Breaking News

ಗ್ರಾಮಪಂಚಾಯಿತಿಗಳಿಗೆ ಮಂಜೂರಾಗಿದ್ದ 1.19 ಲಕ್ಷ ಮನೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

ಬೆಂಗಳೂರು : ವಸತಿ ರಹಿತರಿಗೆ ರಾಜ್ಯ ಸರ್ಕಾರವು (State Government) ಬಿಗ್ ಶಾಕ್ ನೀಡಿದ್ದು, ಗ್ರಾಮಪಂಚಾಯಿತಿಗಳಿಗೆ ಮಂಜೂರಾಗಿದ್ದ 1.19 ಲಕ್ಷ ಮನೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.   ರಾಜ್ಯದ ಪ್ರತಿ ಗ್ರಾಮಪಂಚಾಯಿತಿಗೆ 20 ಮನೆಗಳನ್ನು ಮಂಜೂರು ಮಾಡಿ 2018-19 ನೇ ಸಾಲಿನಲ್ಲಿ ಮೈತ್ರಿ ಸರ್ಕಾರ ಘೋಷಣೆ ಹೊರಡಿಸಿತ್ತು. ಆದರೆ ಇದೀಗ ರಾಜ್ಯ ಬಿಜೆಪಿ ಸರ್ಕಾರ ಯೋಜನೆಯನ್ನೇ ರದ್ದು ಮಾಡಿದೆ ಈ ಮೂಲಕ ಮನೆ ನಿರೀಕ್ಷೆಯಲ್ಲಿದ್ದ ವಸತಿ ರಹಿತರಿಗೆ ಬಿಗ್ …

Read More »

ಡಿ. 24 ರಿಂದ ಜ. 1 ರವರೆಗೆ ಚಳಿಗಾಲದ ರಜೆ ಘೋಷಣೆ: ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ, ಕಲಬುರಗಿ ಪೀಠಗಳಿಗೆ ರಜೆ

ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಡಿಸೆಂಬರ್ 24 ರಿಂದ ಜನವರಿ 1 ರ ವರೆಗೆ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಆದೇಶದ ಅನುಸಾರ ನ್ಯಾಯಾಂಗ ರಿಜಿಸ್ಟ್ರಾರ್ ಕೆ.ಎಸ್. ಭರತ್ ಕುಮಾರ್ ನೋಟಿಫಿಕೇಶನ್ ಹೊರಡಿಸಿದ್ದಾರೆ. ಡಿಸೆಂಬರ್ 24 ರಿಂದ ಜನವರಿ 1 ರ ವರೆಗೆ ಹೈಕೋರ್ಟ್ ನ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಮತ್ತು ಧಾರವಾಡ ಪೀಠಗಳಿಗೆ ಚಳಿಗಾಲದ ರಜೆ ಇರುತ್ತದೆ. ರಜೆ ಅವಧಿಯಲ್ಲಿ ದೈನಂದಿನ ಕಲಾಪಗಳು ನಡೆಯುವುದಿಲ್ಲ. …

Read More »

ತರಕಾರಿ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಇಳಿಕೆ

ಯಾದಗಿರಿ: ತರಕಾರಿ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಇಳಿಕೆಯಾಗಿದ್ದರೆ, ಬದನೆಕಾಯಿ ಬೆಲೆ ಏರಿಕೆಯಾಗಿದೆ. ಸೊಪ್ಪುಗಳ ದರ ಕಳೆದ ವಾರದಂತೆ ಯಥಾಸ್ಥಿತಿ ಇದ್ದರೆ, ತರಕಾರಿ ದರ ಮಾತ್ರ ತುಸು ಏರಿಕೆಯಾಗಿದೆ. ಟೊಮೆಟೊ ದರ ಕೆಜಿಗೆ ಸಗಟುನಲ್ಲಿ ₹30 ಇದ್ದರೆ ಚಿಲ್ಲರೆ ದರ ₹40 ಇದೆ. ಕಳೆದ ವಾರಕ್ಕಿಂತ ₹10 ಇಳಿಕೆಯಾಗಿದೆ. ಆದರೆ, ಬದನೆಕಾಯಿ ದರ ಕಳೆದ ವಾರಕ್ಕಿಂತ ₹30 ಏರಿಕೆಯಾಗಿ ಕೆಜಿಗೆ ₹120 ಚಿಲ್ಲರೆ ದರ ಇದೆ. ಬೆಂಡೆ, ದೊಣ್ಣೆಮೆಣಸಿನಕಾಯಿ, ಎಲೆಕೋಸು, ಹೂಕೋಸು, …

Read More »

ಅಭಯ್ ಪಾಟೀಲ್‍ರನ್ನು ಹಾಡಿ ಹೊಗಳಿದ ಲಕ್ಷ್ಮೀ ಹೆಬ್ಬಾಳ್ಕರ್

ಸ್ಮಾರ್ಟ ಬೆಳಗಾವಿಯನ್ನು ಇನ್ನಷ್ಟು ಸ್ಮಾರ್ಟ ಮಾಡಿದ ಹಿರಿಯರು, ನನ್ನ ಮಾರ್ಗದರ್ಶಕರು, ನನಗೆ ಯಾವತ್ತೂ ಅಭಯ ಅಣ್ಣ ಪಾಟೀಲ್ ಅವರು ಆದರ್ಶ ಎನ್ನುವ ಮೂಲಕ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಯ್ ಪಾಟೀಲ್‍ರನ್ನು ಹಾಡಿ ಹೊಗಳಿದರು. ಬೆಳಗಾವಿಯ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೊಸಿಯೇಷನ್ ಬೆಳ್ಳಿ ಹಬ್ಬ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈ ದೇಶ, ರಾಜ್ಯ, ಜಿಲ್ಲೆ ಕಟ್ಟಬೇಕು ಎಂದರೆ ಮೊದಲ ಹೆಜ್ಜೆ ಇಟ್ಟವರು ಯಾರಾದ್ರೂ ಇದ್ದರೆ …

Read More »

ಅವಧಿ ಮೀರಿದ 7 ಲಕ್ಷರೂ . ಮೌಲ್ಯದ ಮದ್ಯ ನಾಶ

ಅವಧಿ ಮೀರಿದ ಹಾಗೂ ಕೆಎಸ್‌ಬಿಸಿಎಲ್ ಡಿಪೋದಲ್ಲಿ ಬಹಳ ವರ್ಷಗಳಿಂದ ಮಾರಾಟವಾಗದೆ ಉಳಿದಿರುವ ಅಂದಾಜು 7 ಲಕ್ಷ ರೂ . ಮೌಲ್ಯದ ಮದ್ಯವನ್ನು ಇಲ್ಲಿನ ಭೈರಿದೇವರಕೊಪ್ಪದ ಕರ್ನಾಟಕ ರಾಜ್ಯ ಪಾನೀಯ ನಿಗಮದ ಡಿಪೋ ಆವರಣದ ಹೊರಭಾಗದ ಇಂಗು ಗುಂಡಿಯಲ್ಲಿ ಶುಕ್ರವಾರ ನಾಶಪಡಿಸಲಾಯಿತು .  ಅವಧಿ ಮೀರಿದ ಅಂದಾಜು 7.01 ಲಕ್ಷ ರೂ . ಮೌಲ್ಯದ 47 ಪೆಟ್ಟಿಗೆ ಹಾಗೂ 67 ಮದ್ಯದ ಬಾಟಲಿಗಳನ್ನು ನಾಶಪಡಿಸಲಾಯಿತು . ಈ ಸಂದರ್ಭದಲ್ಲಿ ಅಬಕಾರಿ ವಿಭಾಗದ …

Read More »

ಬೈಕ್ ಮೇಲಿಂದ ಸ್ಕೀಡ್ ಆಗಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ನಗರದ ಗಬ್ಬೂರು ಬೈಪಾಸ್ ಬಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಬೈಕ್ ಮೇಲಿಂದ ಸ್ಕೀಡ್ ಆಗಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ದಾಖಲಾಗಿದ್ದರೂ, ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಸಾವಿಗೀಡಾಗಿದ್ದಾರೆ. ಹುಬ್ಬಳ್ಳಿಯ CAR ಹೆಡ್ ಕ್ವಾಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಿರಣ ಪಾಟೀಲ ಎಂಬ ಪೊಲೀಸ್, ಅದರಗುಂಚಿಯಿಂದ ಹುಬ್ಬಳ್ಳಿಗೆ ಕರ್ತವ್ಯಕ್ಕೆ ಹಾಜರಾಗುವ ವೇಳೆಯಲ್ಲಿ ಬೈಕ್ ಸ್ಕೀಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ …

Read More »

ಎಂಇಎಸ್ ಗೂಂಡಾಗಳು ಡಿಕೆಶಿ ಸ್ನೇಹಿತರು: ಈಶ್ವರಪ್ಪ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿ, ತೊಂದರೆ ಕೊಡಲು ಪ್ರಯತ್ನಿಸಿದ್ದರೋ ಅಂತಹ 25ರಿಂದ 30 ಜನರನ್ನು ಸರ್ಕಾರ ಬಂಧನ ಮಾಡಿದೆ. ಯಾವ ಕಾರಣಕ್ಕೂ ಇಂತವರನ್ನು ಬಿಡಲು ಸಾಧ್ಯವಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಶನಿವಾರ ಗದಗನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಈಶ್ವರಪ್ಪ ಕನ್ನಡ ಧ್ವಜ ಸುಟ್ಟಿರುವ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಪುಂಡರ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೇಳಿದ್ದೇವೆ. ಯಾವುದೇ ಕಾರಣಕ್ಕೂ …

Read More »

ಎಂಇಎಸ್ ಪುಂಡರ ವಿರುದ್ಧ ಸಿಡಿದೆದ್ದ ಕನ್ನಡಿಗರು

ಬೆಳಗಾವಿ: ಎಂಇಎಸ್ ಪುಂಡರ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಆನಗೋಳ ಚಲೋ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದಾರೆ. ಬೆಳಗಾವಿಯಲ್ಲಿ ನಿಷೇಧಾಜ್ಞೆ ನಡುವೆಯೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸುತ್ತಿದ್ದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

Read More »

ಕೇಂದ್ರ ಸರ್ಕಾರದಿಂದ ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿಯಲ್ಲಿ ಸಿಗಲಿದೆ 5000 ರೂಗಳ ಉಚಿತ ಓವರ್‌ಡ್ರಾಫ್ಟ್ ಸೌಲಭ್ಯ!

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರಿಗಾಗಿ ಹೊಸ ಸೇವೆಗಳನ್ನು ಪ್ರಾರಂಭಿಸಲು ಹೊರಟಿದೆ. ಹೌದು, ಇದು ಓವರ್‌ಡ್ರಾಫ್ಟ್ ಸೌಲಭ್ಯ ನೀಡಲು ಮುಂದಾಗಿದೆ. ಅಮೃತ ಮಹೋತ್ಸವದ ಆಜಾದಿಯ ಅಂಗವಾಗಿ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನಾಗೇಂದ್ರ ನಾಥ್ ಸಿನ್ಹಾ ಅವರು ರೂ.ಗಳ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡುವ ಬಗ್ಗೆ ಘೋಷಣೆ ಮಾಡಿದ್ದಾರೆ.   2019-20 ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಮಾಡಿದ ಘೋಷಣೆಯ ಪ್ರಕಾರ ರೂ.ಗಳ ಓವರ್‌ಡ್ರಾಫ್ಟ್ …

Read More »

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ : ಕನ್ನಡಿಗರ ವಿರುದ್ಧವೇ ಆರೋಪ ಮಾಡಿದ `ಮಹಾ’ ಸಿಎಂ ಉದ್ಧವ್ ಠಾಕ್ರೆ!

ಬೆಳಗಾವಿ : ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ನಡುವೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕನ್ನಡಿಗರ ವಿರುದ್ಧವೇ ಆರೋಪ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಉದ್ಧವ್ ಠಾಕ್ರೆ, ಕರ್ನಾಟಕದ ಮರಾಠಿ ಜನರ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವ ಮೂಲಕ ಹಿಂದೂ, ವಿಕೃತ ಮನೋಭಾವವನ್ನು ಪ್ರಧಾನಿಯೇ ಪರಿಶೀಲಿಸಬೇಕು ಮತ್ತು ಸಂಬಂಧಪಟ್ಟವರ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಲ್ಲಿನ …

Read More »