Breaking News

ಜನ ಆಕ್ರೋಶದಲ್ಲಿ ಕಲ್ಲು ಬೀಸೋದು, ಮೊಟ್ಟೆ ಎಸೆಯೋದು ಸಾಮಾನ್ಯ: ವಿಶ್ವನಾಥ್‌

ಮೈಸೂರು: ಜನರು ಆಕ್ರೋಶದಲ್ಲಿ ಕಲ್ಲು ಬೀಸೋದು, ಮೊಟ್ಟೆ ಎಸೆಯೋದು ಸಾಮಾನ್ಯವಾದ ಸಂಗತಿ ಎಂದು ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಹೇಳಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿದ್ದನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ, ಜನ ತಮ್ಮ ಆಕ್ರೋಶವನ್ನು ಹೀಗೆ ವ್ಯಕ್ತಪಡಿಸುವುದು ಸಹಜ. ಇದಕ್ಕೆ ಹತ್ಯೆ ಯತ್ನದ ಸ್ವರೂಪ ನೀಡುವುದು ಸರಿಯಲ್ಲ. ಗಾಂಧಿಗೂ ಸಿದ್ದರಾಮಯ್ಯ ಅವರಿಗೂ ಎಲ್ಲಿಂದ ಎಲ್ಲಿಗೆ ಸಂಬಂಧ ಹೇಳಿ ಎಂದು ಶನಿವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಪ್ರಶ್ನಿಸಿದರು. …

Read More »

ಜಿಲ್ಲಾ ಮಟ್ಟದಲ್ಲೂ ಅರಸು ಪ್ರಶಸ್ತಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮದಿನಾಚರಣೆಯನ್ನು ಈ ವರ್ಷದಿಂದ ಜಿಲ್ಲಾ ಮಟ್ಟದಲ್ಲೂ ಆಚರಿಸಲು ಸರಕಾರ ನಿರ್ಧರಿಸಿದೆ. ಪ್ರಸ್ತುತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿ ನೀಡುವಂತೆ, ಈ ವರ್ಷದಿಂದ ಜಿಲ್ಲಾ ಮಟ್ಟದಲ್ಲೂ ಸಾಧಕರಿಗೆ ಅರಸು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.   ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ …

Read More »

ಚಾರ್ಜಿಗೆ ಇಟ್ಟಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಬೆಂಕಿ

ಮಂಗಳೂರು: ಚಾರ್ಜಿಗೆ ಇಟ್ಟಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬೆಂಕಿಗಾಹುತಿಯಾದ ಘಟನೆ ನಗರದ ಬೋಳೂರಿನಲ್ಲಿ ಶನಿವಾರ ಸಂಭವಿಸಿದೆ. ಘಟನೆಯಲ್ಲಿ 2 ಸ್ಕೂಟರ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಮತ್ತೆರಡು ಸ್ಕೂಟರ್‌ಗಳಿಗೆ ಭಾಗಶಃ ಹಾನಿಯಾಗಿದೆ. ಹಾಲಿನ ವ್ಯಾಪಾರ ಮಾಡುವ ಹರೇಕೃಷ್ಣ ಅವರಿಗೆ ಸೇರಿದ ನಾಲ್ಕು ಸ್ಕೂಟರ್‌ಗಳನ್ನು ಬೋಳೂರಿನ ಹಾಲಿನ ಬೂತ್‌ ಬಳಿ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಚಾರ್ಜಿಗೆ ಇಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಕೂಟರ್‌ಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಪರಿಣಾಮ ಎರಡು ಸ್ಕೂಟರ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಸ್ಥಳೀಯರ …

Read More »

ಬದಲಿ ರಸ್ತೆ ಮೂಲಕ ಶಿರಾಡಿ ಘಾಟಿಗೆ ಏಕಮುಖ ಸಂಚಾರ

ಸಕಲೇಶಪುರ: ತಾಲೂಕಿನ ಕೆಸಗನಹಳ್ಳಿ ಸಮೀಪ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಹೊಸ ರಸ್ತೆಯಲ್ಲಿ ಶಿರಾಡಿ ಘಾಟಿಗೆ ಹೋಗಲು 20 ಟನ್‌ಗಿಂತ ಹೆಚ್ಚಿನ ಭಾರದ ವಾಹನಗಳು ಏಕಮುಖವಾಗಿ ಸಂಚರಿಸಲು ಹಾಸನ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವಕಾಶ ಕಲ್ಪಿಸಿದ್ದಾರೆ.   ಬೆಳಗ್ಗೆ 6ರಿಂದ ಬೆಳಗ್ಗೆ 8ರ ವರೆಗೆ ಮಂಗಳೂರಿನಿಂದ ಬೆಂಗಳೂರು ಕಡೆಗೆ, ಬೆಳಗ್ಗೆ 9ರಿಂದ 11 ಗಂಟೆ ವರೆಗೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳಿಗೆ, ಮಧ್ಯಾಹ್ನ 12ರಿಂದ 2 ಗಂಟೆವರೆಗೆ ಮಂಗಳೂರಿನಿಂದ ಬೆಂಗಳೂರು …

Read More »

ಸ್ಪೈ ಕ್ಯಾಮರಾ ಬಳಸಿ ನಗ್ನ ಚಿತ್ರ ಸೆರೆ.. ಯುವತಿಗೆ ಅದೇ ಫೋಟೋ ಕಳಿಸಿ ಬ್ಲಾಕ್ ಮೇಲ್

ಬೆಂಗಳೂರು: ನಗರದಲ್ಲಿ ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿಯುತ್ತಿದ್ದ ಮಹೇಶ ಬಂಧಿತ ಆರೋಪಿ. ಮೊದಲು ಯುವತಿಗೆ ನಕಲಿ ಇನ್​​ಸ್ಟಾಗ್ರಾಮ್ ಮೂಲಕ ಮೆಸೇಜ್ ಮಾಡಿದ್ದ ಮಹೇಶ, ತನ್ನ ಜೊತೆ ಚಾಟ್ ಮಾಡು ಇಲ್ಲದಿದ್ದರೆ ನಗ್ನ ವಿಡಿಯೋ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದ ಎಂದು ಪ್ರಕರಣದ ಕುರಿತು ಈಶಾನ್ಯ …

Read More »

ಆರ್​ಎಸ್​​ಎಸ್​ ಪ್ಯಾಂಟು ತೊಟ್ಟವನಿಗೆ ಕಾಂಗ್ರೆಸ್ ವೇಷ ತೊಡಿಸಿದ ಮಾತ್ರಕ್ಕೆ ಕಾಗೆ ನವಿಲಾಗುತ್ತದೆಯೇ: ಕಾಂಗ್ರೆಸ್​ ತಿರುಗೇಟು

ಬೆಂಗಳೂರು: ಕೊಡಗಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ವ್ಯಕ್ತಿಯ ಕಾಂಗ್ರೆಸ್ ಕಾರ್ಯಕರ್ತ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಆ ವ್ಯಕ್ತಿ ಗಣ ವೇಷಧಾರಿಯಾಗಿರುವ ಭಾವಚಿತ್ರವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಆರೋಪಿ ಆರೋಪಿ ಸಂಪತ್‌, ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೆ ನೀಡಿದ್ದರು. ಇದು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟ ಬೆನ್ನಲ್ಲೇ ಟ್ವೀಟ್​ ಮಾಡಿರುವ ಕಾಂಗ್ರೆಸ್​, ಆರ್​ಎಸ್​ಎಸ್​ ಶಾಖೆಯಲ್ಲಿ ಗಣವೇಷಧಾರಿಯಾಗಿ ಸಂಪತ್‌ …

Read More »

ಮಗು ಅಪಹರಣ ಮಾಡಿ, ಹಣಕ್ಕೆ ಬೇಡಿಕೆ ಇಟ್ಟ, ಖತರ್ನಾಕ ಗ್ಯಾಂಗ ಪತ್ತೆ ಹಚ್ಚಿದ, ಸಂಕೇಶ್ವರ ಪೋಲಿಸರು,

ದಿನಾಂಕ: 02/08/2022 ರಂದು ಒಂಬತ್ತು ನಾಲವತ್ತ ಗಂಟೆಗೆ, ಭಾಸ್ಕರ ಪ್ರಕಾಶ ಕಾಕಡೆ, ಸಾಕಿನ್ ಮಾಳಿಗಲ್ಲಿ ಸಂಕೇಶ್ವರ ತಾಲ್ಲೂಕು ಹುಕ್ಕೇರಿ ಇವರು ಸಂಕೇಶ್ವರ ಪೊಲೀಸ ಠಾಣಿಗೆ ಹಾಜರಾಗಿ ನನ್ನ ಅಪ್ರಾಪ್ತ ಹದಿನಾಲ್ಕು ವರ್ಷ ವಯಸ್ಸಿನ ಮಗನು ದಿನಾಲು ಶಾಲೆ ಮುಗಿಸಿಕೊಂಡ ಟೂಶನಕ್ಕೆ ಹೋಗುತ್ತಾನೆ. ಸದರಿಯವನು ದಿನಾಂಕ: 02/08/2022 ರಂದು ಸಂಜೆ ಟೊಶನಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ಯಾರೋ ಅಪರಿಚಿತ ಆರೋಫಿತನು ತನ್ನ ಮಗನ ಹತ್ತಿರ ಬಂದು ನಿಮ್ಮ ತಂದೆಗೆ ನಿಪ್ಪಾಣಿಯಲ್ಲಿ …

Read More »

ರಾಜಕಾರಣದ ಸೋಂಕನ್ನು ಅಂಟಿಸಿಕೊಳ್ಳದ ಮಠಾಧೀಶ ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರು

ಧಾರವಾಡ : ತಮ್ಮ 89 ವರ್ಷಗಳ ಸುದೀರ್ಘ ಸನ್ಯಾಸದ ಬದುಕಿಗೆ ರಾಜಕಾರಣದ ಸೋಂಕನ್ನು ಅಂಟಿಸಿಕೊಳ್ಳದೇ ತಮ್ಮೊಳಗಿನ ತಪೋಬಲದಿಂದ ಸದಾಕಾಲವೂ ಭಕ್ತರ ಒಳಿತನ್ನೇ ಬಯಸಿರುವ ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರು ಓರ್ವ ಆದರ್ಶ ಮಠಾಧೀಶರೆನಿಸಿದ್ದಾರೆ ಎಂದು ಬೆಳಗಾವಿ ಜಿಲ್ಲೆ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು. ಅವರು ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶ್ರೀಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ 89ನೆಯ ವರ್ಧಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಧರ್ಮ ಜಾಗೃತಿಗೆ ಮತ್ತು ಸಂಸ್ಕೃತಿ-ಸಂಸ್ಕಾರದ …

Read More »

ನೀವು ಸುಟ್ಟಿದ್ದು ಭಾವಚಿತ್ರವಲ್ಲ ಭಾರತ ಮಾತೆ‌ಯನ್ನು.. ಮುತಾಲಿಕ್​ ಆಕ್ರೋಶ

ಧಾರವಾಡ : ಧಾರವಾಡದಲ್ಲಿ ಸಾವರ್ಕರ್ ಫೋಟೋ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. ಸಾವರ್ಕರ್ ಭಾವಚಿತ್ರ ಸುಟ್ಟು ಹಾಕಿದ್ದು ಹೇಯ ಕೃತ್ಯ, ಇದು ದೇಶದ್ರೋಹಿ‌ ಕೃತ್ಯ. ನೀವು ಸುಟ್ಟಿದ್ದು ಭಾವಚಿತ್ರವಲ್ಲ, ಭಾರತ ಮಾತೆ‌ಯನ್ನು ಸುಡುತ್ತಿದ್ದೀರಿ ಎಂದು ಮುತಾಲಿಕ್​ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ಅವರು, ಸಾವರ್ಕರ್ ಅರ್ಧ ಜೀವನ ಜೈಲಿನಲ್ಲಿ ಕಳೆದವರು ನಿಮಗೆ ದೇಶಭಕ್ತಿ ಇಲ್ಲ. ನಿಮಗೆ ಸಿದ್ದರಾಮಯ್ಯ ಬೇಕು. ನಿಮ್ಮ ಉದ್ದೇಶ ಏನು? ಎಂದು …

Read More »

ಗೋಕಾಕದಲ್ಲಿ ರಾಯಣ್ಣ ಭಾವಚಿತ್ರ ಹರಿದ ಕಿಡಿಗೇಡಿಗಳು

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಗೋಕಾಕ ತಾಲೂಕಿನ ‌ಖನಗಾಂವ ಗ್ರಾಮದಲ್ಲಿ ನಡೆದಿದೆ. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ‌ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ‌. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಖನಗಾಂವ ಗ್ರಾಮದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಗ್ರಾಮದ ರಸ್ತೆಗೆ ರಾಯಣ್ಣ ಸರ್ಕಲ್ ಎಂದು ನಾಮಕರಣ ಮಾಡಲಾಗಿತ್ತು. ನಾಮಕರಣ ಮಾಡಿ ರಾಯಣ್ಣ ಭಾವಚಿತ್ರದ ಫ್ಲೆಕ್ಸ್ ಬೋರ್ಡ್ …

Read More »