Breaking News

ಅನ್ಯಧರ್ಮದಲ್ಲಿ ಜನಿಸಿದ್ದರೆ ಬಸವಣ್ಣ ವಿಶ್ವಖ್ಯಾತಿ‌ ಪಡೆಯುತ್ತಿದ್ದ: ಶಿವಾನಂದ ಪಾಟೀಲ

ವಿಜಯಪುರ: ಬಸವಣ್ಣ ಇಸ್ಲಾಂ ಧರ್ಮದಲ್ಲಿ ಜನಿಸಿದ್ದರೆ ಮಹ್ಮದ್ ಪೈಗಂಬರರನ್ನು, ಕ್ರೈಸ್ತ ಧರ್ಮದಲ್ಲಿ ಜನಿಸಿದ್ದರೆ ಏಸುವಿಗಿಂತ ಮಿಗಿಲಾಗಿ ಜಗತ್ತನ್ನು ಆವರಿಸಿರುತ್ತಿದ್ದರು. ಆದರೆ ಬಸವಣ್ಣ ಎಂಬ ಮಹಾನ್ ದಾರ್ಶನಿಕ ಕನ್ನಡ ನೆಲದ ಬಾಗೇವಾಡಿಯಲ್ಲಿ ನೆಲೆಸಿದ್ದರಿಂದ ಅವರ ವೈಚಾರಿಕ ಸಂದೇಶಗಳು ಜಗತ್ತಿನ‌ ಮೂಲೆ ಮೂಲೆಗೆ ತಲುಪುವಲ್ಲಿ ವಿಫಲವಾಗಿದೆ ಎಂದು ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.   ಮಂಗಳವಾರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ರಾಜ್ಯ ಸರ್ಕಾರದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ …

Read More »

ಮುಖ್ಯಮಂತ್ರಿ ಬೊಮ್ಮಾಯಿ ನಿವಾಸದಲ್ಲಿ ಹೋಳಿಗೆ ಊಟ ಸವಿದ ಅಮಿತ್ ಶಾ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಯೋಜಿಸಿದ್ದ ಭೋಜನಕೂಟದಲ್ಲಿ ಅಮಿತ್ ಶಾ ಭಾಗಿಯಾಗಿದ್ದು, ಇವರ ಜೊತೆಗೆರಾಜ್ಯ ಬಿಜೆಪಿ ನಾಯಕರು ಪಾಲ್ಗೊಂಡಿದ್ದು, ಬೆಳ್ಳಿ ತಟ್ಟೆಯಲ್ಲಿ ಭೋಜನ ಸೇವಿಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್​​ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏರ್ಪಡಿಸಿರುವ ಭೋಜ‌ನ ಕೂಟದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ …

Read More »

ಅಮಿತ್ ಶಾ ಸಮ್ಮುಖದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ಬೆಂಗಳೂರು: ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಮಂಗಳವಾರ ಬೆಳಿಗ್ಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ‌ ಜಗದೀಶ್ ಶೆಟ್ಟರ್ ಜತೆ ಹೊರಟ್ಟಿ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ನಂತರ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಬಸವರಾಜ ಹೊರಟ್ಟಿ ಪ್ರತಿನಿಧಿಸುತ್ತಿರುವ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಇದುವರೆಗೆ …

Read More »

ಪಿಎಸ್‌ಐ ನೇಮಕಾತಿ ಅಕ್ರಮ: ಹೋರಾಟ ಕೈಬಿಟ್ಟು ಕಾನೂನು ಸಮರಕ್ಕೆ ಸಜ್ಜಾದ ಅಭ್ಯರ್ಥಿಗಳು

ಬೆಂಗಳೂರು, ಮೇ. 03: ಪಿಎಸ್‌ಐ ಪರೀಕ್ಷೆಯನ್ನು ರದ್ದು ಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಪಿಎಸ್‌ಐ ಅಭ್ಯರ್ಥಿಗಳು ಹೋರಾಟವನ್ನು ಕೈ ಬಿಟ್ಟಿದ್ದಾರೆ. ಸರ್ಕಾರದ ಮರು ಪರೀಕ್ಷೆ ನಿರ್ಧಾರದ ವಿರುದ್ದ ಕಾನೂನು ಸಮರ ಸಾರಲು ನಿರ್ದಾರ ಕೈಗೊಂಡಿದ್ದು, ಮಂಗಳವಾರ ಹೋರಾಟವನ್ನು ಅಂತ್ಯಗೊಳಿಸಿದರು.   ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದ ಅಭ್ಯರ್ಥಿಗಳು ಸರ್ಕಾರದ …

Read More »

ಅಮಿತ್ ಶಾ ಬೆಂಗಳೂರಿನಲ್ಲಿ ಇರುವಾಗಲೇ ಯತ್ನಾಳ್ ಹೊಸ ಬಾಂಬ್

ವಿಜಯಪುರ, ಮೇ 3: ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾತಿಗೆ ಬಿಜೆಪಿಯಲ್ಲಿ ಎಷ್ಟು ಬೆಲೆ ಇದೆಯೋ ತಿಳಿದಿಲ್ಲ. ಆದರೆ, ರಾಜಕಾರಣದ ಸುತ್ತಮುತ್ತ ವಿವಾದಕಾರೀ ಹೇಳಿಕೆಯನ್ನು ನೀಡುವುದರಲ್ಲಿ ಅವರು ನಿಸ್ಸೀಮರು. ಸ್ವಪಕ್ಷೀಯದವರನ್ನೇ ಅದರಲ್ಲೂ ಪ್ರಮುಖವಾಗಿ ಯಡಿಯೂರಪ್ಪ, ವಿಜಯೇಂದ್ರ ಮತ್ತು ಮುರುಗೇಶ್ ನಿರಾಣಿ ವಿರುದ್ದ ಕಿಡಿಕಾರುವ ಯತ್ನಾಳ್, ಅಮಿತ್ ಶಾ ಅವರು ರಾಜ್ಯ ಪ್ರವಾಸದಲ್ಲಿ ಇದ್ದಾಗಲೇ ಮತ್ತೊಂದು ಹೇಳಿಕೆಯನ್ನು ನೀಡಿ, ಪಕ್ಷದ ನಾಯಕರಿಗೆ ಮುಜುಗರ ತಂದಿದ್ದಾರೆ. “ಕೇಂದ್ರ ಗೃಹ …

Read More »

ಟೋಲ್ ಸಂಗ್ರಹಕ್ಕೆ ಕೇಂದ್ರದ ಹೊಸ ಪ್ಲಾನ್-ಶೀಘ್ರದಲ್ಲಿ ಫಾಸ್ಟ್ ಟ್ರ್ಯಾಕ್ ರದ್ದು !

ನವದೆಹಲಿ: ಹೆದ್ದಾರಿಯ ಟೋಲ್ ಸಂಗ್ರಹ ಕೇಂದ್ರದಲ್ಲಿ ಈಗಾಗಲೇ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆ ಇದೆ. ಆದರೆ, ಕೇಂದ್ರ ಸರ್ಕಾರ ಈ ಒಂದು ವ್ಯವಸ್ಥೆಯನ್ನ ರದ್ದುಗೊಳಿಸಲು ಮುಂದಾಗಿದೆ. ಅದರ ಬದಲು ಬೇರೆ ವ್ಯವಸ್ಥೆ ಮಾಡಲು ಸಿದ್ದತೆ ನಡೆಸಿದೆ. ಕೇಂದ್ರ ಸರ್ಕಾರ ಸ್ಯಾಟಲೈಟ್ ನ್ಯಾವಿಗೇಷನ್ ಸಿಸ್ಟಂ ಬಳಸಿ ಟೋಲ್ ಸಂಗ್ರಹಿಸಲು ಮುಂದಾಗಿದ್ದು, ಭಾರತದಲ್ಲಿ ಪ್ರಾಯೋಗಿಕವಾಗಿಯೇ ಇದರ ಪರೀಕ್ಷೆಯನ್ನೂ ಮಾಡಲಾಗುತ್ತಿದೆ.   ವಿಶೇಷವೇನೆಂದ್ರೆ ಈ ವ್ಯವಸ್ಥೆಯಲ್ಲಿ ಎಷ್ಟು ಕಿಲೋಮೀಟರ್‌ ವಾಹನಗಳು ಓಡಿರುತ್ತವೆಯೋ ಅಷ್ಟೆಕ್ಕೆ ಮಾತ್ರ ಟೋಲ್ …

Read More »

ಬೆಂಗಳೂರಿನಲ್ಲಿ ಅಮಿತ್ ಶಾ: ಸ್ಮಾರ್ಟ್​ ಪೊಲೀಸ್ E BEATಗೆ ಚಾಲನೆ, ನೃಪತುಂಗ ವಿವಿ ಉದ್ಘಾಟನೆ

ಬೆಂಗಳೂರು: ಸ್ಮಾರ್ಟ್ ಪೊಲೀಸ್ E BEATಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಚಾಲನೆ ನೀಡಿದರು. ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ನೂತನ ಯೋಜನೆಗೆ ಚಾಲನೆ ನೀಡಿ, ಕರ್ನಾಟಕ ಸರ್ಕಾರದ ಮಹತ್ವದ ಪ್ರಯತ್ನವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಜನರ ಮಾನ ಪ್ರಾಣ ರಕ್ಷಿಸುವುದು ಪೊಲೀಸ್ ಇಲಾಖೆಯ ಸವಾಲಿನ ಕೆಲಸ. ಅಪರಾಧಗಳ ತಡೆಗೆ ಸ್ಮಾರ್ಟ್ ಪೊಲೀಸ್ E BEAT ನೆರವು ಪಡೆದುಕೊಳ್ಳಬೇಕಿದೆ. ಅಪರಾಧ ಪ್ರಕರಣಗಳ …

Read More »

ಬ್ಲೂಟೂತ್ ಬಳಸಿ PSI ಪರೀಕ್ಷೆ ಪಾಸ್ ಮಾಡಿದ್ದ ಪ್ರಭು ಅರೆಸ್ಟ್

ಕಲಬುರಗಿ: PSI ಪರೀಕ್ಷಾ ಅಕ್ರಮ ಕುರಿತು ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಬಂಧಿತ ಆರೋಪಿಗಳ ಸಂಖ್ಯೆ 40ರ ಗಡಿ ದಾಟಿದೆ. ಇಂದೂ ಸಹ ಬೆಂಗಳೂರಿನಲ್ಲಿ ಒರ್ವ ಆರೋಪಿಯನ್ನು ಬಂಧಿಸಲಾಗಿದೆ. ಕಲಬುರಗಿಯಲ್ಲಿ ಇನ್ನೊಬ್ಬ ಆರೋಪಿ ತಾನೇ ಠಾಣೆಗೆ ಹೋಗಿ ಶರಣಾಗಿದ್ದಾನೆ. ಇಲ್ಲಿನ ಮತ್ತೊಂದು MSI ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಬಯಲಾಗಿದೆ. ಈ ಕೇಂದ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಪರೀಕ್ಷೆ ಪಾಸ್ ಮಾಡಿದ್ದರು. ಅವರಲ್ಲಿ ಓರ್ವ ಅಭ್ಯರ್ಥಿ ಪ್ರಭು ಬ್ಲೂಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಪಾಸ್ …

Read More »

ಮೇ 10ರ ಒಳಗಡೆ ಸಿಎಂ ಬದಲಾವಣೆ ಆಗಲಿದ್ದಾರೆ:ಬಸನಗೌಡ ಪಾಟೀಲ್‌ ಯತ್ನಾಳ್‌

ಬೆಂಗಳೂರು: ಒಂದೊಂದು ರಾಜ್ಯದಲ್ಲಿ ಒಂದೊಂದು ಮಾದರಿಯನ್ನು ಜಾರಿ ಮಾಡುತ್ತಿರುವ ಬಿಜೆಪಿ ಹೈಕಮಾಂಡ್‌ ಚುನಾವಣೆ ಹತ್ತಿರ ಬರುತ್ತಿರುವ ಕರ್ನಾಟಕದಲ್ಲಿ ಯಾವ ಮಾದರಿಗೆ ಮಣೆ ಹಾಕುತ್ತದೆ? ಅಥವಾ ಕರ್ನಾಟಕದ್ದೇ ಮಾಡೆಲ್‌ ತರುತ್ತಾ ಎಂಬ ಕುತೂಹಲ ಎದ್ದಿದೆ. ವಿಜಯಪುರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಮೇ 10ರ ಒಳಗಡೆ ಸಿಎಂ ಬದಲಾವಣೆ ಆಗಲಿದ್ದಾರೆ ಎಂದು ಹೇಳಿದರೆ ಯಡಿಯೂರಪ್ಪ, ಅಶೋಕ್‌ ಸಿಎಂ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ ನಾಯಕರು ಏನೇ ಹೇಳಿದರೂ ಬಿಜೆಪಿ ಹೈಕಮಾಂಡ್‌ ಭಿನ್ನವಾಗಿ …

Read More »

MES ಮುಖಂಡ ಶುಭಂ ಶಳಕೆಯಿಂದ DDPI ಕಚೇರಿಗೆ ನುಗ್ಗಿ ಪುಂಡಾಟಿಕೆ

ಬೆಳಗಾವಿ: ಗಡಿವಿವಾದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ ಇದೀಗ ಸರ್ಕಾರಿ ಕಚೇರಿಯಲ್ಲೂ ಪುಂಡಾಟ ಪ್ರದರ್ಶಿಸಿರುವುದು ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ನಡೆದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಿಕ್ಷಣ ಇಲಾಖೆ ಸಿಆರ್‍ಪಿ ಕೌನ್ಸೆಲಿಂಗ್ ವೇಳೆ ಮರಾಠಿ ಶಾಲೆಗೆ ಕನ್ನಡಿಗ ಸಿಆರ್‍ಪಿ ನಿಯೋಜನೆ ಮಾಡಲಾಗಿದೆ. ಮರಾಠಿ ಶಿಕ್ಷಕರ ಮೇಲೆ ಕನ್ನಡ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ …

Read More »