ಸೊರಬ: ತಾಲೂಕಿನ ಎನ್. ದೊಡ್ಡೇರಿ ಗ್ರಾಮದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯನ್ನು ಗುರುವಾರ ತಡರಾತ್ರಿ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಎನ್. ದೊಡ್ಡೇರಿ ಗ್ರಾಮದ ಹನುಮಂತಪ್ಪ ಎಂಬುವವರನ್ನು ರಕ್ಷಿಸಲಾಗಿದೆ. ಗುರುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಬಹಿರ್ದೆಸೆಗೆ ತೆರಳಿದ್ದ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಹನುಮಂತಪ್ಪ ಅವರನ್ನು ರಕ್ಷಿಸಿಲಾಗಿದ್ದು, ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ …
Read More »ಮುಸ್ಲಿಂ ಯುವತಿ ಜೊತೆ ಪ್ರೀತಿ.. ಈಗ ಮತ್ತೊಬ್ಬ ಯುವಕನನ್ನು ಹತ್ಯೆ ಮಾಡಿದ ಯುವತಿ ಸಂಬಂಧಿಕರು
ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಹಿಂದೂ ಯುವಕನ್ನ ಬರ್ಬರವಾಗಿ ಕೊಚ್ಚಿಕೊಂದ ಘಟನೆ ಇತ್ತೀಚೆಗೆ ಹೈದ್ರಾಬಾದ್ನಲ್ಲಿ ನಡೆದಿತ್ತು. ಈ ಕ್ರೂರ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ. ಏನಿದು ಪ್ರಕರಣ..? ಮುಸ್ಲಿಂ ಯುವತಿಯನ್ನ ಪ್ರೀತಿ ಮಾಡಿದ್ದಕ್ಕೆ ಆಕ್ರೋಶಗೊಂಡ ಹುಡುಗಿಯ ಸಂಬಂಧಿಕರು 22 ವರ್ಷದ ಮಿಥುನ್ ಎಂಬ ಯುವಕನನ್ನ ಹೊಡೆದು ಸಾಯಿಸಿದ್ದಾರೆ. ಯುವಕ ಮಿಥುನ್, ಸುಮೈಯಾ (Sumaiya) ಎಂಬ ಮುಸ್ಲಿಂ ಯುವತಿಯನ್ನ ಪ್ರೀತಿಸುತ್ತಿದ್ದ. …
Read More »ಶಿವಣ್ಣ ಪುತ್ರಿ ನಿವೇದಿತಾ ರಾಜ್‌ಕುಮಾರ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ
ವರನಟ, ಕನ್ನಡ ಸಿನಿ ಪ್ರಿಯರ ಆರಾಧ್ಯದೈವ ಡಾ.ರಾಜ್‌ಕುಮಾರ್ ಕುಟುಂಬದಿಂದ ಮತ್ತೊಬ್ಬ ಸದಸ್ಯರು ಸಿನಿಮಾ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.ನಟ ಡಾ.ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ರಾಜ್‌ಕುಮಾರ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದು, ಹೊಸ ಪ್ರತಿಭೆಗಳಿಗೆ ಸಾಥ್ ಕೊಟ್ಟಿದ್ದಾರೆ. ಕನ್ನಡದಲ್ಲಿ ಕಮರ್ಷಿಯಲ್ ಸಿನಿಮಾಗಳ ನಡುವೆ ಮೌಲ್ಯಾಧಾರಿತ ಚಿತ್ರಗಳು ಕೂಡ ಸದ್ದು ಮಾಡುತ್ತಿವೆ. ಇದರ ಜೊತೆಗೆ ಕಮರ್ಷಿಯಲ್ ಕಥೆ ಹೇಳುವಂಥ ವೆಬ್ ಸೀರಿಸ್‌ಗಳಿಗೆ ಯಾವುದೇ ಕೊರತೆ ಇಲ್ಲ ಅನ್ನೋದನ್ನ ತೋರಿಸೋದಕ್ಕೆ ಎಂಟ್ರಿಕೊಡುತ್ತಿದೆ ‘ಹನಿಮೂನ್’ …
Read More »ಈ ಸಂಖ್ಯೆಗೆ ಕರೆ ಮಾಡಿದ್ರೆ 72 ಗಂಟೆಯೊಳಗೆ ಮನೆ ಬಾಗಿಲಿಗೆ ಬರಲಿದೆ ಪಿಂಚಣಿ!
ಬೆಂಗಳೂರು : ಪಿಂಚಣಿದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಪಿಂಚಣಿ ಮಂಜೂರಾತಿಗೆ ‘ಹಲೋ ಕಂದಾಯ ಸಚಿವರೇ’ ಎಂಬ ಸಹಾಯವಾಣಿ ಆರಂಭಿಸಿದ್ದು, ಅರ್ಜಿ ಸಲ್ಲಿಸಿದ 72 ಗಂಟೆ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ತಲುಪಿಸುವ ಯೋಜನೆಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಇಂದು ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಹಲೋ ಕಂದಾಯ ಸಚಿವರೇ ಹೆಸರಿನ ಸಹಾಯವಾಣಿ ಸೇವೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ ಸಂಬಂಧ ಮಧ್ಯಾಹ್ನ ವಿಧಾನಸೌಧದ …
Read More »ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ 2023ರ ವಿಧಾನಸಭೆ ಚುನಾವಣೆಯ ಮಿಷನ್ 123 ಯುದ್ಧ ಆರಂಭ:H.D.K.
ಬೆಂಗಳೂರು: ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ 2023ರ ವಿಧಾನಸಭೆ ಚುನಾವಣೆಯ ಮಿಷನ್ 123 ಯುದ್ಧ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ಧಾರೆ. ನೆಲಮಂಗಲ ಸಮೀಪದಲ್ಲಿ ನಾಳೆ ಹಮ್ಮಿಕೊಂಡಿರುವ ಜಲಧಾರೆ ಕಾರ್ಯಕ್ರಮದ ಪೂರ್ವ ಸಿದ್ದತೆ ವೀಕ್ಷಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು’ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವಿಧ ವಿಚಾರಗಳ ಚರ್ಚೆ ಜೊತೆಗೆ ಹಲವು ನೀರಾವರಿ ವಿಚಾರಗಳಿಗೆ ಸಂಬಂಧಿಸಿದ ಕೈಪಿಡಿಯನ್ನು ಬಿಡುಗಡೆ ಮಾಡುತ್ತೇವೆ.ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ತಮ್ಮ ಪಕ್ಷ ಬಂದರೆ ಕಳೆದ …
Read More »ಬೆಂಗಳೂರಿನಲ್ಲಿ ಋಷಿಕುಮಾರ ಸ್ವಾಮಿ ಮುಖಕ್ಕೆ ಮಸಿ ಬಳಿದು ಪರಾರಿ
ಬೆಂಗಳೂರು : ಋಷಿಕುಮಾರ ಸ್ವಾಮಿ ಮುಖಕ್ಕೆ ಕಿಡಿಗೇಡಿಗಳು ಮಸಿ ಬಳಿದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಗುರುವಾರ ಸಂಜೆ 6.30 ರ ಸುಮಾರಿಗೆ ನಡೆದಿದೆ. ಬೆಂಗಳೂರಿನ ಮಲ್ಲೇಶ್ವರದ ಗಂಗಮ್ಮನ ದೇವಾಲಯಕ್ಕೆ ಬಂದಿದ್ದ ಋಷಿಕುಮಾರಸ್ವಾಮೀಜಿಗೆ ಕಿಡಿಗೇಡಿಗಲು ಬಸಿ ಬಳಿದು ಪರಾರಿಯಾಗಿದ್ದಾರೆ. ನಾಡಪ್ರಭು ಕೆಂಪೇಗೌಡ, ಕುವೆಂಪು ವಿರುದ್ಧ ಹೇಳಿಕೆ ನೀಡಿದ್ದೀರಿ ಎಂದು ಆರೋಪಿಸಿ ಸ್ವಾಮೀಜಿ ಮುಖಕ್ಕೆ ಮಸಿ ಬಳಿದಿದ್ದಾರೆ. ಘಟನೆ ಸಂಬಂಧ ಋಷಿಕುಮಾರ ಸ್ವಾಮೀಜಿ ಇಂದು ಮಲ್ಲೇಶ್ವರ ಠಾಣೆಗೆ ದೂರು ನೀಡಲಿದ್ದಾರೆ.
Read More »ತಂದೆ ಮೊಬೈಲ್ ಗೆ ಕರೆನ್ಸಿ ಹಾಕಲಿಲ್ಲವೆಂದು ಗೊರಪ್ಪನ ವೇಷ ತೊಟ್ಟು ತ್ರಿಶೂಲವನ್ನ ಮರ್ಮಾಂಗಕ್ಕೇ ಸಿಕ್ಕಿಸಿಕೊಂಡ ಯುವಕ
ಹುಬ್ಬಳ್ಳಿ; ತಂದೆ ಮೊಬೈಲ್ ಗೆ ಕರೆನ್ಸಿ ಹಾಕಲಿಲ್ಲವೆಂದು ಗೊರಪ್ಪನ ವೇಷ ತೊಟ್ಟು ತ್ರಿಶೂಲವನ್ನ ತರಡಿನಲ್ಲಿ ಸಿಕ್ಕಿಸಿಕೊಂಡ ಯುವಕ ನೋರ್ವ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಪ್ರಕರಣವೊಂದು ಧಾರವಾಡ ತಾಲೂಕಿನ ನವಲೂರ ಗ್ರಾಮದಲ್ಲಿ ನಡೆದಿದೆ. ನವಲೂರಿನ 20 ವರ್ಷದ ಮೈಲಾರಿ ತಿಪ್ಪಣ್ಣವರ ಎಂಬಾತನೇ ತ್ರಿಶೂಲವನ್ನ ತರಡಿನಲ್ಲಿ ಸಿಕ್ಕಿಸಿಕೊಂಡು ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆ ಪಡೆಯುತ್ತಿರುವ ಮೈಲಾರಿ ಮೊಬೈಲ್ ಕರೆನ್ಸಿ ಹಾಕುವಂತೆ ತಂದೆಗೆ ಮೈಲಾರಿ ಕೇಳಿಕೊಂಡನಂತೆ. ಆದರೆ, ತಂದೆ ಇದಕ್ಕೆ ಒಪ್ಪಿಕೊಂಡಿಲ್ಲ. …
Read More »ಬೆಳಗಾವಿ: ಜಿಲ್ಲೆಯಾದ್ಯಂತ ಮಾದರಿ ನೀತಿಸಂಹಿತೆ ಜಾರಿ: ನಿತೇಶ್ ಪಾಟೀಲ
ಬೆಳಗಾವಿ: ‘ವಿಧಾನಪರಿಷತ್ತಿನ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರಗಳ ಚುನಾವಣೆ ಘೋಷಣೆಯಾಗಿದ್ದು, ಗುರುವಾರದಿಂದಲೇ ಮಾದರಿ ನೀತಿಸಂಹಿತೆ ಜಾರಿಗೆ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳೂ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಇಲ್ಲಿ ಗುರುವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಸರ್ಕಾರದ ಹೊಸ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸುವಂತಿಲ್ಲ. ಪ್ರಚಾರ ಕೂಡ ಕೋವಿಡ್ ಮಾರ್ಗಸೂಚಿ ಪ್ರಕಾರ ನಡೆಸಬೇಕಾಗುತ್ತದೆ. ಈ ಬಗ್ಗೆ ಚುನಾವಣಾ ಆಯೋಗ …
Read More »ಜಿ.ಪಂ., ತಾ.ಪಂ. ಕ್ಷೇತ್ರಗಳ ನಿಗದಿಗೆ ನಿರ್ಣಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ: ‘ಜಿಲ್ಲೆಯ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಗಳ ಸದಸ್ಯರ ಕ್ಷೇತ್ರಗಳ ಸಂಖ್ಯೆಯನ್ನು ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗವು ನಿಗದಿಪಡಿಸಲು ನಿರ್ಣಯಿಸಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ‘2011ರ ಜನಗಣತಿಯಂತೆ ಆಯಾ ತಾಲ್ಲೂಕುಗಳ ಗ್ರಾಮೀಣ ಜನಸಂಖ್ಯೆ ಆಧರಿಸಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ ಸದಸ್ಯರ ಕ್ಷೇತ್ರಗಳ ಸಂಖ್ಯೆ ನಿಗದಿಪಡಿಸಲಾಗಿದೆ. ಈ ಪ್ರಕಾರ ಆಯೋಗದಿಂದ ಪ್ರತಿ 40ಸಾವಿರ ಜನಸಂಖ್ಯೆಗೆ ಹಾಗೂ ಅದರ ಭಾಗಕ್ಕೆ ಒಬ್ಬರು ಸದಸ್ಯರಂತೆ ಬೆಳಗಾವಿ ಜಿಲ್ಲೆಯ …
Read More »‘ಯಾವುದೇ ಕಾಯಕವನ್ನು ನಿಷ್ಠೆಯಿಂದ ಮಾಡಿದರೆ ನಿಶ್ಚಿತವಾಗಿ ಸಫಲತೆ ಸಿಗುತ್ತದೆ’ ಎಂದ, ನಾಗನೂರ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ
ಬೆಳಗಾವಿ: ‘ಯಾವುದೇ ಕಾಯಕವನ್ನು ನಿಷ್ಠೆಯಿಂದ ಮಾಡಿದರೆ ನಿಶ್ಚಿತವಾಗಿ ಸಫಲತೆ ಸಿಗುತ್ತದೆ’ ಎಂದು ನಾಗನೂರ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು. ಇಲ್ಲಿನ ಶಿವಬಸವ ನಗರದ ಡಾ.ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಅಂಚೆ ಇಲಾಖೆ ಬೆಳಗಾವಿ ವಿಭಾಗ ಗುರುವಾರ ಏರ್ಪಡಿಸಿದ್ದ ಸಾಧಕರಿಗೆ ಕರ್ಮಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಕಾಯಕವೇ ಕೈಲಾಸವೆಂದು ಶರಣರು ಬಣ್ಣಿಸಿದ್ದಾರೆ. ಆದರೆ, ನಮ್ಮ ಕಾಯಕದಲ್ಲಿ ಯಾವುದೇ ಅಪೇಕ್ಷೆ ಇರಬಾರದು. ಕರ್ಮಯೋಗಿಗಳು ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದ ಅವರು, …
Read More »
Laxmi News 24×7