Breaking News

ಚಂದ್ರಶೇಖರ ಗುರೂಜಿ ಕಗ್ಗೊಲೆ: ಬಾಗಲಕೋಟೆ ಮೂಲದವರಾದ್ರೂ ಮುಂಬೈನಲ್ಲೇ ಇರುತ್ತಿದ್ದ ಇವರ ಹಿನ್ನೆಲೆ ಹೀಗಿದೆ.

ಹುಬ್ಬಳ್ಳಿ: ನಗರದ ಹೋಟೆಲ್​ವೊಂದರಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನ ದುಷ್ಕರ್ಮಿಗಳಿಬ್ಬರು ಇಂದು ಮಧ್ಯಾಹ್ನ ಹಾಡಹಗಲೇ ಭೀಕರವಾಗಿ ಕೊಲೆ ಮಾಡಿದ್ದು, ಹುಬ್ಬಳ್ಳಿ ಜನತೆ ಬೆಚ್ಚಿಬಿದ್ದಿದ್ದಾರೆ. ದೇಶಾದ್ಯಂತ ಸರಳ ವಾಸ್ತು ಬಗ್ಗೆ ಸಲಹೆ ನೀಡುತ್ತಿದ್ದ ಗುರೂಜಿ ಅವರು ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಚೇರಿ ತೆರೆದಿದ್ದರು. ಇವರ ಬಳಿ ಸಲಹೆ ಪಡೆಯಲು ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು. ಇದೀಗ ಇವರ ಸಾವಿನ ಸುದ್ದಿ ಕೇಳಿ ಆಘಾತಕ್ಕೀಡಾಗಿದ್ದಾರೆ. ಚಂದ್ರಶೇಖರ ಗುರೂಜಿ ಅವರು ಬಾಗಲಕೋಟೆ …

Read More »

ಭಾರೀ ಮಳೆ ಹಿನ್ನಲೆ: ನಾಳೆ ಶಿವಮೊಗ್ಗ ಜಿಲ್ಲೆಯ ಈ ತಾಲ್ಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವಂತ ಭಾರಿ ಮಳೆಯಿಂದಾಗಿ ( Heavy Rain ), ಜನರು ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಮನೆಯಿಂದ ಹೊರ ಬರದಂತ ಪರಿಸ್ಥಿತಿ ಇದೆ. ಈ ಹಿನ್ನಲೆಯಲ್ಲಿಯೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ತಾಲೂಕಿನ ಶಾಲೆಗಳಿಗೆ ರಜೆ ( School Holiday ) ಘೋಷಣೆ ಮಾಡಲಾಗಿದೆ.   ಈ ಬಗ್ಗೆ ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ …

Read More »

ಮಹಾರಾಷ್ಟ್ರ ವ್ಯವಸ್ಥೆ ಬಗ್ಗೆ ತೀವ್ರ ಬೇಸರಗೊಂಡು ಐಎಎಸ್ ಹುದ್ದೆ ತ್ಯಜಿಸಿದ ಅಧಿಕಾರಿ!

ಪುಣೆ: ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆ(ಎಂಇಡಿಡಿ) ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ 2008ರ ಬ್ಯಾಚ್‌ನ ಐಎಎಸ್ ಅಧಿಕಾರಿ ದೌಲತ್ ದೇಸಾಯಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದು, ವ್ಯವಸ್ಥೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.   MEDDಗೆ ವರ್ಗಾವಣೆಯಾಗುವ ಮೊದಲು ಅವರು ಕೊಲ್ಲಾಪುರದ ಕಲೆಕ್ಟರ್ ಆಗಿದ್ದರು ಮತ್ತು ಪಶ್ಚಿಮ ಮಹಾರಾಷ್ಟ್ರ ಜಿಲ್ಲೆಯನ್ನು ಕಾಡಿದ್ದ 2019 ರ ಪ್ರವಾಹ ಸ್ಥಿತಿಯನ್ನು ನಿಭಾಯಿಸಿದ್ದರು.   …

Read More »

ಜಮೀರ್ ಅಹ್ಮದ್ ಮನೆ ಮೇಲೆ ACB ರೇಡ್: ಹಾಲಿ ಸಚಿವರಿಗೆ ಶರುವಾಯ್ತು ನಡುಕ

ಬೆಂಗಳೂರು : ಎಸಿಬಿ ಸರ್ಚ್ ವಾರೆಂಟ್​ ಪಡೆದು ಮುಂಜಾನೆ 5.50ರ ಸುಮಾರಿಗೆ ಜಮೀರ್​ ಮೇಲೆ ದಾಳಿ ನಡೆಸುತ್ತಿದ್ದಾರೆ. ಎಸಿಬಿ ಅಧಿಕಾರಿಗಳು ಸದ್ಯ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ACB ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್ ಅಹ್ಮದ್ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದಲ್ಲದೆ ಜೊತೆಯಲ್ಲಿದ್ದ ಹಾಲಿ ಸಚಿವರಿಗೆ ನಡುಕ ಶುರುವಾಗಿದೆ.ಇಡಿ 20 ವರ್ಷಗಳ ಜಮೀರ್ ಆಸ್ತಿ ರಿಪೋರ್ಟ್ ರೆಡಿ ಮಾಡಿದ್ದು, ರಿಪೋರ್ಟ್​ ಆಧಾರದ ಮೇಲೆ ಎಸಿಬಿ ರೇಡ್ ಮಾಡಲಾಗಿದೆ. ​ ಇಡಿ ರಿಪೋರ್ಟ್​ ಆಧಾರದ …

Read More »

ಮಾನವ ಗುರು’ ಚಂದ್ರಶೇಖರ್ ಗುರೂಜಿ ಹತ್ಯೆ ಹಿಂದೆ ‘ಹೆಣ್ಣು – ಮಣ್ಣು” ಶಂಕೆ?

ಬೆಂಗಳೂರು: ಮಾನವ ಗುರು ಎಂದೇ ಟಿವಿ ವಾಹಿನಿಗಳಲ್ಲಿ ಹೆಸರು ಮಾಡಿರುವ ಸರಳ ವಾಸ್ತು ಮುಖ್ಯಸ್ಥ ಚಂದ್ರಶೇಖರ್ ಗುರೂಜಿ ಕೊಲೆ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು, ಈಗ ಈ ವಾಸ್ತು ಗುರುವಿನ ಹಿನ್ನೆಲೆ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.   ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಚಂದ್ರಶೇಖರ್ ಗುರುಜಿ ಸೇನೆ ಸೇರಬೇಕೆಂಬ ಉದ್ದೇಶಕ್ಕೆ ಬೆಳಗಾವಿಗೆ ಬಂದು ಪ್ರಯತ್ನ ನಡೆಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಸಿವಿಲ್ ಎಂಜಿನಿಯರಿಂಗ್ ಹಿನ್ನೆಲೆಯ ಚಂದ್ರಶೇಖರ ಗುರೂಜಿ ಆ ಬಳಿಕ ಮುಂಬಯಿಗೆ …

Read More »

ಬೆಳಗಾವಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪತ್ರಿಕಾ ದಿನಾಚರಣೆ

ಬೆಳಗಾವಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪತ್ರಿಕಾ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ನಗರದ ಜೀರಗೆ ಹಾಲ್‍ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ …

Read More »

ಬೆಳಗಾವಿ: ಜಿಲ್ಲೆಯ ಎಲ್ಲೆಡೆ ಉತ್ತಮ ಮಳೆ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆಗಳಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು. ಬೆಳಗಾವಿ ನಗರದಲ್ಲಿ ಭಾನುವಾರ ಸಾಧಾರಣ ಮಳೆ ಸುರಿದಿತ್ತು. ಸೋಮವಾರ ಬೆಳಿಗ್ಗೆಯಿಂದ ತುಸು ಬಿರುಸು ಪಡೆಯಿತು. ತಾಲ್ಲೂಕಿನಲ್ಲಿ ಕೂಡ ಮಧ್ಯಾಹ್ನ 12ರಿಂದ ಧಾರಾಕಾರವಾಗಿ ಸುರಿಯುತ್ತಿದೆ.   ಇದರಿಂದ ಶಾಲೆ, ಕಾಲೇಜಿಗೆ, ಕಚೇರಿ, ಹೊಲಗಳಿಗೆ ತೆರಳುವವರೆಲ್ಲ ರೇನ್ ಕೋರ್ಟ್, ಕೊಡೆಗಳ ಆಶ್ರಯ ಪಡೆದರು. ಇನ್ನೊಂದೆಡೆ ಮಲಪ್ರಭಾ, ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಕೂಡ ಉತ್ತಮ ಮಳೆಯಾದ ಕಾರಣ ಒಳಹರಿವು ಹೆಚ್ಚಾಗಿದೆ. …

Read More »

ಯಲ್ಲಮ್ಮನಗುಡ್ಡಕ್ಕೆ ಹರಿದುಬರುತ್ತಿದೆ ಭಕ್ತರ ದಂಡು

ಉಗರಗೋಳ: ಸವದತ್ತಿ ತಾಲ್ಲೂಕಿನ ಉಗರಗೋಳದ ಯಲ್ಲಮ್ಮನ ಗುಡ್ಡಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ಮೂರು ತಿಂಗಳಲ್ಲಿ ₹ 2.15 ಕೋಟಿ ದೇಣಿಗೆ ಸಂಗ್ರಹವಾಗಿದೆ. ಯಲ್ಲಮ್ಮನ ಗುಡ್ಡದಲ್ಲಿ ಸೋಮವಾರ ಎರಡನೇ ಹಂತದ ಹುಂಡಿ ಎಣಿಕೆ ನಡೆಯಿತು. ₹ 33.44 ಲಕ್ಷ ನಗದು, ₹ 5.11 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 62,390 ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ. ಕೊರೂನಾ ನಂತರ ಆದಾಯ ಉತ್ತಮ: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ …

Read More »

ನಾಳೆ ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ

ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಚಂದ್ರಶೇಖರ ಗುರೂಜಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಗುರೂಜಿ ಆತ್ಮೀಯ ಮೋಹನ ಲಿಂಬಿಕಾಯಿ ಹೇಳಿಕೆ ನೀಡಿದ್ದಾರೆ. ಹೌದು ದುಷ್ಕರ್ಮಿಗಳಿಂದ ಚಾಕುವಿನಿಂದ ಇರಿದು ಹತ್ಯೆ ಆಗಿರುವ ಚಂದ್ರಶೇಖರ ಗುರೂಜಿ ಅಂತ್ಯ ಸಂಸ್ಕಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮೋಹನ ಲಿಂಬಿಕಾಯಿ ಗೂರೂಜಿಯವರಿಗೆ ಬಹಳಷ್ಟು ಅನುಯಾಯಿಗಳು ಇದ್ದಾರೆ. ದೇಶದ ಬೇರೆ ಬೇರೆ ಕಡೆಗಳಲ್ಲಿ ಇದ್ದಾರೆ. ಕುಟುಂಬದವರೊಂದಿಗೆ ಚರ್ಚಿಸಿದ್ದೇವೆ. ನಾಳೆ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ. ಹುಬ್ಬಳ್ಳಿಯ …

Read More »

ಸರ್ಕಾರಿ ಶಾಲೆ ಬಿಸಿಯೂಟ ಸೇವಿಸಿ ಕಳಪೆ ಮಟ್ಟದ ಆಹಾರ ಇದೆ ಎಂದು B.E.O.ಗೆ ತರಾಟೆಗೆ ತೆಗೆದುಕೊಂಡ ಅಭಯ ಪಾಟೀಲ

ಸರ್ಕಾರಿ ಶಾಲಾ ಮಕ್ಕಳ ಜೊತೆಗೆ ಬಿಸಿಯೂಟ ಸೇವಿಸುವ ಮೂಲಕ ಬೆಳಗಾವಿಯ ದಕ್ಷಿಣ ಶಾಸಕ ಅಭಯ್ ಪಾಟೀಲ್ ತಮ್ಮ ಸರಳತೆ ಮೆರೆದಿದ್ದಾರೆ. ಹೌದು ಶಾಹಪುರದ ಅಳವಾನ್ ಗಲ್ಲಿಯ ಸರ್ಕಾರಿ ಶಾಲೆಗೆ ಇಂದು ದಿಢೀರ್ ಅಂತಾ ಭೇಟಿ ನೀಡಿದ ಶಾಸಕ ಅಭಯ್ ಪಾಟೀಲ್ ಮಧ್ಯಾಹ್ನದ ಬಿಸಿಯೂಟವನ್ನು ಪರೀಕ್ಷಿಸಿದರು. ಇದೇ ವೇಳೆ ಮಕ್ಕಳ ಜೊತೆಗೆ ಕುಳಿತುಕೊಂಡು ಬಿಸಿಯೂಟ ಸವಿದ ಅಭಯ್ ಪಾಟೀಲ್, ಗುಣಮಟ್ಟದ ಬೇಳೆ ಮತ್ತು ಅಕ್ಕಿಯನ್ನು ಊಟದಲ್ಲಿ ಯಾಕೆ ಬಳಸುತ್ತಿಲ್ಲ ಎಂದು ಬಿಇಓ …

Read More »