ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ ಅವರೇ ಅನಿವಾರ್ಯ ಅಂತ ವರಿಷ್ಠರಿಗೆ ಮನವರಿಕೆಯಾಗಿದೆ. ಅವರ ಬೇಡಿಕೆಯಂತೆ ಪುತ್ರನಿಗೆ ಸೂಕ್ತ ಸ್ಥಾನಮಾನ ನೀಡಲು ಹೈಕಮಾಂಡ್ ಒಲವು ತೋರಿದೆ. ಈ ಮೂಲಕ ಹಲವು ದಶಕಗಳಿಂದ ಬಿಎಸ್‌ವೈ ಹಿಡಿತದಲ್ಲಿದ್ದು ಕೈ ತಪ್ಪಿ ಹೋಗಲಿದೆ ಎನ್ನುವಷ್ಟರಲ್ಲೇ ಮತ್ತೆ ರಾಜ್ಯ ಬಿಜೆಪಿ ಅವರ ತೆಕ್ಕೆಗೆ ಜಾರತೊಡಗಿದೆ. ಹೌದು. ವಿಜಯೇಂದ್ರ ಅವರ ಹೆಸರನ್ನು ರಾಜ್ಯ ಕೋರ್ ಕಮಿಟಿ ಪರಿಷತ್‌ಗೆ ಶಿಫಾರಸ್ಸು ಮಾಡುವುದರೊಂದಿಗೆ ಪಕ್ಷ ಯಡಿಯೂರಪ್ಪ ಅವರಿಗೆ ಶರಣಾಗಿದೆ. ವರಿಷ್ಠರು ಒಲವು ತೋರಿದ …
Read More »ಭಾರೀ ಮಳೆಗೆ ಸಿಲಿಕಾನ್ ಸಿಟಿ ನಲುಗಿಹೋಗಿದೆ. ಬಿಬಿಎಂಪಿಯ ಕೆಲಸಕ್ಕೆ ಸಾರ್ವಜನಿಕರ ಆಕ್ರೋಶ
ಬೆಂಗಳೂರು: ಭಾರೀ ಮಳೆಗೆ ಸಿಲಿಕಾನ್ ಸಿಟಿ ನಲುಗಿಹೋಗಿದೆ. ಇದೇನು ಕೆರೆಯೋ ಎನ್ನುವಂತೆ ರಸ್ತೆಗಳು ಭಾಸವಾಗುತ್ತಿವೆ. ರಾಜ್‌ಕುಮಾರ್ ರಸ್ತೆಯಲ್ಲಿ ಮಂಡಿಯುದ್ದ ನೀರು ನಿಂತಿದ್ದು, ವಾಹನ ಸವಾರರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ದ್ವಿಚಕ್ರ ವಾಹನಗಳು ಕೆಟ್ಟು ನಿಂತಿವೆ. ಸಾರ್ವಜನಿಕರು ಬಿಬಿಎಂಪಿಯ ಕೆಲಸಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಲ್ಲೇಶ್ವರಂ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಮಧ್ಯಾಹ್ನ ಕೂಡ ಧಾರಾಕಾರ …
Read More »ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ.: C.M.
ಬೆಂಗಳೂರು: ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ. ರಸ್ತೆ, ಗಣಿಗಾರಿಕೆ, ಸೇತುವೆ ನಿರ್ಮಾಣ ಸೇರಿದಂತೆ ಎಲ್ಲಾ ವಲಯಗಳಲ್ಲಿ ಮೂಲಸೌಲಭ್ಯದಿಂದ ದೊಡ್ಡ ಬದಲಾವಣೆ ತರಬಹುದಾಗಿದ್ದು, ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ಯಂತ್ರೋಪಕರಣಗಳು ಬಂದಿವೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಿಎಂ ಬೊಮ್ಮಾಯಿ ಬೆಂಗಳೂರಿನ ಬಿಐಇಸಿಯಲ್ಲಿ ಮಂಗಳವಾರ ಆರಂಭವಾದ ಕಟ್ಟಡ ನಿರ್ಮಾಣ ಸಲಕರಣೆಗಳ ಎಕ್ಸ್ಕಾನ್ 2022 ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಕಂಪನಿಗಳ ನಾವೀನ್ಯತೆ, ಹೊಸ ಚಿಂತನೆಗಳ …
Read More »ವಿವಿಧೆಡೆ ಗುಡುಗು ಸಹಿತ ಭಾರೀ ಮಳೆ 14 ಕುರಿಗಳು ಸಾವು
ವಿಜಯಪುರ : ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಇದೇ ವೇಳೆ ಸಿಡಿಲು ಬಡಿದು 14 ಕುರಿಗಳು ಮೃತಪಟ್ಟಿವೆ. ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದ ಹೊರ ಭಾಗದಲ್ಲಿ ಕುರಿಗಳನ್ನು ಮೇಯಿಸುವಾಗ ಈ ದುರ್ಘಟನೆ ನಡೆದಿದೆ. ಇವು ವಿಜಯಪುರ ತಾಲೂಕಿನ ಅಲಿಯಾ ಬಾದ ಗ್ರಾಮದ ದೊಂಡಿಬಾ ಸಂಡಗೆ ಎಂಬವರಿಗೆ ಸೇರಿದ ಕುರಿಗಳು. ಕುರಿ ಮೇಯಿಸಲು ಮಸೂತಿ ಗ್ರಾಮದ ಬಳಿ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕುರಿಗಾಹಿ …
Read More »ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶೀಘ್ರ 8650 ಕೋಟಿ ರೂ. ಬಿಡುಗಡೆ: ಬೊಮ್ಮಾಯಿ
ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಸಜ್ಜುಗೊಳಿಸುವ ಜತೆಗೆ ಸರ್ಕಾರದ ವರ್ಚಸ್ಸು ವೃದ್ಧಿಗೆ ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಎಲ್ಲ 224 ಕ್ಷೇತ್ರಗಳ ಅಭಿವೃದ್ಧಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇದೆ ಎಂಬ ಭಾವನೆಯೇ ಕಾಣುತ್ತಿಲ್ಲವೆಂದು ಬಿಜೆಪಿ ವರಿಷ್ಠರು, ಸಂಘ ಪರಿವಾರದ ಮುಖಂಡರೇ ಆಂತರಿಕವಾಗಿ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳನ್ನು ಬದಲಾಯಿಸುವ ಉದ್ದೇಶದಿಂದ ಬೊಮ್ಮಾಯಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಆಡಳಿತ ಪಕ್ಷದ ಶಾಸಕರು ಈ ಬಗ್ಗೆ …
Read More »ಪ್ರಧಾನಿಯಾಗಿ ಮೋದಿಯ ದಾಖಲೆಗಳು ಅವರು ʼಹಿಂದೂ ವಿರೋಧಿʼ ಎಂದು ಸೂಚಿಸುತ್ತದೆ: ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ: ಬಿಜೆಪಿ ಪಕ್ಷದ ಹಿರಿಯ ನಾಯಕನಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಸರಕಾರದ ಕೆಲ ಧೋರಣೆಗಳನ್ನು ಕಟುವಾಗಿ ಟೀಕಿಸುವ ಸುಬ್ರಮಣಿಯನ್ ಸ್ವಾಮಿ ಇದೀಗ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಯ ಆಡಳಿತ ವೈಖರಿಗಳಿ ಹಿಂದೂ ವಿರೋಧಿಯಾಗಿವೆ ಎಂದು ಹೇಳಿಕೆ ನೀಡಿದ್ದಾರೆ. ಟ್ವಿಟರ್ ನಲ್ಲಿ “ಬಿಜೆಪಿ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಎತ್ತಿ ಹಿಡಿಯುವುದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಸಾಧನೆಗಳು ಹಿಂದೂ ವಿರೋಧಿಯಾಗಿದೆ. ಇದಕ್ಕೆ ಉದಾಹರಣೆಗಳೆಂದರೆ, ರಾಮಮಂದಿರ ಮೇಲಿನ ಸುಪ್ರೀಂ …
Read More »ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಮೇ 17: ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಾತೃ ವೃಂದದಡಿ ವರದಿಗಾರರು-2, ಕಂಪ್ಯೂಟರ್ ಆಪರೇಟರ್-4, ಕಿರಿಯ ಸಹಾಯಕ-10, ಬೆರಳಚ್ಚುಗಾರರು-1, ದಲಾಯತ್-23 ಹೀಗೆ ಒಟ್ಟು 43 ಹುದ್ದೆಗಳು ಹಾಗೂ ಸ್ಥಳೀಯ ವೃಂದದಡಿ ವರದಿಗಾರರು-3, ಶೀಘ್ರಲಿಫಿಗಾರರು-2, ಕಿರಿಯ ಸಹಾಯಕರು-3, ಸ್ವಾಗತಕಾರರು-1, ಬೆರಳಚ್ಚುಗಾರರು-3, ಬಡಗಿ-1, ವಾಹನಚಾಲಕರು-8, ದಲಾಯತ್-11, ಸ್ವೀಪರ್-2 ಹೀಗೆ ಒಟ್ಟು 34 …
Read More »ಹೊಸ ಮಾದರಿಯಲ್ಲಿ ಭಾವಿ ಪತಿಗಾಗಿ ಹುಡುಕಾಟ ಫಲಕವನ್ನು ಹಿಡಿದು ಬೀದಿ ಬೀದಿಯಲ್ಲಿ ಮಹಿಳೆ ಅಲೆದಾಡುತ್ತಿದ್ದಾಳೆ.
ದುಬೈ: ಸುಡಾನ್ ಮೂಲದ ಯುವತಿಯೊಬ್ಬಳು ಹೊಸ ಮಾದರಿಯಲ್ಲಿ ಭಾವಿ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ. ವರ ಬೇಕು ಎಂಬ ಭಿತ್ತಿ ಫಲಕವನ್ನು ಹಿಡಿದು ಸುಡಾನ್ನ ರಾಜಧಾನಿ ಖಾರ್ಟೂಮ್ನ ಬೀದಿ ಬೀದಿಯಲ್ಲಿ ಮಹಿಳೆ ಅಲೆದಾಡುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಅದರಲ್ಲಿ ಯುವತಿ ಟ್ರಾಫಿಕ್ ಸಿಗ್ನಲ್ ಬಳಿ ಭಿತ್ತಿ ಫಲಕ ಹಿಡಿದು ನಿಂತಿದ್ದಾಳೆ. ನನಗೆ ವರ ಬೇಕಿದ್ದಾನೆ. ನಾನು ಮದುವೆಯಾಗಬೇಕಿದೆ. ನಾನು ಬಹುಪತ್ನಿತ್ವ ಸ್ವೀಕರಿಸಲೂ ಸಿದ್ಧಳಾಗಿದ್ದೇನೆ ಎಂಬ ಬರಹ ಯುವತಿ ಹಿಡಿದಿರುವ ಭಿತ್ತಿ …
Read More »ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಮನೆ ಜವಾಬ್ದಾರಿಯಿಂದ ಹಿಡಿದು ದೇಶವನ್ನು ಮುನ್ನೆಡೆಸುವ ಮಹತ್ತರ ಜವಾಬ್ದಾರಿವರೆಗೂ ಮಹಿಳೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುರುಷರಿಗೆಂದೇ ಮೀಸಲಾಗಿರುವ ವೃತ್ತಿಗಳಲ್ಲಿಯೂ ಈಗ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಈ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲವೆಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನವೇ ತೆಲಂಗಾಣದ ಈ 21 ವರ್ಷದ ಯುವತಿ. ತೆಲಂಗಾಣದ ಈ ಯುವತಿ ಯಶಸ್ವಿಯಾಗಿ ಲೈಟ್ ಕಂಬ ಹತ್ತುವ …
Read More »ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಮಾಜಿ ಮುಖ್ಯಮಂತ್ರಿ B.S.Y.ಭೇಟಿ
ಬೆಂಗಳೂರು, ಮೇ 17; ಚಾಮರಾಜಪೇಟೆ ಶಾಸಕ, ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದರು. ಮಂಗಳವಾರಯಡಿಯೂರಪ್ಪನಿವಾಸಕ್ಕೆ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಈ ಸಂದರ್ಭದಲ್ಲಿ ಜೊತೆಗಿದ್ದರು. ಪುಲಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪುತ್ರಿಯ ವಿವಾಹದ ಆಮಂತ್ರಣ ನೀಡಲು ಜಮೀರ್ ಅಹ್ಮದ್ ಯಡಿಯೂರಪ್ಪ ಭೇಟಿ ಮಾಡಿದ್ದರು. ಮಂಗಳವಾರ ಬೆಳಗ್ಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ …
Read More »
Laxmi News 24×7