ಬೆಳಗಾವಿ: ವಿಧಾನ ಪರಿಷತ್ ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸೋಮವಾರ ಪರಿಷತ್ ಬಿಜೆಪಿ ಸದಸ್ಯರು ಸಭೆ ನಡೆಸಿದರು. ಪರಿಷತ್ ಸಭಾಂಗಣದ ಪಕ್ಕದ ಕೊಠಡಿಯಲ್ಲಿ ಸಭೆ ನಡೆಸಿದ ಸದಸ್ಯರು, ಬುಧವಾರ ನಡೆಯಲಿರುವ ಸಭಾಪತಿ ಚುನಾವಣೆ ಹಾಗೂ ಮಂಗಳವಾರ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಕುರಿತಂತೆ ಚರ್ಚೆ ನಡೆಸಿದರು. ಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಬಸವರಾಜ ಹೊರಟ್ಟಿ ಮಂಗಳವಾರ ಬೆಳಗ್ಗೆ 11 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ ಮಾಡುವ ಕುರಿತು ನಿರ್ಧರಿಸಲಾಯಿತು. …
Read More »40%ಭ್ರಷ್ಟಾಚಾರ, ಬೆಳಗಾವಿ, ಅಂತಾರಾಜ್ಯ ಗಡಿ ವಿವಾದ, ವೋಟರ್ ಐಡಿ ಹಗರಣ, ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ತೀರ್ಮಾನ
ಬೆಳಗಾವಿ: ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಸ್ತ್ರವಾಗಿರಿಸಿಕೊಂಡು ವಿಧಾನ ಮಂಡಲದ ಉಭಯ ಸದನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಶಾಸಕಾಂಗ ಪಕ್ಷ ತೀರ್ಮಾನಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಲವತ್ತು ಪರ್ಸೆಂಟ್ ಭ್ರಷ್ಟಾಚಾರ, ಬೆಳಗಾವಿ ಗಡಿ ವಿವಾದ, ವೋಟರ್ ಐಡಿ ಹಗರಣ, ಅಂತಾರಾಜ್ಯ ಗಡಿ ವಿವಾದ ಮತ್ತಿತರ ವಿಚಾರಗಳನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳಲು …
Read More »ಹತ್ತಿ ಕಟಾವಿಗೂ ಕೊಡಬೇಕು ಪೊಲೀಸರ ರಕ್ಷಣೆ!
ರಾಯಚೂರು: ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾದುದು. ಸಾರ್ವಜನಿಕವಾಗಿ ಎಷ್ಟೇ ಟೀಕೆ ವ್ಯಕ್ತಪಡಿಸಿದರೂ, ಪೊಲೀಸರಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಿವಿಧ ಸಂದರ್ಭಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಿ, ಭದ್ರತೆ ಒದಗಿಸುವ ಕೆಲಸ ಮಾಡುತ್ತಾರೆ. ಗಣ್ಯ ವ್ಯಕ್ತಿಗಳ ಭೇಟಿ, ಸಮಾವೇಶ, ಗಲಭೆ ಮುಂತಾದ ಸಂದರ್ಭದಲ್ಲಿ ಅಗತ್ಯಕ್ಕನುಗುಣವಾಗಿ ಅಗತ್ಯವಿದ್ದಾಗ ಸೂಕ್ತ ಭದ್ರತೆ ಪೊಲೀಸ್ ಇಲಾಖೆಯಿಂದ ಲಭಿಸುತ್ತದೆ. ಆದರೆ ಇದೀಗ ರಾಯಚೂರಿ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರೊಬ್ಬರು ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಿ …
Read More »2ರಡೂವರೆ ತಿಂಗಳು ಹಸುಗೂಸಿನೊಂದಿಗೆ ಅಧಿವೇಶನಕ್ಕೆ ಬಂದ ಶಾಸಕಿ!
ಮಹಾರಾಷ್ಟ್ರ: ತನ್ನ ಎರಡೂವರೆ ತಿಂಗಳು ಹಸುಗೂಸಿನೊಂದಿಗೆ ಎನ್‌ಸಿಪಿ ಶಾಸಕಿ ಸರೋಜ್ ಬಾಬುಲಾಲ್ ಅಹಿರ್ ಅವರು ನಾಗಪುರದಲ್ಲಿ ವಿಧಾನಮಂಡಳದ ಅಧಿವೇಶನಕ್ಕೆ ಹಾಜರಾದ ಪ್ರಸಂಗ ನಡೆಯಿತು. ಎನ್‌ಸಿಪಿ ಶಾಸಕಿ ಸರೋಜ್ ಬಾಬುಲಾಲ್ ಅಹಿರ್ ಅವರು ಸೆ.30ರಂದು ಮಗುವಿಗೆ ಜನ್ಮ ನೀಡಿದ್ದರು. ಇಂದಿನಿಂದ(ಸೋಮವಾರ) ಅಧಿವೇಶನ ಶುರುವಾಗಿದ್ದು, ಪುಟ್ಟ ಮಗುವಿನ ಜತೆ ಆಗಮಿಸುವ ಮೂಲಕ ಗಮನ ಸೆಳದರು. ಈ ಕುರಿತು ಪ್ರತಿಕ್ರಿಯಿಸಿದ ಶಾಸಕಿ, ‘ಕರೊನಾ ಹಿನ್ನೆಲೆ ಕಳೆದ ಎರಡೂವರೆ ವರ್ಷಗಳಿಂದ ನಾಗ್ಪುರದಲ್ಲಿ ಯಾವುದೇ ಅಧಿವೇಶನ ನಡೆದಿರಲಿಲ್ಲ. ನಾನೀಗ …
Read More »ಶಿಕ್ಷಕನಿಂದ ಹಲ್ಲೆ, ವಿದ್ಯಾರ್ಥಿ ಸಾವು
ಗದಗ, ಡಿಸೆಂಬರ್, 19: ಅತಿಥಿ ಶಿಕ್ಷಕನೊಬ್ಬ 10 ವರ್ಷದ ವಿದ್ಯಾರ್ಥಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಎಂಬಾತ 10 ವರ್ಷದ ವಿದ್ಯಾರ್ಥಿ ಭರತ್ ಮೇಲೆ ಹಲ್ಲೆ ನಡೆಸಿದ್ದಾನೆ. ಶಿಕ್ಷಕನಿಂದ ಏಟು ತಿಂದ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಆತನನ್ನು …
Read More »ರಾಯಣ್ಣನ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿದ ಸಿದ್ದರಾಮಯ್ಯನವರು
ಅಥಣಿಯ ಹಿರಿಯ ಮುಖಂಡ ಎಸ್ ಕೆ ಬುಟಾಳಿ ಅವರು ಕೊಡುಗೆಯಾಗಿ ನೀಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸಿದರು. ಪಟ್ಟಣದ ವಿಜಯಪೂರ ರಸ್ತೆಗೆ ಹೊಂದಿಕೊಂಡ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯನವರು ರಾಯಣ್ಣನ ದೇಶಪ್ರೇಮ, ರಾಜನಿಷ್ಠೆಯನ್ನು ನಮ್ಮ ಯುವಜನತೆ ಮೈಗೂಡಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕೊಡುಗೆಯನ್ನಾಗಿ ನೀಡಿದ ಬುಟಾಳಿ ಅವರ ಕೊಡುಗೆ ಈ ನಾಡಿಗೆ ದೊಡ್ಡದು ಎಂದರು. ಅವರು ಮುಂದೆ ಮಾತನಾಡುತ್ತಾ, ಮಹಾಜನ ವರದಿ ಪ್ರಕಾರ ಬೆಳಗಾವಿ …
Read More »ಸರಕಾರದ ವಿರುದ್ಧ ಗುಡುಗಿದ ಸಾರಿಗೆ ನೌಕರರು
ಉತ್ತರ ಕರ್ನಾಟಕದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿವೃತ್ತ ನೌಕರರ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಒತ್ತಾಯಿಸಿ ಸೋಮವಾರ ಸುವರ್ಣ ವಿಧಾನಸೌಧದ ಎದುರಿನ ಬಸ್ತವಾಡ ಗ್ರಾಮದಲ್ಲಿ ಸಾರಿಗೆ ಸಂಸ್ಥೆ ನೌಕರರು ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಮಹಾ ಮಂಡಳ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ವೇಳೆಯಲ್ಲಿ ಮಾಸಿಕ 10 ಸಾವಿರ ರೂ. ಪೆನಶನ್ ಮಂಜೂರು ಮಾಡುವುದಾಗಿ ಹೇಳಿ ಇಲ್ಲಿಯವರಗೆ ಮಂಜೂರು ಮಾಡಿಲ್ಲ. ಕೂಡಲೇ ಅದನ್ನು ಮಂಜೂರು …
Read More »ಮಹೇಶ್ ಕುಮಟಳ್ಳಿ ಪುತ್ರ ರಜತ್ ಹಾಗೂ ಮೃಣಾಲಿ ಮದುವೆ ಸಮಾರಂಭದಲ್ಲಿ ಭಾಗಿಯಾದ ರಾಜಕೀಯ ಮುಖಂಡರು
ಸಿ ಎಂ ಬೊಮ್ಮಾಯಿ, ಮಾಜಿ ಸಿ ಎಂ ಯಡಿಯೂರಪ್ಪ, ಸಚಿವ ಆರ್ ಅಶೋಕ್, ಗೋವಿಂದ ಕಾರಜೋಳ, ಸಿಸಿ ಪಾಟೀಲ್, ವಚನಾನಂದ ಸ್ವಾಮೀಜಿ ಭಾಗಿಯಾಗಿ ಅಥಣಿಯ ಪಟ್ಟಣದ ಹೊರವಲಯದಲ್ಲಿರುವ ಕುಮಟಳ್ಳಿ ಫಾರ್ಮ್ ಹೌಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಶಾಸಕ ಮಹೇಶ್ ಕುಮಟಳ್ಳಿ ಪುತ್ರ ರಜತ್ ಹಾಗೂ ಮೃಣಾಲಿ ಮದುವೆ ಸಮಾರಂಭದಲ್ಲಿ ಭಾಗಿಯಾದ ರಾಜಕೀಯ ಮುಖಂಡರು
Read More »ಸಾವರ್ಕರ್ ಫೋಟೋ ವಿವಾದ: ವಿಧಾನಸಭೆ ಆವರಣದಲ್ಲಿ ಕಾಂಗ್ರೆಸ್ ಪ್ರತಿಭಟನೆ
ಬೆಳಗಾವಿ, ಡಿ. 19: ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ವಿಡಿ ಸಾವರ್ಕರ್ ಭಾವಚಿತ್ರ ವಿವಾದ ಪ್ರತಿಭಟನೆಯ ಕಿಡಿ ಹೊತ್ತಿಸಿದೆ. ಮೊದಲ ದಿನವೇ ಕಾಂಗ್ರೆಸ್ ಬಿಜೆಪಿ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಪ್ರಯತ್ನಿಸಿದೆ. ವಿಧಾನಸಭೆ ಸಭಾಂಗಣದಲ್ಲಿ ವಿಡಿ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿರುವುದನ್ನು ವಿರೋಧಿಸಿ ವಿಧಾನಸಭೆಯ ಹೊರಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಶಾಸಕರು ಸುವರ್ಣಸೌಧದ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜವಾಹರ್ …
Read More »ದರ್ಶನ್ ಮೇಲೆ ಚಪ್ಪಲಿ ಎಸೆತ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಕ್ರಾಂತಿ ಚಿತ್ರದ ಎರಡನೇ ಹಾಡು ‘ಬೊಂಬೆ ಬೊಂಬೆ’ಯನ್ನು ಬಳ್ಳಾರಿಯ ಹೊಸಪೇಟೆ ಪಟ್ಟಣದಲ್ಲಿ ಬಿಡುಗಡೆ ಮಾಡಲಾಯಿತು. ಅಲ್ಲಿನ ಡ್ಯಾಮ್ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಆರಂಭವಾಗುವ ಮುನ್ನವೇ ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿತ್ತು. ಕ್ರಾಂತಿ ಹಾಡು ಬಿಡುಗಡೆ ಸಮಾರಂಭದಲ್ಲಿ ಜಮಾಯಿಸಿದ್ದ ಪುನೀತ್ ಫ್ಯಾನ್ಸ್ ಅಪ್ಪು ಕಟ್ …
Read More »
Laxmi News 24×7