Breaking News

ಜನತಾ ತೀರ್ಪು: ಸ್ಥಳೀಯ ಸಂಸ್ಥೆಗಳ ಮತ ಎಣಿಕೆಗೆ ಕ್ಷಣಗಣನೆ -ಅಹಿತಕರ ಘಟನೆ ನಡೆಯದಂತೆ ಭಿಗಿ ಭದ್ರತೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದೆ. 5 ನಗರಸಭೆ, 19 ಪುರಸಭೆ & 34 ಪಟ್ಟಣ ಪಂಚಾಯತ್​​​ಗಳ ಮತ ಎಣಿಕೆಗೆ ಆಯಾ ಜಿಲ್ಲಾಡಳಿತಗಳು ಸಿದ್ಧತೆ ಮಾಡಿಕೊಂಡಿವೆ.   ಇಂದು ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಎಲ್ಲಾ ಮತ ಎಣಿಕೆ ಕೇಂದ್ರಗಳ ಸುತ್ತಾ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.

Read More »

ಎಚ್ಚರಿಕೆ ‌ನೀಡಿದ ಅರುಣ್ ಸಿಂಗ್; ಓಡಿದ ರೇಣುಕಾಚಾರ್ಯ

ಹುಬ್ಬಳ್ಳಿ: ಶಾಸಕ ರೇಣುಕಾಚಾರ್ಯ ಇಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಕ್ಷ್ಮವಾಗಿ ಎಚ್ಚರಿಕೆ ‌ನೀಡಿದರು. ಕ್ಯಾ ಚಲ್ ರಹಾ ಹೈ.. ರೇಣುಕಾಚಾರಿ ಎಂದು ಅರುಣ್ ಸಿಂಗ್ ಎನ್ನುತ್ತಿದ್ದಂತೆ ರೇಣುಕಾಚಾರ್ಯ ಮಾತನಾಡುವುದನ್ನು ಬಿಟ್ಟು ಅವರ ಹಿಂದೆ ಓಡಿ‌ಹೋದರು. ಅವರು ಹೋದ ಬಳಿಕ‌ ಮತ್ತೆ ‌ಮಾಧ್ಯಮದವರ ಜೊತೆ ಮಾತನಾಡಿದರು.

Read More »

ಮುಂದಿನ ಅಸೆಂಬ್ಲಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಹಂಸಲೇಖ?

ಕೃಷ್ಣೈಕ್ಯರಾಗಿರುವ ಉಡುಪಿ ಪೇಜಾವರ ಮಠದ ಶ್ರೀಗಳ ಬಗ್ಗೆ ಹೇಳಿಕೆಯನ್ನು ನೀಡಿ, ಭಾರೀ ವಿವಾದವನ್ನೇ ಎದುರು ಹಾಕಿಕೊಂಡಿರುವ ಗಂಗರಾಜು ಆಲಿಯಾಸ್ ಹಂಸಲೇಖ ಅವರ ಬಗ್ಗೆ ಹೊಸ ಸುದ್ದಿಯೊಂದು ಗಿರಿಗಿಟ್ಲೆಯಾಡುತ್ತಿದೆ. ಅದು ರಾಜಕೀಯಕ್ಕೆ ಸಂಬಂಧ ಪಟ್ಟದ್ದು.. ತಮ್ಮ ಸೂಪರ್ ಹಿಟ್ ಸಂಗೀತ ಸಂಯೋಜನೆಯ ಮೂಲಕ ಚಿರಪಚಿತರಾಗಿರುವ ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಯ ನಂತರ ಮನೆಮಾತಾದರು. ಈಗ ಹರಿದಾಡುತ್ತಿರುವ ಸುದ್ದಿಯನ್ನು ಅವಲೋಕಿಸುವುದಾದರೆ, ರಾಜಕೀಯ ಪ್ರವೇಶಕ್ಕೆ ಮುನ್ನ ಇಂತಹದೊಂದು ಪೂರ್ವಭಾವಿ ಕಾಂಟ್ರವರ್ಸಿಯ …

Read More »

ನೈಟ್​ ಕರ್ಫ್ಯೂ ವೇಳೆ ಅನಗತ್ಯ ಓಡಾಟ: ಮೊದಲ ದಿನವೇ 39 ವಾಹನಗಳು ಸೀಜ್​

ಬೆಂಗಳೂರು: ರಾಜ್ಯದಲ್ಲಿ ನಿನ್ನೆಯಿಂದ ನೈಟ್​ ಕರ್ಫ್ಯೂ ಜಾರಿಯಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ನೈಟ್​ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಟನ ನಡೆಸಿದ 39 ವಾಹನಗಳನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ಮೊದಲು ವಾರ್ನಿಂಗ್ ನೀಡಿದರೂ ಮತ್ತೆ ರಸ್ತೆಗಿಳಿದವರ ಮೇಲೆ ಪೊಲೀಸರು ಗರಂ ಆಗಿದ್ದು, ಪಶ್ಚಿಮ ವಿಭಾಗದಲ್ಲಿ 37 ದ್ವಿಚಕ್ರ ವಾಹನಗಳು, 2 ಕಾರುಗಳನ್ನು ಜಪ್ತಿ ಮಾಡಿದ್ದಾರೆ.   ಇನ್ನು ರಾಜ್ಯದಲ್ಲಿ ನೈಟ್​ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಇಂದಿನಿಂದ ಜಕ್ಕೂರು, ಕೆಆರ್ ಮಾರ್ಕೆಟ್ ಸೇರಿದಂತೆ ನಗರದ …

Read More »

BJP ಕಾರ್ಯಕಾರಿಣಿಯಲ್ಲಿ ಬೆಲ್ಲದ್ ತಲೆದಂಡ:

ಹುಬ್ಬಳ್ಳಿ – ಹುಬ್ಬಳ್ಳಿಯಲ್ಲಿ ನಡೆಯುತ್ತಿರೋ ಬಿಜೆಪಿ ಕಾರ್ಯಕಾರಿಣಿ (BJP Executive Meeting) ಹಲವು ವಿಚಾರಗಳಿಂದಾಗಿ ಮಹತ್ವ ಪಡೆದುಕೊಂಡಿದೆ. ವಿಧಾನಸಭೆ ಉಪ ಚುನಾವಣೆ (By Election Results), ವಿಧಾನ ಪರಿಷತ್ ಫಲಿತಾಂಶದ (MLC Election Results) ನಂತರ ನಡೆಯುತ್ತಿರೋ ಕಾರ್ಯಕಾರಿಣಿಯಾಗಿರೋದರ ಜೊತೆಗೆ, ಮುಂಬರುವ ಚುನಾವಣೆಗಳ ಕಾರಣದಿಂದಾಗಿ ಮಹತ್ವದ್ದಾಗಿದೆ. ಕಾರ್ಯಕಾರಿಣಿಯಲ್ಲಿ ಬಿಸಿಯೇರಿದ ರಾಜಕೀಯ ಚರ್ಚೆಗಳೂ ನಡೆದಿದ್ದು, ಅರವಿಂದ್ ಬೆಲ್ಲದ್ (Aravind Bellad) ರೂಪದಲ್ಲಿ ಮೊದಲ ವಿಕೆಟ್ ಪತನಗೊಂಡಿದೆ. ಮೇಲ್ನೋಟಕ್ಕೆ ಅಶಿಸ್ತು ಪ್ರದರ್ಶಿಸಿರೋ ಜಾರಕಿಹೊಳಿ …

Read More »

ಡಿ.31ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ಫಿಕ್ಸ್ – ವಾಟಾಳ್ ನಾಗರಾಜ್

ಬೆಳಗಾವಿ: ಡಿಸೆಂಬರ್ 31ರಂದು ಕರ್ನಾಟಕ ಬಂದ್ ಈಗಾಗಲೇ ನಿಗದಿ ಪಡಿಸಲಾಗಿದೆ. ನಿಗದಿಯಂತೆ ಡಿಸೆಂಬರ್ 31ರಂದು ಕರ್ನಾಟಕ ಬಂದ್ ( Karnataka Bundh ) ನಡೆಸಲಾಗುತ್ತಿದೆ. ಕನ್ನಡಿಗರೆಲ್ಲರೂ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸುವಂತೆ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ( Vatal Nagaraj ) ಮನವಿ ಮಾಡಿದ್ದಾರೆ.   ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕರ್ನಾಟಕ ಬಂದ್ ನಿಗದಿಯಾಗಿ ಹೋಗಿದೆ. ಅದರಲ್ಲಿ ಬದಲಾವಣೆಯ ಮಾತೇ ಇಲ್ಲ. ಕರ್ನಾಟಕ …

Read More »

ಅಧಿಕಾರಿಗಳ ಎಡವಟ್ಟಿನಿಂದ ರಾಜ್ಯದತ್ತ ಧಾವಿಸಿ ಬರುತ್ತಿದೆ ‘ಮಹಾ’ ಜಲಾಶಯದ ನೀರು: ಹೈ ಅಲರ್ಟ್‌ ಘೋಷಣೆ

ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ಜಲಾಶಯ ಗೇಟ್ ರಿಪೇರಿ ವೇಳೆ ಅವಘಡ ಸಂಭವಿಸಿದ್ದು, ತಾಂತ್ರಿಕ ದೋಷದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿದುಬಂದಿದೆ. ಸುಮಾರು 18 ಅಡಿಗಳಷ್ಟು ಗೇಟ್ ಎತ್ತರಿಸಿ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದರು. ಈ ವೇಳೆ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿದೆ, ಅಧಿಕಾರಿಗಳ ಎಡವಟ್ಟಿನಿಂದ ನದಿ ತೀರದ ಜನರು ಕಂಗೆಟ್ಟು ಹೋಗಿದ್ದು, ಇಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ವೇದಗಂಗಾ ನದಿ ತೀರದ ಜನರು …

Read More »

ಯುವಕರ ಅಸಭ್ಯ ವರ್ತನೆ: ಸ್ಥಳದಲ್ಲಿ ಅಟ್ಟಾಡಿಸಿ ವಾರ್ನಿಂಗ್​ ಕೊಟ್ಟ ಸ್ಟಾರ್​ ಗಾಯಕಿ ಮಂಗಲಿ!

ಒಂಗೋಲ್: ರಾಬರ್ಟ್​ ಚಿತ್ರದ ತೆಲುಗು ವರ್ಷನ್​ ‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಎಲ್ಲೆಡೆ ಸಂಚಲನ ಮೂಡಿಸಿರುವ ತೆಲಂಗಾಣದ ಜಾನಪದ ಗಾಯಕಿ ಮಂಗಲಿ ಸಾಲು ಸಾಲು ಸಿನಿಮಾಗಳಲ್ಲಿ ಹಾಡುವ ಮೂಲಕ ತುಂಬಾ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಹಾಡಿದ್ದ ಪುಷ್ಪ ಚಿತ್ರದ ಕನ್ನಡ ವರ್ಷನ್​ ‘ಊ ಅಂತಿಯಾ ಮಾವ ಊಹು ಅಂತಿಯಾ’ ಕೂಡ ತುಂಬಾ ಸದ್ದು ಮಾಡಿದೆ. ಅಲ್ಲದೆ, ಏಕ್​ ಲವ್​ ಯಾ ಚಿತ್ರದ ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್​ ಇಟ್ಟೆ’ ಎಂಬ ಹಾಡು …

Read More »

ಡಿ. 31 ರ ಬದಲು ಬೇರೆ ದಿನ ಕರ್ನಾಟಕ ಬಂದ್..? ದಿನಾಂಕದಲ್ಲಿ ಬದಲಾವಣೆ ಸಾಧ್ಯತೆ

ಬೆಂಗಳೂರು: ಡಿಸೆಂಬರ್ 31 ರ ಕರ್ನಾಟಕ ಬಂದ್ ದಿನಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ. ದಿನಾಂಕವನ್ನು ಬದಲಾವಣೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಬಂದ್ ಗೆ ಬೆಂಬಲಿಸುವ ಕುರಿತಾಗಿ ನಾಳೆ ತೀರ್ಮಾನ ಕೈಗೊಳ್ಳಲಾಗುವುದು. ನನ್ನ ಅಭಿಪ್ರಾಯವನ್ನು ಪತ್ರದ ಮೂಲಕ ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾ.ರಾ. ಗೋವಿಂದು ಅವರಿಗೆ ಕಳುಹಿಸುತ್ತೇನೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಬಂದ್ ದಿನಾಂಕ …

Read More »

ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕ : ಗೈರಾದ ಶಿಕ್ಷಕರಿಗೆ ನೋಟಿಸ್

ಕುಷ್ಟಗಿ: ಶಿಕ್ಷಕರು ಸಮಯ ಪಾಲನೆ ಮಾಡದ ಹಿನ್ನೆಲೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಗೈರಾದ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಕುಷ್ಟಗಿ ಪಟ್ಟಣದ 3ನೇ ವಾರ್ಡ್ ನ ಗೌರಿ ನಗರ, ನೆರೆಬೆಂಚಿ, ಕುರಬನಾಳ ದಿಢೀರ್ ಭೇಟಿ ನೀಡಿ ಮಕ್ಕಳ ಹಾಜರಿ, ಶಿಕ್ಷಕರ ಹಾಜರಿ ದಾಖಲೆ ಪರಿಶೀಲಿಸಿದರಲ್ಲದೇ ಶಾಲೆಯ ಕುಂಧು ಕೊರತೆಗಳ ಬಗ್ಗೆ ವಿಚಾರಿಸಿದರು. ಗೌರಿ …

Read More »