Breaking News

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ: ಫೋನ್‌ ಸಂಭಾಷಣೆಯ ಆಡಿಯೊ ವೈರಲ್‌

ಚಿತ್ರದುರ್ಗ: ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾಶ್ರೀ ಬಂಧನಕ್ಕೆ ಒಳಗಾಗಿರುವುದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ ರಾಣಿ ಸತೀಶ್‌ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ ನಡುವೆ ನಡೆದ ಫೋನ್‌ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.   ಸುಮಾರು 12 ನಿಮಿಷದ ಮಾತುಕತೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆಕ್ರೋಶ, ಯಡಿಯೂರಪ್ಪ …

Read More »

ಹಿಂಡಲಗಾ ಜೈಲಿನಲ್ಲಿರುವ ಬಂಧಿಗಳಿಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ

ಕಾರಾಗೃಹ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಬಂಧಿಗಳಿಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿಯ ಉದ್ಘಾಟನಾ ಸಮಾರಂಭ ನೆರವೇರಿತು. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತಾ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಬೆಂಗಳೂರು. ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಾರ್ಯಲಯ ಬೆಳಗಾವಿ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೌಶಲ್ಯ …

Read More »

ಮುರುಘಾ ಮಠದಲ್ಲಿದೆ ಶಾಮನೂರು, ಯಡಿಯೂರಪ್ಪನವರ ದುಡ್ಡು’ : ಮಾಜಿ ಸಚಿವೆಯ ಸ್ಪೋಟಕ ಆಡಿಯೋ ವೈರಲ್

ಚಿತ್ರದುರ್ಗ : ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿದ ನಂತರ ದಾವಣಗೆರೆಯ ವಿರಕ್ತ ಮಠದ ಶ್ರೀ ಬಸವಪ್ರಭು ಅವರನ್ನು ಮುರುಘಾ ಮಠದ ಉಸ್ತುವಾರಿ ಪೀಠಾಧಿಪತಿಯಾಗಿ ನೇಮಿಸಲಾಗಿದೆ.   ಇದರ ನಡುವೆ ಮಾಜಿ ಸಚಿವೆ ರಾಣಿ ಸತೀಶ ಆಡಿಯೋ ಸಂಭಾಷಣೆಯೊಂದು ವೈರಲ್ ಆಗಿದೆ. ಮಠದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹಾಗೂ ಶಾಮನೂರು ಶಿವಶಂಕರಪ್ಪನವರ ಹಣವಿದೆ ಎನ್ನುವ ವಿಚಾರ ಈ ಆಡಿಯೋದಲ್ಲಿದೆ. …

Read More »

ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮ: ಮತ್ತೆ ಇಬ್ಬರ ಬಂಧನ

ಬೆಳಗಾವಿ: ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ, ಮಂಗಳವಾರ ಪೊಲೀಸರು ಮತ್ತೆ ಇಬ್ಬರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಸೋಮವಾರ 20 ಮಂದಿಗೆ ಜಾಮೀನು ಕೂಡ ಸಿಕ್ಕಿದೆ.   ಗೋಕಾಕ ತಾಲ್ಲೂಕಿನ ಲೋಳಸೂರ ಗ್ರಾಮದ ಯಲ್ಲಪ್ಪ ಮಹದೇವ ರಕ್ಷಿ (26) ಹಾಗೂ ಚಿಕ್ಕೋಡಿ ತಾಲ್ಲೂಕಿನ ಜಾಗನೂರ ಗ್ರಾಮದ ನಾಗಪ್ಪ ಶಿವಪ್ಪ ದೊಡಮನಿ (27) ಬಂಧಿತರು. ನಾಗಪ್ಪ ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ಸ್‌ ಉಪಕರಣ ತೆಗೆದುಕೊಂಡು ಹೋಗಿ …

Read More »

ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆ ಅಕ್ರಮ; ಇತ್ತ ಜಾಮೀನು- ಅತ್ತ ಬಂಧನ

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯಲ್ಲಿ ಅಕ್ರಮ ಎಸಗಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲ 20 ಮಂದಿಗೂ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಗೋಕಾಕದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಜಿ.   ಪ್ರಕರಣದ ವಿಚಾರಣೆ ನಡೆಸಿದ ಗೋಕಾಕದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಜಿ. ರಾಜೀವ್‌ ಅವರು ಪ್ರಮುಖ ಆರೋಪಿ ಸಂಜೀವ ಭಂಡಾರಿ ಸೇರಿ ಎಲ್ಲರಿಗೂ ಜಾಮೀನು ನೀಡಿದರು. ಗೋಕಾಕ ನಗರದ ಜಿಎಸ್‌ಎಸ್ ಪರೀಕ್ಷಾ ಕೇಂದ್ರದಲ್ಲಿ ಆಗಸ್ಟ್‌ …

Read More »

ಪುತ್ತೂರು: ಸರಣಿ ಕಳ್ಳತನ ಪ್ರಕರಣ ಅಂತಾರಾಜ್ಯ ಕಳ್ಳನ ಸೆರೆ

ಪುತ್ತೂರು: ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಯ್ಯೂರು ಗ್ರಾಮದ ಕಟ್ಟತ್ತಾರು, ಕೆಯ್ಯೂರು, ಮಾಡಾವು ಪರಿಸರದಲ್ಲಿ ಸರಣಿ ಮನೆ ಕಳ್ಳತನ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಅಂತಾರಾಜ್ಯ ಕಳ್ಳನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.   ಕೇರಳದ ಕಣ್ಣೂರು ಜಿಲ್ಲೆಯ ತಲಿಪೆಂಬ ತಾಲೂಕಿನ ಅಲಕೋಡು ಗ್ರಾಮದ ವರಂಬಿಲ್‌ ನಿವಾಸಿ ಆರೋಪಿ ಮಹಮ್ಮದ್‌ ಕೆ.ಯು. (42)ಬಂಧಿತ ಆರೋಪಿ. ವಿಚಾರಣೆ ನಡೆಸಿದ ಸಮಯ ಆರೋಪಿಯು ಕಳೆದ ವರ್ಷ ಸವಣೂರು ಹಾಗೂ …

Read More »

ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತನಾಡುತ್ತಾರಷ್ಟೇ, ಧಮ್ ಇಲ್ಲ: ಸಿಎಂ ಬೊಮ್ಮಾಯಿ

ಬೀದರ್: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಹಗರಣ ಮತ್ತು ಅವ್ಯವಹಾರ ಸಂಬಂಧ ಎಲ್ಲ ಮಾಹಿತಿ, ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ಮುಟ್ಟಿಸುತ್ತೇನೆ. ಅವರು ಏನು ಶಿಕ್ಷೆ ಕೊಡುತ್ತಾರೆ ಕಾದು ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಹಾಕಿದ್ದಾರೆ.   ಔರಾದ ಪಟ್ಟಣದಲ್ಲಿ ಮಂಗಳವಾರ ‘ಜನಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, 2016ರ ಶಿಕ್ಷಕರ ನೇಮಕಾತಿ ಹಗರಣ, ಪ್ರಾಸಿಕ್ಯೂಟರ್ ಮತ್ತು ಪೊಲೀಸ್ ನೇಮಕಾತಿಯಲ್ಲಿನ ಹಗರಣ ಸೇರಿ ಎಲ್ಲ …

Read More »

ಪಿಎಸಿಎಲ್‌ ಹಗರಣ : ಇನ್‌ಸ್ಪೆಕ್ಟರ್ ಬಿ.ಕೆ.ಕಿಶೋರ್‌ ಕುಮಾರ್‌ ಅಮಾನತು

ಆನೇಕಲ್ : ಪಿಎಸಿಎಲ್‌ ಹಗರಣಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಭೂಮಾರಾಟದ ತನಿಖೆ ನಡೆಯುತ್ತಿದ್ದು ಆಂತರಿಕ ಭದ್ರತಾ ವಿಭಾಗದ ಇನ್‌ಸ್ಪೆಕ್ಟರ್‌ ಬಿ.ಕೆ.ಕಿಶೋರ್‌ ಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.   ಅಮಾನತು ಆದೇಶವನ್ನು ಇವರ ಕುಟುಂಬಕ್ಕೆ ತಲುಪಿಸಲಾಗಿದೆ ಎನ್ನಲಾಗಿದೆ. ಪರ್ಲ್ಸ್‌ ಆಗ್ರೊಟೆಕ್‌ ಕಾರ್ಪೊರೇಷನ್‌ ಲಿಮಿಟೆಟ್ ಕಂಪನಿಗೆ ಸೇರಿದ ಆನೇಕಲ್‌ ತಾಲ್ಲೂಕಿನ ಎಂ.ಮೇಡಹಳ್ಳಿಯ 12.30 ಎಕರೆ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಮಾರಾಟ ಮಾಡಲಾಗಿತ್ತು. ಈ …

Read More »

ಮೀಸಲಾತಿ ಹೋರಾಟಕ್ಕೆ ಸಜ್ಜಾಗಿ: ನಿರ್ಮಲಾನಂದನಾಥ ಶ್ರೀ

ಕೋಲಾರ: ಮೀಸಲಾತಿ ಹೋರಾ ಟಕ್ಕೆ ಸ್ವಾಮೀಜಿಗಳು ಕರೆ ನೀಡಿದಾಗ ಬರಲು ಒಕ್ಕಲಿಗರು ಸಿದ್ಧರಿರಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ಕರೆ ನೀಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರವಾಗಿ 1993 ರಲ್ಲಿ ದೊಡ್ಡ ಚಳವಳಿ ನಡೆದಿತ್ತು. ಅಂಥ ಮತ್ತೊಂದು ಹೋರಾಟದ ಅಗತ್ಯ ಇರುವ ಬಗ್ಗೆ ಸಮುದಾಯದ ಮುಖಂಡರು ಮಾತನಾ ಡುತ್ತಿದ್ದಾರೆ. ಜತೆಗೆ ಬೆಂಗಳೂರು ಸುತ್ತಮುತ್ತಲಿನ ಭಾಗದಲ್ಲಿ ಒಕ್ಕಲಿಗರ ಭೂಮಿ ಕೈ ತಪ್ಪುತ್ತಿದೆ. ಮುಂದೆ ಹೋರಾಟ ಅನಿವಾರ್ಯ …

Read More »

ಕಾಂಗ್ರೆಸ್ ‘ಭಾರತ್ ಜೋಡೋ ಯಾತ್ರೆ’ ಆಂಧ್ರ ಪ್ರದೇಶಕ್ಕೆ ಪ್ರವೇಶ

ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಬಳ್ಳಾರಿ ಪ್ರವೇಶಿಸಿ 1000 ಕಿ.ಮೀ ಪೂರೈಸಿದ ಬಳಿಕ ಯಾತ್ರೆಯು ಮಂಗಳವಾರ ಆಂಧ್ರಪ್ರದೇಶ ತಲುಪಿದೆ. ಕರ್ನೂಲ್: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಬಳ್ಳಾರಿ ಪ್ರವೇಶಿಸಿ 1000 ಕಿ.ಮೀ ಪೂರೈಸಿದ ಬಳಿಕ ಯಾತ್ರೆಯು ಮಂಗಳವಾರ ಆಂಧ್ರಪ್ರದೇಶ ತಲುಪಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಉತ್ತಮ ಸ್ಪಂದನೆ ಪಡೆದಿರುವ ಯಾತ್ರೆಯು ಇದೀಗ ಆಂಧ್ರಪ್ರದೇಶ ತಲುಪಿದ್ದು, ಆಂಧ್ರಪ್ರದೇಶದಲ್ಲಿ ಯಾವ ರೀತಿ ಸದ್ದು ಮಾಡಲಿದೆ …

Read More »