Breaking News

ಮನೆ ಮಾರಾಟ ಮಾಡಿದ ಅಮಿತಾಭ್ ಬಚ್ಚನ್ ಗೆ ಸಿಕ್ಕ ಹಣದ ಮೊತ್ತ ಕೇಳಿದ್ರೆ ಶಾಕ್ ಆಗ್ತೀರಾ..?

ಮುಂಬೈ : ಅಮಿತಾಬ್ ಬಚ್ಚನ್ ಅವರು ಮುಂಬೈನಲ್ಲಿ ಅನೇಕ ಬೆಲೆಬಾಳುವ ಆಸ್ತಿಗಳನ್ನು ಹೊಂದಿದ್ದಾರೆ. ಆದರೆ ಇತ್ತೀಚೆಗೆ ಅವರು ಗುಲ್ಮೊಹರ್ ಪಾರ್ಕ್‍ನಲ್ಲಿರುವ ತಮ್ಮ ದಕ್ಷಿಣ ದೆಹಲಿಯಲ್ಲಿರುವ ‘ಸೋಪಾನ್’ ಹೆಸರಿನ ಮನೆಯನ್ನು 23 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ನೆಜೋನ್ ಗ್ರೂಪ್ ಆಫ್ ಕಂಪನಿಗಳ (ಸಿಇಒ) ಅವ್ನಿ ಬೇಡರ್ ಅವರಿಗೆ ಬಚ್ಚನ್ ಮನೆಯನ್ನು ಮಾರಾಟ ಮಾಡಿದ್ದಾರೆ. ಬಚ್ಚನ್ ಅವರು ಈ ಮನೆಯುನ್ನು ಕಟ್ಟಿಸಿ ತುಂಬಾ ವರ್ಷಗಳಾಗಿದ್ದು, ಇದು ಹಳೆಯ ನಿರ್ಮಾಣವಾಗಿದೆ. ಆದ್ದರಿಂದ ನಾವು ಸೋಪಾನ್ ಮನೆಯನ್ನು …

Read More »

ಇಲ್ಲಿನ ಜನಕ್ಕೆ ಮನೆಯಿಲ್ಲ, ಯುವಕರಿಗೆ ಮದುವೆಯೂ ಇಲ್ಲ! ಈ ವಿಚಿತ್ರ ಸಮಸ್ಯೆಗೆ ಕಾರಣವೇನು?

ಗದಗ: ಅವರದ್ದು ಮದುವೆ (Marriage) ಮಾಡ್ಕೊಂಡು ಹೆಂಡತಿ (Wife), ಮಕ್ಕಳ (Children) ಜೊತೆ ಹಾಯಾಗಿರಬೇಕಾಗಿರೋ ವಯಸ್ಸು. ಆದರೆ, ಮದುವೆ ಮಾಡ್ಕೊಂಡು ಸುಂದರ ಸಾಂಸಾರಿಕ ಜೀವನ ನಡೆಸಬೇಕಂದ್ರೆ ಹಣೆಬರಹಕ್ಕೊಂದು ಕನ್ಯೆ ಸಿಗುತ್ತಿಲ್ಲ. ಕನ್ಯೆ ಕೊಡೋಕೆ ಅಂತಾ ಬಂದ್ರೆ, ಬಂದ ಬೀಗರೆಲ್ಲಾ ಅವರ ಅವಸ್ಥೆ ನೋಡಿ ಓಡಿ ಹೋಗ್ತಿದ್ದಾರೆ. ಹೀಗಾಗಿ ಈ ಗ್ರಾಮದಲ್ಲಿ ಮದುವೆಯಾಗ್ಬೇಕಾಗಿರೋ ಯುವಕರದ್ದೊಂದು ದೊಡ್ಡ ಬಟಾಲಿಯನ್ನೇ ಇದೆ. 2007, 2009 ಹಾಗೂ 2019ರಲ್ಲಿ ಮಲಪ್ರಭಾ ನದಿಯ (Malaprabha River) ಪ್ರವಾಹಕ್ಕೆ …

Read More »

ಬಸ್ ನಿಲ್ದಾಣ‌ದ ಮೇಲೆ ಟಿಪ್ಪು ಧ್ವಜ

ಲಿಂಗಸುಗೂರು: ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದ್ದನ್ನು ಖಂಡಿಸಿ ಆಯೋಜಿಸಿದ್ದ ಪ್ರತಿಭಟನೆ ಸಂದರ್ಭದಲ್ಲಿ ಕೆಲವರು ಬಸ್‍ ನಿಲ್ದಾಣದ ಗೋಪುರದ ಮೇಲೆ ಟಿಪ್ಪು ಸುಲ್ತಾನ್ ಸಂಘದ ಧ್ವಜ ಅಳವಡಿಸಿದ್ದರಿಂದ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.   ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆ ಗುರುವಾರ ಮಧ್ಯಾಹ್ನ ಬಸ್‍ ನಿಲ್ದಾಣದತ್ತ ಬರುತ್ತಿದ್ದಂತೆ ಪ್ರತಿಭಟನೆಯಲ್ಲಿದ್ದ ಕೆಲ ಯುವಕರು ಏಕಾಏಕಿ ಬಸ್‍ ನಿಲ್ದಾಣದ ಒಳಗಡೆ ನುಗ್ಗಿ ಕಟ್ಟಡದ ಗೋಪುರದ …

Read More »

ಬೆಳಗಾವಿ; ಮತ್ತೆ 3 ನಗರಗಳಿಗೆ ವಿಮಾನ ಸಂಚಾರ

ಬೆಳಗಾವಿ, ಫೆಬ್ರವರಿ 04;ಬೆಳಗಾವಿವಿಮಾನ ನಿಲ್ದಾಣದಿಂದ ಮತ್ತೆ ಮೂರು ನಗರಗಳಿಗೆ ವಿಮಾನ ಸಂಚಾರ ಆರಂಭಿಸಲಾಗುತ್ತದೆ. ಸ್ಟಾರ್ ಏರ್ ಈ ಕುರಿತು ಚರ್ಚೆ ನಡೆಸಿದ್ದು, ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಗ್ಪುರ, ರಾಜಸ್ಥಾನದ ಜೈಪುರ ಮತ್ತು ಬೆಂಗಳೂರಿಗೆ 3 ಹೊಸ ವಿಮಾನಗಳ ಸಂಚಾರ ಆರಂಭವಾಗಲಿದೆ. ನವದೆಹಲಿಗೆ ಸಹ ಬೆಳಗಾವಿಯಿಂದ ವಿಮಾನ ಸೇವೆ ಆರಂಭವಾಗಿದೆ. ಸ್ಟಾರ್ ಏರ್ ಸಂಸ್ಥೆ ಈ ಕುರಿತು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ …

Read More »

ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ಕೆಳಗೆ ಬಿದ್ದ ವಿದ್ಯಾರ್ಥಿ – ಮೈ ಝುಮ್ಮೆನಿಸುವ ದೃಶ್ಯ ಸೆರೆ!

ಶಿವಮೊಗ್ಗ: ಚಲಿಸುತ್ತಿದ್ದ ಬಸ್‍ನ್ನು ಓಡಿ ಹೋಗಿ ಹತ್ತಲು ಯತ್ನಿಸಿದ ವಿದ್ಯಾರ್ಥಿಯೋರ್ವ ಬಸ್‍ನಿಂದ ಕೆಳಗೆ ಬಿದ್ದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್‍ನಲ್ಲಿ ನಡೆದಿದೆ. ಸಾಗರ ತಾಲೂಕಿನ ಇಡುವಾಣಿಯ ಚಿಪ್ಪಲಮಕ್ಕಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ವೈಭವ್ ಬಸ್‍ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ. ವೈಭವ್ ಬಸ್ ಹತ್ತಲು ಬಸ್ ನಿಲ್ದಾಣದ ಕಡೆ ಹೋಗುತ್ತಿದ್ದ. ಅಷ್ಟರಲ್ಲಾಗಲೇ ಬಸ್ ನಿಲ್ದಾಣದಿಂದ ಹೊರಟಿದೆ. ಹೀಗಾಗಿ ವಿದ್ಯಾರ್ಥಿ ವೈಭವ್ ಚಲಿಸುತ್ತಿದ್ದ ಬಸ್ ಹತ್ತಲು ಪ್ರಯತ್ನಿಸಿ, ಸಾಧ್ಯವಾಗದೇ ಬಸ್‍ನಿಂದ ಕೆಳಗೆ …

Read More »

ಬ್ರೇಕ್ ಕೆಳಗೆ ವಾಟರ್ ಬಾಟ್ಲಿ ಸಿಲುಕಿ ಬೈಕ್‍ಗೆ ಡಿಕ್ಕಿ ಹೊಡೆದ ಕಾರು!

ಮಂಗಳೂರು: ಕಾರಿನ ಬ್ರೇಕ್ ಕೆಳಗೆ ವಾಟರ್ ಬಾಟ್ಲಿ ಸಿಕ್ಕಿ ಬೈಕ್‍ಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉರ್ವಾದ ಚಿಲಿಂಬಿ- ಮಠದಕಣಿ ಕ್ರಾಸ್ ರೋಡ್ ನಲ್ಲಿ ಈ ಅವಘಡ ಸಂಭವಿಸಿದ್ದು, ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರನ್ನು ವಿವೇಕಾನಂದ ಶೆಣೈ (63) ಎಂಬವರು ಚಲಾಯಿಸುತ್ತಿದ್ದರು. ಕಾರಿನ ಬ್ರೇಕ್ ಪೆಡಲ್ ಅಡಿ ನೀರಿನ ಬಾಟ್ಲಿ ಸಿಲುಕಿದ್ದರಿಂದ ಬ್ರೇಕ್ ಪೆಡಲ್ ವರ್ಕ್ ಆಗದೆ ನಿಯಂತ್ರಣ ಕಳೆದುಕೊಂಡು ಅಪಘಾತ …

Read More »

ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

ಬೆಂಗಳೂರು: ಕೊರೊನಾ, ಒಮಿಕ್ರಾನ್ ಸೋಂಕು ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್ ಮೇಲೆ ಹೇರಲಾಗಿದ್ದ ನಿಯಮವನ್ನು ಸಡಿಲ ಗೊಳಿಸಿದ್ದು, ನಾಳೆಯಿಂದ ಥಿಯೇಟರ್‌ ಹೌಸ್ ಫುಲ್‌ಗೆ ಸರ್ಕಾರ ಅನುಮತಿ ನೀಡಿದೆ. ಕಾರಿನಲ್ಲಿ ಏಕಾಂಗಿಯಾಗಿ ಓಡಾಡುವಾಗ ಮಾಸ್ಕ್ ಅಗತ್ಯ ಇಲ್ಲ – ದೆಹಲಿಯಲ್ಲಿ ವಿನಾಯಿತಿ 3 seconds ago ಚೀನಾ ಕಾನೂನು ವಿರುದ್ಧ ಹೇಳಿಕೆ ನೀಡಿದರೆ ಮಾನ್ಯತೆ ರದ್ದು: ಅಥ್ಲೀಟ್‌ಗಳಿಗೆ ಎಚ್ಚರಿಕೆ 46 seconds ago ಸಿಎಂ ನೇತೃತ್ವದಲ್ಲಿ ಕೋವಿಡ್ ಸಂಬಂಧಿತ ಸಭೆ ನಡೆಸಿದ್ದಾರೆ. ಚಲನಚಿತ್ರ …

Read More »

ರಮೇಶ್‌ ಜಾರಕಿಹೊಳಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ ಚಿಟ್‌ ಕೊಟ್ಟಿದೆ.

ಬೆಂಗಳೂರು: ಅತ್ಯಾಚಾರದ ಆರೋಪ ಹೊತ್ತಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ ಚಿಟ್‌ ಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ 1ನೇ ಎಸಿಎಂಎಂ ಕೋರ್ಟ್‌ಗೆ ಬಿ ರಿಪೋರ್ಟ್‌ ಪ್ರತಿ ಸಲ್ಲಿಸಿದೆ. 150 ಪುಟಗಳ ಬಿ ರಿಪೋರ್ಟ್‌ ಅನ್ನು 1ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಇದರಿಂದ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ಕ್ಲೀನ್ …

Read More »

ದಾನ ನೀಡಿರುವುದು ಪೀಠಕ್ಕೆ ಹೊರತು ಸ್ವಾಮೀಜಿಗೆ ಅಲ್ಲ: ಮುರುಗೇಶ್‌ ನಿರಾಣಿ

ಮೈಸೂರು: ‘ದಾನ ನೀಡಿರುವುದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಹೊರತು ಅದರ ಸ್ವಾಮೀಜಿಗೆ ಅಲ್ಲ. ಪೀಠಕ್ಕೆ ನೀಡಿರುವ ಕಾಣಿಕೆಯನ್ನು ವಾಪಸ್ ಕೇಳುವಷ್ಟು ಸಣ್ಣವ ನಾನಲ್ಲ. ಅಂತಹ ಮನಸ್ಥಿತಿಯೂ ನನ್ನದ್ದಲ್ಲ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.   ‘ನಾನು ವಾಪಸ್ಸು ಕೇಳಿದ್ದೇನೆ ಎಂಬುದು ಸುಳ್ಳು. ಸ್ವಾಮೀಜಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ದೂರವಾಣಿ ಮೂಲಕ ಸ್ವಾಮೀಜಿ ಜತೆ ಮಾತನಾಡಿಯಾದರೂ ಸ್ಪಷ್ಟನೆ …

Read More »

ಅಟ್ಟಾಡಿಸಿ ಜೀಪ್ ಹರಿಸಿ ಕೊಲೆ

ವಿಜಯಪುರ: ಕೊಟ್ಟ ಹಣ ವಾಪಸ್​ ಕೇಳಿದ್ದಕ್ಕೆ ಮಹಿಳೆಯೊಬ್ಬಳ ಮೇಲೆ ಜೀಪ್​ ಹರಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದಿದೆ. ಶೋಭಾ ಸೋಮನಿಂಗ ಮೊಗದರೆ (45) ಕೊಲೆಯಾದ ಮಹಿಳೆ. ಸಾಗರ ಖತಾರ ಮತ್ತು ಮಾರುತಿ ಥೋರತ ಕೊಲೆ ಮಾಡಿದ ಆರೋಪಿಗಳು. ಕಬ್ಬು ಕಟಾವು ಮಾಡಲು ಒಂದು ತಂಡವನ್ನು ಕರೆತರುತ್ತೇವೆ ಎಂದು ಕೊಲೆಯಾದ ಮಹಿಳೆಯ ಪತಿ ಸೋಮನಿಂಗನಿಂದ ಆರೋಪಿಗಳು 45 ಲಕ್ಷ ರೂ. ಹಣ ಪಡೆದಿದ್ದರು. ಆರೋಪಿ ಮಾರುತಿ …

Read More »