ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿ ನೀಡಿದ್ದು, ಕೆಪಿಟಿಸಿಎಲ್ ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಿರಿಯ ಎಂಜಿನಿಯರ್, ಸಹಾಯಕ ಎಂಜಿನಿಯರ್ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದ್ದು, ಜುಲೈ 23 ರಿಂದ ಆಗಸ್ಟ್ 7 ರವರೆಗೆ ವಿವಿಧ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ. ಈ …
Read More »ಕನ್ಹಯ್ಯಲಾಲ್ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ: ಶ್ರೀಶೈಲಶ್ರೀ
ವಿಜಯಪುರ: ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ಅಮಾನವೀಯ ಕೃತ್ಯ ಖಂಡನಾರ್ಹ. ಪ್ರಜಾ ಪ್ರಭುತ್ವದ ಈ ದೇಶದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅಭಿಪ್ರಾಯ ಬೇಧವಿದ್ದಲ್ಲಿ ಸಮರ್ಥ ಅಭಿಪ್ರಾಯದ ಮೂಲಕವೇ ವಿರೋಧಿಸಿ, ಗೆಲ್ಲಬೇಕು. ಆದರೆ ಜೀವ ಘಾತುಕ ಹತ್ಯೆ ಮೂಲಕ ಅಲ್ಲ ಎಂದು ಶ್ರೀಶೈಲ ಸೂರ್ಯಸಿಂಹಾಸನ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಶ್ರೀಗಳು ಅಭಿಪ್ರಾಯಪಟ್ಟರು. ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಹಿಂಸೆಯನ್ನು ಪ್ರತಿಪಾದಿಸುವ ಇಂಥವರಿಗೆ ಕಠಿಣ ಶಿಕ್ಷೆಯಾಗಬೇಕು. ಹೇಯವಾದ ಈ ಕೃತ್ಯದಲ್ಲಿ ಭಾಗಿಯಾದ ಹಾಗೂ …
Read More »ಆ.15 ರೊಳಗೆ ಇ-ಕಚೇರಿಯನ್ನಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ನಿರಾಣಿ ತಾಕೀತು
ಬೆಂಗಳೂರು : ಆಗಸ್ಟ್ 15 ರೊಳಗೆ ವಾಣಿಜ್ಯ ಕೈಗಾರಿಕಾ ಇಲಾಖೆ ವ್ಯಾಪ್ತಿಗೆ ಒಳಪಡುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳನ್ನು ಇ-ಕಚೇರಿ ವ್ಯವಸ್ಥೆ( E- office )ಗಳನ್ನಾಗಿ ಪರಿವರ್ತನೆ ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಶನಿವಾರ ವಿಕಾಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರು ಎಸ್.ಎಲ್‍ಒಗಳು ಕೆಎಸ್‍ಎಸ್‍ಐಡಿಸಿ ಅಧಿಕಾರಿಗಳ ಒಳಗೊಂಡ ಪ್ರಗತಿ ಪರಿಶೀಲನೆ …
Read More »ರಾಜಸ್ಥಾನಕ್ಕೆ ಬಂದಿಳಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಜೈಪುರ: ಜುಲೈ ತಿಂಗಳ 4ರಿಂದ 10ರ ವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಸಭೆ ನಡೆಯಲಿದೆ. ರಾಜಸ್ಥಾನದ ಜುಂಜುನು ಅಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲೆಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ರಾಜಸ್ಥಾನಕ್ಕೆ ಬಂದಿಳಿದಿದ್ದಾರೆ. ರೈಲಿನಲ್ಲಿ ಜೈಪುರಕ್ಕೆ ಬಂದಿರುವ ಅವರು ರವಿವಾರ ಆಚಾರ್ಯ ಮಹಾಶ್ರಮಣ್‌ರನ್ನು ಭೇಟಿ ಮಾಡಲಿದ್ದಾರೆ. ಅನಂತರ ಜುಂಜುನು ಅಲ್ಲಿ ತಂಗಲಿದ್ದಾರೆ. ಆರ್‌ಎಸ್‌ಎಸ್ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಸೇರಿ ಅನೇಕ ಪ್ರಮುಖರು ಭಾಗವಹಿಸಲಿದ್ದಾರೆ.
Read More »‘ಅಂಬಾರಿ’ ಏರಲು ನೀರಸ ಪ್ರತಿಕ್ರಿಯೆ: 6 ಡಬಲ್ ಡೆಕ್ಕರ್ ಬಸ್‌ಗಳಲ್ಲಿ 2 ಮಾತ್ರ ಬಳಕೆ
ಮೈಸೂರು: ನಗರದಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ವೃದ್ಧಿಸುವ ಭಾಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಆಕರ್ಷಕವಾಗಿ ವಿನ್ಯಾಸಗೊಳಿಸಿರುವ ‘ಡಬಲ್ ಡೆಕ್ಕರ್ ಬಸ್’ನಲ್ಲಿ ಸಂಚಾರಕ್ಕೆ ಜನರು ಮತ್ತು ಪ್ರವಾಸಿಗರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 6ರಲ್ಲಿ 2 ಬಸ್‌ಗಳನ್ನಷ್ಟೆ ರಸ್ತೆಗಿಳಿಸಲಾಗುತ್ತಿದೆ. ಪ್ರವಾಸಿಗರು, ಸಾಂಸ್ಕೃತಿಕ ನಗರಿಯ ಪಾರಂಪರಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ತಾಣಗಳನ್ನು ಬಸ್‌ನಲ್ಲಿ ಕುಳಿತು ವೀಕ್ಷಿಸಲು ಅನುಕೂಲ ಆಗುವಂತೆ ರೂಪಿಸಿರುವ ಯೋಜನೆ ಇದು. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆರು ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅದಕ್ಕೆ …
Read More »ಆ ದುಷ್ಟ ಶಿಕ್ಷಕನಿಗೆ ಜೀವಮಾನದಲ್ಲೇ ಅವನು ಜೈಲಿನಿಂದ ಹೊರಗೆ ಬರದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು : ಶಿವರಾಜ ತಂಗಡಗಿ
ಕೊಪ್ಪಳ: ನೆರೆಮನೆಯ ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಶಿಕ್ಷಕ ಕಾಮದಾಟವಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿಶಿಕ್ಷಕನ ವಿರುದ್ಧ ಎಫ್‌ಐಆರ್ದಾಖಲಾಗಿದೆ. ಈ ಬಗ್ಗೆ ಮಾಜಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದು, ಆತನಿಗೆ ಸಾಮಾನ್ಯ ಶಿಕ್ಷೆ ಆಗಬಾರದು. ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ ಇಂತಹ ಒಬ್ಬ ದುಷ್ಟ ಶಿಕ್ಷಕನಿದ್ದಾನೆ ಎನ್ನುವುದೇ ಖೇದಕರ ಸಂಗತಿಯಾಗಿದೆ. ಒಬ್ಬ ಶಿಕ್ಷಕನಾಗಿ ಆ ವ್ಯಕ್ತಿ ಅಂತಹ ಕೃತ್ಯದಲ್ಲಿ ತೊಡಗಿದ್ದು ಖಂಡನೀಯ. ಯಾರು …
Read More »ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿ: ಕಾರು ಚಾಲಕ ಸಹಿತ ಸ್ಥಳದಲ್ಲೇ ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ
ಖಾನಾಪುರ: ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಾಳಿ ಬಳಿ ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಕಾರು ಚಾಲಕ ಸಾಗರ ಬಿಡಕರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಇನ್ನೊಬ್ಬ ಬಾಲಕನಾಗಿದ್ದು ಹೆಸರು ತಿಳಿದುಬರಬೇಕಿದೆ. ಅಳ್ನಾವರದ ಗಿರೀಶ್ ನಾಂದೋಲ್ಕರ್, ವೀರಣ್ಣ ಕೋಟಾರಶೆಟ್ಟಿ, ರೇಮಾಕಾಂತ ಪಾಲ್ಕರ್, ವಿಠ್ಠಲ ಕಾಕಡೆ ಅವರಿಗೆ ಗಂಭೀರ ಗಾಯಗಳಾಗಿವೆ. …
Read More »ಯುವತಿ ಅಪಹರಣ ಪ್ರಕರಣದಲ್ಲಿ ಹು-ಧಾ ಪಾಲಿಕೆ ಕಾರ್ಪೊರೇಟರ್ ಕೊನೆಗೂ ಅರೆಸ್ಟ್
ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದ (Love Marriage) ಯುವತಿಯನ್ನು (Girl) ಅಪಹರಿಸಿದ ಪ್ರಕರಣಕ್ಕೆ (Kidnap Case) ಸಂಬಂಧಿಸಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ (Hubballi Dharwad Corporation) ಕಾರ್ಪೋರೆಟರ್ ನನ್ನು (Corporator) ಕೊನೆಗೂ ಬಂಧಿಸಲಾಗಿದೆ. ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ನನ್ನು ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ (Gokul Road Station) ಪೊಲೀಸರು (Police) ಬಂಧಿಸಿದ್ದಾರೆ. ಜೊತೆಗೆ ಯುವತಿಯ ತಂದೆ ಶಿವು ಹಿರೇಕೆರೂರ ಹಾಗೂ ತಾಯಿ ಜಯಲಕ್ಷ್ಮಿ ಎಂಬುವರನ್ನು ಕೂಡ …
Read More »ಸಾಧನೆ ಶ್ರಮಿಕರ ಸ್ವತ್ತು ರಾಜ್ಯ ಕ್ರೈಡಲ್ ಎಮ್.ಡಿ. ಮಹಾಂತೇಶ ಹಿರೇಮಠ ಅಭಿಮತ
ವೈಜ್ಞಾನಿಕ ಕೊಡುಗೆಗಳಿಂದ ಜಗತ್ತು ಅಂಗೈಯಲ್ಲಿ ಹಿಡಿಯಲು ಸಾಧ್ಯವಾಗಿದೆ. ಇಂಥಹ ವಿಶೇಷತೆಗಳನ್ನು ಕೊಡಲು ಶ್ರಮ ಅತ್ಯಗತ್ಯ. ಸಾಧನೆಗಳು ಶ್ರಮಿಕರ ಸ್ವತ್ತಾಗಿದೆ ಎಂದು ರಾಜ್ಯ ಕ್ರೈಡಲ್ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಹಿರೇಮಠ ಹೇಳಿದರು. ಅವರು ಶನಿವಾರ ಬೆಂಗಳೂರಿನ ಭೂಸೇನಾ ನಿಗಮದ ಕೇಂದ್ರ ಕಚೇರಿಯಲ್ಲಿ ಅಕ್ಕತಂಗೇರಹಾಳ ಗ್ರಾಮದ ಐ.ಐ.ಎಸ್.ಸ್ಸಿ. ಪಿ.ಎಚ್.ಡಿ ಸಾಧಕ , ಚೇತನ ಉರಬಿನಹಟ್ಟಿ ಅವರಿಂದ ಸನ್ಮಾನಿಸಿ ಸ್ವೀಕರಿಸಿ ಮಾತನಾಡಿದರು. ಜಗತ್ತಿನ ಹೆಸರಾಂತ ತಾಂತ್ರಿಕ ಸಂಸ್ಥೆಗಳಲ್ಲಿ ಅಗ್ರಮಾನ್ಯ ಹೆಸರು ಭಾರತೀಯ ವಿಜ್ಞಾನ ಸಂಸ್ಥೆಗಿದೆ. …
Read More »ಬೆಳಗಾವಿ ನಗರದ ಈ ಏರಿಯಾಗಳಲ್ಲಿ ಈ ರವಿವಾರ ದಿನಾಂಕ ೩ ರಂದು ಕರೆಂಟ್ ಇರಲ್ಲ
ಬೆಳಗವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವುದರಿಂದ ನೆಹರು ನಗರದ ವಿದ್ಯುತ್ ಪರಿವರ್ತಕ ಕೇಂದ್ರದಿ0ದ ಹೊರಡುವ ಪರಿವರ್ತಕಗಳ ಮೇಲೆ ಬರುವ ಸ್ಥಳಗಳಲ್ಲಿ ದಿನಾಂಕ ೦೩-೦೭-೨೦೨೨ ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕೆಲಸ ಕೈಗೊಳ್ಳುತ್ತಿರುವುದರಿಂದ ನೆಹರು ನಗರದ ೧೧೦/೩೩/೧೧ ಕೆವಿ ವಿದ್ಯುತ್‌ವಿತರಣಾ ಕೇಂದ್ರದಿ0ದ ಹೊರಡುವ ಸದರಿ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ದಿನಾಂ ೦೩-೦೭-೨೦೨೨ರಂದು ರವಿವಾರ ಮುಂಜಾನೆ ೧೦ ಗಂಟೆಯಿAದ ಸಾಯಂಕಾಲ …
Read More »