Breaking News

17 ರಿಂದ ನಾಲ್ಕು ದಿನಗಳ ಕೃಷಿ ಹಬ್ಬ; 10 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ

ಧಾರವಾಡ: ಕೊರೊನಾ ಮಹಾಮಾರಿಯಿಂದಾಗಿ ಕಳೆದೆರಡು ವರ್ಷಗಳಿಂದ ಕೈ ಬಿಟ್ಟಿದ್ದ ಪ್ರತಿಷ್ಠಿತ ಧಾರವಾಡ ಕೃಷಿ ವಿವಿ ನಡೆಸುವ ಧಾರವಾಡ ಕೃಷಿ ಮೇಳವನ್ನು ಸೆ.17ರಿಂದ ಸೆ.20ರವರೆಗೆ ನಡೆಸಲು ಕೃಷಿ ವಿಶ್ವವಿದ್ಯಾಲಯ ತೀರ್ಮಾನಿಸಿದೆ. ನಾಲ್ಕು ದಿನಗಳವರೆಗೆ ನಡೆಯುವ ಈ ವರ್ಷದ ಕೃಷಿ ಮೇಳವನ್ನು “ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದು, ಶನಿವಾರವೇ ಬೀಜ ಮೇಳದ ಮೂಲಕ ರೈತರ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಕಳೆದ 2-3 ವರ್ಷಗಳಿಂದ ನೆರೆ ಹಾವಳಿ, ಕೋವಿಡ್‌-19 ಹೊಡೆತದಿಂದ …

Read More »

‘ಸಚಿವ ಡಾ.ಕೆ ಸುಧಾಕರ್’ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ.   ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಅನಾರೋಗ್ಯ ಹಿನ್ನೆಲೆಯಲ್ಲಿ ವೈದ್ಯರು ಕೆಲ ದಿನಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ಕಾರಣಕ್ಕಾಗಿ ಸದನದ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ವಿಷಾದವಿದೆ. ಆದಷ್ಟು ಶೀಘ್ರದಲ್ಲೇ ಕರ್ತವ್ಯಕ್ಕೆ ಹಾಜರಾಗುತ್ತೇನೆ. ನಿಮ್ಮ ಹಾರೈಕೆ ಇರಲಿ ಎಂದು …

Read More »

ಇದೇ ಅಧಿವೇಶನದಲ್ಲೇ ದಾಖಲೆ ಬಹಿರಂಗ : ‘ಒತ್ತುವರಿ ಬಾಂಬ್’ ಸಿಡಿಸಿದ ಸಚಿವ ಅಶೋಕ್

ಬೆಂಗಳೂರು,ಸೆ.15-ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಬಾಹಿರವಾಗಿ ಯಾರ್ಯಾರು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಇದೇ ಅಧಿವೇಶನದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಪ್ಪು ಮಾಡಿದ್ದಾರೆಯೇ , ಇಲ್ಲ ನಾನು ತಪ್ಪು ಮಾಡಿದ್ದೇನೆಯೇ ಅಥವಾ ನಮ್ಮ ಸಂಪುಟ ಸಹೋದ್ಯೋಗಿಗಳು ಮಾಡಿದ್ದಾರೆಯೇ ಎಂಬುದರ ಕುರಿತು ಯಾರ್ಯಾರು ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೋ ಅವರೆಲ್ಲರ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.   ಸುದ್ದಿಗಾರರೊಂದಿಗೆ …

Read More »

ಬೆಳಗಾವಿ: ಸಾವಿನಲ್ಲೂ ಒಂದಾದ ವೃದ್ದ ದಂಪತಿ

ಬೆಳಗಾವಿ: ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಯರಗಟ್ಟಿ ತಾಲ್ಲೂಕಿನ ತಲ್ಲೂರ ಗ್ರಾಮದಲ್ಲಿ ನಡೆದಿದೆ. ಅನಾರೋಗ್ಯದಿಂದ‌ ಬಳಲುತ್ತಿದ್ದ ಬಾಬಣ್ಣ ಅಣ್ಣಿಗೇರಿ(76) ಬುಧವಾರ ತಡರಾತ್ರಿ ಮೃತಪಟ್ಟರು. ಈ ವಿಷಯ ಕೇಳಿದ ಪತ್ನಿ ಶಿವಬಸವ್ವ(70) ಕೆಲಹೊತ್ತಿನಲ್ಲೇ ಹೃದಯಾಘಾತಕ್ಕೀಡಾಗಿ ನಿಧನರಾದರು. ಏಕಕಾಲಕ್ಕೆ ವೃದ್ಧ ದಂಪತಿ ಅಗಲಿದ್ದಕ್ಕೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು ಮಧ್ಯಾಹ್ನ 12 ಗಂಟೆಗೆ ಇಬ್ಬರ ಅಂತ್ಯಕ್ರಿಯೆಯನ್ನು ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More »

ಎಷ್ಟೇ ದೊಡ್ಡ ಹುಲಿ ಇದ್ರೂ ಕಾನೂನಿನ ಮುಂದೆ ಎಲ್ಲರೂ ಒಂದೇ; BSY ಮೊದಲು ರಾಜೀನಾಮೆ ನೀಡಲಿ; ಶಾಸಕ ಯತ್ನಾಳ್ ಆಗ್ರಹ

ಬೆಂಗಳೂರು: ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊದಲು ಎಲ್ಲಾ ಹುದ್ದೆಗೂ ರಾಜೀನಾಮೆ ನೀಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ. ಈ ವಿಚಾರವಾಗಿ ಮೊದಲು ಯಡಿಯೂರಪ್ಪ ರಾಜೀನಾಮೆ ಕೊಡಲಿ. ಎಷ್ಟೇ ದೊಡ್ಡ ಹುಲಿ ಇದ್ರೂ ಕಾನೂನಿನ …

Read More »

ನಾನು ‘ಹಾಟ್ ಹಾಟ್’ ಆಗಿ ಕಾಣಿಸಿಕೊಂಡರೆ ಫ್ಯಾನ್ಸ್ ಒಪ್ಪಲ್ಲ:ರಚಿತಾ ರಾಮ್

ರಚಿತಾ ರಾಮ್ ಎರಡ್ಮೂರು ಸಿನಿಮಾಗಳಲ್ಲಿ ಸಖತ್ ಬೋಲ್ಡ್ (Bold) ಆಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಅದರಲ್ಲೂ ಉಪೇಂದ್ರ (Upendra) ಜೊತೆಗಿನ ಐ ಲವ್ ಯೂ ಸಿನಿಮಾದ ಹಾಡೊಂದರಲ್ಲಿ ಅವರನ್ನು ಆ ರೀತಿ ಕಂಡು ಸ್ವತಃ ಅಭಿಮಾನಿಗಳೇ ಬೆಚ್ಚಿ ಬಿದ್ದಿದ್ದರು. ಕೊನೆಗೆ ಈ ಹಾಡಿನ ಕುರಿತು ಮಾತನಾಡಿದ್ದ ರಚಿತಾ ರಾಮ್ (Rachita Ram), ‘ನಾನು ಆ ರೀತಿಯಲ್ಲಿ ಕಾಣಿಸಿಕೊಳ್ಳಬಾರದಿತ್ತು. ನನ್ನ ತಂದೆಗೂ ಅದು ಸರಿ ಕಾಣಲಿಲ್ಲ. ಇನ್ಮುಂದೆ ನಾನು ಆ ರೀತಿ …

Read More »

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದಸರಾ, ಉದ್ಘಾಟನೆಗೆ ರಾಷ್ಟ್ರಪತಿ, ಮೆರವಣಿಗೆಗೆ ಮೋದಿ

ಮೈಸೂರು: ಈ ಬಾರಿಯ ನಾಡಹಬ್ಬ ದಸರಾ (Mysuru Dasara) ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದಸರಾ ಇತಿಹಾಸದಲ್ಲೇ ಈ ಬಾರಿಯ ದಸರಾ ಅತ್ಯಂತ ಮಹತ್ವದ್ದಾಗಲಿದೆ. ದಸರಾ ಇತಿಹಾಸ ಪುಟಗಳಲ್ಲಿ ಈ ಬಾರಿಯ ದಸರಾ ಪ್ರಮುಖ ಸ್ಥಾನ ಪಡೆಯಲಿದೆ. ಹೌದು, ನಾಡಹಬ್ಬ ದಸರಾ ಸೆಪ್ಟೆಂಬರ್ 26 ರಿಂದ ಆರಂಭವಾಗಲಿದೆ‌. ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು (Draupadi Murmu) ದಸರಾ ಉದ್ಘಾಟಿಸಲಿದ್ದಾರೆ. ಇಷ್ಟು ವರ್ಷ ನಾಡಿನ ಹಿರಿಯ ಸಾಹಿತಿಗಳು, ಸ್ವಾಮೀಜಿಗಳು, ವಿಚಾರವಾದಿಗಳು, ನಾಡು …

Read More »

ಮಿಸ್ ಧಾರವಾಡ ವರ್ಷಿಣಿ ಈಗ ಮಿಸ್ ಊರ್ವಶಿ

ಧಾರವಾಡ: ವಿದ್ಯಾಕಾಶಿಯ ಸುಂದರಿ ಮಿಸ್ ಧಾರವಾಡ (Dharwad) ವರ್ಷಿಣಿ ರಾಮಡಗಿ(Varshini Ramadagi) ಈಗ ಮಿಸ್ ಊರ್ವಶಿ(Miss Urvashi) ಎನ್ನುವ ಅತ್ಯಾಕರ್ಷಕ ಕಿರೀಟ ಧರಿಸುವುದರೊಂದಿಗೆ ದೇಶದ ನವ ಸುಂದರಿಯ ಪಟ್ಟ ಅಲಂಕರಿದ್ದಾರೆ. ಈಗಷ್ಟೇ 20 ಈ ನವತರುಣಿಯಾಗಿರುವ ವರ್ಷಿಣಿ(Varshini), ಧಾರವಾಡದ ಕೆಸಿಡಿ ಕಾಲೇಜ್‍ನಲ್ಲಿ ಟ್ರಾವೆಲ್ ಆ್ಯಂಡ್ ಟೂರಿಸಂ ಕೋರ್ಸ್‍ನಲ್ಲಿ(Travel and Tourism Course) 2ನೇ ವರ್ಷದಲ್ಲಿ ಓದುತ್ತಿದ್ದಾರೆ. ಇತ್ತೀಚೆಗೆ ಜೈಪುರದಲ್ಲಿ(Jaipura) ಮಿಸ್ ಇಂಟರ್ ಕ್ವಾಂಟಿನೇಂಟಲ್ ಹಾಗೂ ಎಲೀಟ್ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಸೌಂದರ್ಯ …

Read More »

ನಿಮ್ಮೆಲ್ಲರ ಆಶೀರ್ವಾದ, ಮಾಧ್ಯಮ ಸ್ನೇಹಿತರ ಸಹಕಾರ ಇದೆ. ಸಿಎಂ ಬಸವರಾಜ್ ಬೊಮ್ಮಾಯಿ ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಯಾವುದೇ ಕಾರಣಕ್ಕೂ ಧೈರ್ಯಗೆಡುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ನಿಮ್ಮ ಬೆನ್ನಿಗಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಉಪಸಭಾಪತಿ ಮತ್ತು ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಆರೋಗ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿವೆ. ಈ ಬಗ್ಗೆ ಸ್ವತಃ ಆನಂದ ಮಾಮನಿ ಸ್ಪಷ್ಟನೆ ನೀಡಿದ್ದು, ಮನುಷ್ಯನಿಗೆ ಜೀವನದಲ್ಲಿ ಸ್ವಾಭಾವಿಕವಾಗಿ ಆರೋಗ್ಯದಲ್ಲಿ ಏರಿಳಿತ ಸಹಜ. ಮನೆ ದೇವರಾದ ಜಾಲಿಕಟ್ಟಿ ಬಸವಣ್ಣ, ತಂದೆ-ತಾಯಿ, ರಾಜ್ಯದ ಜನರ ಆಶೀರ್ವಾದ ಇದೆ. ಸುಳ್ಳು ವಂದತಿಗೆ ನಮ್ಮ ಕಾರ್ಯಕರ್ತರು ಕಿವಿಗೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕ …

Read More »

B.I.M.S. ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಆಚರಣೆ

ಇಂದು ಸೆಪ್ಟೆಂಬರ್ 15 ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಹಿನ್ನೆಲೆ ಬೆಳಗಾವಿಯಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಆಚರಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕ್ರಿಯಾತ್ಮಕ ಕೆಲಸಗಳ ಮೂಲಕ ಭರವಸೆಯನ್ನು ಮೂಡಿಸೋಣ ಎಂಬ ಘೋಷ್ಯವಾಕ್ಯದಡಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಬಿಮ್ಸ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ …

Read More »