ಬೆಳಗಾವಿ: ಹೊರಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಇಲ್ಲಿನ ರೈತಗಲ್ಲಿಯಲ್ಲಿ ನಡೆದಿದೆ. ಮೂಲತಃ ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಗ್ರಾಮದ ನಿವಾಸಿ ಜ್ಯೋತಿ ಹಿಕ್ಕಡಿ(20) ನಾಪತ್ತೆಯಾದ ಯುವತಿ ಎಂದು ತಿಳಿದು ಬಂದಿದೆ. ವಿಜಯಪುರ ಜಿಲ್ಲೆಯ ಮಾದಾಪಟ್ಟಣದಲ್ಲಿ ಜ್ಯೋತಿ ಅವರ ತಂದೆ ಶ್ರೀಶೈಲ ಹಿಕ್ಕಡಿ ವಾಸವಾಗಿದ್ದರು. ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಬೆಳಗಾವಿ ನಗರದ ರೈತ ಗಲ್ಲಿಯಲ್ಲಿ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಯುವತಿ, ಕಳೆದ ನಾಲ್ಕು …
Read More »ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿಯಾಗಿರುವ ಐಪಿಎಸ್ ಅಧಿಕಾರಿ, ಜಾಮೀನು ನಿರಾಕರಿಸಿದ ಸೆಷನ್ಸ್ ನ್ಯಾಯಾಲಯ
ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿಯಾದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮೃತ್ ಪಾಲ್ ಅವರಿಗೆ ಜಾಮೀನು ನೀಡಲು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ. ಅಮೃತ್ ಪಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ 51ನೇ ಹೆಚ್ಚುವರಿ ನಗರ ಮತ್ತು ಸೆಷನ್ಸ್ ಕೋರ್ಟ್ನ ನ್ಯಾಯಾಧೀಶ ಯಶವಂತ ಕುಮಾರ್ ಅವರು ಮಂಗಳವಾರ ತೀರ್ಪು ನೀಡಿ ಜಾಮೀನು ಅರ್ಜಿ ವಜಾಗೊಳಿಸಿದರು. ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಅಮೃತ್ ಪಾಲ್ ಅವರು ಪಿಎಸ್‌ಐ …
Read More »ಸ್ವಾತಂತ್ರ್ಯೋತ್ಸವದ ದಿನ ಜೇಬಿನಲ್ಲಿ ಚಾಕು ಯಾಕಿತ್ತು?, ಧ್ವಜ ಇರಬೇಕಿತ್ತು: ಪ್ರಮೋದ ಮುತಾಲಿಕ್
ಧಾರವಾಡ: ಶಿವಮೊಗ್ಗದಲ್ಲಿ ಸೋಮವಾರ ನಡೆದ ಗಲಾಟೆ ಆಕಸ್ಮಿಕವಾದದ್ದಲ್ಲ. ಮುಂಬರುವ ಗಣೇಶ ಮೆರವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ವನಿಯೋಜಿತವಾಗಿ ಈ ಕೃತ್ಯ ನಡೆದಿದೆ ಎಂದು ಪ್ರಮೋದ ಮುತಾಲಿಕ್ ದೂರಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ 40 ವರ್ಷದಿಂದ ಹಿಂದೂ ಮಹಾಸಭಾದ ಗಣೇಶ ಮೆರವಣಿಗೆ ಆಗುತ್ತದೆ. ಈ ಹಿಂದೆ ಗಣೇಶ ಮೆರವಣಿಗೆ ಮಸೀದಿ ಮುಂದೆ ಹೋಗಬಾರದೆಂದು ಗಲಾಟೆ ಮಾಡಿದ್ದರು. ಆಗಿನಿಂದಲೇ ಸಂಘರ್ಷ ಆರಂಭವಾಗಿದೆ ಎಂದರು. ಸಾವರ್ಕರ್ ಓರ್ವ ಪ್ರಖರ ಹಿಂದೂವಾದಿ ಮತ್ತು ರಾಷ್ಟ್ರೀಯವಾದಿ. ಅವರನ್ನು ವಿರೋಧಿಸುವುದು …
Read More »ಸಿದ್ದರಾಮಯ್ಯ ವೋಟಿಗಾಗಿ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ: ಆರಗ ಜ್ಞಾನೇಂದ್ರ
ಶಿವಮೊಗ್ಗ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ವೋಟಿಗಾಗಿ ಓಲೈಕೆ ಮಾಡಿ ವಿ.ಡಿ. ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಸಾವರ್ಕರ್ ಅವರು ಬ್ರಿಟಿಷರ ಬೂಟು ನೆಕ್ಕಿದ್ರು ಎಂಬ ಹೇಳಿಕೆ ಒಂದು ಸಮುದಾಯವನ್ನು ಎತ್ತಿಕಟ್ಟಿದೆ. ಚುನಾವಣಾ ವರ್ಷ ಆಗಿರುವುದರಿಂದ ಈ ರೀತಿ ಮಾತನಾಡುತ್ತಿದ್ದಾರೆ. ಸಾವರ್ಕರ್ ಓರ್ವ ಸ್ವಾತಂತ್ರ್ಯ ಹೋರಾಟಗಾರ, 13 ವರ್ಷ ಅವರು ಕರಿನೀರಿನ ಶಿಕ್ಷೆ ಅನುಭವಿಸಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ವೀರ ಸಾವರ್ಕರ್ …
Read More »ಪುಟ್ಟ ರಾಜ್ಯದ ರಕ್ಷಣೆಗೆ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತವರು ರಾಣಿ ಕಿತ್ತೂರು ಚೆನ್ನಮ್ಮ
ಬೆಳಗಾವಿ: ನಿಮಗೆ ಏಕೆ ಕೊಡಬೇಕು ಕಪ್ಪ ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತ, ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಎಂದು ಗುಡುಗು ಹಾಕಿದ ಕನ್ನಡನಾಡಿನ ಸಾಹಸಿ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿದವರು, ಸ್ವಾತಂತ್ರ್ಯ ಸ್ವಾಭಿಮಾನದ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚೆನ್ನಮ್ಮ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಅವರ ಹೆಂಡತಿ ರಾಣಿ ಚೆನ್ನಮ್ಮ. ತಮ್ಮ ಪುಟ್ಟ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿದ ಧೈರ್ಯ, ಸಾಹಸ …
Read More »ರೈತರಿಂದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು.
ಬಳ್ಳಾರಿ: ಕೈಗಾರಿಕೆಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರೈತರ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡಿತ್ತು. ಕೆಐಎಡಿಬಿ ಮೂಲಕ ವಶಪಡಿಸಿಕೊಂಡ ಭೂಮಿಯಲ್ಲಿ ಇದುವರೆಗೆ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಹೀಗಾಗಿ ಇತ್ತ ಉದ್ಯೋಗವಿಲ್ಲದೇ ಅತ್ತ ಭೂಮಿಯೂ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಬಳ್ಳಾರಿ ತಾಲೂಕಿನ ಕುಡುತಿನಿ, ವೇಣಿವೀರಾಪುರ, ಕೊಳಗಲ್ಲು ಗ್ರಾಮಗಳಲ್ಲಿ ಬ್ರಹ್ಮಿಣಿ ಸ್ಟಿಲ್ ಹಾಗೂ ಮಿತ್ತಲ್ ಕಂಪನಿಗಾಗಿ ರೈತರಿಂದ ಸುಮಾರು 10 ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಇತ್ತ ರೈತರು ತಮ್ಮ …
Read More »ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ನೇಣಿಗೆ ಶರಣು
ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ದೇಗಿನಾಳ ಗ್ರಾಮದಲ್ಲಿ ನಡೆದಿದೆ. 44 ವರ್ಷದ ಸುರೇಶ ಮಾಕೊಂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.ಅಲ್ಲದೇ, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮನಗೂಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ.
Read More »ದಯವಿಟ್ಟು ನಮಗೆ ಮನೆ ಕಟ್ಟಿ ಕೊಡಿ: ಸರ್ಕಾರಕ್ಕೆ ಕಡೋಲಿ ಸಂತ್ರಸ್ತ ಮಹಿಳೆಯರ ಮನವಿ
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಭಾರಿ ಮಳೆಗೆ ಹಾನಿಗೆ ಒಳಗಾಗಿರುವ ಈ ಎರಡೂ ಮನೆಗಳು ಯಾವಾಗ ಬೇಕಾದ್ರೂ ಬೀಳಬಹುದು. ಜೀವ ಭಯದಲ್ಲಿಯೇ ಕುಟುಂಬಸ್ಥರು ಜೀವನ ಸಾಗಿಸುತ್ತಿದ್ದಾರೆ. ದಯವಿಟ್ಟು ನಮಗೆ ಮನೆ ಕಟ್ಟಿಸಿ ಕೊಡಿ ಎಂದು ಈ ನೊಂದ ಸಂತ್ರಸ್ತ ಮಹಿಳೆಯರು ಅಂಗಲಾಚುತ್ತಿದ್ದಾರೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಬದುಕುವುದೇ ದುಸ್ಥರವಾಗಿ ಬಿಟ್ಟಿದೆ. ಮಳೆ ನೀರು ಮನೆ ಒಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನೀರಿನಿಂದ ನೆನೆದಿರುವ ಈ ಮನೆಯ ಗೋಡೆಗಳು ಯಾವ …
Read More »ಬೆಳಗಾವಿಯಲ್ಲಿ ಚಿರತೆಗಾಗಿ ಇನ್ನು 1 ವಾರ ಕಾರ್ಯಾಚರಣೆ:ಡಿಎಫ್‍ಓ ಡಾ.ಅಂಟೋನಿ
ನಮ್ಮ ಅಂದಾಜಿನ ಪ್ರಕಾರ ಬೆಳಗಾವಿಯ ಗಾಲ್ಫ ಮೈದಾನದಲ್ಲಿ ಪತ್ತೆಯಾಗಿದ್ದ ಚಿರತೆ ಅರಣ್ಯ ಪ್ರದೇಶಕ್ಕೆ ಹೋಗಿರುವ ಸಾಧ್ಯತೆಯಿದೆ. ಆದರೆ ಅದು ಮರಳಿ ಬರಬಹುದು ಅಥವಾ ಮತ್ತೆ ಕಾಣಿಸಿಕೊಳ್ಳಬಹುದು ಎಂಬ ಹಿನ್ನೆಲೆ ನಾವು ಕಾರ್ಯಾಚರಣೆ ಮುಂದುವರಿಸಿದ್ದೇವೆ ಎಂದು ಡಿಎಫ್‍ಓ ಡಾ.ಅಂಟೋನಿ ಮರಿಯಂ ಸ್ಪಷ್ಟಪಡಿಸಿದ್ದಾರೆ. ಹೌದು ಬೆಳಗಾವಿಯ ಗಾಲ್ಫ ಮೈದಾನದಲ್ಲಿ ಚಿರತೆ ಪತ್ತೆಯಾಗಿರುವ ಹಿನ್ನೆಲೆ ಕುಂದಾನಗರಿ ಜನ ತೀವ್ರ ಭಯಭೀತರಾಗಿದ್ದರು. ಇನ್ನು ಅರಣ್ಯ ಇಲಾಖೆ ಕೂಡ ಸತತ ಕಾರ್ಯಾಚರಣೆ ನಡೆಸಿದರೂ ಚಿರತೆ ಮಾತ್ರ ಸೆರೆಯಾಗಿರಲಿಲ್ಲ. …
Read More »ದಿವಂಗತ ಸುರೇಶ್ ಅಂಗಡಿ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಬೆಳಗಾವಿ-ಧಾರವಾಡ ರೈಲು ಮಾರ್ಗ ಯೋಜನೆ ಒಂದು ಹಂತಕ್ಕೆ: ಗೋವಿಂದ ಕಾರಜೋಳ್
ದಿವಂಗತ ಸುರೇಶ್ ಅಂಗಡಿ ರವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಬೆಳಗಾವಿ-ಧಾರವಾಡ ರೈಲು ಮಾರ್ಗ ಯೋಜನೆ ಈಗ ಒಂದು ಹಂತಕ್ಕೆ ಬಂದು ತಲುಪಿದ್ದು 444 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಒಂದು ವಾರದಲ್ಲಿ ಇದಕ್ಕೆ ಗೆಜೆಟ್ ನೋಟಿಫಿಕೇಶನ್ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋಚಿಂದ ಕಾರಜೋಳ್ ಹೇಳಿದ್ದಾರೆ. ಹೌದು ಇಂದು ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗಾವಿಯಲ್ಲಿ ಆಗಬೇಕಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕುರಿತಂತೆ ಚರ್ಚೆಯನ್ನು ನಡೆಸಲು ಸಭೆಯನ್ನು ಆಯೋಜಿಸಲಾಗಿತ್ತು. …
Read More »
Laxmi News 24×7