ಮುಂಬೈ: ಲಿಯಾಮ್ ಲಿವಿಂಗ್‌ಸ್ಟೋನ್ ಆಕರ್ಷಕ ಆಲ್‌ರೌಂಡ್ ಪ್ರದರ್ಶನದ ಫಲವಾಗಿ ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ವಿರುದ್ಧ ಅಮೋಘ ಜಯ ದಾಖಲಿಸಿತು. ಇಲ್ಲಿನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗು ಮಯಾಂಕ್ ಅಗರ್‌ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ತಂಡ ಚೆನ್ನೈಗೆ 54 ರನ್‌ಗಳ ಸೋಲುಣಿಸಿತು.
Read More »ಇ-ಶ್ರಮ್ ಕಾರ್ಡ್ ಹೊಂದಿದ ಕಾರ್ಮಿಕರಿಗೆ ಗುಡ್ ನ್ಯೂಸ್: ಸಿಗಲಿದೆ ಹಲವು ಸೌಲಭ್ಯ
ನವದೆಹಲಿ: ಅಸಂಘಟಿತ ವರ್ಗದ ಜನರಿಗೆ ಇ-ಶ್ರಮ್ ಕಾರ್ಡ್ ಮೂಲಕ ಸರ್ಕಾರ ಸಾಕಷ್ಟು ಸಹಾಯ ಮಾಡುತ್ತಿದೆ, ಇ-ಶ್ರಮ್ ಕಾರ್ಡ್ ಯೋಜನೆಗೆ ಸಂಬಂಧಿಸಿದ ಜನರ ಖಾತೆಗಳಿಗೆ ಮುಂದಿನ ಕಂತು 500 ರೂ.ಗಳನ್ನು ಸರ್ಕಾರ ಮತ್ತೊಮ್ಮೆ ಕಳುಹಿಸಲಿದೆ. ಕಂತಿನ ಹೊರತಾಗಿ ಫಲಾನುಭವಿಗಳು ಹಲವು ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಈ ಯೋಜನೆಯ ಪ್ರಕಾರ, ಅನೇಕ ಪ್ರಯೋಜನಗಳನ್ನು ಜನರಿಗೆ ನೀಡಲಾಗುತ್ತಿದೆ. ಕೆಲ ಯೋಜನೆಗಳಲ್ಲಿ ಉದ್ಯೋಗ, ವಿಮೆಯಂತಹ ಸೌಲಭ್ಯಗಳನ್ನು ನೀಡಿದರೆ ಮತ್ತೊಂದೆಡೆ ಕೆಲವು ಯೋಜನೆಗಳಲ್ಲಿ ಜನರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. …
Read More »ಬಳ್ಳಾರಿಯ ಗುಡ್ಡವೊಂದರಲ್ಲಿ ಪತ್ತೆಯಾಗಿದ್ದ ತಲೆಬುರುಡೆಯ ನಿಗೂಢ ಪ್ರಕರಣ ಭೇದಿಸಿದ ಪೊಲೀಸರು!
ಬಳ್ಳಾರಿ: ಮಾರ್ಚ್ 19 ರಂದು ಕಂಪ್ಲಿ ತಾಲೂಕಿನ ವಿಠ್ಠಲಾಪುರದ ಗುಡ್ಡದಲ್ಲಿ ಪತ್ತೆಯಾಗಿದ್ದ ಅನಾಮಧೇಯ ವ್ಯಕ್ತಿಯ ತಲೆಬುರುಡೆ ಪ್ರಕರಣವನ್ನು ಬಳ್ಳಾರಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆ ಬುರುಡೆ, ಶರ್ಟ್ ಆಧಾರದ ಮೇಲೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಾರ್ಚ್ 19 ರಂದು ಕಂಪ್ಲಿ ತಾಲೂಕಿನ ವಿಠ್ಠಲಾಪುರದ ಗುಡ್ಡದಲ್ಲಿ ಕೊಲೆ ನಡೆದಿತ್ತು. ಜೇರ್ವಗಿ ತಾಲೂಕಿನ ಬಳ್ಳಂಡುಗಿ ತಾಲೂಕಿನ ಅಮರೇಶ ಕೊಲೆಯಾಗಿದ್ದ ವ್ಯಕ್ತಿ. ಅಮರೇಶ ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಇಂದಿರಾ ಪ್ಲಾಂಟ್ನಲ್ಲಿ ಹಮಾಲಿ ಕೆಲಸ …
Read More »ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದ ಜೊತೆಗೆ ಇನ್ಮುಂದೆ ಎಲ್ ಪಿ ಜಿ ಸಿಲಿಂಡರ್, ಪಿಂಚಣಿ ಸೌಲಭ್ಯ
ಬೆಂಗಳೂರು : ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದ ಜೊತೆಗೆ ಇನ್ಮುಂದೆ ಎಲ್ ಪಿ ಜಿ ಸಿಲಿಂಡರ್, ಪಿಂಚಣಿ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ. ಕೇಂದ್ರ ಮತ್ತು ಸರ್ಕಾರದ ಅನೇಕ ಯೋಜನೆಗಳನ್ನು ಜನರಿಗೆ ತಲುಪಿಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದ್ದು, ನ್ಯಾಯಬೆಲೆ ಅಂಗಡಿಗಳು ಇನ್ಮುಂದೆ ಸಾಮಾನ್ಯ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಈ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಗೋಧಿ ಜೊತೆಗೆ ಎಲ್ ಪಿಜಿ …
Read More »ರಾಜ್ಯ & ಕೇಂದ್ರ ರಾಜಕೀಯದಲ್ಲಿ ಬದಲಾವಣೆ ಇಲ್ಲ: ಭವಿಷ್ಯ ನುಡಿದ ಗೊಂಬೆಗಳು!
ಧಾರವಾಡ: ಈ ವರ್ಷ ರಾಜ್ಯ ಮತ್ತು ಕೇಂದ್ರ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಮಣ್ಣಿನ ಗೊಂಬೆಗಳು ಭವಿಷ್ಯ(Doll Prediction) ನುಡಿದಿವೆ. ಧಾರವಾಡ ಜಿಲ್ಲೆಯ ಹನುಮನಕೊಪ್ಪ ಗ್ರಾಮದ ಗೊಂಬೆಗಳು ಪ್ರತಿವರ್ಷ ಯುಗಾದಿ ಹಬ್ಬದಂದು ಭವಿಷ್ಯ ನುಡಿಯುತ್ತವೆ. ಅದೇ ರೀತಿ ಈಗ ರಾಜಕೀಯ ಭವಿಷ್ಯವನ್ನು ತಿಳಿಸಿವೆ. ಹನುಮನಕೊಪ್ಪ(Hanumanakoppa)ದ ಮಣ್ಣಿನ ಗೊಂಬೆಗಳು ರಾಜಕೀಯ ಭವಿಷ್ಯವನ್ನು ನಿಖರವಾಗಿ ಹೇಳುತ್ತವೆ. ಪ್ರತಿ ಯುಗಾದಿಗೆ ಇಲ್ಲಿ ಗೊಂಬೆ ಭವಿಷ್ಯ ನಡೆಯುತ್ತದೆ. ಕಳೆದ ವರ್ಷ ಬೊಂಬೆಗಳು ಸಿಎಂ ಬದಲಾವಣೆ ಮುನ್ಸೂಚಣೆ ನೀಡಿದ್ದವು. …
Read More »ಮುಸ್ಲಿಂ ಮಾಂಸ ಮಾರಾಟಗಾರನ ಮೇಲೆ ಹಲ್ಲೆ: 5 ಬಜರಂಗದಳ ಕಾರ್ಯಕರ್ತರ ಬಂಧನ,
ಬೆಂಗಳೂರು: ಹಲಾಲ್ ಕಟ್ ಮಾಂಸ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ದಾಳಿ ನಡೆಸಿದ ಐದು ಮಂದಿ ಬಜರಂಗದಳ ಕಾರ್ಯಕರ್ತರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಈ ಮಧ್ಯೆ ಇಂದು ಯುಗಾದಿ ಹೊಸತೊಡಕಿನ ದಿನ ರಾಜ್ಯಾದ್ಯಂತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರ ಹಲಾಲ್ ಕಟ್ ಮಾಂಸ ನಿಷೇಧಿಸಿ ಅಭಿಯಾನ ತೀವ್ರವಾಗಿದೆ. ರಾಜ್ಯದ ಜನತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದೆ ಶಾಂತಿಯಿಂದ ಸಂತೋಷವಾಗಿ ಯುಗಾದಿ ಹೊಸತೊಡಕನ್ನು ಆಚರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ …
Read More »ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡಿದ್ದು ಉಲ್ಕೆಯಲ್ಲ, ಉಪಗ್ರಹದ ಅವಶೇಷ
ಮಹಾರಾಷ್ಟ್ರ/ಮಧ್ಯಪ್ರದೇಶ: ಅಮರಾವತಿ, ನಾಗಪುರ ಸೇರಿ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಮತ್ತು ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಉಲ್ಕಾಪಾತವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ಉಲ್ಕಾಪಾತವಲ್ಲ, ಉಪಗ್ರಹದ ಅವಶೇಷಗಳು ಎಂದು ತಿಳಿದುಬಂದಿದೆ. ಚಂದ್ರಾಪುರ ಜಿಲ್ಲೆಯ ಸಿಂಧೇವಾಹಿ ತಾಲೂಕಿನ ಲಾಡಬೋರಿ ಗ್ರಾಮದಲ್ಲಿ ಉಪಗ್ರಹದ ಅವಶೇಷಗಳು ಬಿದ್ದಿರುವುದು ಬೆಳಕಿಗೆ ಬಂದಿದೆ. ಖಗೋಳಶಾಸ್ತ್ರಜ್ಞರ ತಂಡವು ಈ ಸ್ಥಳಕ್ಕೆ ತಲುಪಿದ್ದು, ಉಪಗ್ರಹದ ಅವಶೇಷಗಳನ್ನು ಸಂಗ್ರಹಿಸುತ್ತಿದೆ. ಲಾಡ್ಬೋರಿ ಗ್ರಾಮದಲ್ಲಿ ಶನಿವಾರ ರಾತ್ರಿ ವಿಮಾನ ಪತನವಾದಂತ ಸದ್ದು …
Read More »‘ಜೆಡಿಎಸ್’ ಮತ್ತೊಂದು ವಿಕೆಟ್ ಪತನ: ಶೀಘ್ರವೇ ‘ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ’ ಬಿಜೆಪಿ ಸೇರ್ಪಡೆ
ಬೆಂಗಳೂರು: ಈಗಾಗಲೇ ಹಲವರು ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ( JDS Party ) ಗುಡ್ ಬೈ ಹೇಳಿ, ವಿವಿಧ ರಾಷ್ಟ್ರೀಯ ಪಕ್ಷಗಳನ್ನು ಸೇರಿದ್ದಾರೆ. ಈ ಬಳಿಕ, ಈಗ ಜೆಡಿಎಸ್ ನ ಮತ್ತೊಂದು ವಿಕೆಟ್ ಪತನಗೊಂಡಿದೆ. ಜೆಡಿಎಸ್ ತೊರೆದು, ಶೀಘ್ರವೇ ಬಿಜೆಪಿ ( BJP Party ) ಸೇರ್ಪಡೆಯಾಗೋದಾಗಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ( Basavaraj Horatti ) ಘೋಷಣೆ ಮಾಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಈ …
Read More »ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ
ಬೆಂಗಳೂರು : ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ ಹೇಳಿದ್ದಾರೆ. ಪ್ರಸ್ತುತ ರೈಲ್ವೆ ವಿಭಾಗದ ಎಡಿಜಿಪಿ ಆಗಿದ್ದ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಭಾವನಾತ್ಮಕ ಟ್ವೀಟ್ ಮಾಡಿರುವ ಅವರು, ಕಚೇರಿಯಿಂದ ಮನೆಯ ಕಡೆ ಕೊನೆಯ ಟ್ರಿಪ್ ಎಂದು ಬರೆದು, ಸಿಬ್ಬಂದಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. 2021ರ ಸೆಪ್ಟೆಂಬರ್‌ನಲ್ಲಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದ ಭಾಸ್ಕರ್ ರಾವ್, ಸರ್ಕಾರವು ಕೂಡಲೇ …
Read More »ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ : ಸಿಎಂ ಬೊಮ್ಮಾಯಿ
ಬೆಂಗಳೂರು : ಹನುಮನ ಜನ್ಮಸ್ಥಳ ಹಂಪಿ ಬಳಿ ಇರುವ ಅಂಜನಾದ್ರಿ ಶ್ರೀ ಕ್ಷೇತ್ರವನ್ನು ಸರ್ಕಾರ ಅಭಿವೃದ್ಧಿಗೆ ರಾಜ್ಯ ಸರ್ಕಾರ 100 ಕೋಟಿ ರೂ. ಅನುದಾನವನ್ನು ಬಜೆಟ್ ನಲ್ಲಿ ಒದಗಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿ ಶ್ರೀ ರಾಮ ಸೇವಾ ಮಂಡಳಿ, ರಾಮನವಮಿ ಉತ್ಸವ ಸಮಿತಿ ಅವರು ಏರ್ಪಡಿಸಿದ್ದ 84ನೇ ಶ್ರೀ ರಾಮನವಮಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬೊಮ್ಮಾಯಿ, ಹನುಮನ …
Read More »