Breaking News

ರಜೆಯ ಮೇಲೆ ಊರಿಗೆ ಬಂದಿದ್ದ ಯೋಧನನ್ನು ಬಾಮೈದನೇ ಹತ್ಯೆ ಮಾಡಿದ

ಬಾಗಲಕೋಟೆ: ರಜೆಯ ಮೇಲೆ ಊರಿಗೆ ಬಂದಿದ್ದ ಯೋಧನನ್ನು ಬಾಮೈದನೇ ಹತ್ಯೆ ಮಾಡಿರುವ ಘೋರ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ. 25 ವರ್ಷದ ಕರಿಸಿದ್ದಪ್ಪ ಕಳಸದ ಮೃತ ದುರ್ದೈವಿ. ಸಿದ್ದನಗೌಡ ದೂಳಪ್ಪ ಹತ್ಯೆಗೈದ ಆರೋಪಿ. ಊಟದ ವಿಚಾರವಾಗಿ ಯೋಧ ಹಾಗೂ ಆತನ ಪತ್ನಿ ವಿದ್ಯಾ ನಡುವೆ ಗಲಾಟೆ ನಡೆದಿದೆ. ಇದರಿಂದ ಬೇಸರಗೊಂಡ ವಿದ್ಯಾ ತನ್ನ ಸಹೋದರ ಸಿದ್ದನಗೌಡನಿಗೆ ಕರೆ ಮಾಡಿ ಹೇಳಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಂಡ-ಹೆಂಡತಿ …

Read More »

ಒಳ ಉಡುಪಿನಲ್ಲಿ ಚಿ‌ನ್ನ ಸಾಗಣೆ: ಮಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕ ವಶಕ್ಕೆ

ಮಂಗಳೂರು: ಒಳ ಉಡುಪಿನ ಕಿಸೆಯೊಳಗೆ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಬುಧವಾರ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ‌ಆಗಮಿಸಿದ ಪ್ರಯಾಣಿಕನ ಬಳಿಯಿದ್ದ ಒಳ ಉಡುಪಿನ ಪಾಕೆಟ್​ನೊಳಗೆ ಚಿನ್ನ ಪತ್ತೆಯಾಗಿದೆ. ಪ್ರಯಾಣಿಕನನ್ನು ತಪಾಸಣೆ ನಡೆಸಿದ ವೇಳೆ, ಆತನ ಬ್ಯಾಗ್​ನಲ್ಲಿದ್ದ ಒಳ ಉಡುಪಿನ ಹೊಲಿಗೆ ಹಾಕಲಾದ ಪಾಕೆಟ್​ನೊಳಗೆ ಚಿನ್ನ ಪತ್ತೆಯಾಗಿದೆ. 24K ನ 831 ಗ್ರಾಂ ಚಿನ್ನ …

Read More »

ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಅಮೆಜಾನ್​ಗೆ 33 ಲಕ್ಷ ಡಾಲರ್ ದಂಡ

ಬಾರ್ಸಿಲೋನಾ (ಸ್ಪೇನ್): ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಕಂಪನಿಯಾಗಿರುವ ಅಮೆಜಾನ್ ವಿರುದ್ಧ ಬಾರ್ಸಿಲೋನಾ ಸ್ಥಳೀಯ ಕಾರ್ಮಿಕ ಇಲಾಖೆ ತನಿಖೆ ಆರಂಭಿಸಿದೆ. ಅಮೆಜಾನ್ ಸ್ಪೇನ್​ನ ಕ್ಯಾಟಲೋನಿಯಾದಲ್ಲಿ ಹಲವಾರು ವರ್ಷಗಳವರೆಗೆ ಉಪಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. 2020ರಲ್ಲಿಯೂ ಇದೇ ರೀತಿಯ ಕಾನೂನು ಬಾಹಿರ ಕೃತ್ಯಕ್ಕಾಗಿ ಕಂಪನಿಯು ಅಂದಾಜು 8 ಲಕ್ಷ 26 ಸಾವಿರ ಡಾಲರ್​ಗೂ ಅಧಿಕ ದಂಡ ಪಾವತಿಸಿತ್ತು. ಈ ಬಾರಿ ಅಮೆಜಾನ್​ಗೆ 33 ಲಕ್ಷ ಡಾಲರ್​ ದಂಡ ವಿಧಿಸಲಾಗಿದೆ …

Read More »

ಕಾಶಿ ವಿಶ್ವನಾಥನ ಪಲ್ಲಕ್ಕಿಯ ಅದ್ದೂರಿ ಮೆರವಣಿಗೆ. ದೇವರ ದರ್ಶನ ಪಡೆದು ಪುನೀತರಾದ ಭಕ್ತಗಣ. ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಅಲಂಕೃತವಾಗಿದ್ದ ಪಲ್ಲಕ್ಕಿ.

ವಾರಾಣಸಿ (ಉತ್ತರ ಪ್ರದೇಶ): ನೂರಾರು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ರೀತಿಯಲ್ಲಿ ಭಗವಾನ್ ವಿಶ್ವನಾಥನ ಪಲ್ಲಕ್ಕಿಯ ಮೆರವಣಿಗೆಯು ಧಾರ್ಮಿಕ ಉತ್ಸಾಹ ಮತ್ತು ಸಂಭ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತು. ಕಾಶಿ ವಿಶ್ವನಾಥ ದೇಗುಲದಲ್ಲಿ ಕಳೆದ 356 ವರ್ಷಗಳಿಂದ ಈ ಧಾರ್ಮಿಕ ಆಚರಣೆಯನ್ನು ಅನುಸರಿಸಲಾಗುತ್ತಿದೆ. ಸುಂದರವಾಗಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವರ ಬೆಳ್ಳಿಯ ಪ್ರತಿಕೃತಿಯು ವಾರಾಣಸಿ ನಗರದ ಪ್ರಮುಖ ರಸ್ತೆಗಳು ಮತ್ತು ಪಥಗಳಲ್ಲಿ ಸಂಚರಿಸಿದ ನಂತರ ಗುರುವಾರ ಕಾಶಿಧಾಮ ದೇವಾಲಯದ ಆವರಣಕ್ಕೆ ಆಗಮಿಸಿತು. ವಿಶ್ವನಾಥನ ದರ್ಶನ …

Read More »

ವರ್ಣ ಧ್ವಜಕ್ಕೆ ಅವಮಾನ : ಸಚಿವ ಬಿ.ಸಿ.ನಾಗೇಶ್‌ ವಿರುದ್ದ ದೂರು ದಾಖಲು

ತುಮಕೂರು: ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಎಬಿವಿಪಿ ಧ್ವಜವನ್ನು ಹಿಡಿದುಕೊಂಡಿದ್ದ ಆರೋಪ ಎದುರಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ವಿರುದ್ಧ ದೂರು ನೀಡಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ಡಿವೈಎಸ್ಪಿ ಕಚೇರಿಗೆ ಯುವ ಕಾಂಗ್ರೆಸ್ ಮುಖಂಡ ಬಿ.ವಿ. ಹರಿಪ್ರಸಾದ್ ನೀಡಿದ್ದಾರೆ. ದೂರಿನಲ್ಲಿ ಶಾಲಾ ಸಿಬ್ಬಂದಿ ವರ್ಗ ಹಾಗೂ ಮಕ್ಕಳನ್ನು ಬಳಸಿಕೊಂಡ ತ್ರಿವರ್ಣ ಧ್ವಜದ ಮೇಲೆ ಎಬಿವಿಪಿ ಹಾರಿಸಿ ನಮ್ಮ ತಿರಂಗಕ್ಕೆ ಅವಮಾನ ಮಾಡಿದ್ದಾರೆ. ಶಾಲಾ ಮಕ್ಕಳನ್ನು ಇಂತಹ …

Read More »

ನಳಿನ್‌ ಕುಮಾರ್‌ ಕಟೀಲ್‌ ನಿರ್ಗಮನ, ಕರ್ನಾಟಕ ಬಿಜೆಪಿಗೆ ಸಾರಥಿ ಯಾರು?

ಬೆಂಗಳೂರು, ಆಗಸ್ಟ್‌ 11: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುರ್ಚಿ ಅಲುಗಾಡುತ್ತಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಬಗ್ಗೆ ಊಹಾಪೋಹಗಳು ಎದ್ದಿವೆ ಎಂದು ಮೂಲಗಳು ತಿಳಿಸಿವೆ.   ಬುಧವಾರ ಕರ್ನಾಟಕದ ಬಿಜೆಪಿ ನಾಯಕರು ನಳಿನ್ ಕುಮಾರ್ ಕಟೀಲ್ ಅವಧಿ ಮುಗಿದಾಗ ಆಗಸ್ಟ್ ಅಂತ್ಯದ ವೇಳೆಗೆ ಅಧಿಕಾರ ತ್ಯಜಿಸುತ್ತಾರೆ ಎಂದು ಸುಳಿವು ನೀಡಿದರು. ಆದಾಗ್ಯೂ ಕಟೀಲ್ ಮತ್ತು ಕೆಲವು …

Read More »

ಕೊಪ್ಪಳದಲ್ಲಿ ಗಲಾಟೆ, ಕಲ್ಲುತೂರಾಟ; ಇಬ್ಬರು ಸಾವು- ನಿಷೇಧಾಜ್ಞೆ ಜಾರಿ

ಕೋಮುಘರ್ಷಣೆಯಿಂದ ಕರ್ನಾಟಕ ಬೆಂದು ಹೋಗಿದೆ. ಹೊತ್ತಿ ಉರಿದಿದ್ದ ಕರಾವಳಿ (Costal) ಈಗ ಶಾಂತವಾಗಿದೆ. ನಮ್ಮ ರಾಜ್ಯದ ಪೊಲೀಸರು (Police) ಎಲ್ಲಾ ಕಡೆ ಕಟ್ಟೆಚ್ಚರ ವಹಿಸಿದ್ದಾರೆ. ಸದ್ಯ ಕರ್ನಾಟಕ (Karnataka) ಮೊದಲಿನ ಸ್ಥಿತಿಗೆ ಮರಳಿದೆ. ಅದರ ನಡುವೆಯೇ ಈಗ ಕೊಪ್ಪಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಕೊಪ್ಪಳ‌ ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಮಾರಾಮಾರಿ (Attack) ನಡೆದಿದೆ. ಮಾರಾಮಾರಿಯಿಂದ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. …

Read More »

ವಿವಾಹಿತ ಹೆಣ್ಣುಮಕ್ಕಳಿಗೂ ‘ಪೋಷಕರ ವಿಮೆ’ಯಲ್ಲಿ ಪಾಲಿದೆ ; ಹೈಕೋರ್ಟ್‌

ಬೆಂಗಳೂರು : ವಿವಾಹಿತ ಹೆಣ್ಣು ಮಕ್ಕಳಿಗೂ ಪೋಷಕರ ವಿಮೆಯಲ್ಲಿ ಪಾಲಿದೆ ಎಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪಘಾತದಲ್ಲಿ ತಮ್ಮ ತಂದೆ-ತಾಯಿಯ ಮರಣದ ನಂತ್ರ ವಿಮಾ ಕಂಪನಿಗಳಿಂದ ಪರಿಹಾರವನ್ನ ಪಡೆಯಲು ವಿವಾಹಿತ ಹೆಣ್ಣುಮಕ್ಕಳು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಪುತ್ರರಿಗೆ ಪರಿಹಾರದ ಹಕ್ಕನ್ನ ನೀಡುವಂತೆ ಸುಪ್ರೀಂಕೋರ್ಟ್‌ನ ಆದೇಶವನ್ನ ನ್ಯಾಯಾಲಯ ಉಲ್ಲೇಖಿಸಿದೆ. ‘ವಿವಾಹಿತ ಪುತ್ರರು ಅಥವಾ ವಿವಾಹಿತ ಹೆಣ್ಣುಮಕ್ಕಳು ಇಬ್ಬರೂ ಪೋಷಕರ ಮರಣದ ನಂತ್ರ ಪರಿಹಾರವನ್ನ ಪಡೆಯಲು ಅರ್ಹರಾಗಿರುತ್ತಾರೆ’ ಎಂದು …

Read More »

ಎಸಿಬಿ ರಚನೆ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು, ಆ.11. ಭ್ರಷ್ಟಚಾರ ನಿಗ್ರಹ ದಳ-ಎಸಿಬಿ ರಚನೆ ಮಾಡಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ 2016ರಲ್ಲಿ ಮಾಡಿದ್ದ ಆದೇಶವನ್ನು ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.   ಅಲ್ಲದೆ, ಲೋಕಾಯುಕ್ತಕ್ಕೆ ಮೊದಲು ನೀಡಿದ್ದ ಅಧಿಕಾರವನ್ನು ಮರಳಿ ನೀಡಬೇಕು, ಅದಕ್ಕೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಆಗಬೇಕು ಎಂದು ಹಿರಿಯ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ಕೆ.ಎಸ್. ಹೇಮಲೇಖಾ ಅವರ ನೇತೃತ್ವದ …

Read More »

ಚಿರತೆ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ 22 ಶಾಲೆಗಳಿಗೆ ಶುಕ್ರವಾರವೂ ರಜೆ

ಬೆಳಗಾವಿ – ಬೆಳಗಾವಿಯಲ್ಲಿ ಕಾಣಿಸಿಕೊಂಡಿರುವ ಚಿರತೆ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ 22 ಶಾಲೆಗಳಿಗೆ ಶುಕ್ರವಾರವೂ ರಜೆಯನ್ನು ಮುಂದುವರಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ ಎಂದು ಡಿಡಿಪಿಐ ಬಸವರಾಜ ನಾಲತವಾಡ ಹಾಗೂ ಬಿಇಒ ರವಿ ಭಜಂತ್ರಿ ತಿಳಿಸಿದ್ದಾರೆ. ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿದಿರುವುದರಿಂದ ಮೇಲ್ಕಂಡ ಪಟ್ಟಿಯಲ್ಲಿರುವ ಬೆಳಗಾವಿ ನಗರ ಮತ್ತು ಗ್ರಾಮೀಣ ಶಿಕ್ಷಣ ವಲಯದ ವ್ಯಾಪ್ತಿಯ ಶಾಲೆಗಳಿಗೆ ಶುಕ್ರವಾರ(ಆ.12) ರಜೆಯನ್ನು ಮುಂದುವರಿಸಲಾಗಿದೆ ಎಂದು ಡಿಡಿಪಿಐ ಬಸವರಾಜ ನಾಲತವಾಡ ತಿಳಿಸಿರುತ್ತಾರೆ. ಈ ಪ್ರದೇಶಗಳಿಂದ …

Read More »