ಕಾರವಾರ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳವಾಗುತ್ತಿದ್ದಂತೆ ದೇಶದಲ್ಲಿಯೂ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗುವ ಆತಂಕ ಎದುರಾಗಿದೆ. ಹಾಗಾಗಿ, ನೆರೆಯ ಗೋವಾ ರಾಜ್ಯಕ್ಕೆ ಗಡಿ ಪ್ರದೇಶದ ಮಂದಿ ಮುಗಿಬಿದ್ದಿದ್ದಾರೆ. ಗೋವಾದಲ್ಲಿ ಇನ್ನೆರಡು ದಿನದಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟು ದರ ಹೆಚ್ಚಾಗಲಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪೆಟ್ರೋಲ್ ತುಂಬಿಸಿಕೊಳ್ಳಲು ಸದಾಶಿವಗಡ, ಕಾರವಾರ ಭಾಗದ ಜನ ಗಡಿಭಾಗವಾದ ಗೋವಾದ ಪೋಳೆಮ್‌ನತ್ತ ದೌಡಾಯಿಸುತ್ತಿದ್ದಾರೆ. ಈಗಾಗಲೇ ಗೋವಾದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.80 ರೂ. ಹಾಗೂ …
Read More »ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿದ ಉಕ್ರೇನ್ ರಾಕ್ ಬ್ಯಾಂಡ್!
ಕೀವ್: ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಎಲ್ಲರೂ ನೋಡಿಯೇ ಇರುತ್ತಾರೆ. ಜನರ ಗಮನ ಸೆಳೆಯಲು ಯೂಟ್ಯೂಬರ್ಸ್‌ಗಳು ಹೊಸ ಹೊಸ ರೀತಿಯಲ್ಲಿ ವ್ಲಾಗ್, ಲೈವ್ ಸ್ಟ್ರೀಮ್ ಮಾಡುತ್ತಲೇ ಇರುತ್ತಾರೆ. ಇಲ್ಲೊಂದು ಉಕ್ರೇನ್‌ನ ರಾಕ್ ಬ್ಯಾಂಡ್ ಭೀಕರ ಯುದ್ಧದ ನಡುವೆಯೂ ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿ ಇಂದಿಗೆ 16 ನೇ ದಿನ. ಇಂತಹ ಪರಿಸ್ಥಿತಿಯಲ್ಲಿ ಮನೆ, ನೆಲೆ ಕಳೆದುಕೊಂಡವರು ಸಾವಿರಾರು. ಉಕ್ರೇನ್‌ನ …
Read More »ಕಾರ್ ಪಾರ್ಕಿಂಗ್ ವಿಚಾರಕ್ಕೆ ೨ ಕುಟುಂಬಗಳ ನಡುವೆ ಮಾರಾಮಾರಿ
ಧಾರವಾಡ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ೨ ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಹತ್ತಿರ ನಡೆದಿದೆ. ಕಳೆದ ಸುಮಾರು ದಿನಗಳಿಂದ ಉಣಕಲ್ ಭಾಗದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಜನರು ದಿನವೂ ಹೊಡೆದಾಡುವ ಪ್ರಸಂಗಗಳು ಗೋಚರಿಸುತ್ತವೆ. ಸಾರ್ವಜನಿಕರೊಬ್ಬರು ರಸ್ತೆ ಮುಂದಿನ ಮನೆಯ ಮುಂದೆ ಕಾರ್ ಪಾರ್ಕ್ ಮಾಡಿ ಹೋಟೆಲ್‌ಗೆ ಹೋಗಿದ್ದಾರೆ. ಈ ವೇಳೆ ಇದಕ್ಕೆ ಕೋಪಗೊಂಡ ಮನೆಯವರು ಕಾರಿನ …
Read More »ವಿಧಾನಸಭೆ ಅಧಿವೇಶನದ ವೇಳೆ ಏಪ್ರಿಲ್ ಜ್ವರದ ಕುತೂಹಲ!
ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಗಮನಿಸಿದ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ಅಲೆ ಶುರುವಾದಂತೆ ಭಾಸವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ವಿಧಾನಸಭೆ ಮೊಗಸಾಲೆಯಲ್ಲಿ ಏಪ್ರಿಲ್ ರಾಜಕೀಯ ಜ್ವರ ಬಿಸಿಬಿಸಿ ಚರ್ಚೆಯಾಗಿದೆ. ಏನಿದು ಏಪ್ರಿಲ್ ಜ್ವರ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗಾರಿ ಬಾರಿಸಿದ ಪರಿಣಾಮ ಇದೀಗ ಕರ್ನಾಟಕದಲ್ಲಿ 2023ರ ಚುನಾವಣೆಗೂ ಮುನ್ನ ರಾಜಕೀಯವಾಗಿ ಭಾರೀ ಬದಲಾವಣೆಯ ಪರ್ವ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಇದೀಗ ನಡೆಯುತ್ತಿರುವ ಬಜೆಟ್ ಅಧಿವೇಶನದ ವಿಧಾನಸಭೆ ಮೊಗಸಾಲೆಯಲ್ಲಿ …
Read More »4 ರಾಜ್ಯಗಳಲ್ಲಿ ಬಿಜೆಪಿ ವಿಜಯ – ಗುಜರಾತ್‍ನಲ್ಲಿ ಮೋದಿ ಭರ್ಜರಿ ರೋಡ್ ಶೋ
ಗಾಂಧೀನಗರ: ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬೆನ್ನೆಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಗುಜರಾತ್ ಚುನಾವಣೆಯತ್ತ ಗಮನ ಹರಿಸಿದ್ದು, ಅಹಮದಾಬಾದ್‍ನಲ್ಲಿ ಇಂದು ರೋಡ್ ಶೋ ನಡೆಸಿದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಗಾಂಧಿನಗರದಲ್ಲಿರುವ ಬಿಜೆಪಿ ರಾಜ್ಯ ಕಚೇರಿವರೆಗೂ ಹೂವಿನಿಂದ ಅಲಂಕರಿಸಲ್ಪಟ್ಟ ತೆರೆದ ಕಾರಿನಲ್ಲಿ ಮೋದಿ ಅವರು ರೋಡ್ ನಡೆಸಿದರು. ಈ ನಡುವೆ ರಸ್ತೆಯ ಬದಿಗಳಲ್ಲಿ ಮೋದಿ ಅವರನ್ನು ನೋಡಲು ಮುಗಿಬಿದ್ದಿದ್ದ ಜನರತ್ತ …
Read More »ಒಮಿಕ್ರಾನ್‌ಗಿಂತಲೂ ಹಾನಿಕಾರಿಯಂತೆ ಅದರ ಸಣ್ಣತಮ್ಮ ಬಿ.ಎ.೨…!
ಕೋರೊನಾದ ಎಲ್ಲ ವೈರಸ್‌ಗಳಲ್ಲಿ ಓಮಿಕ್ರಾನ್ ವೇಗವಾಗಿ ಹರಡುವ ವೈರಸ್ ಎನ್ನಲಾಗಿದೆ. ಆದರೀಗ ಹೊಸ ಅಧ್ಯಯನದ ಪ್ರಕಾರ ಓಮಿಕ್ರಾನ್‌ನ ಸಣ್ಣತಮ್ಮಣ್ಣ ಬಿಎ ೨ ಅದಕ್ಕಿಂತಲೂ ಹಾನಿಕಾರಕ ಎನ್ನಲಾಗುತ್ತಿದೆ. ಓಮಿಕ್ರಾನ್‌ನನ್ನ ಬಿಎ ೧ ಎಂದು ಕರೆಯಲಾಗುತ್ತದೆ. ಇನ್ನು ಅದರ ಮುಂದಿನ ವೈರಿಯೆಂಟ್‌ನ್ನು ಬಿಎ ೨ ಎಂದು ಕರೆಯಲಾಗುತ್ತಿದೆ. ಜಗತ್ತಿನಾದ್ಯಂತ ಇದರ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲ ಪ್ರಕರಣ ಆಸ್ಟೆçÃಲಿಯಾದಲ್ಲಿ ಕಂಡು ಬಂದಿದ್ದು, ಎರಡನೇ ಪ್ರಕರಣ ಭಾರತದಲ್ಲಿ ಕಂಡು ಬಂದಿದೆ. ಅಲ್ಲದೇ ೫೦ ದೇಶಗಳಲ್ಲಿ ಬಿಎ …
Read More »ಮೊದಲಿಗೆ ತನ್ನ ಪತ್ನಿಯನ್ನು ಹತ್ಯೆ ಮಾಡಿದ ಶೆಟ್ಟು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೆಂಡತಿಯನ್ನು ಕೊಂದ ಪತಿರಾಯ ಕೊನೆಗೆ ತಾನೂ ನೇಣು ಹಾಕಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಗಣೇಶನಗರದಲ್ಲಿ ಬೆಳ್ಳಂಬೆಳಿಗ್ಗೆ ಈ ಘಟನೆ ನಡೆದಿದ್ದು, ಧಾರವಾಡದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಗಣೇಶನಗರದ ಗೌಳಿ ಜನಾಂಗದ ಮನಿಶಾ ಹಾಗೂ ಶೆಟ್ಟು ಎಂಬ ದಂಪತಿಯೇ ಸಾವಿಗೀಡಾದವರು. ಮೊದಲಿಗೆ ತನ್ನ ಪತ್ನಿಯನ್ನು ಹತ್ಯೆ ಮಾಡಿದ ಶೆಟ್ಟು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಇರಬಹುದು ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು …
Read More »ಹೈದರಾಬಾದ್ನಲ್ಲಿರೋ ಮನೆಗೆ ನುಗ್ಗಿದ್ದ ಕಳ್ಳನನ್ನು ಅಮೆರಿಕದಿಂದಲೇ ಪೊಲೀಸರಿಗೆ ಹಿಡಿದುಕೊಟ್ಟ ಮಾಲೀಕ!
ಹೈದರಾಬಾದ್: ತಂತ್ರಜ್ಞಾನವನ್ನು ಹೇಗೆಲ್ಲ ಉಪಯುಕ್ತವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಹೈದರಾಬಾದ್ನಲ್ಲಿ ನಡೆದ ಈ ಒಂದು ಘಟನೆ ತಅಜಾ ಉದಾಹರಣೆಯಾಗಿದೆ. ಅಮೆರಿಕದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಅಲ್ಲಿಂದಲೇ ಹೈದರಾಬಾದ್ನ ತನ್ನ ನಿವಾಸದಲ್ಲಿ ನಡೆಯುತ್ತಿದ್ದ ಕಳ್ಳತವನ್ನು ತಪ್ಪಿಸಿದ್ದು, ಖದೀಮನನ್ನು ಹಿಡಿದುಕೊಟ್ಟಿದ್ದಾರೆ. ಸೈಬರಾಬಾದ್ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ ಕುಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಈ ಘಟನೆ ನಡೆದಿದೆ. ಮಾನಿಟರ್ ಸೆನ್ಸಾರ್ ಸಾಧನ ಒಳಗೊಂಡ ಸಿಸಿಟಿವಿ ಕ್ಯಾಮೆರಾವನ್ನು ಮಾಲೀಕ ತನ್ನ ಮನೆಯಲ್ಲಿ ಅಳವಡಿಸಿದ್ದ. ಯಾರಾದರೂ ಮನೆಯ ಆಸುಪಾಸಿನಲ್ಲಿ …
Read More »ಲೆಕ್ಚರ್ ಹುದ್ದೆಗೆ 40 ಲಕ್ಷ ರೂಪಾಯಿ ಡೀಲ್!? ಮಾ.12ರಿಂದ 16ವರೆಗೆ ನೇಮಕಕ್ಕೆ ಪರೀಕ್ಷೆ
ಬೆಂಗಳೂರು :ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಹಾಗೂ ಪೊಲೀಸ್ ನೇಮಕಾತಿಯಲ್ಲಿ ಕೇಳಿಬರುತ್ತಿದ್ದ ಅವ್ಯವಹಾರದ ಆರೋಪವೀಗ ಶಿಕ್ಷಣ ಇಲಾಖೆ ನೇಮಕಾತಿಗೂ ವ್ಯಾಪಿಸಿದೆ. 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಡೀಲ್ ಶುರುವಾಗಿದೆ! ತಲಾ ಹುದ್ದೆಗೆ 40 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಡೀಲ್ ಒಪ್ಪಿಕೊಂಡು ಮುಂಗಡ ಹಣ ಕೊಟ್ಟವರಿಗೆ ಹುದ್ದೆ ಫಿಕ್ಸ್ ಭರವಸೆ ನೀಡಲಾಗುತ್ತಿದೆ. ಮಾ.12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ. 33 ಸಾವಿರ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ದಿನಾಂಕ …
Read More »ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ವಿಲ್! ತಂದೆ ಹೆಸರಲ್ಲಿ ವಿಲ್ ಸೃಷ್ಟಿಸಿ 50 ಕೋಟಿ ರೂ. ಆಸ್ತಿ ಕಬಳಿಸಿದ ಮಕ್ಕಳು
ಬೆಂಗಳೂರು: ತಂದೆ ಸಾವಿನ ಬಳಿಕ ಅವರ ಹೆಸರಿನಲ್ಲಿ ನಕಲಿ ವಿಲ್(ಉಯಿಲು ಪತ್ರ) ಸೃಷ್ಟಿಸಿ ಮಲತಾಯಿಗೆ ಸೇರಬೇಕಿದ್ದ 50 ಕೋಟಿ ಮೌಲ್ಯದ ಆಸ್ತಿಯನ್ನ ಮಕ್ಕಳಿಬ್ಬರು ಕಬಳಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಜಾಜಿನಗರದ ಕೆ. ಬೋಜಮ್ಮ (67) ಎಂಬುವರು ಕೊಟ್ಟ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸರು ಮಕ್ಕಳಿಬ್ಬರನ್ನು ಬಂಧಿಸಿದ್ದಾರೆ. ಚೆನ್ನಪ್ಪ ಅವರಿಗೆ ಲಕ್ಷ್ಮಮ್ಮ ಮತ್ತು ಬೋಜಮ್ಮ ಪತ್ನಿಯರು. ಮೊದಲ ಪತ್ನಿಗೆ ಸುರೇಶ್, ಮಹೇಶ್ ಸೇರಿ ಮೂವರು ಮಕ್ಕಳು. ಬೋಜಮ್ಮಗೆ ಒಬ್ಬ ಪುತ್ರನಿದ್ದಾನೆ. …
Read More »