ಸಿದ್ದರಾಮಯ್ಯ-75 ಸಂಭ್ರಮಾಚರಣೆಯತ್ತ ಇಡೀ ರಾಜ್ಯದ ದೃಷ್ಟಿ ನೆಟ್ಟಿದೆ. ಈ ಶಕ್ತಿ ಪ್ರದರ್ಶನದ ವೇದಿಕೆ ರಾಜ್ಯ ರಾಜಕಾರಣದ ದಿಕ್ಕುದೆಸೆ ಬದಲಿಸಲು ಕಾರಣವಾಗಬಹುದೇ? ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ಭೂಮಿಕೆಯಾಗಬಹುದೇ? ಜಾತಿ ಸಮೀಕರಣ, ಮತಗಳ ಧ್ರುವೀಕರಣಕ್ಕೆ ಬೀಜಾಂಕುರವಾಗಬಹುದೇ? ಎಂಬ ಚರ್ಚೆಗಳು ನಡೆದಿವೆ. ಈ ಚರ್ಚೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಕಾಂಗ್ರೆಸ್ ಮಾತ್ರವಿಲ್ಲ, ಇತರ ಎರಡು ಪಕ್ಷಗಳೂ ಸಮಾವೇಶದ ಪರಿಣಾಮವನ್ನು ಆತಂಕದಿಂದಲೇ ಎದುರು ನೋಡುತ್ತಿವೆ. ಈ ಸಮಾವೇಶ ಸಿದ್ದರಾಮಯ್ಯ ಪಾಲಿಗೆ ಮಹತ್ವದ್ದು. ಕಾಂಗ್ರೆಸ್ ಹೆಸರಿನಲ್ಲಿ ಸಂಘಟನೆ …
Read More »841 ಸರ್ಕಾರಿ ವಕೀಲರ ವಜಾಗೊಳಿಸಿದ ಸಿಎಂ ಯೋಗಿ
ಲಖನೌ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ 841 ಜನ ಸರ್ಕಾರಿ ವಕೀಲರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಿ ಆದೇಶಿಸಿದೆ. ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿಕುಂಜ್ ಅವರು ಈ ಆದೇಶ ಹೊರಡಿಸಿದ್ದಾರೆ. ಆದರೆ, ಸರ್ಕಾರ ತನ್ನ ಆದೇಶದಲ್ಲಿ ವಕೀಲರ ವಜಾಕ್ಕೆ ಕಾರಣವನ್ನು ನೀಡಿಲ್ಲ. ಅಲಹಾಬಾದ್ ಹೈಕೋರ್ಟ್ ಪೀಠದ ಎಲ್ಲ ಸಾರ್ವಜನಿಕ ಅಭಿಯೋಜಕರು, 505 ಜನ ರಾಜ್ಯ ನ್ಯಾಯಾಂಗ ಅಧಿಕಾರಿಗಳು, ಲಖನೌ ಹೈಕೋರ್ಟ್ ಪೀಠದ 336 …
Read More »ರಾಜ್ಯದ ‘ಸ್ಥಳೀಯ ಸಂಸ್ಥೆ’ಗಳ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ಕನಿಷ್ಠ ವೇತನ ಜಾರಿ
ಬೆಂಗಳೂರು: ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವಂತ ನೌಕರರಿಗೆ ಸರ್ಕಾರ ಕನಿಷ್ಠ ವೇತನವನ್ನು ಜಾರಿಗೊಳಿಸುತ್ತಿದೆ. ಹೀಗಾಗಿ ವೇತನದಲ್ಲಿ ಭಾರಿ ಹೆಚ್ಚಳವಾಗಲಿದ್ದು, ಆ ವೇತನ ಪರಿಷ್ಕರಣೆಯಂತೆ ನಿಮಗೆ ವೇತನ ಸಿಗಲಿದೆ. ಈ ಸಂಬಂಧ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ವಿಭಾಗದ ಪೀಠಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಈ ಅಧಿಸೂಚನೆಯಂತೆ ರಾಜ್ಯಾಧ್ಯಂತ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಯಲ್ಲಿ …
Read More »ಆರು ದಿನವೂ ಬಗೆ ಬಗೆಯ ಊಟ; ಹೊಸ ಮೆನುವಿಗೆ ಮಕ್ಕಳು ನೀಡಿದ್ರು ಫುಲ್ ಮಾರ್ಕ್ಸ್
ಬೆಂಗಳೂರು: ರಾಜ್ಯ ಸರ್ಕಾರ 2022-23ನೇ ಸಾಲಿನ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ (Poshan abhiyaan) ಶಾಲೆಗಳ ಮಧ್ಯಾಹ್ನ ಊಟದ (Mid Day Meal) ಮೆನು ಸಿದ್ಧಪಡಿಸಿದೆ. ಹೊಸ ಮೆನು ಕಂಡು ವಿದ್ಯಾರ್ಥಿಗಳು (Students) ಸಂತೋಷ ವ್ಯಕ್ತಪಡಿಸಿದ್ದಾರೆ. ಹೊಸ ಮೆನುವಿಗೆ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ಮುಂದೆ ಶಾಲಾ ವಿದ್ಯಾರ್ಥಿಗಳಿಗೆ ಅವರ ಪ್ರದೇಶಕ್ಕೆ ಅನುಗುಣವಾಗಿ ಬಗೆ ಬಗೆಯ ಊಟ ಸಿಗಲಿದೆ. ಇದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಆಹಾರ (Quality Food) ಲಭ್ಯವಾಗಲಿದೆ. …
Read More »ಸಿಲಿಂಡರ್ ಅಗ್ಗ; 1100 ರೂ ಸಿಲಿಂಡರ್ ಕೇವಲ 587 ರೂ.ಗೆ ಸಿಗುತ್ತಾ?
ಬೆಲೆ ಏರಿಕೆಯಿಂದ ದಿನನಿತ್ಯವು ಸಂಕಷ್ಟದಲ್ಲಿರುವ ಶ್ರೀಸಾಮಾನ್ಯನಿಗೆ ದಿನನಿತ್ಯದ ಬೆಲೆಗಳು ಬೇಸರ ಮೂಡಿಸಿವೆ. ಜೀವನವನ್ನು ನಡೆಸಲು ತೀವ್ರ ಕಷ್ಟವನ್ನು ಅನುಭವಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಬಹುದು ಎಂಬುವುದಕ್ಕೆ ಗ್ಯಾಸ್ ಬೆಲೆಯಲ್ಲಿ ಮತ್ತೆ ಬದಲಾವಣೆ ಆಗಲಿದೆ ಎಂಬ ವರದಿಗಳು ಕೇಳಿ ಬರುತ್ತಿವೆ. ಹೌದು ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಎಲ್‌ಪಿಜಿ ಸಿಲಿಂಡರ್ ಬೆಲೆಯಿಂದ ಪರಿಹಾರ ಕಂಡು ಬರುತ್ತಿದೆ. ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಮರುಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ …
Read More »ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಕೆಎಸ್ಆರ್ಟಿಸಿ ಬಸ್ಗಳನ್ನು ಎರವಲು ಸೇವೆ ನೀಡಿದ್ದರಿಂದ ಇಂದು ಬಸ್ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ
ಬೆಂಗಳೂರು: ದಾವಣಗೆರೆಯಲ್ಲಿ ಇಂದು ನಡೆಯುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳನ್ನು ಎರವಲು ಸೇವೆಗೆ ನೀಡಿದ್ದು, ಇದರಿಂದ ಇಂದು ನಗರದಲ್ಲಿ ಬಸ್ ಪ್ರಯಾಣಿಕರಿಗೆ ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ನಿನ್ನೆ ಮಧ್ಯಾಹ್ನವೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 700ಕ್ಕೂ ಹೆಚ್ಚು ಬಸ್ಸುಗಳು ದಾವಣಗೆರೆಯತ್ತ ಸಿದ್ದರಾಮಯ್ಯ ಅಭಿಮಾನಿಗಳನ್ನ ಕರೆದುಕೊಂಡು ತೆರಳಿದೆ. ಸಮಾರಂಭದ ಆಯೋಜಕರು ಈ ಬಸ್ಗಳನ್ನು ಗುತ್ತಿಗೆ ರೂಪದಲ್ಲಿ ಪಡೆದಿದ್ದು, ಇಂದು ರಾತ್ರಿ ವೇಳೆಗೆ …
Read More »ಚುನಾವಣಾ ಪೂರ್ವ ತಂತ್ರಗಾರಿಕೆ: ಒಗ್ಗಟ್ಟಿನಿಂದ ಮುಂದೆ ಸಾಗುವಂತೆ ಕೈ ನಾಯಕರಿಗೆ ರಾಹುಲ್ ಸಲಹೆ
ಹುಬ್ಬಳ್ಳಿ: ಪ್ರಸ್ತುತ ರಾಜಕೀಯ ಬೆಳವಣಿಗೆ ಹಾಗೂ ಮುಂದಿನ ಚುನಾವಣಾ ಕಾರ್ಯತಂತ್ರಗಳ ಕುರಿತಂತೆ ಚರ್ಚಿಸಲು ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಯಿತು. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ …
Read More »ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅಪಮಾನ ತಡೆಗಟ್ಟಿ
ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅಪಮಾನ ತಡೆಗಟ್ಟಿ ರಾಷ್ಟ್ರದ ಗೌರವವನ್ನು ರಕ್ಷಿಸುವಂತೆ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಆಗುವ ಘಟನೆಗಳು ನಡೆಯುತ್ತವೆ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ರೀತಿ ರಾಷ್ಟ್ರ ಧ್ವಜಕ್ಕೆ ಅಪಮಾನ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ …
Read More »ಮನೆಹಾನಿ ತಕ್ಷಣವೇ ಪರಿಹಾರ ನೀಡಲು ಸಿಎಂ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ
ಹಿನ್ನೆಲೆಯಲ್ಲಿ ಬೆಳಗಾವಿ ಸೇರಿದಂತೆ ಹನ್ನೊಂದು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಮನೆಹಾನಿಯಾದ ಸಂದರ್ಭದಲ್ಲಿ ಯಾವುದೇ ಕುಟುಂಬಗಳು ಪರಿಹಾರದಿಂದ ವಂಚಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದರು. ಖಾನಾಪುರದಲ್ಲಿ ಮಳೆ ಜಾಸ್ತಿಯಾದಾಗ ಮಲಪ್ರಭಾ ನದಿ ನೀರು ಹರಿವು ಹೆಚ್ಚಾಗುತ್ತದೆ. ಆದ್ದರಿಂದ ನಿರಂತರ ನಿಗಾ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಮಹಾರಾಷ್ಟ್ರದ ಲ್ಲಿ ಆಗುತ್ತಿರುವ ಮಳೆಯ ವಿವರ ಪಡೆದುಕೊಂಡ ಅವರು, ಕೊಯ್ನಾ, ರಾಜಾಪುರ ಸೇರಿದಂತೆ ಪ್ರತಿಯೊಂದು ಜಲಾಶಯಗಳ ಮಟ್ಟ …
Read More »ಕಳೆದ 8 ವರ್ಷಗಳಿಂದ ಬಸವ ಪಂಚಮಿ ಆಚರಿಸುತ್ತ ಬರಲಾಗುತ್ತಿದೆ. ಆದರೆ, ಮೌಢ್ಯ, ಮೂಢನಂಬಿಕೆ ಇರುವುದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಿಲ್ಲ.
ನಾಗರ ಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ ಆಚರಿಸುವ ಮೂಲಕ ಘಟಪ್ರಭಾದ ಮಾನವ ಬಂಧುತ್ವ ವೇದಿಕೆ ವತಿಯಿಂದ ಘಟಪ್ರಭಾದ ಕೆಎಚ್‍ಐ ಆಸ್ಪತ್ರೆಯ ರೋಗಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಹಾಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹೌದು ಇಂದು ಮಂಗಳವಾರ ಘಟಪ್ರಭಾದಲ್ಲಿ ನಾಗಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಘಟಪ್ರಭಾ ಕೆಎಚ್‍ಐ ಆಸ್ಪತ್ರೆಯ ರೋಗಿಗಳಿಗೆ ಹಾಲಿನ ಪಾಕೇಟ್‍ಗಳನ್ನು ವಿತರಿಸಲಾಯಿತು. …
Read More »
Laxmi News 24×7