ಬೇಸಿಗೆಯಿಂದಾಗಿ ಮೊಟ್ಟೆ ದರದಲ್ಲಿ ಭಾರಿ ಇಳಿಕೆಯಾಗಿದೆ. ಈ ಹಿಂದೆ 5.30-6.30 ರೂ. ತಲುಪಿದ್ದ ಮೊಟ್ಟೆ ಬೆಲೆ ಈಗ 3.70-4.50 ರೂ. ತಲುಪಿದೆ. ಹೌದು ಬೆಂಗಳೂರು, ಮೈಸೂರಿನಲ್ಲಿ ಮೊಟ್ಟೆ ಬೆಲೆ 4.30 ರೂ.ನಷ್ಟಿದ್ದರೆ ಹೈದರಾಬಾದ್ ನಲ್ಲಿ 3.70 ರೂ. ನಷ್ಟಿದೆ. ಹೊಸಪೇಟೆಯಲ್ಲಿ 3.90 ರೂ.ನಷ್ಟಿದೆ. ಇದು ಸಗಟು ಬೆಲೆಯಾಗಿದ್ದು ಚಿಲ್ಲರೆ ಬೆಲೆಯಲ್ಲಿ 20-30 ಪೈಸೆಯಷ್ಟು ಹೆಚ್ಚಳವಾಗಲಿದೆ. ಬೇಸಿಗೆಯಲ್ಲಿ ಮೊಟ್ಟೆ ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಬೆಲೆ ಕೂಡ ಕುಸಿತಕಂಡಿದೆ.
Read More »ರಾಯಚೂರು: ಬಾವಿಗೆ ಬಿದ್ದು ಯುವಕ ಸಾವು
ರಾಯಚೂರು: ಸಮೀಪದ ಯರಮರಸ್ ನಲ್ಲಿ ಬಾವಿಗೆ ಯುವಕನೋರ್ವ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಡಿ.ಪಾಂಡು ( 27) ಎಂದು ಗುರುತಿಸಲಾಗಿದೆ. ಬಾವಿಯಲ್ಲಿದ್ದ ಜಲಚರಗಳಿಗೆ ಆಹಾರ ನೀಡುವ ಹವ್ಯಾಸ ಹೊಂದಿದ್ದ ಪಾಂಡು ಶನಿವಾರ ಕಾಲು ಜಾರಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಈಜು ಬಾರದ ಕಾರಣ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ರವಿವಾರ ಬೆಳಗ್ಗೆ ಶವ ಮೇಲೆ ಬಂದಿದ್ದು, ಘಟನೆ ಬೆಳಕಿಗೆ ಬಂದಿದೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ …
Read More »ಹಿಂದೂ-ಮುಸ್ಲೀಂ ಸೇರಿ ಕೇಸರಿ ಶಾಲು ಧರಿಸಿ, ಪಾನಕ-ಪಲಾರ ಹಂಚಿ ರಾಮನವಮಿ ಆಚರಣೆ :
ತುಮಕೂರು: ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಮುಸ್ಲೀಂ ವ್ಯಾಪಾರ ಬ್ಯಾನ್ ನಡುವೆಯೂ, ಇಂದು ರಾಮನವಮಿಯಂದು ( Rama Navami ), ಸಂಭ್ರಮದಿಂದ ಹಿಂದೂ-ಮುಸ್ಲೀಂ ಮುಖಂಡರು ಆಚರಿಸಿರೋ ಘಟನೆ, ತುಮಕೂರಿನಲ್ಲಿ ನಡೆದಿದೆ.ಇಂದು ತುಮಕೂರಿನ ಭದ್ರಮ್ಮ ಸರ್ಕಲ್ ನಲ್ಲಿ ಇಂದು ರಾಮನವಮಿಯ ಸಂದರ್ಭದಲ್ಲಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಕೇಸರಿ ಶಾಲು ತೊಟ್ಟು, ಜೈ ಶ್ರೀರಾಮ್ ಘೋಷಣೆ ಕೂಗಿ, ಸಾರ್ವಜನಿಕರಿಗೆ ಪಾನಕ-ಪಲಾರ, ಮಜ್ಜಿಗೆ ಹಂಚಿ ಗಮನ ಸೆಳೆದರು.
Read More »BJP, RSS ಕರ್ನಾಟಕದ ಜನ ತಲೆತಗ್ಗಿಸುವಂತಹ ಕೆಲಸ ಮಾಡ್ತಿದೆ: ಬಿ.ಕೆ ಹರಿಪ್ರಸಾದ್
ಬೆಳಗಾವಿ: ಬಿಜೆಪಿ (BJP), ಆರ್‍ಎಸ್‍ಎಸ್ (RSS) ನವರು ಕರ್ನಾಟಕದ ಜನ ತಲೆತಗ್ಗಿಸುವಂತಹ ಕೆಲಸ ಮಾಡ್ತಿದ್ದು, ಹಿಂದುಳಿದವರಿಗೆ ಮೀಸಲಾತಿ ರದ್ದುಪಡಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ (B.K Hariprasad) ಹೇಳಿದರು ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ರಾಷ್ಟ್ರವನ್ನು ಸ್ಥಾಪನೆ ಮಾಡಿದವರಿಗೂ ಅಪಮಾನ ಮಾಡುವಂತ ಘಟನೆ ನಡೀತಿದೆ. ಸ್ವಾತಂತ್ರ್ಯ ಹೋರಾಟ ಕೇವಲ ಒಂದು …
Read More »ಮಾರ್ಟಿನ್’ ಅಬ್ಬರಕ್ಕೆ ಮುಹೂರ್ತ ಫಿಕ್ಸ್
ಪೊಗರು’ ಚಿತ್ರದ ಸಕ್ಸಸ್ ನಂತರ ನಟ ಧ್ರುವ ಸರ್ಜಾ ಎ.ಪಿ ಅರ್ಜುನ್ ನಿರ್ದೇಶನದ `ಮಾರ್ಟಿನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ನಟನೆಯ `ಮಾರ್ಟಿನ್’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಚಿತ್ರತಂಡ. ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ `ಮಾರ್ಟಿನ್’ ಚಿತ್ರದಲ್ಲಿ ಧ್ರುವಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣದ `ಮಾರ್ಟಿನ್’ ಇದೇ ಸಪ್ಟೆಂಬರ್ 30ಕ್ಕೆ ತೆರೆಗೆ …
Read More »ಬೆಳಗಾವಿಯಲ್ಲಿಯೂ ಬೇರೆ ದೇಶದ ನೋಟುಗಳು, ಶಸ್ತ್ರಾಸ್ತ್ರಗಳು ಸಿಗುತ್ತವೆ: ಅಭಯ್ ಪಾಟೀಲ್
ಬೆಳಗಾವಿ: ಇಲ್ಲಿಯೂ ನಿಮಗೆ ಬೇರೆ ದೇಶದ ನೋಟುಗಳು ಹಾಗೂ ಶಸ್ತ್ರಾಸ್ತ್ರಗಳು ಸಿಗುತ್ತವೆ ಎಂದು ಶಾಸಕ ಅಭಯ್ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ಪತ್ತೆಯಾದ ಪಾಕಿಸ್ತಾನ ನೋಟು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪಾಟೀಲ್, ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ. ಬೆಳಗಾವಿಯಲ್ಲಿರುವ ಕೆಲವು ಪ್ರದೇಶಗಳನ್ನು ಪರಿಶೀಲಿಸಿದರೆ ಇಲ್ಲಿಯೂ ನಿಮಗೆ ಬೇರೆ ದೇಶದ ನೋಟುಗಳು ಸಿಗುತ್ತವೆ. ಶಸ್ತ್ರಾಸ್ತ್ರಗಳು ಕೂಡ ಸಿಗುತ್ತವೆ ಎಂದು ಗಂಭೀರ ಆರೋಪ ಮಾಡಿದರು.ಬೆಳಗಾವಿಯಲ್ಲಿರುವ ಪೊಲೀಸ್ ಡಿಪಾರ್ಟ್‍ಮೆಂಟ್ …
Read More »ಬೊಮ್ಮಾಯಿಯವರೇ ನೀವು ಹಸುವಿನ ವೇಷ ತೊಟ್ಟ ಗೋಮುಖವ್ಯಾಘ್ರ ಆಗುವುದು ಬೇಡ ಎಂದು ಶಾಸಕ ದಿನೇಶ್ ಗುಂಡೂರಾವ್
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ನೀವು ಹಸುವಿನ ವೇಷ ತೊಟ್ಟ ಗೋಮುಖವ್ಯಾಘ್ರ ಆಗುವುದು ಬೇಡ ಎಂದು ಶಾಸಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿಯಾಗಿ ನೀವು ಈ ರಾಜ್ಯದ ಯಜಮಾನನಿದ್ದಂತೆ. ನಾಡಿನ ದೊರೆಯಾಗಿ ಸರ್ವರನ್ನು ಸಮಾನವಾಗಿ ಕಾಣುವ ಔದಾರ್ಯ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. https://twitter.com/dineshgrao?ref_src=twsrc%5Etfw%7Ctwcamp%5Etweetembed%7Ctwterm%5E1513028171800604672%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fcongress-mla-dinesh-gundurao-lashesh-out-at-basavaraj-bommai-government%2F
Read More »ಪ್ರಧಾನಿ ಮೋದಿ- ಆರ್‍ಎಸ್‍ಎಸ್ ಮುಖ್ಯಸ್ಥ ಭಾಗವತ್ ಬಗ್ಗೆ ಆಕ್ಷೇಪಾರ್ಹ ಚಿತ್ರಗಳ ಫೋಸ್ಟ್
ಕಾನ್ಪುರ(ಉತ್ತರಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಗ್ಗೆ ಆಕ್ಷೇಪಾರ್ಹ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿರುವ ಹರಿಬಿಟ್ಟಿರುವ ಆರೋಪ ಉತ್ತರಪ್ರದೇಶದ ಕಾನ್ಪರದಲ್ಲಿ ಕೇಳಿ ಬಂದಿದೆ. ಹಿಂದೂ ದೇವ-ದೇವತೆಗಳು ಜತೆಗೂಡಿ ಮೋದಿ ಮತ್ತು ಭಾಗವತ್ ಅವರನ್ನು ಅವಹೇಳನಕಾರಿ ಚಿತ್ರಿಸಲಾಗಿದೆ ಎಂದು ವಕೀಲ ಅನಿರುದ್ಧ್ ಜೈಸ್ವಾಲ್ ಆರೋಪಿಸಿದ್ದಾರೆ. ವಿಯೇಂದ್ರ ಕುಮಾರ್ ಯಾದವ್ ಎಂಬುವರ ಫೇಸ್ಬುಕ್ ಖಾತೆಯಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ಚಿತ್ರಗಳನ್ನು ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ …
Read More »ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಇನ್ಸ್ಪೆಕ್ಟರ್ ಹಜರೇಶ್ ಮತ್ತು ತಂಡ ಬಂಧಿಸಿದೆ..
ಬೆಂಗಳೂರು : ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಸಿಫ್ ಹುಸೇನ್, ಅಪ್ಸರ್ ಅಹಮ್ಮದ್, ಅಸ್ಗರ್ ಮಾದಿ ಹಾಗೂ ತೌಸಿಫ್ ಬಂಧಿತ ಆರೋಪಿಗಳು. ರಗಳ್ಳರು ಏರಿಯಾಗಳಲ್ಲಿ ರೌಂಡ್ಸ್ ಹೊಡೆದು ಮೊದಲು ಏರಿಯಾ ಸರ್ವೆ ಮಾಡುತ್ತಿದ್ದರು. ಯಾವ ರಸ್ತೆಯಲ್ಲಿ ಸರಗಳವು ಮಾಡಿದರೆ ಸುಲಭವಾಗಿ ಎಸ್ಕೇಪ್ ಆಗಬಹುದು ಎಂದು ಪ್ಲ್ಯಾನ್ ಮಾಡುತ್ತಿದ್ದರು. ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವ ಮಹಿಳೆಯರು, ವೃದ್ಧೆಯರನ್ನು ಟಾರ್ಗೆಟ್ ಮಾಡಿ, ಪಲ್ಸರ್ ಬೈಕ್ …
Read More »ದ್ವಿಚಕ್ರ ವಾಹನಗಳನ್ನ ಕದಿಯುತ್ತಿದ್ದ ಆರೋಪಿ ಅರೆಸ್ಟ್
ಬೆಂಗಳೂರು: ತುಮಕೂರಿನಿಂದ ಬೆಂಗಳೂರಿಗೆ ಬಂದು ಸಾಲು ಸಾಲು ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತುಮಕೂರಿನ ಗುಬ್ಬಿ ನಿವಾಸಿ ಶ್ರೀನಿವಾಸ್ ಬಂಧಿತ ಆರೋಪಿ. ಕಳೆದ ಕೆಲ ವರ್ಷಗಳ ಹಿಂದೆ ಶ್ರೀನಿವಾಸನನ್ನ ತೊರೆದು ಪತ್ನಿ ದೂರಾಗಿದ್ದಳು. ಖರ್ಚಿಗೆ ಹಣವಿಲ್ಲದೆ ಕಳ್ಳತನಕ್ಕಾಗಿ ತುಮಕೂರಿನಿಂದ ಬಸ್ ಹತ್ತಿ ಬೆಂಗಳೂರಿಗೆ ಬರುತ್ತಿದ್ದ ಆರೋಪಿ, ನೇರವಾಗಿ ಕಾಮಾಕ್ಷಿಪಾಳ್ಯಕ್ಕೆ ತೆರಳುತ್ತಿದ್ದ. ಗೇರ್ ವಾಹನಗಳನ್ನ ಓಡಿಸಲು ಬಾರದೇ ಇದ್ದಿದ್ರಿಂದ ಮೊಪೆಡ್, ಸ್ಕೂಟರ್ ಗಳನ್ನೇ …
Read More »