Breaking News

10 ಉಗ್ರರ ಖಾತೆಗಳ ಮಾಹಿತಿಯ ವರದಿ ನೀಡಿ : ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

ಮುಂಬಯಿ : ಈ ತಿಂಗಳ ಆರಂಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಉಗ್ರರೆಂದು ಗೊತ್ತುಪಡಿಸಿದ 10 ವ್ಯಕ್ತಿಗಳನ್ನು ಹೋಲುವ ಖಾತೆಗಳ ಬಗ್ಗೆ ಸರಕಾರಕ್ಕೆ ವಿವರವಾದ ವರದಿ ನೀಡುವಂತೆ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಗುರುವಾರ ತಿಳಿಸಿದೆ.   ಅಕ್ಟೋಬರ್ 4 ರಂದು, ಕೇಂದ್ರ ಗೃಹ ಸಚಿವಾಲಯವು ಹಿಜ್ಬುಲ್ ಮುಜಾಹಿದ್ದೀನ್ , ಲಷ್ಕರ್-ಎ-ತೈಬಾ ಮತ್ತು ಇತರ ನಿಷೇಧಿತ ಸಂಘಟನೆಗಳ ಒಟ್ಟು 10 ಸದಸ್ಯರನ್ನು ಯುಎಪಿಎ ಕಾಯ್ದೆಯ ಅಡಿಯಲ್ಲಿ ಉಗ್ರರೆಂದು ಗೊತ್ತುಪಡಿಸಿದೆ. …

Read More »

ಪಣಜಿ: ಮಾದಕ ವಸ್ತು ಮಾರಾಟ ಪ್ರಕರಣ; ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ

ಪಣಜಿ: ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಪ್ರತಿ ವರ್ಷ ದೇಶೀಯ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ್ದರಿಂದ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮಾಹಿತಿ ನೀಡಿದರು. ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎಂಟಿ ನಾರ್ಕೋಟಿಕ್ಸ್ ಸೆಲ್ ಅನ್ನು ಬಲಿಷ್ಠಗೊಳಿಸಲು ಅದರ ಸಿಬ್ಬಂದಿಯನ್ನು ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಮಾದಕ ದ್ರವ್ಯ ಪ್ರಕರಣಗಳಲ್ಲಿ …

Read More »

ನ.11ರಂದು ವಿವಿಧ ಕಾರ್ಯಕ್ರಮಗಳಿಗೆ ಮೋದಿ ಚಾಲನೆ: P.M. ಜೊತೆ C.M. ವಿಡಿಯೊ ಸಂವಾದ

  ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನ. 11ರಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ನಗರಕ್ಕೆ ಬರಲಿದ್ದು, ಕಾರ್ಯಕ್ರಮಗಳ ಸಿದ್ಧತೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಅವರು ಗುರುವಾರ ವಿಡಿಯೊ ಸಂವಾದದ ಮೂಲಕ ಚರ್ಚಿಸಿದರು.   ಅಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ಅನಾವರಣ ಮಾಡಲಿದ್ದಾರೆ. ಬಳಿಕ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ಭೇಟಿಯ ಸಂದರ್ಭದಲ್ಲಿ ಪಾಲ್ಗೊಳ್ಳಲಿರುವ …

Read More »

ಆಹ್ವಾನ ಪತ್ರಿಕೆಯಲ್ಲಿ ದಿವಂಗತ ಶಾಸಕ ಆನಂದ ಮಾಮನಿ ಹೆಸರು ಶಿಕ್ಷಣ ಇಲಾಖೆಯ ಯಡವಟ್ಟು..!

ದಿವಗಂತ ಶಾಸಕ ಆನಂದ ಮಾಮನಿ ಹೆಸರು ಆಹ್ವಾನ ಪತ್ರಿಕೆಯಲ್ಲಿ ಹಾಕಿ ಅದ್ವಾನವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರಾಥಮಿಕ ಪ್ರೌಢ ಶಾಲೆಗಳ ಕ್ರೀಡಾಕೂಟ ಆಯೋಜಿಸಲಾಗಿದೆ. ಇದರ ಆಹ್ವಾನ ಪತ್ರಿಕೆಯಲ್ಲಿ ದಿವಂಗತ ಶಾಸಕ ಆನಂದ ಮಾಮನಿ ಹೆಸರನ್ನು ಹಾಕಿದ್ದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ತಿಂಗಳ ಅಕ್ಟೋಬರ್ 23ರಂದು ಸವದತ್ತಿ ಶಾಸಕರು ಹಾಗೂ ವಿಧಾನಸಭೆಉ ಉಪಸಭಾಧ್ಯಕ್ಷರು ಆಗಿದ್ದ ಆನಂದ ಮಾಮನಿ ನಿಧನ ಹೊಂದಿದ್ದರು. ನಾಳೆ ಶುಕ್ರವಾರ ನಡೆಯಲಿರುವ ಕ್ರೀಡಾಕೂಟ ಕಾರ್ಯಕ್ರಮದ …

Read More »

ಮಹಾನಗರ ಪಾಲಿಕೆ ಮುಂಭಾಗದ ಕನ್ನಡ ಬಾವುಟ ಹಾರಾಡುತ್ತಿದೆ. ಆದರೆ ಇದೀಗ ಆ ಬಾವುಟಕ್ಕೆ ಅಪಮಾನ:

ಕನ್ನಡ ಹೋರಾಟಗಾರರ ಹೋರಾಟದ ಪರಿಣಾಮ ಬೆಳಗಾವಿಯ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಇಂದು ಕನ್ನಡ ಬಾವುಟ ಹಾರಾಡುತ್ತಿದೆ. ಆದರೆ ಇದೀಗ ಆ ಬಾವುಟಕ್ಕೆ ಅಪಮಾನ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹರಿದ ಬಾವುಟವೇ ಹಾರಾಡುತ್ತಿರೋದು ಸಧ್ಯ ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಹರಿದ ಕನ್ನಡ ಬಾವುಟವೇ ಹಾರಾಡುತ್ತಿದೆ. ಮಳೆ, ಗಾಳಿಗೆ ಹರಿದ ಕನ್ನಡ ಬಾವುಟ ಬದಲಾಯಿಸಲು ಪಾಲಿಕೆ ಮುಂದಾಗುತ್ತಿಲ್ಲ. ಕನ್ನಡ ರಾಜ್ಯೋತ್ಸವ ಹೊಸ್ತಿಲಿನಲ್ಲಿ ಯಡವಟ್ಟಾಗಿದೆ. …

Read More »

ಊಟ ಮಾಡಿ ಮಲಗಿದ್ದ ಹೆಂಡತಿಯನ್ನ ಸಾರಾಯಿ ಕುಡಿದ ನಶೆಯಲ್ಲಿ ಹತ್ಯೆ ಮಾಡಿರುವ ಪಾಪಿ ಪತಿ

ಊಟ ಮಾಡಿ ಮಲಗಿದ್ದ ಹೆಂಡತಿಯನ್ನ ಸಾರಾಯಿ ಕುಡಿದ ನಶೆಯಲ್ಲಿ ಪಾಪಿ ಪತಿ ಹತ್ಯೆ ಮಾಡಿರುವ ಬೆಚ್ಚಿ ಬೀಳಿಸುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ ಪಾಂಡುರಂಗ ಹಾರೂಗೇರಿ(55) ಗಂಡನಿಂದ ಕೊಲೆಯಾದ ಪತ್ನಿ. ಪಾಂಡುರಂಗ ಹಾರೂಗೇರಿ ಹೆಂಡತಿಯನ್ನು ಕೊಲೆ ಮಾಡಿದ ಪಾಪಿ ಪತಿ. ಹೆಂಡತಿಯನ್ನು ಕೊಂದು ತಲೆ ಮರೆಸಿಕೊಂಡ ಪತಿಯನ್ನು ಪೆÇೀಲೀಸರು ಪತ್ತೆ ಮಾಡುತ್ತಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮೂಡಲಗಿ ಪೆÇಲೀಸರು …

Read More »

ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ

ಮೂರು ದಿನಗಳ ಹಿಂದೆ ಬೆಳಗಾವಿ ತಾಲೂಕಿನ ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಮುಳುಗಿದ್ದ ಯುವಕನ ಶವ ಪತ್ತೆಯಾಗಿದೆ. ಹೌದು ಮಂಗಳವಾರ ಸಾಯಂಕಾಲ ಮೂವರು ಸ್ನೇಹಿತರು ದೀಪಾವಳಿ ಹಬ್ಬದ ಮೋಜು ಮಸ್ತಿ ಮಾಡುತ್ತಾ, ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ನೀರಿಗೆ ಇಳಿದಿದ್ದರು. ಇದರಲ್ಲಿ ಅನಗೋಳದ 22 ವರ್ಷದ ಸತೀಶ ಹನಮನ್ನವರ ಎಂಬ ಯುವಕ ನೀರಿನಲ್ಲಿ ಮುಳುಗಿದ್ದ. ಈತನ ಸ್ನೇಹಿತರು ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿದ್ದರು. ಸುದ್ದಿ …

Read More »

ಭಕ್ತಿ ಭಾವದಿಂದ ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬ

ಹುಬ್ಬಳ್ಳಿ, ಅಕ್ಟೋಬರ್ 26 : ರಾಜ್ಯದ ಹಲವೆಡೆ ಈಗ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ. ವರ್ಷಗಳಿಂದ ಒಂದಿಲ್ಲೊಂದು ವಿಷಯಕ್ಕೆ ಕೋಮು ಭಾವನೆ ಕೆರಳಿಸುವ ಪ್ರಕರಣಗಳು ನಡೀಯುತ್ತಲೇ ಇವೆ. ಆದರೆ ಕುಂದಗೋಳ ತಾಲೂಕ ಗುಡನಕಟ್ಟಿ ಗ್ರಾಮದ ಮುಸ್ಲಿಂ ಕುಟುಂಬ ದೀಪಾವಳಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಸಾರೆ.   ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಒಂದಿಲ್ಲೊಂದು ವಿಷಯದಲ್ಲಿ ಕೋಮು ಸಂಘರ್ಷಗಳು ನಡೆಯುತ್ತಲೆ ಇವೆ. ಆದರೆ ದೇಶದಲ್ಲಿ ಕೆಲವು ಭಾಗದ ಜನ ಈಗಲೂ …

Read More »

ಖರ್ಗೆಯಿಂದ ಕಾಂಗ್ರೆಸ್‌ ಉನ್ನತ ಸಮಿತಿ ರಚನೆ: ಸೋನಿಯಾ ಸೇರಿ 47 ಜನರಿಗೆ ಸ್ಥಾನ

ನವದೆಹಲಿ: ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷರಾಗಿ ಬುಧವಾರ ಅಧಿಕಾರವಹಿಸಿಕೊಂಡಿರುವ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ್‌ ಖರ್ಗೆ, ಪಕ್ಷದ ಉನ್ನತ ಸಮಿತಿ ರಚಿಸಿದ್ದಾರೆ. ಸೋನಿಯಾ ಗಾಂಧಿ, ಮನ್‌ಮೋಹನ್‌ ಸಿಂಗ್‌, ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ 47 ಮಂದಿ ಪ್ರಮುಖರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.   ಈ ಸಮಿತಿಯು ಪಕ್ಷದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಜಾಗದಲ್ಲಿ ಕೆಲಸ ಮಾಡಲಿದೆ. ಕಾರ್ಯಕಾರಿ ಸಮಿತಿಯ ಹೊಸ ಸದಸ್ಯರನ್ನು ಮುಂದಿನ ಎಐಸಿಸಿ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಪಕ್ಷಕ್ಕೆ …

Read More »

ಬಿಜೆಪಿ, ಕಾಂಗ್ರೆಸ್‌ನವರು ಬಸ್ ಸ್ಟಾಂಡ್ ಬಸವೆಯರ ತರಹ ಅಗಿದ್ದಾರೆ-ಸಿ.ಎಂ. ಇಬ್ರಾಹಿಂ

ಹುಬ್ಬಳ್ಳಿ ಅಕ್ಟೋಬರ್‌ 26: ಬಿಜೆಪಿ, ಕಾಂಗ್ರೆಸ್‌ನವರು ಬಸ್ ಸ್ಟಾಂಡ್ ಬಸವೆಯರ ತರಹ ಆಗಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ನವರೆಗೆ ಮಾನ ಮರ್ಯಾದೆ,ಜೈಲ್, ಬೇಲು ಇಲ್ಲದಂತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.   ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸ್ಥಾನ ಇಲ್ಲ ಮಾನ ಇದೆ ಆದರೆ ಬಿಜೆಪಿಯಲ್ಲಿ 12 ಜನರ ವಿಡಿಯೋ ಸಲುವಾಗಿ ಬೇಲ್ ತೆಗೆದುಕೊಂಡು ಕುಳಿತಿದ್ದಾರೆ. ಅದರಲ್ಲಿ ಏನು ಇದೆ ಅಂತ …

Read More »