Breaking News

ಎಂಇಎಸ್ ಬ್ಯಾನ್ ಗೆ ಜನವರಿ 20ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ ವಾಟಾಳ್​

ಬೆಂಗಳೂರು:ಎಂಇಎಸ್​ ರಾಜಕೀಯ ಪಕ್ಷ ಕನ್ನಡದ್ರೋಹಿಯಾಗಿದ್ದು, ಅದನ್ನು ಬ್ಯಾನ್​ ಮಾಡಬೇಕು ಎಂಬ ಏಕಂಶ ಬೇಡಿಕೆ ಮುಂದಿಟ್ಟುಕೊಂಡು ವರ್ಷಾಂತ್ಯ ಇಂದು ಕನ್ನಡ ಹೋರಾಟಗಾರ ವಾಟಾಳ್​ ನಾಗರಾಜ್ ಬಂದ್​​ಗೆ ಕರೆನೀಡಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸರ್ವರೂ ಒಕ್ಕೊರಲಿಂದ ತಮ್ಮ ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಬಂದ್​ ಬೇಡ ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿರುವ ವಾಟಾಳ್ ಇಂದು ಬಂದ್​ ಆಚರಿಸುತ್ತಿಲ್ಲ. ಬದಲಿಗೆ ಇಂದಿನ ಕರ್ನಾಟಕ ಬಂದ್ ಮುಂದೂಡಿಕೆ ಹಿನ್ನೆಲೆ ವಾಟಾಳ್ & ಟೀಂ …

Read More »

2021 ಚಂದನ್ ವನಕ್ಕೆ ಕರಾಳ ವರ್ಷ ..!

ಕನ್ನಡದ ಖ್ಯಾತ ನಟರು ಸೇರಿದಂತೆ ಹಲವಾರು ತಾರೆಯರು, ನಿರ್ದೇಶರು ಹಾಗೂ ನಿರ್ಮಾಪಕರು 2021ರಲ್ಲಿ ಮರೆಯಾಗಿ ಹೋಗಿದ್ದಾರೆ. ಇವರ ಸಾವು 2021 ಕನ್ನಡ ಚಿತ್ರರಂಗಕ್ಕೆ ದುರಂತ ವರ್ಷ ಅಂದ್ರೆ ತಪ್ಪಿಲ್ಲ. 3/ 14 ಕೋಟಿ ನಿರ್ಮಾಪಕ ಅಂತಾ ಕರೆಸಿಕೊಂಡಿದ್ದ ರಾಮು ಅವರ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ಪೆಟ್ಟು. ಸಿಂಹದ ಮರಿ, ಲಾಕಪ್ ಡೆತ್, ಸರ್ಕಲ್ ಇನ್ಸ್‌ಪೆಕ್ಟರ್, ಚಾಮುಂಡಿ, ಬಾವ ಬಾಮೈದ ಹೀಗೆ 35ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಮಾಡಿ ಹಾಗೂ ವಿತರಣೆಯನ್ನ …

Read More »

ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಹತ್ತು ವರ್ಷಗಳ ಕಾಲ ಕೇವಲ ಮೂಗಿಗೆ ತುಪ್ಪ ಸವರುವ(ಹಚ್ಚುವ) ಕೆಲಸ ಮಾಡಿದ್ದಾರೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆ

ಶಿವಮೊಗ್ಗ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಹತ್ತು ವರ್ಷಗಳ ಕಾಲ ಕೇವಲ ಮೂಗಿಗೆ ತುಪ್ಪ ಸವರುವ(ಹಚ್ಚುವ) ಕೆಲಸ ಮಾಡಿದ್ದಾರೆ ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ನಮ್ಮ ಹೋರಾಟ ಒಂದು ವರ್ಷ ಪೂರೈಸಿದೆ. ಈ ಒಂದು ವರ್ಷದ ಅವಧಿಯಲ್ಲಿ ಸರ್ಕಾರವು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮುಖ್ಯಮಂತ್ರಿ ಬಸವರಾಜ …

Read More »

ನಾಳೆ ಕರ್ನಾಟಕ ಬಂದ್​ ಇಲ್ಲ: ಸಿಎಂ ಸಂಧಾನ ಸಭೆ ಸಕ್ಸಸ್​

ಬೆಂಗಳೂರು: ನಾಳೆ ಕರ್ನಾಟಕ ಬಂದ್​ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದು, ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಘಟನೆಗಳ ಜೊತೆ ಮಾತುಕತೆ ನಡೆಸಿ ಬಂದ್​ ವಾಪಸ್​ ತೆಗೆದುಕೊಳ್ಳುವಂತೆ ಮಾಡಿದ್ದಾರೆ.ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಸಂಧಾನ ಸಕ್ಸಸ್ ಆಗಿದೆ. ಇನ್ನು ನನ್ನ ಮನವಿ ಒಪ್ಪಿ ಸಂಧಾನ ವಾಪಸ್ ಪಡೆದಿದ್ದಾರೆ. ಬಂದ್ ವಾಪಸ್ ಪಡೆದ ಹೋರಾಟಗಾರರಿಗೆ ಧನ್ಯವಾದಗಳು ಎಂದು ಸಿಎಂ ತಿಳಿಸಿದ್ದಾರೆ.

Read More »

ಭಾರತದಲ್ಲಿ ಒಂದೇ ದಿನ 13,154 ಮಂದಿಗೆ ಕೊರೊನಾವೈರಸ್!

ನವದೆಹಲಿ, ಡಿಸೆಂಬರ್ 30: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆದಿದೆ. ಕಳೆದೊಂದು ತಿಂಗಳಿನಲ್ಲೇ ಮೊದಲ ಬಾರಿಗೆ ಒಂದೇ ದಿನದಲ್ಲಿ 10,000ಕ್ಕೂ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇದರ ಮಧ್ಯೆ ಓಮಿಕ್ರಾನ್ ರೂಪಾಂತರ ಸೋಂಕಿತರ ಸಂಖ್ಯೆಯು 961ಕ್ಕೆ ಏರಿಕೆಯಾಗಿದೆ.   ಕಳೆದ 24 ಗಂಟೆಗಳಲ್ಲಿ 13,154 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಒಂದೇ ದಿನದಲ್ಲಿ 268 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ …

Read More »

ರಾಜ್ಯ ಸರ್ಕಾರದ ಸಚಿವ ಸಂಪುಟ ಬದಲಾವಣೆ ಬಗ್ಗೆ ಸ್ಪೋಟಕ ಬಾಂಬ್ ಸಿಡಿಸಿದ ಯತ್ನಾಳ್

ವಿಜಯಪುರ: ಒಂದೆಡೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ( Karnataka BJP Government ) ಸಿಎಂ ಬದಲಾವಣೆ ಇಲ್ಲ ಅಂತ ವರಿಷ್ಠರೇ ಹೇಳಿದ್ದಾರೆ. ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆ ( Karnataka Cabinet Expansion ) ಬಗ್ಗೆ ಯಾವುದೇ ಸುಳಿವು ಕೂಡ ಇಲ್ಲ. ಹೀಗೆ ಇರುವಾಗಲೇ ರಾಜ್ಯ ಸರ್ಕಾರದ ಸಚಿವ ಸಂಪುಟ ಬದಲಾವಣೆ ಬಗ್ಗೆ ಸ್ಪೋಟಕ ಬಾಂಬ್ ಅನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ( MLA Basanagouda Patil …

Read More »

ಸಿಎಂ ತವರಲ್ಲೇ ಮುದುಡಿದ ಕಮಲ, ಸಚಿವ ಶ್ರೀರಾಮುಲು ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಹಿನ್ನಡೆ!

ಹಾವೇರಿ/ ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಕ್ಷೇತ್ರವಾಗಿರುವ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ಬಂಕಾಪುರ ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ತೆಕ್ಕೆಗೆ ಬಂಕಾಪುರ ಪುರಸಭೆ ಒಲಿದಿದೆ.   ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪುರಸಭೆ, ಹಾವೇರಿ ತಾಲೂಕಿನ ಗುತ್ತಲ ಪಪಂ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಹಿನ್ನಡೆಯಾಗಿದ್ದು, ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಗುತ್ತಲ ಪಪಂನ ಒಟ್ಟು 18 ಸ್ಥಾನಗಳಲ್ಲಿ 11 ರಲ್ಲಿ ಗೆದ್ದಿರುವ ಕಾಂಗ್ರೆಸ್ …

Read More »

ಕಂದಾಯ ಇಲಾಖೆ: ITI, PUC, B.E ಪಾಸ್‌; 3000 ಭೂಮಾಪಕರ ಹುದ್ದೆಗಳಿಗೆ ಅರ್ಜಿ

ಬೆಂಗಳೂರು: ರಾಜ್ಯದಲ್ಲಿ ಪೋಡಿ ಮುಕ್ತ ಅಭಿಯಾನ ಯೋಜನೆಯನ್ನು ಅನುಷ್ಠಾನಗೊಳಿಸಲು 3000 ಭೂಮಾಪಕರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ನೇಮಕಾತಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿ ನಂತರ ತಡೆ ಹಿಡಿದಿತ್ತು. ಇದೀಗ ಮತ್ತೆ ನೇಮಕಾತಿಗೆ ಚಾಲನೆ ನೀಡಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲೇ (rdservices.karnataka.gov.in ) ಜನವರಿ 21ರೊಳಗೆ ಅರ್ಜಿ ಸಲ್ಲಿಸಬೇಕು. ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ ಎಂದು ಭೂಮಾಪಕ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆ …

Read More »

ವಿಷ್ಣುವರ್ಧನ್ ಪುಣ್ಯಸ್ಮರಣೆ: ಹೋಟೆಲಲ್ಲಿ ವಿಷ್ಣು ಕಳೆದ ಜೀವನದ ಕೊನೇ ಕ್ಷಣ ಮೆಲುಕು ಹಾಕಿದ ಸಿಬ್ಬಂದಿ

ಮೈಸೂರು: ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ.ವಿಷ್ಣುವರ್ಧನ್ ಅವರು 12ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅವರ ಹಳೆಯ ನೆನಪುಗಳನ್ನು ಖಾಸಗಿ ಹೋಟೆಲ್​ ಸಿಬ್ಬಂದಿಯೊಬ್ಬರು ಮೆಲುಕು ಹಾಕಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವಿಷ್ಣುವರ್ಧನ್​ ಅವರು ಜೀವನದ ಕೊನೆಯ ದಿನಗಳನ್ನು ಕಳೆದಿದ್ದರು. ಈ ಬಗ್ಗೆ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿರುವ ಹೋಟೆಲ್​ ಮ್ಯಾನೇಜರ್​ ಶ್ರೀನಿವಾಸ ಹಳೆಯ ಕ್ಷಣಗಳನ್ನು ಸ್ಮರಿಸಿದ್ದಾರೆ. 2009ರ ಡಿಸೆಂಬರ್ 10 ರಿಂದ ವಿಷ್ಣು ಅವರು ನಮ್ಮ ಹೋಟೆಲ್‌ನಲ್ಲೇ ಇದ್ದರು. ಕಾಲಿಗೆ ನೋವಾಗಿದ್ದರಿಂದ …

Read More »

ಗಂಡನನ್ನ ಜೈಲಿನಿಂದ ಬಿಡಿಸಲು ಸಹಾಯ ಮಾಡೋ ನೆಪದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

ಉತ್ತರಪ್ರದೇಶ : ಮಹಿಳೆಯೊಬ್ಬಳಿಗೆ ಆಕೆಯ ಗಂಡನನ್ನ ಜೈಲಿನಿಂದ ಹೊರತರಲು ಸಹಾಯ ಮಾಡೋದಾಗಿ ವಕೀಲ ಹಾಗೂ ಆತನ ಸ್ನೇಹಿತರು ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಅಪರಾಧಗಳ ಆಗರ ಉತ್ತರ ಪ್ರದೇಶದಲ್ಲಿ ನಡೆದಿದೆ..   ಮಹೇಶ್ , ವಿಕಾಸ್ ಹಾಗೂ ದೇವೇಂದ್ರ ಎಂಬಾತ ಸೇರಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.. ಈ ಬಗ್ಗೆ ಮಹಿಳೆಯು, ವಕೀಲರು ಸಹಾಯ ಮಾಡುವ ನೆಪದಲ್ಲಿ ನನ್ನನ್ನು ನೋಯ್ಡಾದಲ್ಲಿರುವ ಕಚೇರಿಗೆ ಕರೆಸಿಕೊಂಡು ಅಲ್ಲಿ ಅವನು ಮತ್ತು …

Read More »