮಾಲೀಕನ ಮೇಲೆ ಹತ್ಯೆ!
ಟೊಮ್ಯಾಟೊ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ತೋಟದಲ್ಲಿ ಬೆಳೆದಿದ್ದ ಟೋಮ್ಯಾಟೊ ಕದಿಯಲು ಹೋಗಿದ್ದ ಇಬ್ಬರು ಯುವಕರು ಬೇಲಿಗೆ ಹಾಕಿದ್ದ ವಿದ್ಯುತ್ ಪ್ರವಹಿಸಿ ಮೃತಪಟ್ಟ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಚರಕಮಟ್ಟೇನಹಳ್ಳಿ ಬಳಿ ಸಂಭವಿಸಿದೆ. ಟೊಮ್ಯಾಟೊ ಬೆಳೆಗೆ ತೋಟದ ಮಾಲಿಕ ಅಶ್ವಥರಾವ್ ವಿದ್ಯುತ್ ಬೇಲಿ ಹಾಕಿದ್ದರು. ವಿದ್ಯುತ್ ಬೇಲಿ ತಗುಲಿ ವಸಂತರಾವ್ (28) ಸ್ಥಳದಲ್ಲೇ ಮೃತಪಟ್ಟರೆ, ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ತೋಟದ ಮಾಲಿಕನನ್ನು ಮಾರಕಾಸ್ತ್ರಗಳಿಂದ …
Read More »ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಕಾಯಂಗೊಂಡ ಗುತ್ತಿಗೆ ನೌಕರರ ಬಡ್ತಿಗೆ ಶಿಫಾರಸು
ಬೆಂಗಳೂರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಕಾಯಂಗೊಂಡ ಗುತ್ತಿಗೆ ನೌಕರರಿಗೆ ಭರ್ಜರಿ ಸಿಹಿಸುದ್ದಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆಆಧಾರದಲ್ಲಿ ನೇಮಕಗೊಂಡು ನಂತರ ಕಾಯಂಗೊಂಡಿರುವ 1983 ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ನೇಮಕದ ದಿನದಿಂದ ನಿಗದಿಯಾಗಿರುವ ವೇತನವನ್ನು ಯಥಾವತ್ತಾಗಿ ಮುಂದುವರೆಸುವ ಕುರಿತಂತೆ ಶಿಫಾರಸು ಮಾಡಲಾಗಿದೆ. ಕಾಯಂಗೊಂಡ ಗುತ್ತಿಗೆ ನೌಕರರ ಕಾಲಮಿತಿ ಬಡ್ತಿ ಹಾಗೂ ಸ್ಥಗಿತ ವೇತನ ಬಡ್ತಿಯನ್ನು ಎಂದಿನಂತೆ ಮಂಜುರು ಮಾಡಬೇಕು ಎಂದು ಪರಿಶೀಲನಾ ಸಮಿತಿ …
Read More »