Breaking News

ದ್ರಾಕ್ಷಿ ಬೆಳೆ ಬೆಂಬಿಡದ ರೋಗ ಕಾಟ

ಕೋಹಳ್ಳಿ: ಕಳೆದ ಮೂರ್‍ನಾಲ್ಕು ದಿನಗಳಿಂದ ದಿನಗಳಿಂದ ಸುರಿಯುತ್ತಿರುವ ಮಳೆ, ಮೋಡ ಕವಿದ ವಾತಾವರಣ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದ್ರಾಕ್ಷಿ ಬೆಳೆಗೆ ಡೌನಿ ಮಿಲ್ಡಿವ್‌ (ಭೂಜು ತುಪ್ಪಟ) ರೋಗ ತಗುಲಿ ಬೆಳೆ ನಾಶವಾಗುತ್ತಿದೆ.   ಅಥಣಿ ತಾಲೂಕಿನ ಸುಮಾರು 4 ಸಾವಿರ ಹೆಕ್ಟರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ತಾಲೂಕಿನ ಪೂರ್ವ ಹಾಗೂ ಉತ್ತರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಶೇ.70 …

Read More »

ಬೆಳಗಾವಿ: ವಡಗಾವ್‌ನಲ್ಲಿ ಪ್ರತಿದಿನ 2 ಗಂಟೆ ಟಿವಿ, ಮೊಬೈಲ್‌ ಬಂದ್‌!

ಬೆಳಗಾವಿ: ಕೊರೊನಾ ನೆಪದಲ್ಲಿ ಮೊಬೈಲ್‌ ದಾಸರಾಗಿದ್ದ ಜನರನ್ನು ವಿಶೇಷವಾಗಿ ಮಕ್ಕಳನ್ನು ಅದರಿಂದ ಹೊರತರುವಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾವ್‌ ತಾಲೂಕಿನ ಮೋಹಿತೆ ವಡಗಾವ್‌ ಗ್ರಾಮದ ಮುಖಂಡರು ಯಶಸ್ವಿಯಾಗಿದ್ದಾರೆ. ಒಂದೇ ತಿಂಗಳ ಅವಧಿಯಲ್ಲಿ ಮಾಡಿದ ಗ್ರಾಮದ ಈ ಯಶೋಗಾಥೆ ಈಗ ಇಡೀ ದೇಶದ ತುಂಬಾ ಸದ್ದು ಮಾಡುತ್ತಿದೆ.   ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರು ಗ್ರಾಮಸ್ಥರ ಸಹಕಾರದಿಂದ ತೆಗೆದುಕೊಂಡ ಈ ನಿರ್ಣಯ ಮಕ್ಕಳ ಜೀವನ ಚಿತ್ರಣವನ್ನೇ ಬದಲಾಯಿಸಿದೆ. ಮೋಹಿತೆ ವಡಗಾವ್‌ನ ಜನಸಂಖ್ಯೆ ಕೇವಲ …

Read More »

ಬೆಳ್ಳಂಬೆಳಗ್ಗೆ ಬಾಲಕಿಗೆ ಆಟೋ ಚಾಲಕನಿಂದ ಕಿರುಕುಳ.. ಸಿಸಿಟಿವಿಯಲ್ಲಿ ಸೆರೆಯಾಯ್ತು ಡ್ರೈವರ್​ನ ಕೃತ್ಯ, ಬಂಧನ

ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಆಟೋ ಚಾಲಕನೊಬ್ಬ ಬಾಲಕಿಗೆ ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಆಟೋ ಚಾಲಕ ಬಾಲಕಿಯನ್ನು ಬಲವಂತವಾಗಿ ಆಟೋದೊಳಗೆ ಎಳೆಯಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲ ಚಾಲಕ ಬಾಲಕಿಯ ಕೈ ಹಿಡಿದು ಆಟೋವನ್ನು ಚಲಾಯಿಸಿಕೊಂಡು ಸ್ವಲ್ಪ ದೂರದವರೆಗೆ ಎಳೆದೊಯ್ದಿದ್ದಾನೆ. ಬಳಿಕ ಬಾಲಕಿ ನೆಲಕ್ಕೆ ಉರುಳಿಬಿದ್ದಿದ್ದಾಳೆ. ಕೂಡಲೇ ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆಟೋ ಚಾಲಕನ ಕೃತ್ಯ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆ ಆಗಿದೆ. ಸ್ಥಳೀಯ …

Read More »

ವಿಜಯಪುರ ಮಹಾನಗರ ‌ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿ ಶಾಸಕರು ಮಹತ್ವದ ಸಭೆ

ವಿಜಯಪುರ ಮಹಾನಗರ ‌ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿ ಶಾಸಕರು ಮಹತ್ವದ ಸಭೆ ನಡೆಸಿದರು. ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್. ಪಾಟೀಲ ಕೂಚಬಾಳ್ ನೇತೃತ್ವದಲ್ಲಿ ಸಭೆ ನಡೆಯಿತು. ಇನ್ನು ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಪಿ. ರಾಜೀವ ಮಹತ್ವದ ಸಭೆ ನಡೆಸಿ ನಾಯಕರ ಅಭಿಪ್ರಾಯ ಸಂಗ್ರಹಿಸಿದರು. ಅಲ್ಲದೇ, ಪಕ್ಷದ ಪದಾಧಿಕಾರಿಗಳು ಹಾಗೂ ಕೆಲವೇ ಕೆಲವು ಮುಖಂಡರು ಮಾತ್ರ ಭಾಗವಹಿಸಿದರು.

Read More »

ಬಸವರಾಜ್ ಬೊಮ್ಮಾಯಿಯವರಿಗೆ ಕಪ್ಪು ಬಾವುಟ ಪ್ರದರ್ಶನ ಡಿಎಸ್‌ಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ

ಖಾಸಗಿ ಕಾರ್ಯಕ್ರಮವೊಂದಕ್ಕೆ ಬೆಳಗಾವಿ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ಡಿಎಸ್‌ಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೌದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಬೈಲಹೊಂಗಲ ಡಿವೈಎಸ್‌ಪಿ ಶಿವಾನಂದ ಕಟಗಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಎಸ್‌ಎಸ್ ಕಾರ್ಯಕರ್ತರು ಸಿಎಂರವರಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದರು. ಈ ವೇಳೆ ಮುಂಜಾಗೃತಾ ಕ್ರಮವಾಗಿ ಡಿಎಸ್‌ಎಸ್ …

Read More »

ಪಿಎಸ್‌ಐ ಪರೀಕ್ಷೆ ಅಕ್ರಮ : ಧಾರವಾಡ ದಲ್ಲಿ ಮತ್ತೋರ್ವನ ಬಂಧನ

ಧಾರವಾಡ : ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಪರೀಕ್ಷೆ ಬರೆದ ಅಭ್ಯರ್ಥಿ ಶ್ರೀಮಂತ ಸಾತಾಪುರ ಎಂಬಾತನನ್ನು ಪೊಲೀಸರು ಬಂಧಿಸಿ, ಅ.17 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಮೊಬೈಲ್ ಕರೆ ಮಾಹಿತಿ ಮೇಲೆ ಅಭ್ಯರ್ಥಿಯನ್ನು ವಶಕ್ಕೆ ಪಡೆದಿದ್ದ ಸಿಐಡಿ ಅಧಿಕಾರಿಗಳು ಮೊಬೈಲ್ ಗೆ ಕರೆ ಮಾಡಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ಎಂಬುದು ಖಚಿತವಾಗಿತ್ತು. ಆದ್ದರಿಂದ ಈ ಕುರಿತು ಉಪನಗರ ಠಾಣೆಯಲ್ಲಿ ಸಿಐಡಿಯಿಂದ ಪ್ರಕರಣ ದಾಖಲು ಆಗಿದ್ದು, ಧಾರವಾಡದ 2ನೇ ಪ್ರಧಾನ …

Read More »

ದೂಧ್ ಸಾಗರ್ ಪ್ರವಾಸೋದ್ಯಮ ಆರಂಭ ; ಹೆಚ್ಚಿನ ಸಂಖ್ಯೆಯ ಪ್ರವಾಸಿಗರ ಆಗಮನ

ಪಣಜಿ: ಗೋವಾದ ಜಗತ್ಪ್ರಸಿದ್ಧ ದೂಧ್ ಸಾಗರ್ ಪ್ರವಾಸೋದ್ಯಮ ಸೋಮವಾರದಿಂದ ಆರಂಭಗೊಂಡಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಸದ್ಯ ಪ್ರತಿದಿನ 150 ಕ್ಕೂ ಜೀಪ್‍ಗಳ ಮೂಲಕ ಪ್ರವಾಸಿಗರು ಜಲಪಾತ ವೀಕ್ಷಣೆಗೆ ತೆರಳುತ್ತಿದ್ದಾರೆ.   ಗೋವಾದ ದೂಧ್ ಸಾಗರ್ ಜಲಪಾತವು ದೇಶ ವಿದೇಶದ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ದೂಧಸಾಗರ ಜಲಪಾತ ವೀಕ್ಷಣೆಗೆರ ಗೋವಾದ ಕುಳೆ ಮೂಲಕ ಹೆಚ್ಚಿನ ಮಳೆಯಾಗುವ ಸಂದರ್ಭದಲ್ಲಿ ತೆರಳಲು ಅಸಾಧ್ಯವಾಗಿದೆ. ಇದೀಗ ಮಳೆ ಕಡಿಮೆಯಾಗಿರುವುದರಿಂದ ಜಲಪಾತ ವೀಕ್ಷಣೆಗೆ ತೆರಳಲು ಸಾಧ್ಯವಾಗಿದೆ. …

Read More »

ಸಂತೋಷ್ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ ಈ ಶನಿವಾರ ಸಲಾಹಳ್ಳಿ ಗ್ರಾಮದ ಬೀರೇಶ್ವರ ದೇವಸ್ಥಾನದಲ್ಲಿ

ಸಾಲಹಳ್ಳಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಬೀರಪ್ಪ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.   ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ …

Read More »

ಏಕಾಏಕಿ ಕ್ಯಾನ್ಸಲ್ ಆದ ಬೆಳಗಾವಿ-ತಿರುಪತಿ ವಿಮಾನ : ಪ್ರಯಾಣಿಕರ ಆಕ್ರೋಶ

ಬೆಳಗಾವಿ : ಬೆಳಗಾವಿ-ತಿರುಪತಿ ವಿಮಾನ ಏಕಾಏಕಿ ಕ್ಯಾನ್ಸಲ್ ಆದ ಪರಿಣಾಮ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ ಘಟನೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಇಂದು‌ ಸಂಜೆ 5:55ಕ್ಕೆ ಬೆಳಗಾವಿಯಿಂದ ತಿರುಪತಿಗೆ ಹೊರಡಬೇಕಿದ್ದ ಸ್ಟಾರ್ ಏರ್ಲೈನ್ಸ್ ಒಡೆತನದ ವಿಮಾನ ಏಕಾಏಕಿ ಕ್ಯಾನ್ಸಲ್ ಆಗಿದೆ. ಏರ್ಲೈನ್ಸ್ ಸಂಸ್ಥೆ ವಿರುದ್ಧ ಮೂವತ್ತಕ್ಕೂ ಅಧಿಕ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದು, ನಿಲ್ದಾಣದಲ್ಲಿರುವಕೌಂಟರ್ ನಲ್ಲಿ ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವ ಕಾರಣಕ್ಕೆ ಏಕಾಏಕಿ ವಿಮಾನ …

Read More »

ಚುನಾವಣಾ ಬಾಂಡ್‌ಗಳು ಪಾರದರ್ಶಕ ವಿಧಾನ: ಕೇಂದ್ರ ಸರ್ಕಾರ

ನವದೆಹಲಿ: ಚುನಾವಣಾ ಬಾಂಡ್‌ಗಳು ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹಕ್ಕೆ ಪಾರದರ್ಶಕ ವಿಧಾನವಾಗಿದೆ. ಇದರ ಮೂಲಕ ಕಪ್ಪು ಹಣ ಅಥವಾ ಲೆಕ್ಕವಿಲ್ಲದ ಹಣ ಪಡೆಯುವುದು ಅಸಾಧ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಕೇಂದ್ರ ಸರ್ಕಾರ ಹೇಳಿದೆ.   ನಿಧಿ ಸಂಗ್ರಹದಲ್ಲಿ ಪಾರದರ್ಶಕತೆ ತರಲು ರಾಜಕೀಯ ಪಕ್ಷಗಳು ದೇಣಿಗೆ ರೂಪದಲ್ಲಿ ನಗದು ಸ್ವೀಕರಿಸುವ ಬದಲಾಗಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆರೋಪಿಸುವ ವಾದದಲ್ಲಿ ಅರ್ಥವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. …

Read More »