ಬೆಂಗಳೂರು: ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿದೆ. ಆದರೆ, ಕಾಮುಕ ವೈದ್ಯನೊಬ್ಬ ಚಿಕಿತ್ಸೆಗೆ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಉಬೇದುಲ್ಲಾ ಎಂಬ ವೈದ್ಯ ಆಸ್ಪತ್ರೆಗೆ ಬರುವ ಹೆಣ್ಣು ಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಹೀಗೆ ಚಿಕಿತ್ಸೆಗೆಂದು ತನ್ನ ಅಜ್ಜಿಯ ಜೊತೆ ಬಂದ 19 ವರ್ಷದ ಯುವತಿಗೆ ಈ ಕೀಚಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಹೊಟ್ಟೆ ನೋವು ಎಂದು …
Read More »ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಯೋಧ ಹೃದಯಾಘಾತದಿಂದ ಸಾವು
ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಯೋಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಡಕುಂದ್ರಿ ಗ್ರಾಮದ 42 ವರ್ಷದ ಶಿವಾನಂದ ಬಾಬು ಸಿರಗಾಂವಿ ಮೃತ ಯೋಧ. ಶ್ರೀನಗರದ 55 ಆರ್ಆರ್ ಬಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಬಾಬು ಸಿರಗಾಂವಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತ ಯೋಧನಿಗೆ ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು. ಬಡಕುಂದ್ರಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಶುಕ್ರವಾರ …
Read More »ಸಾವಿನಲ್ಲೂ ಸಾರ್ಥಕತೆ: ಇಬ್ಬರು ಅಂಧರ ಬಾಳಿಗೆ ಬೆಳಕಾದ ರುದ್ರಮ್ಮ ಹೊಂಗಲ್
ಬೈಲಹೊಂಗಲ ತಾಲೂಕಿನ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಹಿರಿಯ ಜೀವಿ ರುದ್ರಮ್ಮ ಬಸವಣೆಪ್ಪ ಹೊಂಗಲ(ಕುದರಿ) ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಒಕ್ಕುಂದ ಗ್ರಾಮದ 93 ವರ್ಷದ ರುದ್ರಮ್ಮ ಹೊಂಗಲ ಅವರು ವಯೋಸಹಜ ಕಾಯಿಲೆಯಿಂದ ಮಂಗಳವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬಳಿಕ ಅವರ ಕುಟುಂಬಸ್ಥರ ನಿರ್ಧಾರದಂತೆ ಬೆಳಗಾವಿ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಭಂಡಾರಕ್ಕೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ನೇತ್ರಗಳನ್ನು ದಾನ …
Read More »ಅಕ್ಟೋಬರ್ 10 ರಂದು ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಕಾಡಸಿದ್ದೇಶ್ವರ ಮಠದಲ್ಲಿ ದೇಶೀಯ ತಳಿಗಳ ಗೋವು ಪ್ರದರ್ಶನ
ಅಕ್ಟೋಬರ್ 10 ರಂದು ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಕಾಡಸಿದ್ದೇಶ್ವರ ಮಠದಲ್ಲಿ ದೇಶೀಯ ತಳಿಗಳ ಗೋವು ಪ್ರದರ್ಶನ,ಮತ್ತು ಶ್ವಾನ ಪಾಲನಾ ಮತ್ತು ಚಿಕಿತ್ಸಾ ಕೇಂದ್ರದ ಉದ್ಘಾಟನೆ ನಡೆಲಿದೆ. ಹೌದು. ಇಂತಹ ವಿಶೇಷ ವಾದ ಪ್ರಯತ್ನ ನಡೆತ್ತಿರುವುದು ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಕಾಡಸಿದ್ದೇಶ್ವರ ಮಠದಲ್ಲಿಿಿ ಇದೇ ತಿಂಗಳು ಅಕ್ಟೋಬರ್ 10 ರಂದು ಜರುಗಲಿರುವ ನಮ್ಮ ದೇಶದ ಎಲ್ಲಾ ದೇಶೀಯ ತಳಿಗಳ ಗೋವು ಪ್ರದರ್ಶನ, ಶ್ವಾನ ಪಾಲನಾ ಮತ್ತು ಚಿಕಿತ್ಸಾ ಕೇಂದ್ರ ಮತ್ತು ಬೀದಿನಾಯಿಗಳಿಗೆ …
Read More »ಟನ್ ಕಬ್ಬಿಗೆ 2800 ರೂ. ದರ
ಕಾಗವಾಡ: ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 2800 ರೂ. ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೆಂಪವಾಡದ ಅಥಣಿ ಶುಗರ್ಸ್ ಲಿ., ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಹಾಗೂ ಶಾಸಕ ಶ್ರೀಮಂತ ಪಾಟೀಲ ಘೋಷಣೆ ಮಾಡಿದರು. ಬುಧವಾರ ಅಥಣಿ ಶುಗರ್ಸ್ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಅವರು ಮಾತನಾಡಿದರು. 2022-23ನೇ ಸಾಲಿನ ಹಂಗಾಮಿನಲ್ಲಿ ನಮ್ಮ ಕಾರ್ಖಾನೆ 20 ಲಕ್ಷ ಟನ್ ಕಬ್ಬು …
Read More »ಸದ್ಯದಲ್ಲೇ ‘ಬಸ್ ಯಾತ್ರೆ’ಗೆ ದಿನಾಂಕ ನಿಗದಿ: ಮಂಡ್ಯದಲ್ಲಿ ಸಿದ್ದರಾಮಯ್ಯ ಘೋಷಣೆ
ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಬಹು ನಿರೀಕ್ಷಿತ ಬಸ್ ಯಾತ್ರೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಡ್ಯದಲ್ಲಿ ಈ ವಿಚಾರ ತಿಳಿಸಿದ್ದಾರೆ. ರಥಯಾತ್ರೆಯನ್ನು ಈ ಹಿಂದೆ ಅಕ್ಟೋಬರ್ ಅಥವಾ ನವೆಂಬರ್ ಮಾಸಾಂತ್ಯದಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಕೆಲ ಕಾರಣಗಳಿಂದ ದಿನಾಂಕ ನಿಗದಿಗೊಳಿಸಲು ವಿಳಂಬವಾಗಿದೆ. ಬಸ್ ಯಾತ್ರೆ ಕುರಿತು ಪೂರ್ವಭಾವಿ ಸಭೆ ಈ ತಿಂಗಳು ಕೊನೆಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ರಾಜ್ಯದ …
Read More »ಸಹೋದರಿಯ ಗಂಡನನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಸಹೋದರರು
ಕಲಬುರಗಿ: ನಗರದ ಸಂತೋಷ್ ಕಾಲೊನಿಯಲ್ಲಿ ವಿಜಯದಶಮಿ ಹಬ್ಬದಂದು ಸಂಜೆ ಬನ್ನಿ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿಯೇ ಅಣ್ಣ ತಮ್ಮಂದಿರು, ಸಹೋದರಿಯ ಗಂಡನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸಂತೋಷ್ ಕಾಲೊನಿಯ ಲಕ್ಷ್ಮೀ ಕಾಂತ್ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ದಸರಾ ಹಬ್ಬದ ಅಂಗವಾಗಿ ಬನ್ನಿ ಬಂಗಾರ ಕೊಡಲು ಮನೆಗೆ ಬಂದ ಹೆಂಡತಿಯ ಸಹೋದರರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಶಿವಕಾಂತ್, ಪ್ರಶಾಂತ್ ಎಂಬುವವರು ಈ ಕೊಲೆ ಮಾಡಿದ್ದು, ಕೊಲೆಯಾದ ಲಕ್ಷ್ಮಿಪುತ್ರನ …
Read More »ಅಕ್ಟೋಬರ್ 28 ರಂದು ವಿನೂತನ ಕೋಟಿ ಕಂಠ ಗಾಯನ: ಸಚಿವ ಸುನಿಲ್ ಕುಮಾರ್
ಬೆಂಗಳೂರು: ರಾಜ್ಯದ ಸಾಂಸ್ಕೃತಿಕ ಲೋಕದಲ್ಲೇ ವಿನೂತನವಾದ ಕೋಟಿ ಕಂಠ ಗಾಯನ ಎಂಬ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದು ಅಕ್ಟೋಬರ್ 28ರಂದು ನಾಡಿನಾದ್ಯಂತ ಏಕಕಾಲದಲ್ಲಿ ಕನ್ನಡದ ಕವಿಗಳ ಜನಪ್ರಿಯ ಗೀತೆಗಳನ್ನು ಕೋಟಿ ಕಂಠಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ಕಳೆದ ವರ್ಷ ‘ಮಾತಾಡ್ ಮಾತಾಡ್ ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ‘ಲಕ್ಷಕಂಠ ಗಾಯನ’ಕ್ಕೆ ಈಗಾಗಲೇ ನಾಡಿನಾದ್ಯಂತ …
Read More »ಲೋಕಾರ್ಪಣೆಗೊಂಡು ವಾರದ ಒಳಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಾನಿ
ಗಾಂಧಿನಗರ : ಸೆಪ್ಟೆಂಬರ್ 30 ರಂದು ಲೋಕಾರ್ಪಣೆ ಗೊಳಿಸಲಾಗಿದ್ದ ಮುಂಬಯಿ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ರೋಡ್ ವಕ್ತಾರರ ಪ್ರಕಾರ, ಗೈರತ್ಪುರ ಮತ್ತು ವತ್ವಾ ನಿಲ್ದಾಣಗಳ ನಡುವೆ ಗುರುವಾರ ಬೆಳಗ್ಗೆ 11.20ರ ಸುಮಾರಿಗೆ ಈ ಘಟನೆ ನಡೆದಿದೆ. ಎಮ್ಮೆಗಳ ಹಿಂಡು ಢಿಕ್ಕಿಯಾದ ನಂತರ, ಇಂಜಿನ್ ನ ಮುಂಭಾಗಕ್ಕೆ ಹಾನಿಯಾಗಿದೆ. “ಮೂರರಿಂದ ನಾಲ್ಕು ಎಮ್ಮೆಗಳು ಮುಂಬಯಿ -ಗಾಂಧಿನಗರದ ವಂದೇ ಭಾರತ್ ದಾರಿಯಲ್ಲಿ ಇದ್ದಕ್ಕಿದ್ದಂತೆ …
Read More »ಹಳೆ ದ್ವೇಷದ ಹಿನ್ನೆಲೆಇಬ್ಬರು ಯುವಕರ ಕೊಲೆ
ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ ಎದುರು ಗುರುವಾರ ರಾತ್ರಿ ಹಳೆಯ ದ್ವೇಷ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸುಳೇಭಾವಿ ಗ್ರಾಮದ ರಣಧೀರ ಮಹೇಶ ಅಲಿಯಾಸ್ ರಾಮಚಂದ್ರ ಮುರಾರಿ(26) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿ ಪಾಟೀಲ(24) ಎಂಬ ಯುವಕರನ್ನು ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಕೊಲೆ ಮಾಡಲಾಗಿದೆ. ಶಿವಾಜಿಮಹಾರಾಜರ ಪ್ರತಿಮೆ ಎದುರು ಕೊಲೆ ಮಾಡಲಾಗಿದೆ. ಕೊಲೆ …
Read More »