ಹೊಸಪೇಟೆ (ವಿಜಯನಗರ): ‘ನಾನೀಗ ರಾಜೀನಾಮೆ ಕೊಡಬೇಕಾ?’ – ಹೀಗೆಂದು ಸುದ್ದಿಗಾರರಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪ್ರಶ್ನಿಸಿದರು. ಅಂಜನಾದ್ರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಪ್ರಶ್ನಿಸಿದರು. ‘ಟೆಂಡರ್ ಇಲ್ಲದೆಯೇ ₹6 ಕೋಟಿಯಲ್ಲಿ ನಗರದಲ್ಲಿ ಧ್ವಜ ಸ್ತಂಭ ನಿರ್ಮಿಸಲಾಗುತ್ತಿದೆ ಎಂಬ ವಿಷಯವನ್ನು ಪಿಡಬ್ಲ್ಯೂಡಿ ಅಧಿಕಾರಿಗಳೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದು ಸರಿಯಾದ ಕ್ರಮವೇ? ಬೆಳಗಾವಿಯಲ್ಲಿ ಟೆಂಡರ್ ಇಲ್ಲದೇ ಕಾಮಗಾರಿ ಕೈಗೊಂಡಿದ್ದ …
Read More »ಭೀಷ್ಮನಂತೆ ಶರಶಯ್ಯೆಯಲ್ಲಿ ಮಲಗಿರುವ ಬಿಎಸ್‌ವೈ ಅವರಿಗೆ ಬಿಜೆಪಿ ಚುಚ್ಚಿದ ದ್ರೋಹದ ಬಾಣಗಳು’: ಕಾಂಗ್ರೆಸ್
ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ದ್ರೋಹ ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಭೀಷ್ಮನಂತೆ ಶರಶಯ್ಯೆಯಲ್ಲಿ ಮಲಗಿರುವ ಬಿಎಸ್‌ವೈ ಅವರಿಗೆ ಬಿಜೆಪಿ ಚುಚ್ಚಿದ ದ್ರೋಹದ ಬಾಣಗಳು’ ಎಂಬ ಶೀರ್ಷಿಕೆಯಡಿ ಪಟ್ಟಿ ನೀಡಿದೆ. ಕಾಂಗ್ರೆಸ್ ನೀಡಿದ ಪಟ್ಟಿ ಇಲ್ಲಿದೆ… *ಕಾರಣ ನೀಡದೆ ಸಿಎಂ ಸ್ಥಾನದಿಂದ ಬಿಎಸ್‌ವೈ ಪದಚ್ಯುತಿ *ಅವರ ರಾಜ್ಯ ಪ್ರವಾಸಕ್ಕೆ ತಡೆ *ಬಿಎಸ್‌ವೈ ಆಪ್ತರ ಮೇಲೆ ಐಟಿ ದಾಳಿ *ವಿಜಯೇಂದ್ರರಿಗೆ …
Read More »ವಿಪರೀತ ಜನಸಂಖ್ಯೆಯಿಂದ ಅಸಮತೋಲನ ಸೃಷ್ಟಿ
ಬೆಳಗಾವಿ: ಜನಸಂಖ್ಯೆ ನಿಯಂತ್ರಣದ ಜೊತೆಗೆ ಇತ್ತೀಚೆಗೆ ಹರಡುತ್ತಿರುವ ಅನೇಕ ಸಾಂಕ್ರಾಮಿಕ ಕಾಯಿಲೆಗಳನ್ನೂ ನಿಯಂತ್ರಿಸಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಜನರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಸಹಯೋಗದಲ್ಲಿ ಬಿಮ್ಸ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ …
Read More »ಬೋಟ್ ಮೂಲಕ ಸಂಚರಿಸಿ ಕೃಷ್ಣಾ ನೀರಿನ ಮಟ್ಟ ಅವಲೋಕಿಸಿದ ಜಿಲ್ಲಾಧಿಕಾರಿ
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಭಾರಿ ಮಳೆಯಿಂದ ಕೃಷ್ಣಾ ಮತ್ತು ಉಪನದಿಗಳಿಗೆ ಎದುರಾದ ಸಂಭವನೀಯ ಪ್ರವಾಹವನ್ನು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಬೋಟ್ ಮೂಲಕ ಸಂಚರಿಸಿ ನದಿ ನೀರಿನ ಮಟ್ಟವನ್ನು ಅವಲೋಕಿಸಿದರು. ಮಹಾರಾಷ್ಟ್ರ ಕೊಂಕನ ಭಾಗದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಸುಮಾರು 1.12 ಲಕ್ಷ ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದೆ. ಹೀಗೆ ದಿನದಿಂದ ದಿನಕ್ಕೆ ನೀರಿನ ಮಟ್ಟದಲ್ಲಿ ಹೆಚ್ಚಳವಾದರೇ ಪ್ರವಾಹ ಎದುರಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಪ್ರವಾಹ ಎದುರಿಸಲು ಜಿಲ್ಲಾಡಳಿತ …
Read More »ಪವರ್ ಮ್ಯಾನ್‌ಗಳ ಸೇವೆಗೆ ಲಕ್ಷ್ಮಿ ತಾಯಿ ಫೌಂಡೇಷನ್ ವತಿಯಿಂದ ರೇನ್ ಕೋಟ್
ಬೆಳಗಾವಿ: ಅಪಾಯಕಾರಿ ಸನ್ನಿವೇಶಗಳಲ್ಲೂ ಜೀವದ ಹಂಗು ತೊರೆದು ಪರಿಶ್ರಮದಿಂದ ಕಾರ್ಯಾಚರಿಸಿ ಜನತೆಗೆ ಬೆಳಕು ನೀಡುವ ಪವರ್ ಮ್ಯಾನ್ ಗಳ ಸೇವೆ ಪ್ರಶಂಸನೀಯ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಪೀರನವಾಡಿ ಸೆಕ್ಷನ್ 1, ಪೀರನವಾಡಿ ಸೆಕ್ಷನ್ 2, ಉಚಗಾಂವ ಹಾಗೂ ಹಿಂಡಲಗಾ ಈ ಪ್ರದೇಶಗಳಲ್ಲಿ ಹಗಲಿರುಳು ಕೆಲಸ ಮಾಡುವ ಪವರ್ ಮ್ಯಾನ್‌ಗಳ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ, ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಉತ್ತಮ ಗುಣಮಟ್ಟದ …
Read More »ವಿವಿಧ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
ಬೆಳಗಾವಿ – ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ; ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳು ವಿವಿಧ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಿವೆ. ಇಲ್ಲಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ- ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ ಸೌಲಭ್ಯ ಪಡೆಯಲು ಸ್ವಯಂ ಉದೋಗಕ್ಕಾಗಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ ೨ ಲಕ್ಷ ರೂ. …
Read More »ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡ ತಾಯಿ
ವಿಜಯಪುರ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾದ ತಾಯಿಯೊಬ್ಬಳು ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬುಧವಾರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಜರುಗಿದೆ. ಮಕ್ಕಳನ್ನು ಮೊದಲು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿಯನ್ನು ಆರು ತಿಂಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವ್ವಮ್ಮಾ ಶ್ರೀಶೈಲ ಗುಬ್ಬೇವಾಡ (32) ಎಂದು ಗುರುತಿಸಲಾಗಿದೆ. 1 ಹಾಗೂ 3 ವರ್ಷದ ಮಕ್ಕಳು ತಾಯಿಯಿಂದ ಜೀವ ಕಳೆದುಕೊಂಡ ನತದೃಷ್ಟರು. …
Read More »ಒಂದೇ ದಿನ 2 ಬಾರಿ ತಾಯಿ ಮೇಲೆ ಅತ್ಯಾಚಾರ ಎಸಗಿದ ಪಾಪಿ ಮಗ!
ಮದ್ಯವ್ಯಸನಿ ಯುವಕನೊಬ್ಬ ಜನ್ಮಕೊಟ್ಟ ತಾಯಿ ಮೇಲೆ ಒಂದೇ ದಿನ ಎರಡು ಬಾರಿ ಅತ್ಯಾಚಾರ ಎಸಗಿದ ಹೇಯ ಘಟನೆ ಪಟ್ಟಣದಲ್ಲಿ ಸಂಭವಿಸಿದೆ. ಶನಿವಾರ (ಜು.9) ಎಂದಿನಂತೆ ರಾತ್ರಿಯೂ ಮದ್ಯ ಸೇವಿಸಿ ಮನೆಗೆ ರೋಕಿ ಜಾನ್ ಪುಡ್ತೋಳ ಬಂದಿದ್ದ. ಅಂದು ತಡರಾತ್ರಿ ನಿದ್ರೆ ಮಂಪರಿನಲ್ಲಿದ್ದ ತಾಯಿಯನ್ನು ಎಬ್ಬಿಸಿದ ಮಗ, ಏನೋ ಮಾತಾಡಬೇಕು ಎಂದು ಸೋಫಾ ಬಳಿ ಕರೆದು ಬಲಾತ್ಕಾರ ಮಾಡಿದ್ದಾನೆ. ಈ ಘಟನೆಯಿಂದ ಆಘಾತಕ್ಕೀಡಾದ ತಾಯಿ, ಕಣ್ಣೀರು ಹಾಕುತ್ತಲೇ ಕತ್ತಲಲ್ಲಿ ಮನೆಯ ಹೊರಗೆ …
Read More »ಕೈ ಮೇಲೆ ಸತೀಶ ಜಾರಕಿಹೊಳಿ ಅವರ ಟ್ಯಾಟೋ ಹಾಕಿಸಿ ಅಭಿಮಾನ ಮೆರೆದ ಬಾಳೇಶ ದಾಸನಟ್ಟಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಭಾವಚಿತ್ರವನ್ನು ಅಭಿಮಾನಿಯೊರ್ವ ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಳ್ಳುವ ಮೂಲಕ ತನ್ನ ಅಭಿಮಾನ ಮೆರೆದಿದ್ದಾನೆ. ಹೌದು ತಮ್ಮ ನೆಚ್ಚಿನ ನಾಯಕರು, ಸಿನಿಮಾ ನಟರ ಫೋಟೋಗಳನ್ನು ತಮ್ಮ ದೇಹದ ಮೇಲೆ ಟ್ಯಾಟೋ ಹಾಕಿಸಿಕೊಳ್ಳುವ ಟ್ರೆಂಡ್ ಶುರುವಾಗಿದೆ. ಅದೇ ರೀತಿ ಸತೀಶ ಜಾರಕಿಹೊಳಿ ಅವರ ಫೋಟೋವನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಎಸ್‌ಟಿ ಘಟಕದ ಬ್ಲಾಕ್ ಅಧ್ಯಕ್ಷ ಪರಶುರಾಮ ಪೂಜೇರಿ ತನ್ನ ಕೈ ಮೇಲೆ ಹಚ್ಚೆ …
Read More »ಕಾರಿನಿಂದ ಕೆಳಗೆ ಇಳಿಯದೆ ಮನವಿ ಸ್ವೀಕರಿಸಿದ D.C.ಜನರ ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ನೀತಿಶ ಪಾಟೀಲ ಕಾಗವಾಡ ತಾಲೂಕಿನ ಮಂಗಾವತಿ-ಜುಗೂಳ ಗ್ರಾಮಗಳಿಗೆ ಭೇಟಿ ನೀಡಿ ಕೃμÁ್ಣ ನದಿಯ ಪ್ರವಾಹ ಸ್ಥಿತಿಗತಿ ಆಲಿಸಲು ಬಂದಾಗ ಜನರ ಸಮಸ್ಯೆಗಳನ್ನು ಆಲಿಸದೆ, ಕಾರಿನಿಂದ ಕೆಳಗೆ ಇಳಿಯದೆ ಮನವಿ ಸ್ವೀಕರಿಸಿ ಹೋಗಿದ್ದರಿಂದ ಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಬುಧವಾರ ಮಧ್ಯಹ್ನ ಜಿಲ್ಲಾಧಿಕಾರಿಗಳಾದ ನೀತಿಶ ಪಾಟೀಲ್ ಕಾಗವಾಡ ತಾಲೂಕಿನ ಜುಗುಳು ಮತ್ತು ಮಂಗಾವತಿ ಗ್ರಾಮೀಣ ಭೇಟಿ ನೀಡಿ ಇಲಿಯ ನೀರಿನ ಸ್ಥಿತಿಗತಿ ಆಲಿಸಲು ಬಂದ್ದಿದರು. ಆದರೆ ಅವರು …
Read More »
Laxmi News 24×7