Breaking News

ಬೆಳೆ ಸಾಲ ಮನ್ನಾದಿಂದ ವಂಚಿತ ರೈತರಿಂದ ಉಪವಾಸ ಸತ್ಯಾಗ್ರಹ

2018ರಲ್ಲಿ ಬೆಳೆಸಾಲ ಮನ್ನಾ ಮಾಡಿದ ಕರ್ನಾಟಕ ಸರ್ಕಾರ ಇದುವರೆಗೂ ನಿಪ್ಪಾಣಿ ತಾಲ್ಲೂಕಿನ ಭೊಜ ಗ್ರಾಮದ ೮೩ ಹೆಚ್ಚು ರೈತರ ಸಾಲ ಮನ್ನಾ ಆಗಿಲ್ಲ ಎಂದು ಉಪವಾಸ ಸತ್ಯಾಗ್ರಹ ಮಾಡಿದ ಘಟನೆ ನಡೆಯಿತು. ಹೌದು ೨೦೧೮ರಲ್ಲಿ ಬೆಳೆಸಾಲ ಮನ್ನಾ ಮಾಡಿದ ಕರ್ನಾಟಕ ಸರ್ಕಾರದ ಆಗಿನ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರ ಅಧಿಕಾರ ಅವದಿಯಲ್ಲಿ ರೈತರಬೆಳೆಸಾಲ ಮನ್ನಾಮಾಡಿದ್ದ ಸರಕಾರ ಪ್ರತಿ ರೈತರಿಗೆ ಸುಮಾರು ಒಂದು ಲಕ್ಷ ರೂಪಾಯಿಗಳವರೆಗೆ ರೈತರ ಖಾತೆಗಳಲ್ಲಿ ಜಮಾಮಾಡಲಾಗಿತ್ತು. ಆದರೆ …

Read More »

ವರದಿ ನಂತರ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕದ ನಿರ್ಧಾರ: ಸಿಎಂ

ಚಿತ್ರದುರ್ಗ, ನವೆಂಬರ್ 08: ”ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಎಂದು ಅರ್ಜಿ ಸಲ್ಲಿಕೆಯಾಗಿವೆ. ಕಂದಾಯ ಇಲಾಖೆಯಿಂದ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ್ದು, ವರದಿ ಬಂದ ನಂತರ ನಿರ್ಧರಿಸಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.   ಮಂಗಳವಾರ ಜಿಲ್ಲೆಯ ಸಾಣೇಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ”ಆಡಳಿತಾಧಿಕಾರಿ ನೇಮಿಸುವ ಪೂರ್ವ ಏನು ನಡೆದಿದೆ ಎನ್ನುವುದರ ಬಗ್ಗೆ ನ್ಯಾಯ ಸಮ್ಮತ ಪ್ರಕ್ರಿಯೆ ನಡೆಯಬೇಕಿದೆ. ಈ ಸಂಬಂಧ ಕಂದಾಯ ಇಲಾಖೆಯಿಂದ ವರದಿ ಸಲ್ಲಿಕೆಯಾದ …

Read More »

ಖಾಸಗಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರೋರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ‘ಕಂದಾಯ ಗ್ರಾಮ’ವಾಗಿ ಘೋಷಣೆ

ಬೆಂಗಳೂರು: ಖಾಸಗಿ ಜಮೀನುಗಳಲ್ಲಿ ( Private Lands ) ನೆಲೆಸಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮ, ಗ್ರಾಮದ ಭಾಗವಾಗಿ ಪರಿವರ್ತಿಸಿ, ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ( Title Deed ) ನೀಡುವಂತೆ ರಾಜ್ಯ ಸರ್ಕಾರ ( Karnataka Government ) ಆದೇಶಿಸಿದೆ. ಈ ಮೂಲಕ ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಾ, ದಾಖಲೆ ರಹಿತರಾಗಿದ್ದಂತ ಜನತೆಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಕಂದಾಯ ಇಲಾಖೆಯ ( …

Read More »

ಅನ್ಯಕೋಮಿನ ಯುವಕನ ಜತೆ ಪ್ರೀತಿ; ಮಗಳನ್ನೇ ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿದ ತಂದೆ!

ಬಳ್ಳಾರಿ: ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣದಲ್ಲಿ ನಡೆದಿದೆ. ಕುಡುತಿನಿ ಪಟ್ಟಣದ ಬುಡ್ಗ ಜಂಗಮ ಕಾಲನಿ ನಿವಾಸಿ ಓಂಕಾರಗೌಡನೇ ತನ್ನ ಮಗಳನ್ನು ಕೊಲೆ ಮಾಡಿದ ತಂದೆ. ಓಂಕಾರಗೌಡನ ಮಗಳು ಹೈಸ್ಕೂಲ್‌ನಲ್ಲಿ ಓದುತ್ತಿದ್ದಳು. ಅನ್ಯ ಕೋಮಿನ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು‌. ಈ ಬಗ್ಗೆ ಮನೆಯವರಿಗೆ ಗೊತ್ತಾಗಿತ್ತು. ಆ ಯುವಕನಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರು. ಆದರೂ ಆಕೆ ಆ ಯುವಕನೊಡನೆ ಪ್ರೀತಿ- ಒಡನಾಟ …

Read More »

ಬದುಕಿನ ಯಾನ ಮುಗಿಸಿದ ಹಿರಿಯ ನಟ

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಟಿ.ಎಸ್‌. ಲೋಹಿತಾಶ್ವ(80) ಅವರು ಮಂಗಳವಾರ ಮಧ್ಯಾಹ್ನ ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ. ಸಕ್ಕರೆ ಕಾಯಿಲೆ ಹಾಗು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರಿಗೆ ನಾಲ್ಕೈದು ತಿಂಗಳ ಹಿಂದೆ ಎರಡು ಬಾರಿ ಮೂತ್ರನಾಳದ ಸೋಂಕು ಕಾಣಿಸಿಕೊಂಡಿತ್ತು. ಈ ನಡುವೆ ಅನಾರೋಗ್ಯಕ್ಕೀಡಾದ ಅವರನ್ನು ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸಾಗರ್‌ ಆಸ್ಪತ್ರೆಗೆ ಕಳೆದ ಅ.4ರಂದು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲೇ ಅವರಿಗೆ ಹೃದಯಾಘಾತವೂ ಆಗಿತ್ತು. ಇದರಿಂದಾಗಿ ಮಿದುಳಿಗೂ ಹಾನಿಯಾಗಿತ್ತು. ನಂತರದಲ್ಲಿ ಅವರನ್ನು ಐಸಿಯುಗೆ …

Read More »

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ 44 ಜೀವರಕ್ಷಕ ಔಷಧಗಳ ಕೊರತೆ!

ಬೆಂಗಳೂರು: ರಾಜ್ಯದ ಸರ ಕಾರಿ ಆಸ್ಪತ್ರೆಗಳಲ್ಲಿ ಬರೊಬ್ಬರಿ 44 ಜೀವ ರಕ್ಷಕ ಔಷಧಗಳ ಕೊರತೆ ಉಂಟಾಗಿದೆ. ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ(ಕೆ.ಎಸ್‌.ಎಂ.ಎಸ್‌.ಸಿ.ಎಲ್) ನಿರ್ಲಕ್ಷ್ಯದಿಂದ 2020-21ನೇ ಸಾಲಿನ ಟೆಂಡರ್‌ಗಳ ಅಂತಿಮ ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿದೆ.   ರಾಜ್ಯದಲ್ಲಿರುವ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆ ನಿವಾರಣೆಗಿರುವ ಜೀವ ರಕ್ಷಕ ಔಷಧಗಳ ಕೊರತೆ ಪ್ರತಿ ವರ್ಷವೂ ಮರುಕಳಿಸುತ್ತಲೇ ಇದೆ. ಇದೀಗ 44 ಜೀವ …

Read More »

ಅರುಣಸಿಂಗ್ ಅವರನ್ನು ಅಪ್ಪಿಕೊಂಡು ಸುಮಾರು 15 ನಿಮಿಷಗಳ ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದ ಯತ್ನಾಳ

ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿ ಮಾಡಿ 15 ನಿಮಿಷ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅರುಣಸಿಂಗ್, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ರವಿಕಗಾಂತ ಪಾಟೀಲ ಸೇರಿದಂತೆ ಬಿಜೆಪಿಯ ನಾನಾ ಮುಖಂಡರು …

Read More »

ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ ಅಥಣಿ-ಕೊಟ್ಟಲಗಿ ನೂರಾರು ವಿದ್ಯಾರ್ಥಿಗಳು

ಅಥಣಿ ಉತ್ತಮ ರಸ್ತೆ ನಿರ್ಮಿಸಿ ಮತ್ತು ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಎಂದು ಆಗ್ರಹಿಸಿ ರಾಮತೀರ್ಥ ಗ್ರಾಮದ ನೂರಾರು ವಿದ್ಯಾರ್ಥಿಗಳು ಅಥಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿಯ ರಾಮತೀರ್ಥ ಕ್ರಾಸ್ ಬಳಿ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸ್ಥಳೀಯ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ರಾಮತೀರ್ಥ ಕ್ರಾಸ್ ನಿಂದ ರಾಮತೀರ್ಥ ಗ್ರಾಮಕ್ಕೆ ಬಸ್ಸು ಬರುವುದಿಲ್ಲ, ಪ್ರಯಾಣಿಕರನ್ನು ಹಾಗೆಯೇ ಕ್ರಾಸಿನಲ್ಲಿ ಇಳಿಸಿ ಹೋಗುತ್ತಾರೆ, ಕೇಳಿದರೆ ರಸ್ತೆ ಸರಿಯಿಲ್ಲ ಅದಕ್ಕೆ ಬಸ್ಸು …

Read More »

ಬ್ಯಾಂಕಾಕ್ ದೇಶದಲ್ಲಿ ಬೆಳಗಾವಿಯ ಕೀರ್ತಿಯನ್ನು ಈ ನೃತ್ಯಗಾರರು ಹೆಚ್ಚಿಸಿದ್ದಾರೆ.

ಬ್ಯಾಂಕಾಕ್ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ನೃತ್ಯ ಚಾಂಪಿಯನ್‍ಶಿಪ್ IIGF  2022ರಲ್ಲಿ ಬೆಳಗಾವಿಯ ಎಮ್ ಸ್ಟೈಲ್ ಡ್ಯಾನ್ಸ ಮತ್ತು ಜುಂಬಾ ಫಿಟ್‍ನೆಸ್ ಅಕಾಡೆಮಿ ನೃತ್ಯಗಾರರು ಒಳ್ಳೆಯ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 265 ಸ್ಪರ್ಧಿಗಳಲ್ಲಿ ಅಗ್ರ 20ನೇ ಸ್ಥಾನಕ್ಕೆ ಬೆಳಗಾವಿಯ ಎಮ್ ಸ್ಟೈಲ್ ಡ್ಯಾನ್ಸ ಮತ್ತು ಜುಂಬಾ ಫಿಟ್‍ನೆಸ್ ಅಕಾಡೆಮಿ ನೃತ್ಯಗಾರರು ಅರ್ಹತೆ ಪಡೆದಿದ್ದಾರೆ. ಅಗ್ರ 20ರ 2ನೇ ಸುತ್ತಿನಲ್ಲಿ ಬ್ಯಾಂಕಾಕ್‍ನ ಪಟ್ಟಾಯದಲ್ಲಿ ಬೆಳ್ಳಿ ಮತ್ತು …

Read More »

ಶಿರಹಟ್ಟಿಯಲ್ಲಿ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿದ ಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿದರು. ರಾಜ್ಯಾಧ್ಯಂತ ಜನ ಸಂಕಲ್ಪ ಯಾತ್ರೆ ಮೂಲಕ ಮುಂಬರುವ ಚುನಾವಣೆಗೆ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿರುವ ಬಿಜೆಪಿ ಮಂಗಳವಾರ ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಜನ ಸಂಕಲ್ಪ ಯಾತ್ರೆ ಹಮ್ಮಿಕೊಂಡಿತ್ತು. ಈ ವೇಳೆ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದರು.

Read More »