ಹೊಸದಿಲ್ಲಿ: ಕರ್ನಾಟಕದ ನಂತರ ಇದೀಗ ಮಧ್ಯಪ್ರದೇಶದಲ್ಲಿಯೂ ಹಿಜಾಬ್ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಮಧ್ಯಪ್ರದೇಶದ ಡಾ. ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದಲ್ಲಿ (ಎಚ್‌ಜಿಯು) ಮುಸ್ಲಿಂ ಬಾಲಕಿಯೊಬ್ಬಳು ಹಿಜಾಬ್ ಧರಿಸಿ ತರಗತಿಯೊಳಗೆ ನಮಾಜ್ ಮಾಡುತ್ತಿರುವ ವೀಡಿಯೊ ವಿವಾದವನ್ನು ಹುಟ್ಟುಹಾಕಿದೆ. ಹಿಂದು ಕಾರ್ಯಕರ್ತರ ಗುಂಪು ಹಿಂದು ಜಾಗರಣ ಮಂಚ್‌ನಿಂದ ದೂರನ್ನು ಸ್ವೀಕರಿಸಿದ ನಂತರ ವಿಶ್ವವಿದ್ಯಾಲಯವು ಇದೀಗ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ಮಧ್ಯಪ್ರದೇಶದ ಸಾಗರ್‌ನಲ್ಲಿರುವ ವಿಶ್ವವಿದ್ಯಾನಿಲಯಕ್ಕೆ ಕ್ರಮಕ್ಕಾಗಿ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು. ನಂತರ ತನಿಖೆಗೆ …
Read More »ಕೆಎಸ್‌ಆರ್‌ಟಿಸಿ ಬಸ್- ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ದಂಪತಿ ಸಾವು
ತುಮಕೂರು: ಮಧುಗಿರಿ ತಾಲ್ಲೂಕಿನ ಕಸಬಾ ವ್ಯಾಪ್ತಿಯ ಕವಾಡಿಗರ ಪಾಳ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ, ಸ್ಥಳದಲ್ಲಿಯೇ ದಂಪತಿ ಮೃತಪಟ್ಟಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಬೈಕ್‌ನಲ್ಲಿ ಸಾಗುತ್ತಿದ್ದ ತಾಲ್ಲೂಕಿನ ಗೊಂದಿಹಳ್ಳಿಯ ಶಾಂಭಶಿವಯ್ಯ( 73) ಹಾಗೂ ಶಂಕರಮ್ಮ (67) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತುಮಕೂರಿನಿಂದ ಬರುತ್ತಿದ್ದ ಬೈಕ್‌ಗೆ ಮಧುಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕವಾಡಿಗರ ಪಾಳ್ಯದ ಸಮೀಪ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಸ್ ವಶಕ್ಕೆ …
Read More »ಇಂದು, ನಾಳೆ ಭಾರತ್ ಬಂದ್ ಗೆ ಕರೆ: ದೇಶಾದ್ಯಂತ ಮುಷ್ಕರ: ಬ್ಯಾಂಕ್ ಸೇರಿ ಹಲವು ಸೇವೆ ವ್ಯತ್ಯಯ
ನವದೆಹಲಿ: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸೋಮವಾರ ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಕಾರ್ಮಿಕ, ರೈತ ವಿರೋಧಿ, ಜನವಿರೋಧಿ ಮತ್ತು ರಾಷ್ಟ್ರವಿರೋಧಿ ನೀತಿಗಳ ವಿರುದ್ಧ ಒಕ್ಕೂಟಗಳು ಎರಡು ದಿನಗಳ ಅಖಿಲ ಭಾರತ ಮುಷ್ಕರವನ್ನು ಘೋಷಿಸಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯೋಜನೆ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಮುಷ್ಕರದಲ್ಲಿ ಭಾಗವಹಿಸುತ್ತಿವೆ. ಇಂದು …
Read More »ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್
ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ಎಸ್‌ಎಸ್‌ಎಲ್ಸಿ ಪರೀಕ್ಷೆ ಇಂದಿನಿಂದ ಆರಂಭವಾಗಲಿದೆ. ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಹಿಜಾಬ್ ಧರಿಸಿ ಬಂದರೆ ಪರೀಕ್ಷಾ ಕೊಠಡಿಗೆ ಅವಕಾಶ ನೀಡುವುದಿಲ್ಲ. ಕನಿಷ್ಠ ಒಂದು ಗಂಟೆಗೆ ಮೊದಲೇ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಮೊದಲ ದಿನ ನಡೆಯಲಿರುವ ಪ್ರಥಮ ಭಾಷೆ ಪರೀಕ್ಷೆಯನ್ನು ಎದುರಿಸಿ. ಈ ಬಾರಿ 8,73,846 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 3444 ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷಾ ಕೇಂದ್ರಗಳ …
Read More »ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ರಂಗಭೂಮಿ ಕಲಾವಿದರು ಸ್ಥಳದಲ್ಲೇ ಸಾವು
ಹಾವೇರಿ : ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ರಂಗಭೂಮಿ ಕಲಾವಿದರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಬಳಿ ಸಂಭವಿಸಿದೆ. ಮೃತರನ್ನು ಗೀತಾ ದಾವಣಗೆರೆ (34) ಮತ್ತು ಮಂಜುಳಾ (36) ಎಂದು ಗುರುತಿಸಲಾಗಿದೆ. ಮೃತರು ದಾವಣಗೆರೆ ಮೂಲದವರು ಎಂದು ತಿಳಿದುಬಂದಿದೆ. ಲಾರಿಯನ್ನು ಓವರ್ ಟೇಕ್ ಮಾಡಲು ಹೋದಾಗ, ಈ ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ದಾವಣಗೆರೆಯಿಂದ ಕಾರವಾರಕ್ಕೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ …
Read More »ಮಂಡ್ಯ ತಹಸೀಲ್ದಾರ್ ಅಮಾನತು: ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ಗ್ರಾಮಸ್ಥರು
ಮಂಡ್ಯ: ಮಂಡ್ಯ ತಹಸೀಲ್ದಾರ್ ಅಮಾನತುಗೊಂಡಿದ್ದಕ್ಕೆ ಹಳೇ ಬೂದನೂರು ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿರುವ ಅಪರೂಪದ ಪ್ರಸಂಗ ವರದಿಯಾಗಿದೆ. ಕರ್ತವ್ಯ ಲೋಪ, ಲಂಚಕ್ಕೆ ಬೇಡಿಕೆ ಮತ್ತು ದುರ್ನಡತೆ ಆರೋಪದಡಿ ತಹಸೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ಎಂಬುವರನ್ನು ಅಮಾನತು ಮಾಡಲಾಗಿದೆ. ತಹಸೀಲ್ದಾರ್ ಅಮಾನತು ಆಗಿದ್ದಕ್ಕೆ ಡಿಸಿ ಅಶ್ವಥಿಗೆ ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮಸ್ಥರು ಜೈಕಾರ ಕೂಗಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಗ್ರಾಮಸ್ಥರು ಸ್ವಂತ ಮನೆಗಾಗಿ ಹಲವು ಬಾರಿ ಹೋರಾಟ ನಡೆಸಿದ್ದಾರೆ. ಆದರೆ, …
Read More »ಕರ್ನಾಟಕದ ದುಃಸ್ಥಿತಿಗೆ ಸಿದ್ದರಾಮಯ್ಯ ಕಾರಣ; ಕುಮಾರಸ್ವಾಮಿ
ಕೋಲಾರ, ಮಾರ್ಚ್”ರಾಜ್ಯದಲ್ಲಿ ಉಂಟಾಗಿರುವ ಅಶಾಂತಿಯ ವಾತಾವರಣ ಮತ್ತು ಎಲ್ಲ ಅಹಿತಕರ ಘಟನೆಗಳಿಗೆ ಪ್ರತಿಪಕ್ಷ ನಾಯಕಸಿದ್ದರಾಮಯ್ಯಅವರೇ ಮೂಲ ಕಾರಣ” ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು. ಭಾನುವಾರ ಕೋಲಾರದಲ್ಲಿ ಮಾತನಾಡಿದ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. “ಧಾರ್ಮಿಕ ಸ್ಥಳಗಳಲ್ಲಿ, ಜಾತ್ರೆಗಳಲ್ಲಿ ಒಂದು ಧರ್ಮದ ಜನರಿಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ, ಹಿಜಾಬ್, ಕೇಸರಿ ಶಾಲು ಅಂತ ಹೇಳಿ ಶಾಲೆ ಕಾಲೇಜುಗಳಲ್ಲಿ ಸಂಘರ್ಷ ಉಂಟು ಮಾಡಲಾಯಿತು. ಇದೆಲ್ಲಕ್ಕೂ …
Read More »ರಸ್ತೆ ದಾಟುತ್ತಿದ್ದ ಬಾಲಕನ ದೇಹ ರಸ್ತೆಯಲ್ಲೇ ಛಿದ್ರ; ಉದ್ರಿಕ್ತ ಜನರಿಂದ ಟಿಪ್ಪರ್ಗೆ ಬೆಂಕಿ..
ಕಲಬುರಗಿ: ರಸ್ತೆ ದಾಟುತ್ತಿದ್ದ ಬಾಲಕನಿಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಆತನ ದೇಹ ರಸ್ತೆಯಲ್ಲೇ ಛಿದ್ರಗೊಂಡಿದ್ದು, ಉದ್ರಿಕ್ತ ಜನರು ಟಿಪ್ಪರ್ಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿ ನಗರದ ಹೀರಾಪುರ ಬಡಾವಣೆಯ ಫ್ಲೈಓವರ್ ಬಳಿ ಈ ಅವಘಡ ಸಂಭವಿಸಿದೆ. ಮನೀಷ್ ಮಲ್ಲಿಕಾರ್ಜುನ (10) ಸಾವಿಗೀಡಾದ ಬಾಲಕ. ಈತ ಇಂದು ಪಾಲಕರ ಜತೆ ರಸ್ತೆ ದಾಟುತ್ತಿದ್ದಾಗ ಮುಂದೆ ಓಡಿದ್ದ. ಅದೇ ಸಮಯಕ್ಕೆ ಮೇಲ್ಸೇತುವೆಯಿಂದ ವೇಗವಾಗಿ ಬರುತ್ತಿದ್ದು ಟಿಪ್ಪರ್ ಡಿಕ್ಕಿ ಹೊಡೆದಿದ್ದು, …
Read More »ರಾಜ್ಯಕ್ಕೆ ರಾಜಕೀಯ ಚಾಣಕ್ಯ ಅಮಿತ್ ಶಾ ಎಂಟ್ರಿ.. ಏಕೆ?
ಕೇಂದ್ರ ಗೃಹ ಸಚಿವ, ರಾಜಕೀಯ ಚಾಣಾಕ್ಷ ಅಮಿತ್ ಶಾ ಕರ್ನಾಟಕಕ್ಕೆ ಎಂಟ್ರಿ ಕೊಡಲಿದ್ದಾರೆ. ತುಮಕೂರಿನ ಪ್ರಸಿದ್ದ ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠಕ್ಕೆ ಆಗಮಿಸಲಿರುವ ಅವರು ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತೋತ್ಸವದ ಹಿನ್ನೆಲೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಿದ್ದಗಂಗಾ ಮಠ… ತ್ರಿವಿಧ ದಾಸೋಹದಿಂದ ಪ್ರಸಿದ್ದಿ ಪಡೆದ ಕ್ಷೇತ್ರ. ಇಂತಹ ಕ್ಷೇತ್ರದ ಮಠಾಧಿಪತಿಗಳಾಗಿದ್ದ ನಡೆದಾಡುವ ದೇವರು ಡಾ. ಶ್ರೀಶಿವಕುಮಾರ ಮಹಾಸ್ವಾಮಿಗಳ 115 ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಏಪ್ರಿಲ್ 1 …
Read More »BREAKING ತಿರುಪತಿ ಹೆದ್ದಾರಿಯಲ್ಲಿ ಭೀಕರ ಅಪಘಾತ; ಮದ್ವೆ ಬಸ್ ಪಲ್ಟಿಯಾಗಿ 8 ಸಾವು.. 55 ಮಂದಿ ಗಂಭೀರ
ಮದುವೆ ಬಸ್ 50 ಅಡಿ ಆಳದ ಕಂದಕಕ್ಕೆ ಬಿದ್ದಿರುವ ದುರ್ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ತಾಲೂಕಿನ ಬಾಕರಪೇಟೆ ರಸ್ತೆಯಲ್ಲಿ ನಡೆದಿದೆ. ಮದನಪಲ್ಲಿ-ತಿರುಪತಿ ರಾಷ್ಟ್ರೀಯ ಹೆದ್ದಾರಿಯ ಭಾಕರಪೇಟ ಪಾಸ್‌ನ ಮುಖ್ಯ ತಿರುವಿನಲ್ಲಿ ಅನಾಹುತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಮಹಿಳೆ, ಮಗು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ್ದ ರಕ್ಷಣಾ ಸಿಬ್ಬಂದಿ ಏಳು ಜನರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಾಲಿಶೆಟ್ಟಿ ವೆಂಗಪ್ಪ, ಮಾಲಿಶೆಟ್ಟಿ ಮುರಳಿ, …
Read More »