Breaking News

ಬೆಳಗಾವಿಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಡ್ರೈನೇಜ್ ನೀರು ರಸ್ತೆ ಮೇಲೆ

ಬೆಳಗಾವಿಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ. ಚರಂಡಿ ನೀರು ಓವರ್ ಫ್ಲೋ ಆಗಿ ಡ್ರೈನೇಜ್ ನೀರು ರಸ್ತೆ ಮೇಲೆ ಹರಿದಿದೆ. ಹೌದು ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆರಾಯ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಬೆಳಗಾವಿಯ ಹಳೆ ಪಿಬಿ ರೋಡ್‍ನಲ್ಲಿ ಚರಂಡಿಯಲ್ಲಿ ಮಳೆ ನೀರು ಹೆಚ್ಚಾಗಿ ಓವರ್ ಫ್ಲೋ ಆಗಿ ಡ್ರೈನೇಜ್ ನೀರು ರಸ್ತೆಯ ಮೇಲೆ ಹರಿಯುತ್ತಿದೆ. …

Read More »

ಸ್ವ ಸಹಾಯ ಗುಂಪುಗಳಿಗೆ ಹಣಕಾಸು ನೆರವು; ಬೆಳಗಾವಿಯಲ್ಲಿ ಹೀಗೆ ಅರ್ಜಿ ಸಲ್ಲಿಸಿ

ಬೆಳಗಾವಿ: ಸ್ವ ಸಹಾಯ ಸಂಘಗಳ ಅಭಿವೃದ್ಧಿಗೆ ಪೂರಕವಾಗಿ ಹಣಕಾಸಿನ ನೆರವು ನೀಡಲು ಸರಕಾರವು ಮುಂದಾಗಿದೆ. ಯಾವುದೇ ಮಹಿಳಾ ಅಥವಾ ಪುರುಷ ಸದಸ್ಯರುಗಳುಳ್ಳ ಸ್ವ ಸಹಾಯ ಸಂಘಗಳು (Self Help Groups) ಧನ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. 2022-23 ನೇ ಸಾಲಿನ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಸ್ವ ಸಹಾಯ ಗುಂಪುಗಳ ಸಾಮಾಜಿಕ ಕ್ರೋಢೀಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪಘಟಕದಡಿ ಬೆಳಗಾವಿಯ (Belagavi News) …

Read More »

ಸರ್ಕಾರಿ ಕಾಮಗಾರಿಗೆ ರೈತನ ಜಮೀನಿನ ಮಣ್ಣು ಬಳಕೆ; ಅಕ್ರಮದ ವಿರುದ್ಧ ಕ್ರಮಕ್ಕೆ ಆಗ್ರಹ

ಧಾರವಾಡ : ಇಂದಿರಮ್ಮನ ಕೆರೆ ಧಾರವಾಡ ಜಿಲ್ಲೆಯ ಬೃಹತ್ ಕೆರೆಗಳಲ್ಲಿ (Dharwad Lakes) ಒಂದಾಗಿರುವ ಕೆರೆ. ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೆರೆ ಗ್ರಾಮದ (Hulikere Village) ಈ ಕೆರೆ ಕಳೆದ ಎರಡು ವರ್ಷಗಳ ಹಿಂದೆ ಸುರಿದ ಬಾರಿ ಮಳೆಯಿಂದ ಕೆರೆಯ ತಡೆ ಗೋಡೆ ಒಡೆದಿತ್ತು. ಇದರ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ‌ ಕೋಟಿ ಕೋಟಿ ಹಣ ಬಿಡುಗಡೆ ಸಹ ಮಾಡಿದೆ. ಕಾಮಗಾರಿಯೂ ಸಹ ಭರದಿಂದ ಸಾಗಿದೆ. …

Read More »

ಜಮೀರ್ ಫ್ಲ್ಯಾಟ್​ನಲ್ಲಿ 24 ಜೀವಂತ ಗುಂಡುಗಳು ಪತ್ತೆ;

ಬೆಂಗಳೂರು (ಜು.07): ಎಸಿಬಿ ಅಧಿಕಾರಿಗಳು ಸಿಲ್ವರ್ ಓಕ್ ಅಪಾರ್ಟ್​ಮೆಂಟ್​ನ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ಧಾರೆ. ಮಲ್ಯ ರಸ್ತೆಯ UB ಸಿಟಿ ಎದುರಿನ ಫ್ಲ್ಯಾಟ್ (Near UB City Flat) ಮೇಲೆ ರೇಡ್ ನಡೆಸಿದ್ದಾರೆ. ನಾಲ್ಕನೇ ಪ್ಲೋರ್​ನ 402ನೇ ಫ್ಲ್ಯಾಟ್​ನಲ್ಲಿ ಪರಿಶೀಲನೆ ನಡೆದಿದೆ. ಮನೆ, ಟ್ರಾವೆಲ್ಸ್​ ಕಚೇರಿ, ಫ್ಲ್ಯಾಟ್​ನಲ್ಲಿ ಅಧಿಕಾರಿಗಳ ಶೋಧ ನಡೆಸಿದ್ದಾರೆ. ಫ್ಲ್ಯಾಟ್​ನಲ್ಲಿ 24 ಜೀವಂತ ಗುಂಡು ಪತ್ತೆಯಾಗಿದೆ. ಜಮೀರ್ ಅಹಮ್ಮದ್ (Zameer Ahmed) ಪಿಸ್ತೂಲ್ ಪರವಾನಗಿ ಹೊಂದಿದ್ದಾರೆ. ಹಾಗಾಗಿ ಇದೇ …

Read More »

ವಿಡಿಯೋಗಳನ್ನು ಮಾಡಿದ್ದು ನಾನೇ; ತಪ್ಪೊಪ್ಪಿಕೊಂಡ ಕಾಮುಕ ಶಿಕ್ಷಕ

ಬಂಧಿತನಾಗಿರುವ ಕೊಪ್ಪಳ ಜಿಲ್ಲೆಯ ಕಾರಟಗಿಯ (Karatagi, koppala) ಕಾಮುಕ ಶಿಕ್ಷಕ (Teacher) ಮಹಮ್ಮದ್ ಅಜರುದ್ದೀನ್ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ವಿಡಿಯೋ ವೈರಲ್ (Viral Video) ಬೆನ್ನಲ್ಲೇ ಶಿಕ್ಷಕ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡು ಗೋವಾದಲ್ಲಿ ತಲೆಮರೆಸಿಕೊಂಡಿದ್ದನು. ಸದ್ಯ ಆರೋಪಿ ಶಿಕ್ಷಕ ನ್ಯಾಯಾಂಗ ಬಂಧನದಲ್ಲಿದ್ದಾನೆ (Judicial Cutody). ಗೊರೇಬಾಳ ವಲಯ ಶಿಕ್ಷಣ ಸಂಯೋಜಕರ ವಿಚಾರಣೆಯ ವೇಳೆ ಶಿಕ್ಷಕ ಮಹಮ್ಮದ್ ಅಜರುದ್ದೀನ್ ತಪ್ಪೊಪ್ಪಿಕೊಂಡಿದ್ದಾನೆ. ಮೂರು ವರ್ಷದ ಹಿಂದೆ ನನ್ನ ಮನೆಯಲ್ಲಿ ಮಹಿಳೆಯೊಂದಿಗಿನ ವಿಡಿಯೋ …

Read More »

ಗುಡ್ಡ ಕುಸಿತ- ಕರ್ನಾಟಕ, ಗೋವಾ ಸಂಪರ್ಕಿಸುವ ರಸ್ತೆ 5 ಗಂಟೆ ಬಂದ್

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರಕ್ಕೆ ಗೋವಾ ಸಮೀಪದ ಮಾಲಶೇಜ್ ಘಾಟ್‍ನಲ್ಲಿ ಗುಡ್ಡ ಕುಸಿದು, ಕರ್ನಾಟಕ ಸಂಪರ್ಕಿಸುವ ರಸ್ತೆ 5 ಘಂಟೆಗಳ ಕಾಲ ಬಂದ್ ಆಗಿತ್ತು. ಬಳಿಕ ಗೋವಾದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ 5 ಗಂಟೆಗಳ ಕಾರ್ಯಾಚರಣೆ ನಡೆಸಿ ರಸ್ತೆ ಸುಗಮಗೊಳಿಸಿದ್ದಾರೆ. ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಮಾಲಶೇಜ್ ಘಾಟ್ ಗೋವಾ ಸಮೀಪದಲ್ಲಿದೆ. ಪಶ್ಚಿಮ ಘಟ್ಟದಲ್ಲಿ ಮಳೆಯ ಆರ್ಭಟಕ್ಕೆ ಮಾಲಶೇಜ್ ಘಾಟ್‍ನಲ್ಲಿ ಗುಡ್ಡ ಕುಸಿತವಾಗಿತ್ತು. ಗುಡ್ಡ ಕುಸಿತದಿಂದ ಕರ್ನಾಟಕ-ಗೋವಾ ಸಂಪರ್ಕಿಸುವ ರಸ್ತೆಯಲ್ಲೂ …

Read More »

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ, ಖ್ಯಾತ ಜ್ಯೋತಿಷಿ ಚಂದ್ರಶೇಖರ್‌ ಗುರೂಜಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿ ಉಣಕಲ್ ನಲ್ಲಿರುವ ಖಾಸಗಿ ಹೊಟೆಲ್‌ನಲ್ಲಿ ಹಾಡಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಭಕ್ತರ ಸೋಗಿನಲ್ಲಿ ಬಂದು ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.

Read More »

ವಿದ್ಯುತ್ ತಗುಲಿ ಶಾಲಾ ಬಾಲಕಿ ಸಾವು

ನಿಪ್ಪಾಣಿ: ತಾಲೂಕಿನ ಡೋಣೆವಾಡಿ ಗ್ರಾಮದ ಪ್ರಾಥಮಿಕ ಮರಾಠಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನುಷ್ಕಾ ಸದಾಶಿವ ಭೇಂಡೆ(9) ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ವಿಷಯ ತಿಳಿದು ಸದಲಗಾ ಠಾಣೆಯ ಪೊಲೀಸರು ಹಾಗೂ ಭೋಜ ಹೆಸ್ಕಾಂ ಅಧಿಕಾರಿಗಳು ಬಂದು ಪಂಚನಾಮೆ ನಡೆಸಿದರು. ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಶಿಕ್ಷಣ ಇಲಾಖೆಯಿಂದ ಪೋಷಕರಿಗೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಹಾಗೂ ಸ್ಥಳೀಯರು ಶಾಲೆಯ ಮುಖ್ಯಶಿಕ್ಷಕರನ್ನು ವಜಾಗೊಳಿಸಬೇಕು …

Read More »

ಖಾನಾಪುರದಲ್ಲಿ ಉತ್ತಮ ವರ್ಷಧಾರೆ

ಖಾನಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತಮ ಪ್ರಮಾಣದ ಮಳೆಯಾಗಿದೆ. ಸೋಮವಾರ ಇಡೀ ದಿನ ತಾಲ್ಲೂಕಿನ ದೇವಲತ್ತಿ, ಪಾರಿಶ್ವಾಡ, ನಂದಗಡ, ಬೀಡಿ, ಹಲಸಿ, ಲೋಂಡಾ, ಕಕ್ಕೇರಿ, ಜಾಂಬೋಟಿ, ಕಣಕುಂಬಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಸುರಿದಿದೆ.   ಕರ್ನಾಟಕ-ಗೋವಾ ಗಡಿಯ ಘಟ್ಟ ಪ್ರದೇಶದಲ್ಲಿ ಮಳೆ ಸತತವಾಗಿ ಸುರಿಯುತ್ತಿದೆ. ಕಣಕುಂಬಿಯಲ್ಲಿ 4 ಸೆಂ.ಮೀ, ಲೋಂಡಾದಲ್ಲಿ 3.8 ಸೆಂ.ಮೀ, ಜಾಂಬೋಟಿ ಮತ್ತು ಕಕ್ಕೇರಿಯಲ್ಲಿ 2 ಸೆಂ.ಮೀ, …

Read More »

ಬೆಳಗಾವಿ: ಮಹಿಳೆಯೊಬ್ಬರ ಮಿದುಳಿನ ರಕ್ತದ ಗಂಟಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಳಗಾವಿ: ಮಹಿಳೆಯೊಬ್ಬರ ಮಿದುಳಿನಲ್ಲಿ ಉಂಟಾಗಿದ್ದ ಅತ್ಯಂತ ಅಪಾಯಕಾರಿ ರಕ್ತದ ಗಂಟನ್ನು ‘ಬೈಪಾಸ್‌ ಶಸ್ತ್ರಚಿಕಿತ್ಸೆ’ ಮೂಲಕ ಹೊರತೆಗೆಯುವಲ್ಲಿ, ಮಹಾರಾಷ್ಟ್ರದ ಕೊಲ್ಹಾಪುರ ತಾಲ್ಲೂಕಿನ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯರು ಯಶಸ್ವಿಯಾಗಿದ್ದಾರೆ.   49 ವರ್ಷ ವಯಸ್ಸಿನ ಮಹಿಳೆಯ ಮಿದುಳಿಗೆ ರಕ್ತ ಪೂರೈಸುವ ಪ್ರಮುಖ ನಾಳದಲ್ಲಿ ಈ ಗಂಟು ಬೆಳೆದಿತ್ತು. ಹೃದಯದಿಂದ ಪಂಪ್‌ ಆಗಿ ಚಿಮ್ಮುವ ರಕ್ತವು ಮಿದುಳಿಗೆ ತಲುಪುತ್ತಿರಲಿಲ್ಲ. ಸಾಮಾನ್ಯವಾಗಿ ಮಿದುಳಿನ ರಕ್ತನಾಳಗಳಲ್ಲಿ 6ರಿಂದ 7 ಮಿ.ಮೀ …

Read More »