ಬೆಂಗಳೂರು: ಪಕ್ಷದ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಘಟನೆಯಿಂದ ಕಾರ್ಯಕರ್ತರಲ್ಲಿ ಆಕ್ರೋಶದ ಕಟ್ಟೆ ಹೊಡೆದಿದೆ. ಡ್ಯಾಮೇಜ್ ಕಂಟ್ರೋಲ್ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಇದೇ ಮೊದಲ ಬಾರಿ ಬಿಜೆಪಿ ಕಾರ್ಯಕರ್ತರು ತನ್ನದೇ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳ ಮುತ್ತಿಗೆ, ಗೃಹ ಸಚಿವರ ಮುತ್ತಿಗೆಯಂತಹ ಚಟುವಟಿಕೆ ನಡೆಸಿದ್ದಾರೆ. ರಾಜ್ಯಾದ್ಯಂತ ಆಡಳಿತ ಪಕ್ಷದ ಸರ್ಕಾರದ ವಿರುದ್ಧ ಅವರ ಕಾರ್ತಕರ್ತರೇ ದೊಡ್ಡ ಮಟ್ಟದಲ್ಲಿ …
Read More »ಗುಜರಾತ್ನಲ್ಲಿ ಅಧಿಕಾರಕ್ಕೆ ಬಂದ್ರೆ ನಿರುದ್ಯೋಗಿಗಳಿಗೆ ತಿಂಗಳಿಗೆ ₹3 ಸಾವಿರ: ಕೇಜ್ರಿವಾಲ್ ಆಫರ್
(ಗುಜರಾತ್): ಪಂಜಾಬ್ ರಾಜ್ಯ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಆಮ್ ಆದ್ಮಿ ಪಕ್ಷ(ಎಎಪಿ) ಇದೀಗ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ಮೇಲೆ ಕಣ್ಣಿಟ್ಟಿದೆ. ಈ ವರ್ಷಾಂತ್ಯದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಈಗಿನಿಂದಲೇ ಆಪ್ ಮುಖ್ಯಸ್ಥ ಕೇಜ್ರಿವಾಲ್ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ವೆರಾವಲ್ನಲ್ಲಿ ಆಯೋಜನೆಗೊಂಡಿದ್ದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ನಿರುದ್ಯೋಗಿ ಯುವಕನಿಗೂ ಮಾಸಿಕ 3 ಸಾವಿರ ರೂಪಾಯಿ ನಿರುದ್ಯೋಗ …
Read More »ಸಿದ್ದರಾಮಯ್ಯ-75 ‘ಅಮೃತ ಮಹೋತ್ಸವ’ ನಾಳೆ, 10 ಲಕ್ಷ ಜನರು ಸೇರುವ ನಿರೀಕ್ಷೆ
ಬೆಂಗಳೂರು: ದಾವಣಗೆರೆಯಲ್ಲಿ ಬುಧವಾರ (ಆಗಸ್ಟ್ 3) ನಡೆಯಲಿರುವ ಸಿದ್ದರಾಮಯ್ಯ-75 ‘ಅಮೃತ ಮಹೋತ್ಸವ’ ಸಂಭ್ರಮಕ್ಕೆ ಅಮೃತ ಮಹೋತ್ಸವ ಸಮಿತಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರ ಹರಿದು ಬರಬಹುದೆಂಬ ನಿರೀಕ್ಷೆ ಸಮಿತಿಯದ್ದಾಗಿದೆ. ಸಮಾವೇಶದ ನೆಪದಲ್ಲಿ ಸಿದ್ದರಾಮಯ್ಯ ಅವರ ಆಡಳಿತ ಅವಧಿಯ ಜನಪರ ಯೋಜನೆಗಳನ್ನು ನೆನಪಿಸುತ್ತಲೇ, ಕೇಂದ್ರ- ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಸಿದ್ಧತೆ ನಡೆದಿದೆ. ಕಾರ್ಯಕ್ರಮದ ಅಂತಿಮ ರೂಪರೇಷೆಗಳ ಕುರಿತು ಸಿದ್ದರಾಮಯ್ಯ ಅವರ …
Read More »ಅಕ್ರಮ-ಸಕ್ರಮ ಜಾರಿಗೆ ಪ್ರಯತ್ನ: ಆರ್. ಅಶೋಕ
ಬೆಂಗಳೂರು: ವಾಣಿಜ್ಯ ಕಟ್ಟಡಗಳನ್ನು ಹೊರಗಿಟ್ಟು ವಸತಿ ಕಟ್ಟಡಗಳಿಗೆ ಸೀಮಿತವಾಗಿ ಅಕ್ರಮ-ಸಕ್ರಮ ಯೋಜನೆಯನ್ನು ಜಾರಿಗೊಳಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು. ‘ನಕ್ಷೆ ಉಲ್ಲಂಘಿಸಿ ಹಾಗೂ ಅನುಮೋದನೆ ಇಲ್ಲದ ಬಡಾವಣೆಗಳಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ದಂಡ ವಿಧಿಸಿ ಸಕ್ರಮಗೊಳಿಸಲು ರೂಪಿಸಿದ್ದ ಕಾಯ್ದೆಯನ್ನು ಪ್ರಶ್ನಿಸಿರುವ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಉಳಿದಿದೆ. ವಾಣಿಜ್ಯ ಕಟ್ಟಡಗಳನ್ನು ಸಕ್ರಮಗೊಳಿಸುವುದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಿ ಯೋಜನೆ ಅನುಷ್ಠಾನಕ್ಕೆ ಅನುಮತಿ ಪಡೆಯಲು ಪ್ರಯತ್ನ …
Read More »ನರೇಗಾ ಯೋಜನೆಯಡಿ ತೋಟದ ರಸ್ತೆಗಳನ್ನು ಕೈಗೊಳ್ಳಿ : ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ.
*ಗೋಕಾಕ :* ನಿರಂತರ ಮಳೆಯಿಂದಾಗಿ ಮೂಡಲಗಿ ಹಾಗೂ ಗೋಕಾಕ ತಾಲೂಕುಗಳ ತೋಟದ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಲು ನರೇಗಾ ಯೋಜನೆಯಡಿ ತೋಟದ ರಸ್ತೆ ಕಾಮಗಾರಿಗಳನ್ನು ಆರಂಭಿಸುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ಗೋಕಾಕ-ಮೂಡಲಗಿ ತಾಲೂಕುಗಳ ತೋಟದ …
Read More »ಕೆ.ಕೆ.ಕೊಪ್ಪ ಬಳಿಯ ಮಹಾವೀರ ಗೋಶಾಲೆಯಲ್ಲಿ ಒಂದು ಹಸುವನ್ನು ದತ್ತು ಪಡೆದುಕೊಂಡ ನಿತೇಶ್ ಪಾಟೀಲ
ಪುಣ್ಯಕೋಟಿ ದತ್ತು ಯೋಜನೆಯಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೂಡ ಕೆ.ಕೆ.ಕೊಪ್ಪ ಬಳಿಯ ಮಹಾವೀರ ಗೋಶಾಲೆಯಲ್ಲಿ ಒಂದು ಹಸುವನ್ನು ದತ್ತು ಪಡೆದುಕೊಂಡಿದ್ದಾರೆ ಎಂದು ಉಪ ನಿರ್ದೆಶಕ ಡಾ.ರಾಜೀವ್ ಕೂಲೇರ ತಿಳಿಸಿದರು. ಜಿಲ್ಲಾಧಿಕಾರಿಗಳು ಹಸು ದತ್ತು ಪಡೆಯುವ ಮೂಲಕ ಇತರರಿಗೂ ಸ್ಫೂರ್ತಿಯಾಗಿದ್ದಾರೆ. ಇದೇ ರೀತಿ ಸಾರ್ವಜನಿಕರು ಕೂಡ ಜಾನುವಾರುಗಳನ್ನು ದತ್ತು ಸ್ವೀಕರಿಸುವ ಮೂಲಕ ಪುಣ್ಯಕೋಟಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿಕೊಂಡರು. ದೇಣಿಗೆ ನೀಡಲು ಅಥವಾ ದತ್ತು ಪಡೆಯಲು ಬಯಸುವವರು …
Read More »ಲಕ್ಷ್ಮೀ ಹೆಬ್ಬಾಳ್ಕರ್ ಬೋಗಸ್‍ಗಿರಿ ಮಾಡಿ, ಕುಕ್ಕರ್ ಕೊಟ್ಟು ಕಳೆದ ಬಾರಿ ಆರಿಸಿ ಬಂದಿದ್ದಾರೆ.: ಶಿವಾಜಿ ಸುಂಠಕರ್
ಬೆಳಗಾವಿ ತಾಲೂಕಿನ ಬೆಳವಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಳು ಮಜುಕರ್ ಕಾಂಗ್ರೆಸ್ ಪಕ್ಷ ಸೇರಿದ್ದ ವಿಚಾರ ಸಧ್ಯ ಟ್ವಿಸ್ಟ್ ಪಡೆದುಕೊಂಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಂಇಎಸ್ ಮುಖಂಡ ಶಿವಾಜಿ ಸುಂಠಕರ್ ಏಕಾಏಕಿ ಕರೆದುಕೊಂಡು ಹೋಗಿ ಕಾಂಗ್ರೆಸ್ ಶಾಲು, ಮಾಲೆ ಹಾಕಿದ್ದಾರೆ. ಇದೆಲ್ಲಾ ಸುಳ್ಳು ಬಾಳು ಮಜುಕರ್ ಕಾಂಗ್ರೆಸ್ ಸೇರಿಲ್ಲ, ಮುಂದೆಯೂ ಕಾಂಗ್ರೆಸ್ ಸೇರುವುದಿಲ್ಲ ಎಂದಿದ್ದಾರೆ. ಹೌದು ಇತ್ತಿಚಿಗೆ ಬೆಳವಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂಇಎಸ್ ಮುಖಂಡ ಬಾಳು ಮಜುಕರ್ …
Read More »ಮಕ್ಕಳೇ ಮೊಬೈಲ್ ಬಿಡಿ, ಗಿಲ್ಲಿ ದಾಂಡು ಆಡಿ! ಶಾಲೆಗಳಲ್ಲೇ 75 ದೇಸಿ ಕ್ರೀಡೆಗಳ ಪರಿಚಯ
ಹೊಸದಿಲ್ಲಿ: ಇಂದಿನ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳು, ಆಟಗಳ ಪರಿಚಯವೇ ಇಲ್ಲ. ಸ್ವಲ್ಪ ಸಮಯ ಸಿಕ್ಕರೂ ಮೊಬೈಲ್, ಲ್ಯಾಪ್‌ಟಾಪ್ ಮುಂದೆ ಕುಳಿತುಕೊಂಡು ಬಿಡುತ್ತಾರೆ. ಇದು ಎಲ್ಲ ಹೆತ್ತವರ ಅಳಲು. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಾಲೆಯಲ್ಲೇ ಗ್ರಾಮೀಣ ಆಟಗಳನ್ನು ಕಲಿಸಿಕೊಟ್ಟರೆ ಹೇಗಿರುತ್ತದೆ? ಹೌದು. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಕರ್ನಾಟಕ ಹಾಗೂ ಒಡಿಶಾದ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಗಿಲ್ಲಿ ದಾಂಡು (ಚಿನ್ನಿ ದಾಂಡು) ಸೇರಿದಂತೆ ಒಟ್ಟು 75 “ಭಾರತೀಯ ಆಟ’ಗಳನ್ನು ಶಾಲೆಗಳಲ್ಲೇ …
Read More »ಆ.2ರಿಂದ 15ರವರೆಗೆ ತ್ರಿವರ್ಣ ಧ್ವಜ ಅಭಿಯಾನ ನಡೆಸಲು ಪ್ರಧಾನಿ ಸಲಹೆ
ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವವು ಒಂದು ದೊಡ್ಡ ಮಟ್ಟದ ಸಾಮೂಹಿಕ ಚಳವಳಿಯ ರೂಪ ಪಡೆಯುತ್ತಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಎಲ್ಲರೂ ಆ.2ರಿಂದ 15ರವರೆಗೆ ತ್ರಿವರ್ಣ ಧ್ವಜವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರವಾಗಿ ಬಳಸಿ’ ಎಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಮಾತನಾಡಿದ ಅವರು, ಆ.13ರಿಂದ 15ರವರೆಗೆ ಆಯೋಜಿಸಲಾಗಿರುವ “ಹರ್ ಘರ್ ತಿರಂಗಾ’ ಅಭಿಯಾನದ …
Read More »ಗಾಳಿಪಟ-2ʼ ಟ್ರೇಲರ್ ರಿಲೀಸ್ :
ಯೋಗರಾಜ್ ಭಟ್ ನಿರ್ದೇಶನದ ʼಗಾಳಿಪಟ-2ʼ ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಚಂದವನದಲ್ಲಿ ದೊಡ್ಡ ನಿರೀಕ್ಷೆಯಿದೆ. ಈಗಾಗಲೇ ಆ ನಿರೀಕ್ಷೆಯನ್ನು ಚಿತ್ರದ ಹಾಡು ಹಾಗೂ ಕ್ಯಾರೆಕ್ಟರ್ ಟೀಸರ್ ದುಪ್ಪಟ್ಟುಗೊಳಿಸಿದೆ. ಇದೀಗ ಟ್ರೇಲರ್ ರಿಲೀಸ್ ಆಗಿದ್ದು, ಹೊಸ ಬಗೆಯ ಕಥೆಯಿಂದ ಗಮನ ಸೆಳೆಯುತ್ತಿದೆ. ʼನೀನು ಬಗೆಹರಿಯದ ಹಾಡುʼ, ʼದೇವ್ಲೆ ದೇವ್ಲೆʼ,ʼಎಕ್ಸಾಂ ಹಾಡುʼ ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡು ಸೂಪರ್ ಹಿಟ್ ಸಾಲಿಗೆ ಸೇರಿದೆ. ಟ್ರೇಲರ್ …
Read More »