ಬೆಂಗಳೂರು: ಲೋಕಾಯುಕ್ತದ ಖಾಲಿ ಹುದ್ದೆಗಳ ಭರ್ತಿ ಜತೆಯಲ್ಲೇ ಸಂಸ್ಥೆಗೆ ಹೆಚ್ಚಿನ ಬಲ ತುಂಬಲು ಹೊಸ ಹುದ್ದೆಗಳನ್ನು ಸೃಜಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ. ಈ ಸಂಬಂಧ ಪ್ರಸ್ತಾವ ಸಲ್ಲಿಸಲು ಡಿಪಿಎಆರ್ ಅಧಿಕಾರಿಗಳು ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಪ್ರಸ್ತಾವ ಸಲ್ಲಿಸಲು ಡಿಪಿಎಆರ್ ಅಧಿಕಾರಿಗಳು ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ. ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಅಡಿ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲು ನೀಡಿದ್ದ ಅಧಿಕಾರವನ್ನು 2016ರಲ್ಲಿ ಹಿಂಪಡೆಯಲಾಗಿತ್ತು. ಆ …
Read More »ಎಸ್‌ಸಿ-ಎಸ್‌ಟಿ ಮೀಸಲಾತಿ; ಬಿಜೆಪಿ ತಪ್ಪು ದಾರಿಗೆಳೆಯುತ್ತಿದೆ: ಸಿದ್ದರಾಮಯ್ಯ
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ, ಈ ಹೆಚ್ಚಳದ ಅನುಷ್ಠಾನದ ಪ್ರಕ್ರಿಯೆ ಬಗ್ಗೆ ವಿವರ ನೀಡದೆ ಮೌನವಾಗಿದ್ದುಕೊಂಡು ಎಸ್‌ಸಿ-ಎಸ್‌ಟಿ ಸಮುದಾಯವನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಆರೋಪಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರ ನೇಮಿಸಿದ್ದ ನ್ಯಾ. ನಾಗಮೋಹನ್ ದಾಸ್ ಸಮಿತಿಯ ಶಿಫಾರಸಿನಂತೆ ಎಸ್‌ಸಿ-ಎಸ್‌ಟಿ ಮೀಸಲಾತಿ …
Read More »ಬಿ.ಎಲ್.ಸಂತೋಷ ಕಾರ್ಯಕ್ರಮ “ಅಚ್ಚ ಕನ್ನಡಮಯ”!ವೇದಿಕೆಯ ಬ್ಯಾನರ್ ನಲ್ಲಿ ಕೇವಲ ಕನ್ನಡ! ಬೆಳಗಾವಿ ಬಿಜೆಪಿಗೆ ಒಂದು ಪಾಠ!
ಬಿ.ಎಲ್.ಸಂತೋಷ ಕಾರ್ಯಕ್ರಮ“ಅಚ್ಚ ಕನ್ನಡಮಯ”!ವೇದಿಕೆಯಬ್ಯಾನರ್ ನಲ್ಲಿ ಕೇವಲ ಕನ್ನಡ! ಬೆಳಗಾವಿ ಬಿಜೆಪಿಗೆ ಒಂದು ಪಾಠ! ಇಂದು ಸೋಮವಾರ ಬೆಳಗಾವಿಯಹೊರವಲಯದಲ್ಲಿರುವ ಸುರೇಶಅಂಗಡಿ ಮಹಾವಿದ್ಯಾಲಯದಲ್ಲಿಬಿಜೆಪಿರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಶ್ರೀ ಬಿ.ಎಲ್.ಸಂತೋಷ ಅವರ ಕಾರ್ಯಕ್ರಮ ಸಂಪೂರ್ಣ ಕನ್ನಡಮಯ.ಪ್ರಾದೇಶಿಕ ಭಾಷೆಗಳ ಬಗ್ಗೆಯಾವಾಗಲೂ ಒತ್ತು ಕೊಡುತ್ತಲೇಬಂದಿರುವ ಶ್ರೀ ಸಂತೋಷಅವರಕಾರ್ಯಕ್ರಮದ ವೇದಿಕೆಯ ಬ್ಯಾನರ್ ದಲ್ಲಿಕೇವಲ ಕನ್ನಡಕ್ಕೆ ಮಾತ್ರ ಸ್ಥಾನ ಸಿಕ್ಕಿತ್ತು.ಅಲ್ಲದೇ ಅವರುಕನ್ನಡದಲ್ಲಿಯೇಮಾತನಾಡಿದರು. ಬೆಳಗಾವಿ ಮತ್ತು ಚಿಕ್ಕೋಡಿಲೋಕಸಭೆ ಮತಕ್ಷೇತ್ರಗಳ ನೂರಾರುಪ್ರಮುಖರು ಭಾಗವಹಿಸಿದ್ದ ಈ ಸಭೆಯುಸಂಪೂರ್ಣ ಕನ್ನಡಮಯವಾಗಿತ್ತು.ಬೆಳಗಾವಿಯ ಬಿಜೆಪಿ ಯನೂರಾರು ಕಾರ್ಯಕ್ರಮಗಳಲ್ಲಿಮೊದಲು …
Read More »ಬೆಳಗಾವಿ: ಬೈಕ್ ಪಕ್ಕಕ್ಕೆ ಸರಿಸಲಿಲ್ಲ ಎಂಬ ಕಾರಣಕ್ಕೆ ಗುಂಪು ಘರ್ಷಣೆ
ರಾಮದುರ್ಗ (ಬೆಳಗಾವಿ): ಬೈಕ್ ಪಕ್ಕಕ್ಕೆ ಸರಿಸಲಿಲ್ಲ ಎಂಬ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಪಟ್ಟಣದಲ್ಲಿ ಘರ್ಷಣೆ ಸಂಭವಿಸಿದ್ದು, ಯುವಕರಿಬ್ಬರ ಮೇಲೆ ಚಾಕು ಹಾಗೂ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಲಾಗಿದೆ. ರಾಮದುರ್ಗದ ಗೋಪಾಲ ಬಂಡಿವಡ್ಡರ ಅವರಿಗೆ ಚಾಕು ಇರಿಯಲಾಗಿದ್ದು, ರವಿ ಬಂಡಿವಡ್ಡರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆಯಲಾಗಿದೆ. ಇಬ್ಬರನ್ನೂ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗಳ ಬಿಡಿಸಲು ಬಂದ ನಂಜುಂಡಿ ಸಾಬಣ್ಣ ಬಂಡಿವಡ್ಡರ ಎಂಬುವವರ ಮರ್ಮಾಂಗಕ್ಕೆ ಪೆಟ್ಟು ಬಿದ್ದಿದೆ. ‘ರಾಮದುರ್ಗದ ಭಾಗ್ಯ ನಗರ …
Read More »ಹಿಮಪಾತದಲ್ಲಿ ಮೃತಪಟ್ಟ ಇಬ್ಬರ ಮೃತದೇಹ ತರಿಸಲು ಸರ್ಕಾರದಿಂದ ವ್ಯವಸ್ಥೆ: ಸಚಿವ ಅಶೋಕ್
ಬೆಂಗಳೂರು: ಉತ್ತರಾಖಂಡದಲ್ಲಿ ಹಿಮಪಾತವಾಗಿ ಬಹಳಷ್ಟು ಜನ ಅಸುನೀಗಿದ್ದಾರೆ. ಅದರಲ್ಲಿ ಕರ್ನಾಟಕದ ವಿಕ್ರಮ್, ರಕ್ಷಿತ್ ಇಬ್ಬರು ಸಹ ಮೃತಪಟ್ಟಿದ್ದಾರೆ. ಅವರ ಮೃತದೇಹಗಳನ್ನು ಸರ್ಕಾರದ ವೆಚ್ಚದಲ್ಲಿ ರಾಜ್ಯಕ್ಕೆ ತರಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರಾಖಂಡದಲ್ಲಿ ನೆಹರು ಇನ್ಸಿಟ್ಯೂಟ್ ಆಫ್ ಮೌಂಟೇನಿಯರಿಂಗ್ (NIM) ನಲ್ಲಿ ಅಡ್ವಾನ್ಸ್ ಮೌಂಟೇನಿಯರಿಂಗ್ ಕೋರ್ಸ್ ಬ್ಯಾಚ್-217, ಸೆಪ್ಟೆಂಬರ್ 21 ರಿಂದ ಪ್ರಾರಂಭವಾಗಿತ್ತು. ಅಕ್ಟೋಬರ್ 4 ರಂದು ತರಬೇತಿ ವೇಳಾಪಟ್ಟಿಯಂತೆ, …
Read More »ಎಸಿಬಿ ರದ್ದುಗೊಳಿಸಿದ ಹೈಕೋರ್ಟ್ ಆದೇಶ ವಿರುದ್ಧದ ಅರ್ಜಿ ನಿರಾಕರಿಸಿದ ಸುಪ್ರೀಂ ಕೋರ್ಟ್
ನವದೆಹಲಿ/ಬೆಂಗಳೂರು: ಖಾಸಗಿ ವ್ಯಕ್ತಿಯೊಬ್ಬರು ಎಸಿಬಿ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಹ ಮೊದಲು ಒಪ್ಪಿಗೆ ಸೂಚಿಸಿತ್ತು. ಆದ್ರೆ ವಿಚಾರಣೆ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದೆ. 2016ರಲ್ಲಿ ಸ್ಥಾಪಿಸಲಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯನ್ನು ರದ್ದುಗೊಳಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಕನಕರಾಜು ಎಂಬುವರು …
Read More »ಬಿಜೆಪಿಯಿಂದ ರಾಜ್ಯ ಪ್ರವಾಸ: ಜನಸಂಕಲ್ಪ ಯಾತ್ರೆಗೆ ನಾಳೆ ರಾಯಚೂರಿನಲ್ಲಿ ಚಾಲನೆ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಕೇಸರಿ ಅಲೆ ಎಬ್ಬಿಸಲು ಬಿಜೆಪಿ ಮುಂದಾಗಿದ್ದು, ಜನಸಂಕಲ್ಪ ಯಾತ್ರೆಯನ್ನು ಆರಂಭಿಸುತ್ತಿದೆ. ನಾಳೆ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಆರಂಭಗೊಳ್ಳಲಿದೆ. ನಾಳಿನ ಯಾತ್ರೆಯ ಆರಂಭದಲ್ಲಿ 50 ಸಾವಿರ ಜನ ಸೇರಲಿದ್ದು, ರಾಜ್ಯದಲ್ಲಿ ಎಲ್ಲರ ಗಮನ ಸೆಳೆಯುವ ಯಾತ್ರೆ ಇದಾಗಲಿದೆ. …
Read More »ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿ ಜಿಲ್ಲಾಡಳಿತ ಸಜ್ಜು: ಡಿಸಿ ನಿತೀಶ್ ಪಾಟೀಲ
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳು ಸಾಧಾರಣವಾಗಿ ರಾಜ್ಯೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ ವ್ಯವಸ್ಥಿತವಾಗಿ, ಅದ್ಧೂರಿಯಾಗಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು. ಜಿಲ್ಲೆಯಲ್ಲಿ ಈ ಬಾರಿ ಸ್ವಾತಂತ್ರೊö್ಯÃತ್ಸವ ದಿನಾಚರಣೆಗಿಂತಲೂ ರಾಜ್ಯೋತ್ಸವ ಅದ್ಧೂರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಅವರು ತಿಳಿಸಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ (ಅ.10) ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವ್ಯವಸ್ಥಿತ ಪರೇಡ್ …
Read More »ಮುಸ್ಲಿಮರನ್ನು 2ಎ ಮೀಸಲಾತಿಯಿಂದ ತೆಗೆದುಹಾಕಲು ಸರಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಸಿದೆ: ಯತ್ನಾಳ್
ಮುಸ್ಲಿಮರನ್ನು 2ಎ ಮೀಸಲಾತಿಯಿಂದ ತೆಗೆದುಹಾಕಲು ಸರಕಾರದ ಮಟ್ಟದಲ್ಲಿ ಗಂಭೀರ ಚಿಂತನೆಯನ್ನು ನಡೆಸಿದೆ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ್‌ರವರು, ಮುಸ್ಲಿಮgನ್ನು 2ಎ ಮೀಸಲಾತಿ ತೆಗೆದು ಹಾಕಬೇಕು. ಅಲ್ಪ ಸಂಖ್ಯಾತ ಹಾಗೂ 2ಎ ಎರಡೆರೆಡು ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ. ಈಗಾಗಲೇ ಮುಸ್ಲಿಮ್‌ರನ್ನು 2ಎ ಮೀಸಲಾತಿಯಿಂದ ತೆಗೆದುಹಾಕಲು ತಯಾರಿ ನಡೆದಿz.ೆ ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ, ಸರ್ಕಾರ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿವೆ. ನಾವು ಕೂಡ …
Read More »ಮತಾಂತರ ನಿಷೇಧ ಮಾಡದಿದ್ದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣವಾಗುತ್ತಿದ್ದವು: ಕಾಡಸಿದ್ದೇಶ್ವರ ಸ್ವಾಮೀಜಿ
ಬೆಳಗಾವಿ: ನಮ್ಮ ಪುಣ್ಯಕ್ಕೆ ಬೊಮ್ಮಾಯಿ ಸರ್ಕಾರ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದೆ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣ ಆಗುತ್ತಿದ್ದವು. ನಾವು ಬೇರೆಯವರನ್ನು ದೂಷಿಸಲ್ಲ. ನಾವೇ ಎಡವಿದ್ದೇವೆ. ಬಿಟ್ಟು ಹೋದವರನ್ನು ವಾಪಸ್ ಕರೆದುಕೊಂಡು ಬಂದು ಅಣ್ಣ ತಮ್ಮಂದಿರಂತೆ ಇರೋಣ ಎಂದು ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಕೊಲ್ಲಾಪುರದ ಕನ್ನೇರಿ ಮಠದಲ್ಲಿ ನಡೆಯುತ್ತಿರುವ ಸಂತ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಇದು ಸ್ವಾಮೀಜಿಗಳು ಹಾಗೂ ಭಕ್ತರ ಸಮಾವೇಶ. ಸುಮಾರು 400 …
Read More »