ಬೆಳಗಾವಿ: ನಗರದಲ್ಲಿ ಇಂದು ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ ಅವರು ತಮ್ಮ ಅಭಿವೃದ್ಧಿ ಪರ್ವ ಮತ್ತೆ ಮುಂದುವರೆಸಿದ್ದಾರೆ, ನಗರದಲ್ಲಿ ಇಂದು ಕೊನವಾಲ್ ಗಲ್ಲಿಯಲ್ಲಿ 36 ಲಕ್ಷ ವೆಚ್ಚದಲ್ಲಿ ಪವರ್ಸ್ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ, ರೇಡಿಯೋ ಕಾಂಪ್ಲೆಕ್ಸ್ ಬಳಿ ಚರಂಡಿ ಕಾಮಗಾರಗೆ 21 ಲಕ್ಷ, ರಾಮಲಿಂಗ ಖಿಂಡಗಲ್ಲಿಯಲ್ಲಿ ರಸ್ತೆ ಕಾಮಗಾರಿಗೆ 31 ಲಕ್ಷ, ಅನ್ಸುರಕರ್ ಗಲ್ಲಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 16 ಲಕ್ಷ, ಹಾಗೂ …
Read More »ಶಿರಗುಪ್ಪಿಯಲ್ಲಿ ಪುರುಷ ಹಾಗೂ ಮಹಿಳಾ ಕಬ್ಬಡ್ಡಿ ತಂಡಗಳಿಂದ ಕಬ್ಬಡಿ ಸ್ಪರ್ಧೆ
ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಕೆಎಲ್ಇ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯ ಕ್ರೀಡಾಂಗಣದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಎಂಟು ತಾಲೂಕಗಳಿಂದ ಪುರುಷ ಹಾಗೂ ಮಹಿಳಾ ಕಬ್ಬಡ್ಡಿ ತಂಡಗಳಿಂದ ಕಬ್ಬಡಿ ಸ್ಪರ್ಧೆಗಳು ಜರುಗಿದವು. ಮಂಗಳವಾರ ಬೆಳಗೆ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಪರಿಷತ್ ಮಹಾಂತೇಶ್ ಕವಟಿಗಿಮಠ್ ಇವರು ಹಾಗೂ ಇತರ ಗಣ್ಯರಿಂದ ಬಲೂನ್ಗಳ ಹಾರಿಸುವ ಮುಖಾಂತರ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಮಾಜಿ ವಿಧಾನ ಪರಿಷತ್ತಿನ ಸದಸ್ಯ ಹಾಗೂ ಕೆಎಲ್ಇ …
Read More »ಶ್ರೀ ಶಿವಶರಣ ಮೇದಾರ ಕೇತೇಶ್ವರರ ಜಯಂತಿ ಆಚರಣೆ
ಸರ್ಕಾರ ವತಿಯಿಂದ ಜಯಂತಿ ಆಚರಿಸುವಂತೆ ಮನವಿ. 12ನೇ ಶತಮಾನದಲ್ಲಿ ಬಸವಾದಿ ಶರಣರಲ್ಲಿ ಒಬ್ಬರಾದ ಕಾಯಕಯೋಗಿ ಶ್ರೀ ಶಿವಶರಣ ಮೇದಾರ ಕೇತೇಶ್ವರ ಜಯಂತಿಯನ್ನು ಬೆಳಗಾವಿ ನಗರದಲ್ಲಿ ಆಚರಿಸಲಾಯಿತು. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಬಳಗದಲ್ಲಿದ್ದ ಶ್ರೀ ಮೇದಾರ ಕೇತೇಶ್ವರ ಅವರ 892 ನೇ ಜಯಂತಿಯನ್ನು ಬೆಳಗಾವಿ ನಗರದ ಮೇದಾರ ಓಣಿಯಲ್ಲಿ ಆಚರಣೆ ಮಾಡಲಾಯಿತು.ಶ್ರೀ ಕೇತಯ್ಯ ಮೇದಾರ ಸಮಾಜದ ಅಧ್ಯಕ್ಷರಾದ ಪ್ರಕಾಶ ನೇಸರಿಕರ ಅವರು ಕೇತೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಟ …
Read More »ಲೈಂಗಿಕ ದೌರ್ಜನ್ಯ: ಶಿವಮೂರ್ತಿ ಶರಣರ ನ್ಯಾಯಾಂಗ ಬಂಧನ ವಿಸ್ತರಣೆ
ಚಿತ್ರದುರ್ಗ: ಪ್ರೌಢಶಾಲೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನದ ಅವಧಿಯನ್ನು ಜಿಲ್ಲಾ ನ್ಯಾಯಾಲಯ ನ.14 ರವರೆಗೆ ವಿಸ್ತರಿಸಿದೆ. ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಆಗಿದ್ದರಿಂದ ಶಿವಮೂರ್ತಿ ಮುರುಘಾ ಶರಣರು, ಹಾಸ್ಟಲ್ ವಾರ್ಡನ್ ಹಾಗೂ ಪರಮಶಿವಯ್ಯ ಅವರನ್ನು ಎರಡನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು ನ್ಯಾಯಾಂಗ ಬಂಧನದ ಅವಧಿಯನ್ನು …
Read More »ಲಂಚ ಕೇಳಿದರೆ ಲೋಕಾಯುಕ್ತಕ್ಕೆ ದೂರು ನೀಡಿ
ಚಿಕ್ಕಬಳ್ಳಾಪುರ: ಸಾರ್ವಜನಿಕರು ಯಾವುದೇ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಆಡಳಿತ ವರ್ಗಕ್ಕೆ ಲಂಚ ಕೊಡಬಾರದು. ಅಧಿಕಾರಿ ಅಥವಾ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟರೆ ಜಿಲ್ಲಾ ಲೋಕಾಯುಕ್ತ ಕಚೇರಿ ಸಂಪರ್ಕಿಸಿ ದೂರು ಸಲ್ಲಿಸಿ ಎಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತಿಳಿಸಿದರು. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾರ್ವಜನಿಕ ದೂರು ಅರ್ಜಿಗಳ ಸ್ವೀಕಾರ, ಅಹವಾಲುಗಳ ವಿಲೇವಾರಿ ಮತ್ತು ವಿಚಾರಣೆ ಸಭೆಗೂ ಮುನ್ನ ಅವರು ಮಾತನಾಡಿದರು. ಆಡಳಿತ ವರ್ಗದ ಯಾರೊಬ್ಬರೂ ಲಂಚ …
Read More »ಹೊಸದಾಗಿ `BPL’ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಬಿಗ್ ಶಾಕ್ :
ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರಣಗಳಿಂದಾಗಿ ಈಗಾಗಲೇ ಲಕ್ಷಾಂತರ ಕಾರ್ಡ್ ಗಳನ್ನು ಸರ್ಕಾರ ರದ್ದುಗೊಳಿಸಿದೆ. ಈ ನಡುವೆಯೂ ಹೊಸ ಬಿಪಿಎಲ್ ಕಾರ್ಡ್ ಗಳಿಗಾಗಿ ( BPL Ration Card ) ಅರ್ಜಿ ಸಲ್ಲಿಸುತ್ತಿರೋರ ಸಂಖ್ಯೆ ಏನೂ ಕಡಿಮೆ ಆಗಿಲ್ಲ. ಆದ್ರೇ ಹೊಸ ಕಾರ್ಡ್ ಗೆ ಅರ್ಜಿ ( New Ration Card Application ) ಸಲ್ಲಿಸಿ, ಆದ್ರೇ ಕಾರ್ಡ್ ಬಂತೋ ಇಲ್ಲವೋ, ಬರುತ್ತೋ ಇಲ್ಲವೇ ಎಂಬುದನ್ನು ಮಾತ್ರ ಕೇಳ ಬೇಡಿ ಎಂಬುದಾಗಿ …
Read More »ತನ್ನ ಪರ ಘೋಷಣೆ ಕೂಗಿದವರ ವಿರುದ್ಧವೇ ಸಿದ್ದರಾಮಯ್ಯ ಗರಂ!
ಹುಬ್ಬಳ್ಳಿ: ತನ್ನ ಪರ ಘೋಷಣೆ ಕೂಗಿದವರ ವಿರುದ್ಧವೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಅವರು ಮಂಗಳವಾರ ಬೆಳಗ್ಗೆ ನಗರದ ಹೊಟೇಲ್ವೊಂದಕ್ಕೆ ಆಗಮಿಸಿದ್ದರು. ಈ ವೇಳೆ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದ ಕಾಂಗ್ರೆಸ್ ಸ್ಥಳೀಯ ಮುಖಂಡ ಗಿರೀಶ ಗದಿಗೆಪ್ಪಗೌಡರ ಅವರು ‘ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಗದಿಗೆಪ್ಪಗೌಡರ ಜತೆ ಬಂದವರು ‘ಹೌದೋ ಹುಲಿಯಾ’ ಎಂದು ಪ್ರತಿಕ್ರಿಯಿಸಿದರು. ಈ ಸಂಗತಿ ಸಿದ್ದರಾಮಯ್ಯ ಅವರನ್ನು ಕೆರಳಿಸಿತು. …
Read More »ಮುರುಘಾಶ್ರೀಗಳ ತಕ್ಕ ಶಿಕ್ಷೆಯಾಗಬೇಕು;: B.S.Y.
ಉಡುಪಿ: ಚಿತ್ರದುರ್ಗ ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿದ್ದಾರೆ. ಈ ಕುರಿತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮುರುಘಾಶ್ರೀ ಕ್ಷಮಿಸಲಾರದ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತಾ ನಿರೀಕ್ಷೆ ಮಾಡಿರಲಿಲ್ಲ. ಇದನ್ನು ಎಲ್ಲರೂ ಖಂಡಿಸಬೇಕು. ಚಿತ್ರದುರ್ಗ ಮುರುಘಾ ಮಠದ ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.ಇನ್ನು ಪೋಕ್ಸೋ ಕೇಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳು ಸೇರಿದಂತೆ ಮೂವರು ಆರೋಪಿಗಳ ವಿರುದ್ಧದ …
Read More »ಅಂತರ್ಜಲ ಹೆಚ್ಚಳ; ಕೆಂದೂರು ಗ್ರಾಮಸ್ಥರು ಕಂಗಾಲು
ಬಾದಾಮಿ: ಈ ಬಾರಿ ಮಳೆ ಪ್ರಮಾಣ ಹೆಚ್ಚಳವಾಗಿರುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಿದ್ದು, ಬಾದಾಮಿಯ ಕೆಂದೂರು ಗ್ರಾಮಸ್ಥರು ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಕೆಂದೂರು ಗ್ರಾಮದಲ್ಲಿ ಅಂತರ್ಜಲ ಹೆಚ್ಚಳದಿಂದಾಗಿ ಬೋರ್ ವೆಲ್ ಗಳಿಂದ ನೀರು ಹೊರಚಿಮ್ಮುತ್ತಿದ್ದು, ಜಮೀನುಗಳು ಜಲಾವೃತಗೊಂಡಿವೆ. ಬೋರ್ ವೆಲ್ ಗಳು, ಕೊಳವೆ ಬಾವಿಗಳಿಂದ ಏಕಾಏಕಿ ನೀರು ಹೊರಚಿಮ್ಮುತ್ತಿದ್ದು, ಕಳೆದ 20 ದಿನಗಳಿಂದ ಹೊಲಗದ್ದೆಗಳು ಕೆರೆಗಳಂತಾಗಿದ್ದು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹೊಲಗಳು ಸಂಪೂರ್ಣ ಜಲಾವೃತಗೊಂಡಿದ್ದು, ಶುಂಠಿ, ಕಡಲೆ, ಕಬ್ಬು ಬೆಳೆ ಸಂಪೂರ್ಣ ನೀರುಪಾಲಾಗಿವೆ. …
Read More »ಬೆಚ್ಚಿ ಬೀಳಿಸುವ ಮಾಹಿತಿ-ಮುರುಘಾ ಶ್ರೀ ವಿರುದ್ಧ ಡ್ರಗ್ಸ್ ಸೇವನೆ ಆರೋಪ
ಚಿತ್ರದುರ್ಗ: ಪೋಕ್ಸೋ ಕೇಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳು ಸೇರಿದಂತೆ ಮೂವರು ಆರೋಪಿಗಳ ವಿರುದ್ಧದ ಆರೋಪ ಧೃಡವಾಗಿದೆ ಎಂದು ಚಿತ್ರದುರ್ಗ ಪೊಲೀಸ್ ವರಿಷ್ಟಾಧಿಕಾರಿ ಪರಶುರಾಮ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಮುರುಘಾ ಶ್ರೀ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದರು. ತನಿಖೆ ಭಾಗಶಃ ಪೂರ್ಣಗೊಂಡಿದ್ದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಚಿತ್ರದುರ್ಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಹೇಳಿದ್ದಾರೆ.ಪ್ರಕರಣದ ತನಿಖೆ ಭಾಗಶಃ ಪೂರ್ಣಗೊಂಡಿದ್ದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಚಿತ್ರದುರ್ಗದಲ್ಲಿ ಪೊಲೀಸ್ …
Read More »
Laxmi News 24×7