Breaking News

ವೋಟರ್ ಐಡಿಗೆ ಆಧಾರ್ ನಂಬರ್​​ ಲಿಂಕ್ ಕಡ್ಡಾಯವಲ್ಲ: ಚುನಾವಣಾ ಆಯೋಗ

ಮತದಾರರು ವೋಟರ್ ಐಡಿಗೆ ಆಧಾರ್ ನಂಬರ್​​ ಲಿಂಕ್ ಮಾಡಿಸುವುದು ಕಡ್ಡಾಯವಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದ ಚುನಾವಣೆ ಆಯೋಗವುಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಲ್ಲ. ಮತದಾರರು ಸ್ವಯಂ ಪ್ರೇರಿತರಾಗಿ ಆಧಾರ್ ಅಥವಾ ಇತರೆ ನಿಗದಿತ ದಾಖಲೆಗಳ ಮೂಲಕವೂ ದೃಢೀಕರಿಸಿ ಜೋಡಣೆ ಮಾಡಬಹುದಾಗಿದೆ ಎಂದು ತಿಳಿಸಿದೆ. ಮಾಧ್ಯಮಗಳಲ್ಲಿ ವರದಿಯಾದ ವರದಿಗಳನ್ನು ಉಲ್ಲೇಖಿಸಿ, ಫಾರ್ಮ್ -6 ಬಿ ಯಲ್ಲಿ ಆಧಾರ್ ಸಲ್ಲಿಸುವುದು …

Read More »

ದೇವರುಗಳು ಮೇಲ್ಜಾತಿಯವರಲ್ಲ, ಶಿವನೂ ಪರಿಶಿಷ್ಟನೇ: ಜೆಎನ್‌ಯು ಕುಲಪತಿ ಶಾಂತಿಶ್ರೀ

ನವದೆಹಲಿ: ಮಾನವಶಾಸ್ತ್ರದ ಪ್ರಕಾರ ದೇವರುಗಳು ಮೇಲ್ಜಾತಿಗೆ ಸೇರಿದವರಲ್ಲ. ಶಿವನೂ ಕೂಡ ಪರಿಶಿಷ್ಟ ಜಾತಿ ಅಥವಾ ಬುಡಕಟ್ಟಿನವನಾಗಿರಬಹುದು ಎಂದು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು)ನ ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್‌ ಅವರು ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.   ಡಾ. ಬಿ ಆರ್ ಅಂಬೇಡ್ಕರ್ ಉಪನ್ಯಾಸ ಸರಣಿಯ ಅಂಗವಾಗಿ ಆಯೋಜಿಸಿದ್ದ ‘ಲಿಂಗ ನ್ಯಾಯದ ಕುರಿತು ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳು: ಏಕರೂಪ ನಾಗರಿಕ ಸಂಹಿತೆಯ ವಿಶ್ಲೇಷಣೆ’ ಎಂಬ ವಿಷಯದ ಕುರಿತು ಅವರು …

Read More »

22 ಶಾಲೆಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಸೂಚನೆ

ಬೆಳಗಾವಿ – ಚಿರತೆ ಆತಂಕದ ಹಿನ್ನೆಲೆಯಲ್ಲಿ ಬೆಳಗಾವಿಯ 22 ಶಾಲೆಗಳು ಕಳೆದ ಹಲವು ದಿನಗಳಿಂದ ಶೈಕ್ಷಿಣಿಕವಾಗಿ ತೀವ್ರ ಗೊಂದಲದಲ್ಲಿವೆ. ರಜೆ ಕೊಡದಿದ್ದರೆ ಚಿರತೆ ದಾಳಿಯಿಂದ ಮಕ್ಕಳಿಗೆ ತೊಂದರೆಯಾದರೆ ಎನ್ನುವ ಆತಂಕ, ರಜೆ ಕೊಟ್ಟರೆ ಪಾಠವಿಲ್ಲದೆ ಮಕ್ಕಳ ಭವಿಷ್ಯದ ಚಿಂತೆ. ಆರಂಭದಲ್ಲಿ ಒಂದು ವಾರ ರಜೆ ನೀಡಿದ್ದ ಶಿಕ್ಷಣ ಇಲಾಖೆ ನಂತರ ಎಲ್ಲ ಮುನ್ನೆಚ್ಚರಿಕೆ ವಹಿಸಿಕೊಂಡು ಶಾಲೆಗಳನ್ನು ನಡೆಸುವಂತೆ ಸೂಚನೆ ನೀಡಿತ್ತು. ಆದರೆ ಸೋಮವಾರ ಮತ್ತೆ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಹಾಗಾಗಿ …

Read More »

ಕಾಂಗ್ರೆಸ್ ಕಛೇರಿಗೆ ಸಾವರ್ಕರ್ ಫೋಟೋ : ಬಸವನಾಡಲ್ಲೂ ಹಬ್ಬಿದ ಸಾವರ್ಕರ್ ಕಿಡಿ

ವಿಜಯಪುರ: ಜಿಲ್ಲೆಗೂ ಸಾವರ್ಕರ್ ವಿವಾದದ ಕಿಡಿ ಹರಡಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ನಗರದ ಗಜಾನನ ಮಹಾಮಂಡಳದ ಸಭೆಯ ವೇದಿಕೆಗೆ ಸಾವರ್ಕರ್ ಎಂದು ಹೆಸರು ಇರಿಸಿದ್ದರೆ, ಇದರ ಬೆನ್ನಲ್ಲೇ ಕಾಂಗ್ರೆಸ್ ಕಛೇರಿಗೆ ಅಪರಿಚಿತ ವ್ಯಕ್ತಿ ಸಾವರ್ಕರ್ ಫೋಟೋ ಅಂಟಿಸುವ ಮೂಲಕ ಜಿಲ್ಲೆಯಲ್ಲೂ ವಿವಾದ ತಾರಕಕ್ಕೆ ಏರುವಂತೆ ಮಾಡಿದ್ದಾರೆ.   ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿನ ಡಾ.ಫ.ಗು. ಹಳಕಟ್ಟಿ ಭವನದಲ್ಲಿ ನಗರ ಶಾಸಕ ಯತ್ನಾಳ ನೇತೃತ್ವದಲ್ಲಿ ನಡೆದ ಶ್ರೀ ಗಜಾನನ …

Read More »

K.P.T.C.L. ಪರೀಕ್ಷಾ ಅಕ್ರಮ; 9 ಜನರ ಬಂಧನ

ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಕೆಪಿಟಿಸಿಎಲ್ ಪರೀಕ್ಷಾ ನೇಮಕಾತಿಯಲ್ಲಿ ಬಂಧಿತ ಅಭ್ಯರ್ಥಿಗಳು ಸ್ಮಾರ್ಟ್ ವಾಚ್ ಬಳಸಿ, ಪ್ರೆಶ್ನೆ ಪತ್ರಿಕೆ ಫೋಟೋ ತೆಗೆದು ಟೆಲಿಗ್ರಾಮ್ ಆಪ್ ಮೂಲಕ ತನ್ನ ಸ್ನೇಹಿತರಿಗೆ ಕಳುಹಿಸಿ ಉತ್ತರ ಪಡೆದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಚಿನ್ ಶ್ರೀಧರ ಕಮತರ (32) ಗೋಕಾಕ ಶಹರ ಠಾಣೆಗೆ ಹಾಜರಾಗಿ …

Read More »

ಗಣೇಶೋತ್ಸವ ಶಾಂತಿಯುತವಾಗಿ ನಡೆಸುವಂತೆ ಕೇಂದ್ರ ಸಾರ್ವಜನಿಕ ಗಣೇಶೋತ್ಸವ ಮಂಡಳಿಯಿಂದ ಡಿಸಿ ಹಾಗೂ ಕಮಿಶನರ್‍ರವರಿಗೆ ಮನವಿ

ಆಗಸ್ಟ್ 31 ರಂದು ಶ್ರೀ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದ್ದು, ಈ ಬಾರಿಯ ಗಣೇಶೋತ್ಸವವನ್ನು ಶಾಂತಿಯುತವಾಗಿ ನಡೆಸುವಂತೆ ಕೇಂದ್ರ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ನಿಯೋಗವು ಜಿಲ್ಲಾಧಿಕಾರಿ ಹಾಗೂ ಪೆÇಲೀಸ್ ಆಯುಕ್ತರಿಗೆ ಸೋಮವಾರ ವಿವಿಧ ಬೇಡಿಕೆಗಳನ್ನು ಸಲ್ಲಿಸಿದೆ. ಈ ವರ್ಷದ ಶ್ರೀ ಗಣೇಶೋತ್ಸವವು ಹತ್ತು ದಿನಗಳು ಮತ್ತು ಬುಧವಾರ. 31 ಆಗಸ್ಟ್ ನಿಂದ ಶುಕ್ರವಾರ ಸೆಪ್ಟೆಂಬರ್ 9 ರ ಅವಧಿಯಲ್ಲಿ ಗಣೇಶೋತ್ಸವವನ್ನು ಆಚರಿಸಲಾಗುವುದು. ಬೆಳಗಾವಿಯಲ್ಲಿ 357ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಲಗಳು ಕಾರ್ಯನಿರ್ವಹಿಸುತ್ತಿದ್ದು, …

Read More »

ಸಾವರ್‌ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದರೆ ಹರಿದರೆ ಕೈ ಕತ್ತರಿಸಿ ಬಿಸಾಕುತ್ತೇವೆ : ಪ್ರಮೋದ ಮುತಾಲಿಕ್

ಬೆಳಗಾವಿಯಲ್ಲಿ ಪ್ರತೀ ಗಲ್ಲಿಗಲ್ಲಿಯಲ್ಲಿ ಸಾವರ್‌ಕರ್ ಯಾರು ಎಂದು ತಿಳಿಸುವ ಉದ್ದೇಶದಿಂದ ನಾವು ಪ್ರತೀ ಗಣೇಶ ಮಂಡಳಿಯಲ್ಲಿ ಸಾವರ್‌ಕರ್ ಭಾವಚಿತ್ರವನ್ನು ಅಳವಡಿಸುವಂತೆ ಅಭಿಯಾನವನ್ನು ಮಾಡುತ್ತಿದ್ದೇವೆ. ಈ ವೇಳೆ ಯಾರಾದರೂ ಕಾಂಗ್ರೆಸ್ ಅಥವಾ ಮುಸ್ಲಿಂರು ಸಾವರ್‌ಕರ್ ಭಾವಚಿತ್ರವನ್ನು ಹರಿದರೆ ಕೈ ಕತ್ತರಿಸಿ ಬಿಸಾಕುತ್ತೇವೆ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.   ಬೆಳಗಾವಿಯಲ್ಲಿ ಗಣೇಶೋತ್ಸವ ವೇಳೆ ಸಾವರ್‌ಕರ್ ಭಾವಚಿತ್ರ ಅಳವಡಿಸುವ ಆಂದೋಲನಕ್ಕೆ ಇಂದು ಪ್ರಮೋದ ಮುತಾಲಿಕ್ ಬೆಳಗಾವಿಯಲ್ಲಿ ಚಾಲನೆ ನೀಡಿದರು. …

Read More »

ಬೆತ್ತಲೆ ವಿಡಿಯೋ ಕಾಲ್ ಮಾಡಿ ಯುವತಿಯಿಂದ ಬ್ಲ್ಯಾಕ್ ಮೇಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕ

ಮೈಸೂರು: ಯುವತಿಯೊಬ್ಬಳು ಯುವಕನಿಗೆ ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ. ವಾಸು ಬ್ಲ್ಯಾಕ್ ಮೇಲ್ ಗೊಳಗಾದ ಯುವಕ. ಯುವಕನಿಗೆ ಮೆಸೆಜ್ ಮೂಲಕ ತನ್ನನ್ನು ಅಮೃತಾ ಎಂದು ಪರಿಚಯಿಸಿಕೊಂಡ ಯುವತಿ ಪದೇ ಪದೆ ವಿಡಿಯೋ ಕಾಲ್ ಮಾಡಿದ್ದಾಳೆ ಅಲ್ಲದೇ ಬೆತ್ತಲೆ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿದ್ದಾಳೆ. ತಕ್ಷಣ ಯುವಕ ವಿಡಿಯೋ ಕಾಲ್ ಕಟ್ ಮಾಡಿದ್ದಾನೆ. ಆದರೆ ವಿಡಿಯೋ ಕಾಲ್ …

Read More »

ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ವಿಡಿಯೋ ವೈರಲ್; ಶಾಲೆಗಳಿಗೆ ರಜೆ ಘೋಷಣೆ

ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಈ ಕುರಿತ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಸಮೀಪದ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಬೆಳಗಾವಿಯ ಗಾಲ್ಫ್ ಮೈದಾನ ಸಮೀಪದಲ್ಲಿ ಮತ್ತೆ ಚಿರತೆ ಕಾಣಿಸಿಕೊಳ್ಳುವ ಮೂಲಕ ಸಾರ್ವಜನಿಕರ ಆತಂಕ ಹೆಚ್ಚಿಸಿದೆ. ಈಗ್ಗೆ 20 ದಿನಗಳ ಹಿಂದೆ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಚಿರತೆ ಪರಾರಿಯಾಗಿತ್ತು. ಇದೀಗ ಸೋಮವಾರ ಹಿಂಡಲಗಾ ರಸ್ತೆಯ ಮಹಾತ್ಮ ಗಾಂಧೀ ವೃತ್ತ ಬಳಿ …

Read More »

ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಗದಗದಲ್ಲಿ ಅಪ್ಪ, ಮಗನಿಂದಲೇ ಡೀಲ್‌

ಗದಗ, ಆಗಸ್ಟ್‌ 21: ರಾಜ್ಯದಲ್ಲಿ ಪಿಎಸ್‌ಐ ಪರೀಕ್ಷೆಯ ಹಗರಣ ಮಾಸುವ ಮುನ್ನವೇ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಗದಗದ ಮುನ್ಸಿಪಲ್ ಕಾಲೇಜ್‌ನಲ್ಲಿ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಗದಗದ ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮತ್ತು ಅವರ ಪುತ್ರ ಸಮೀತ ಕುಮಾರ್ ಪ್ರಶ್ನೆ ಪತ್ರಿಕೆಯನ್ನು ಸೋರಿಕೆಯ …

Read More »