ನವದೆಹಲಿ: ಕೊರೋನಾ ( Coronavirus ) ನಂತ್ರ ಡೋಲೋ-650 ಮಾತ್ರೆಯ ಸೇವನೆ ಹೆಚ್ಚಳವಾಗಿದೆ. ಸಣ್ಣ-ಪುಟ್ಟ ಮೈಕೈ ನೋವಿಗೂ ಡೋಲೋ ಮಾತ್ರೆ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಆದ್ರೇ.. ಅತಿಯಾದಂತ ಡೋಲೋ ಮಾತ್ರೆ ಸೇವನೆಯೇ ಮಾರಣಾಂತಿಕವಾಗಿಬಿಡುತ್ತದೆ. ಅಲ್ಲದೇ ಅನೇಕ ಅಡ್ಡ ಪರಿಣಾಮಗಳು ಕೂಡ ಉಂಟಾಗಲಿವೆ ಎಂದು ಅನೇಕ ಸಂಶೋಧನೆ, ವಿಜ್ಞಾನಿಗಳು ತಿಳಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ, ಕೋವಿಡ್-19 ( Covid-19 ) ನಮ್ಮ ಜಗತ್ತನ್ನು ತಲೆಕೆಳಗು ಮಾಡಿ ಲಕ್ಷಾಂತರ ಸಾವುಗಳಿಗೆ ಕಾರಣವಾಯಿತು. …
Read More »ಎಲೆಕ್ಟ್ರಿಕ್ ಎಂಜಿನ್ ರೈಲು: ಶನಿವಾರದಿಂದ ದಿನಕ್ಕೆ 10,000 ಲೀಟರ್ ಡೀಸೆಲ್ ಉಳಿತಾಯ
ಬೆಂಗಳೂರು: ನೈಋತ್ಯ ರೈಲ್ವೆ ವಲಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 232 ಕಿ.ಮೀ ಮಾರ್ಗದ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿದೆ ಮತ್ತು ಈ ಹಣಕಾಸು ಅವಧಿ ಮುಗಿಯುವ ಮುನ್ನ ಮತ್ತೆ 200ಕ್ಕೂ ಹೆಚ್ಚು ಕಿ. ಮೀ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಇದು ಡೀಸೆಲ್ ಎಂಜಿನ್‌ಗಳನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಎಂಜಿನ್‌ಗಳಿಗೆ ಬದಲಾಯಿಸಲು ಅನುವು ಮಾಡಿಕೊಡಲಿದೆ. ಅಧಿಕೃತ ಹೇಳಿಕೆಯ ಪ್ರಕಾರ, 2016ರಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ಸುಮಾರು 200 ಕಿಲೋ ಮೀಟರ್ ವಿದ್ಯುದ್ದೀಕರಣದ ಮಾರ್ಗವಿತ್ತು. …
Read More »ಹೂಕಟ್ಟಿ, ಮಾರಾಟ ಮಾಡ್ತಿದ್ದ ವ್ಯಕ್ತಿಯ ಪುತ್ರಿ ಇದೀಗ ಪಿಎಸ್‌ಐ!
ಕೊಪ್ಪಳ : ಕಡು ಬಡತನದಲ್ಲಿ ಅರಳಿರುವ ಪ್ರತಿಭೆ ಫರೀದಾ ಬೇಗಂ ಎಂಬುವರು ಯುಟ್ಯೂಬ್‌ನಲ್ಲಿ ಪಠ್ಯ ಆಲಿಸುತ್ತಾ, ಹೂಕಟ್ಟುತ್ತಾ, ಮನೆ ಕೆಲಸ ಮಾಡುತ್ತಾ, ಇತ್ತೀಚೆಗೆ ಪಿಎಸ್‌ಐ ಹುದ್ದೆಗೆ ನೇಮಕವಾಗಿದ್ದಾರೆ. ಹೂಕಟ್ಟಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಈ ಕುಟುಂಬದಲ್ಲಿ ಬಡತನದ ಮಧ್ಯೆಯೂ ಛಲಬಿಡದೆ ಪಿಎಸ್‌ಐ ಆಗಿ ಆಯ್ಕೆಯಾಗುವ ಮೂಲಕ ಬೇಗಂ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರಿನ ಬಸ್ ನಿಲ್ದಾಣ ಬಳಿ ಹೂವು ಮಾರುವ ಮೌಲಾಹುಸೇನ ಪಟೇಲ್ ಪುತ್ರಿ ಫರೀದಾ ಈ …
Read More »ವೈದ್ಯನ ಎಡವಟ್ಟು ಬಡ್ ಕುಟುಂಬ ಸಂಕಷ್ಟಕ್ಕೆ
ಬೆಂಗಳೂರು : ಜ್ವರ ಕಾಣಿಸಿಕೊಂಡು ಚಿಕಿತ್ಸೆ ಪಡೆಯಲು ಬಂದಿದ್ದ ಯುವಕನಿಗೆ ವೈದ್ಯರೊಬ್ಬರು ಇಂಜೆಕ್ಷನ್ ಮಾಡಿದ್ದರು. ಈಗ ಆ ಜಾಗದಲ್ಲಿ ದೇಹ ಕೊಳೆಯಲು ಶುರುವಾಗಿದೆ. ವೈದ್ಯರ ಪ್ರಮಾದಿಂದ ಬಡ ಕುಟುಂಬವೊಂದು ಸಂಕಷ್ಟಕ್ಕೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ತಾಲೂಕು ಮೈಲಸಂದ್ರ ಗ್ರಾಮದ ನಿವಾಸಿ ಮುರುಳಿ ಎಂಬ ಯುವಕ ಅನಾರೋಗ್ಯ ಪೀಡಿತನಾಗಿ ಆಸ್ಪತ್ರೆ ಸೇರಿದವರು. ಜನವರಿ 6ರಂದು ಯುವಕ ಮುರುಳಿಗೆ ಜ್ವರ ಕಾಣಿಸಿತ್ತು. ಸಮೀಪದ ಸಾನ್ಸಿಯಾ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ …
Read More »ಅವಹೇಳನ ಆರೋಪ, ಉಸ್ಮಾನ್ ಘನಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಆರಂಭ
ಇಳಕಲ್ (ಬಾಗಲಕೋಟೆ ಜಿಲ್ಲೆ): ಭಾರತ ಮಾತೆ, ಗೋವು ಹಾಗೂ ಗಂಗಾ ನದಿಯ ಬಗ್ಗೆ ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಉಸ್ಮಾನ್ ಘನಿ ಹುಮನಾಬಾದ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ಭಾರತ ಮಾತೆ, ಗೋವು ಹಾಗೂ ಗಂಗಾ ನದಿಯ ಬಗ್ಗೆ ಉಸ್ಮಾನ್ ಘನಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಇತ್ತೀಚೆಗೆ ಜಿಲ್ಲೆಯಾದ್ಯಂತ …
Read More »ನೇತಾಜಿ ಜೀವಂತ ಇದ್ದಿದ್ದರೆ ಮುಸ್ಲಿಮರ ಕುರಿತ ಮೋದಿ ವರ್ತನೆಯನ್ನು ಟೀಕಿಸುತ್ತಿದ್ದರು”: ಸುಗತ ಬೋಸ್
ಹೊಸದಿಲ್ಲಿ, ಜ. 27: ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು ಜೀವಂತ ಇದ್ದಿದ್ದರೆ, ನರೇಂದ್ರ ಮೋದಿ ಸರಕಾರ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಕಟುವಾಗಿ ಟೀಕಿಸುತ್ತಿದ್ದರು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಸೋದರಳಿಯ ಹಾಗೂ ಜೀವನಚರಿತ್ರೆಯ ಲೇಖಕ ಪ್ರೊ. ಸುಗತಾ ಬೋಸ್ ಹೇಳಿದ್ದಾರೆ. ‘ದಿ ವೈರ್’ನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನೇತಾಜಿ ಅವರು ಜೀವಂತ ಇದ್ದಿದ್ದರೆ, ನರಮೇಧ ನಡೆಸುವಂತೆ ಕರೆ ನೀಡಲು ಯಾರೊಬ್ಬರಿಗೂ ಧೈರ್ಯ ಇರುತ್ತಿರಲಿಲ್ಲ ಎಂದಿದ್ದಾರೆ. …
Read More »ಅರಭಾವಿ ಕ್ಷೇತ್ರದ ರಸ್ತೆಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ 52 ಕೋಟಿ ರೂ. ಅನುದಾನ ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಅರಭಾವಿ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ 50 ಕೋಟಿ ರೂ. ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 2 ಕೋಟಿ ರೂ.ಗಳು ಸೇರಿ ಒಟ್ಟು 52 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಕ್ಷೇತ್ರದಲ್ಲಿರುವ ರಸ್ತೆಗಳ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆಯ ಒಟ್ಟು 34.53 ಕಿ.ಮೀ ರಸ್ತೆಗಳ ಸುಧಾರಣೆಗಾಗಿ 32 ಕೋಟಿ ರೂ. ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ …
Read More »ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ಮೋದಿಗೆ ಪತ್ರ,,
ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ಮೋದಿಗೆ ಪತ್ರ,, ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ ಬಾವ ಚಿತ್ರ ತೆಗೆಸಿ ಪೂಜೆ ಮಾಡಿ ಅವಮಾನ ಮಾಡಿದ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಲು ಗೋಕಾಕದಲ್ಲಿ ಬಸವೇಶ್ವರ ವೃತ್ತದಲ್ಲಿ ಗೋಕಾಕದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೆಂದ್ರ ಮಹಾಸ್ವಾಮಿಗಳ ಮುಖಂಡತ್ವದಲ್ಲಿ ಹಾಗೂ ಯುವ ದಲಿತ ಸಮಿತಿ ನೇತೃತ್ವದಲ್ಲಿ ವಿವಿದ ಸಂಘಟನೆಗಳಿಂದ ಪ್ರದಾನ ಮಂತ್ರಿಯವರಿಗೆ ಸಾವಿರಾರು ಪತ್ರ ಬರೆದು ಪತ್ರ ಚಳುವಳಿ ಮಾಡಲಾಯಿತು. ಈ ಸಮಯದಲ್ಲಿ ಮಾತನಾಡಿದ …
Read More »ನೂತನವಾಗಿ ಆಯ್ಕೆಯಾದ ತಾಲೂಕಿನ ಪಿಎಸ್‌ಐ ಗಳಿಗೆ ಸನ್ಮಾನ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರಿಂದ
ಗೋಕಾಕ ನಗರದ ಸಾಹುಕಾರ ಗೃಹ ಕಛೇರಿಯಲ್ಲಿ ಇಂದು 2021. 22ನೇ ಸಾಲಿನ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಗೋಕಾಕ ತಾಲೂಕಿನ ಶಿವಾಪೂರ.ಕೊ ಗ್ರಾಮದ ಕು.ಕಿರಣ ಬಸಗೌಡ ಪಾಟೀಲಘಟಪ್ರಭಾ ಪಟ್ಟಣದ ಕು.ಚೈತ್ರಾ ಹಣಮಂತ ಗಿಡುರಮಮದಾಪೂರ ಗ್ರಾಮದ ಕು.ಕೀರ್ತಿ ನಿಂಗಪ್ಪ ಕಮತ ಇವರಿಗೆ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರು ಸನ್ಮಾನಿಸಿ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಭೀಮನಗೌಡ ಪೋಲೀಸಗೌಡರ,ಟಿ.ಆರ್ ಕಾಗಲ್,ಮಡ್ಡೆಪ್ಪ ತೋಳಿನವರ,ಬಿಇಓ ಜಿ.ಬಿ ಬಳಗಾರ,ಸುರೇಶ ಸನದಿ, ಲಕ್ಷ್ಮೀಕಾಂತ ಎತ್ತಿನಮನಿ …
Read More »“ತುಪ್ಪ” ಖರೀದಿಸುವವರೇ ಎಚ್ಚರ .! ರಾಜಧಾನಿ ಬೆಂಗಳೂರಿನಲ್ಲಿ “ನಕಲಿ ನಂದಿನಿ ತುಪ್ಪ” ಪತ್ತೆ..!
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ದಂಧೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಜಯನಗರ, ಹನುಮಂತನಗರ ಮತ್ತು ಇತರ ಪ್ರದೇಶದಲ್ಲಿ ಸ್ಯಾಂಪಲ್ ಸಂಗ್ರಹಿಸಿದ ಬಳಿಕ ನಡೆಸಲಾದ ಪರೀಕ್ಷೆಯ ವೇಳೆ ನಕಲಿ ತುಪ್ಪ ಎಂದು ಬೆಳಕಿಗೆ ಬಂದಿದೆ. ನಂದಿನಿ ಮಾರ್ಕೇಟಿಂಗ್ ವಿಭಾದ ಹಿರಿಯ ಅಧಿಕಾರಿ ಸುರೇಶ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆ ಮೈಸೂರಿನಲ್ಲಿ ನಕಲಿ …
Read More »