Breaking News

6 ವರ್ಷಗಳ ಬಳಿಕ ತಾಯಿ, ಮಗನನ್ನು ಒಂದಾಗಿಸಿದ ಆಧಾರ್ ಕಾರ್ಡ್

ಬೆಂಗಳೂರು:  ಆರು ವರ್ಷಗಳ ಬಳಿಕ ತಾಯಿ ಮತ್ತು ಮೂಕ ಮಗನನ್ನು ಆಧಾರ್ ಕಾರ್ಡ್ ಒಂದು ಮಾಡಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.   2016ರ ಮಾರ್ಚ್‍ನಲ್ಲಿ ಪಾರ್ವತಮ್ಮ ಅವರ ಜೊತೆ ತರಕಾರಿ ಮಾರಾಟಕ್ಕೆ ಭರತ್ ಬಂದಿದ್ದರು. ಆಗ ಭರತ್ ಕೇವಲ 13 ವರ್ಷದವರಾಗಿದ್ದರು. ಈ ವೇಳೆ ನಿಗೂಢವಾಗಿ ಭರತ್ ಕಣ್ಮೆರೆಯಾಗಿದ್ದಾರೆ. ಮೂಗ ಮಗನನ್ನು ಕಾಣದೇ ಕಂಗಲಾಗಿ, ಯಲಹಂಕದ ರೈತ ಸಂತೆಯಲ್ಲಿ ಪಾರ್ವತಮ್ಮ ಅವರು ಹುಡುಕಾಟ ನಡೆಸಿ, ಕೊನೆಗೆ ಈ ಬಗ್ಗೆ ಯಲಹಂಕ ಪೊಲೀಸ್ …

Read More »

ಹಣದ ವ್ಯವಹಾರದಲ್ಲಿ ಅಸಮಾಧಾನ – ರೌಡಿ ಶೀಟರ್ ಹತ್ಯೆ

ಹುಬ್ಬಳ್ಳಿ: ಇಷ್ಟು ದಿನ ತಣ್ಣಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದ್ದು, ಮಾರಾಕಾಸ್ತ್ರಗಳು ಸದ್ದು ಮಾಡುತ್ತಿವೆ. ದುಡ್ಡಿನ ವ್ಯವಹಾರದ ಹಿನ್ನಲೆಯಲ್ಲಿ ರೌಡಿ ಶೀಟರ್‌ನನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅರವಿಂದ ನಗರದ ಪಿಎನ್‌ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ಘಟನೆ ನಡೆದಿದ್ದು, ಅಕ್ಬರ್ ಅಲ್ಲಾಭಕ್ಷ ಮುಲ್ಲಾ ಕೊಲೆಯಾದ ವ್ಯಕ್ತಿ. ಈತ ಮೂಲತಃ ರೌಡಿ ಶೀಟರ್ ಆಗಿದ್ದ. ಸದಾನಂದ ಕುರ್ಲಿ ಎಂಬುವವನ ಜೊತೆಗೆ …

Read More »

ಥಂಡಾ ಹೊಡೆದ ‘ಕೈ’ ಹೈಕಮಾಂಡ್​; ಸ್ವಪಕ್ಷದವ್ರಿಂದಲೇ ನಾಯಕತ್ವದ ವಿರುದ್ಧ ಕಿಡಿ..!

ಭಾರೀ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಚುನಾವಣೆ ರಿಸಲ್ಟ್​ ಹೊರಬಿದ್ದಿದೆ. ಎಲೆಕ್ಷನ್​ನಲ್ಲಿ ಕಮಲ ಕಮಾಲ್​ ಮಾಡಿದ್ರೆ ಕಾಂಗ್ರೆಸ್​ನ ಥಂಡಾ ಹೊಡೆದಿದೆ. ಈ ನಡುವೆ ಕೇಸರಿ ಕಲಿಗಳು ಸಿಂಹಾನಸವೇರಲು ಸಿದ್ಧತೆ ಮಾಡಿಕೊಂಡಿದ್ದರೆ ಕೈ ನಾಯಕರು ಆತ್ಮವಿಮರ್ಶೆಗೆ ಮುಂದಾಗಿದ್ದಾರೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಕಮಲ ಪಾಳಯ ಅಕ್ಷಶರಃ ಕಮಾಲ್​ ಮಾಡಿದೆ. ಪಂಜಾಬ್​ನಲ್ಲಿ ಆಪ್​ ಕೈಯನ್ನು ಗುಡಿಸಿ ಗುಂಡಾಂತರ ಮಾಡಿದ್ದು ಕಾಂಗ್ರೆಸ್ ಧೂಳಿಪಟವಾಗಿದೆ. ಇದು ಹಸ್ತ ಪಡೆಗೆ ಇನ್ನಿಲ್ಲದ ಮುಜುಗರವನ್ನುಂಟು ಮಾಡಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ …

Read More »

ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ‘ಆರೋಗ್ಯ ಇಲಾಖೆ’ಯ ನೌಕರರಿಗೆ ಬಿಗ್ ಶಾಕ್ : ಮಾ.31ಕ್ಕೆ ಸೇವೆ ಅಂತ್ಯ

ಬೆಂಗಳೂರು : ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣ ಕಾರ್ಯಕ್ಕೆ ಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಿಕೊಂಡಿದ್ದ ಆರೋಗ್ಯ ಸಿಬ್ಬಂದಿ ಸೇವೆಯನ್ನು ಸ್ಥಗಿತಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ. 2020 ರ ಜೂನ್ ನಲ್ಲಿ 6 ತಿಂಗಳ ಅವಧಿಗೆ ವೈದ್ಯರು, ಇತರೆ ಸಹಾಯಕ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿತ್ತು. ಇವರ ಸೇವೆ ಮುಕ್ತಾಯ ಆಗುವ ವೇಳೆಗೆ ಮತ್ತೊಂದು ಕೋವಿಡ್ ಅಲೆ ಬಾಧಿಸುತ್ತಿದ್ದ ಹಿನ್ನೆಲೆಯಲ್ಲಿ ತಲಾ 6 ತಿಂಗಳಂತೆ ಮೂರು ಅವಧಿಗೆ ಇವರ ಸೇವೆ ಮುಂದುವರೆಸಲಾಗಿತ್ತು. ಈಗ ಕೋವಿಡ್ …

Read More »

ಉತ್ತರ ಪ್ರದೇಶ ಸಿಎಂ ಸ್ಥಾನಕ್ಕೆ ʼಯೋಗಿ ಆದಿತ್ಯನಾಥ್ʼ ರಾಜೀನಾಮೆ |

ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದ ಮಹತ್ವದ ಚುನಾವಣಾ ವಿಜಯದ ಒಂದು ದಿನದ ನಂತ್ರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಶುಕ್ರವಾರ ಲಕ್ನೋದ ರಾಜಭವನದಲ್ಲಿ ರಾಜ್ಯಪಾಲ ಆನಂದ್ ಮಣಿಬೆನ್ ಪಟೇಲ್(Anandiben Patel) ಅವರಿಗೆ ರಾಜೀನಾಮೆ ಸಲ್ಲಿಸಿದರು.   ಮೂಲಗಳ ಪ್ರಕಾರ, ಯೋಗಿ ಆದಿತ್ಯನಾಥ್ ಅವ್ರು ಹೋಳಿಗಿಂತ ಮೊದಲು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು ಮಾರ್ಚ್ 14 ಅಥವಾ 15ರಂದು ನಡೆಯುವ ಸಾಧ್ಯತೆಯಿದೆ. ಏತನ್ಮಧ್ಯೆ, ಪ್ರಮಾಣ ವಚನ ಸ್ವೀಕಾರ …

Read More »

ನಟ ಚೇತನ್ ಗೆ ಸಂಕಷ್ಟ, ಗಡೀಪಾರು ಸಾಧ್ಯತೆ

ಬೆಂಗಳೂರು: ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಅವರಿಗೆ ಸಂಕಷ್ಟ ಎದುರಾಗಿದ್ದು, ಅವರನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ. ಅಮೇರಿಕ ಪ್ರಜೆಯಾಗಿದ್ದರೂ ಚೇತನ್ ಅವರು ಭಾರತದಲ್ಲಿ ಹೋರಾಟ ನಡೆಸಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಪೊಲೀಸರು ವರದಿ ಸಲ್ಲಿಸಿದ್ದಾರೆ.   ಸಾಗರೋತ್ತರ ಭಾರತೀಯ ನಾಗರಿಕ ಪತ್ರ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಚೇತನ್ ಅವರನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ ಎಂದು …

Read More »

ಚೆಲುವಿನ ಚಿತ್ತಾರ’ ತರದ್ದೇ ಸುದ್ದಿ.. ಪ್ರೀತಿಸಿ ಮದ್ವೆಯಾಗಿದ್ದ ಮಗಳಿಗೆ ಸರ್ಪ್ರೈಸ್‌ ಅಂತಾ ಕರೆಸಿ ಮಾಡಿದ್ದೇನು ಗೊತ್ತಾ?

ಕಲಬುರಗಿ: ನೀವು ಚೆಲುವಿನ ಚಿತ್ತಾರ ಸಿನಿಮಾ ನೋಡಿದ್ದೀರಲ್ವಾ? ಈ ಸಿನಿಮಾ ನೋಡದೇ ಇರೋರು ಯಾರು ಇದಾರೆ ಹೇಳಿ? ಇಬ್ಬರು ಪ್ರೇಮಿಗಳು ಮನೆ ಬಿಟ್ಟು ಬರ್ತಾರೆ, ಸಂಧಾನಕ್ಕೆ ಅಂತಾ ಕರೆಸಿಕೊಂಡ ಮನೆಯವ್ರು ಇಬ್ಬರನ್ನು ದೂರ ದೂರ ಮಾಡ್ತಾರೆ. ಇಲ್ಲೂ ಸೇಮ್‌ ಟು ಸೇಮ್‌ ಅಂತದ್ದೇ ದುರಂತ ನಡೆದಿದೆ. ಇನ್ನೂ ಮುಂದುವರೆದು ಮಗಳು ಮನೆಯವ್ರಿಗೆ ಸರ್ಪ್ರೈಸ್‌ ಕೋಡೋಣ ಅನ್ನುವಷ್ಟರಲ್ಲಿ, ಮನೆಯವ್ರೇ ಮಗಳಿಗೆ ಸಾವಿನ ಸರ್ಪ್ರೈಸ್‌ ಕೊಟ್ಟಿದ್ದಾರೆ. ಚಿಗುರಿದ ಪ್ರೀತಿ.. ಕಮರಿದ ಕನಸು ಈಕೆ …

Read More »

ಗ್ರಾಮ ಪಂಚಾಯಿತಿಗೊಂದು ಗ್ರಾಮಒನ್: ರಾಜ್ಯಾದ್ಯಂತ ವಿಸ್ತರಿಸಲು ಸಂಪುಟ ಒಪ್ಪಿಗೆ

ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಲು ಹಂತಹಂತವಾಗಿ ಅನುಷ್ಠಾನ ಮಾಡುತ್ತಿರುವ ಗ್ರಾಮ ಒನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯಿಂದ ಅನುಷ್ಠಾನವಾಗುತ್ತಿರುವ ಯೋಜನೆಯನ್ನು ಎಲ್ಲ ಗ್ರಾಮಗಳಿಗೂ ವಿಸ್ತರಿಸಬೇಕೆಂದು ತೀರ್ವನಿಸಲಾಯಿತು.   ನಮ್ಮ ಸರ್ಕಾರ ಗ್ರಾಮೀಣ ಜನರಿಗೆ ಪಂಚಾಯಿತಿ ಹಂತದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಯೋಜನೆಯನ್ನು ಜಾರಿಗೊಳಿಸಿದೆ. ತಂತ್ರಜ್ಞಾನ …

Read More »

ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ; ಕೃಷಿ ಪಂಪ್ಸೆಟ್ ಗೆ ಸೌರ ವಿದ್ಯುತ್

ಬೆಂಗಳೂರು: ಕೃಷಿ ಪಂಪ್ಸೆಟ್ ಗಳಿಗೆ ಸೌರವಿದ್ಯುತ್ ಕಲ್ಪಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ರೈತರ ಜಮೀನಿನಲ್ಲಿ ಸೌರ ಪ್ಯಾನೆಲ್ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಲಿದ್ದು, ಬೇರೆ ವಿದ್ಯುತ್ ಸಂಪರ್ಕವಿಲ್ಲದೆ ಪಂಪ್ ಸೆಟ್ ಬಳಕೆ ಸಾಧ್ಯವಾಗಲಿದೆ.   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಮುಕ್ತ ಸೌರ ಪಂಪ್ ಸೆಟ್ ಯೋಜನೆ ಜಾರಿಗೊಳಿಸುವ ಸಂಬಂಧ ಪ್ರಧಾನಮಂತ್ರಿ ಕುಸುಮ್ ಬಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು 10,000 …

Read More »

ಬಹುನಿರೀಕ್ಷಿತ ಜೇಮ್ಸ್​​ ಸಿನಿಮಾ ಮಾರ್ಚ್​​ 17ರಂದು ರಾಜ್ಯಾದ್ಯಂತ ಬಿಡುಗಡೆ

ಪವರ್​ ಸ್ಟಾರ್​ ಪುನೀತ್​​ ರಾಜ್​ ಅಭಿನಯದ ಬಹುನಿರೀಕ್ಷಿತ ಜೇಮ್ಸ್​​ ಸಿನಿಮಾ ಮಾರ್ಚ್​​ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಚಿತ್ರಮಂದಿರಗಳ ಮುಂದೆ ಅಪ್ಪು ಕಟೌಟ್ಸ್​ಗಳನ್ನು ನಿಲ್ಲಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಕಟೌಟ್​​​ಗಳು​ ತಲೆ ಎತ್ತಿವೆ. ಕಮಾಲನಗರದ ವೀರಭದ್ರೇಶ್ವರ ಥಿಯೇಟರ್ ಮುಂದೆ ಪುನೀತ್ ಕಟೌಟ್ ಜೊತೆ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ಕಟೌಟ್​ಗಳು ರಾರಾಜಿಸುತ್ತಿವೆ. …

Read More »