ಚಿಕ್ಕಮಗಳೂರು: ವಿನಯ್ ಗುರೂಜಿ ಸಲಿಂಗಕಾಮಿಯಾಗಿದ್ದು, ಆತನ ನನ್ನೊಂದಿಗೆ ಒಂದು ದಿನ ಅಸಭ್ಯವಾಗಿ ವರ್ತಿಸಿದ್ದ ಅಂತ ವಿನೋದ್ ಎನ್ನುವ ವ್ಯಕ್ತಿಯೊಬ್ಬರು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ವಿನೋದ್ ವಿಡಿಯೋದಲ್ಲಿ ಹೇಳಿರೋದು ಏನು? : ನಾನು ವಿನಯ್ ಸ್ನೇಹಿತರು, ದೂರದಲ್ಲಿ ನನ್ನ ಸಂಬಂಧಿ ಕೂಡ ಆಗಬೇಕು, ವಿನಯ್ ತೀರ್ಥಹಳ್ಳಿಯಲ್ಲಿ ಕೆಲಸದಲ್ಲಿ ಇರೋ ಟೈಮ್‌ನಲ್ಲಿ ಅನೈತಿಕ ಕೆಲಸಗಳನ್ನು ಮಾಡುತ್ತಿದ್ದ, ಇದಲ್ಲದೇ ಮಣಿಪಾಲ್‌ಗೆ ಹೋಗೋಣಾ ಬಾ ಮಾಲ್ ಇದೇ ಅಂತ …
Read More »ಈಗ ಜನ ಸಂಕಲ್ಪ ಯಾತ್ರೆ, ಮುಂದೆ ವಿಜಯ ಯಾತ್ರೆ: ಬಸವರಾಜ ಬೊಮ್ಮಾಯಿ
ರಾಯಬಾಗ: ‘ಈಗ ನಾವು ನಡೆಸುತ್ತಿರುವ ಬಿಜೆಪಿ ಜನ ಸಂಕಲ್ಪ ಯಾತ್ರೆಗಳು ಮುಂದಿನ ಚುನಾವಣೆಯ ಬಳಿಕ ವಿಜಯ ಯಾತ್ರೆಗಳಾಗಿ ನಡೆಯಲಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ’60 ವರ್ಷ ಕಾಂಗ್ರೆಸ್ ಆಡಳಿತವನ್ನು ಜನ ನೋಡಿದ್ದಾರೆ. ಯಾವ ಭಾಗ್ಯವೂ ಜನರನ್ನು ಮುಟ್ಟಲಿಲ್ಲ. ಕಾಂಗ್ರೆಸ್‌ನ ದುರಾಡಳಿತ ಮತ್ತು ಅವರ ದೌರ್ಭಾಗ್ಯ ಜನರಿಗೆ ಬೇಡವಾಗಿದೆ’ ಎಂದರು. ‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜಗಳವೇ …
Read More »ಕೇಂದ್ರದ ಬಿಜೆಪಿ ಸರ್ಕಾರ ನೀಡಿದ ಅನ್ನದಲ್ಲೂ ಕನ್ನ ಹಾಕಿದವರು ಸಿದ್ದರಾಮಯ್ಯ: ಬೊಮ್ಮಾಯಿ
ರಾಯಬಾಗ : ‘ಕೇಂದ್ರ ಸರ್ಕಾರ ನೀಡಿದ ಅಕ್ಕಿ ಚೀಲಗಳ ಮೇಲೆ ಸಿದ್ದರಾಮಯ್ಯ ತಮ್ಮ ಫೋಟೊ ಅಂಟಿಸಿಕೊಂಡರು. ಬೆಂಗಳೂರು, ಬಳ್ಳಾರಿ, ಮಂಗಳೂರಿನ ಮಣ್ಣಿನಲ್ಲೂ ಸಾಕಷ್ಟು ತಿಂದರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಪಟ್ಟಣದಲ್ಲಿ ಬುಧವಾರ ಬಿಜೆಪಿ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ‘ಕೇಂದ್ರದ ಬಿಜೆಪಿ ಸರ್ಕಾರ ನೀಡಿದ ಅನ್ನದಲ್ಲೂ ಕನ್ನ ಹಾಕಿದವರು ಸಿದ್ದರಾಮಯ್ಯ. ಸಣ್ಣ ನೀರಾವರಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ದೊಡ್ಡ ಮೊತ್ತದ ಬಿಲ್ ತೆಗೆದು ಲೂಟಿ …
Read More »ನಕಲಿ ಚಿನ್ನ: 10 ಬ್ಯಾಂಕ್‌ಗಳಿಗೆ ವಂಚನೆ
ಬೆಳಗಾವಿ: ಜಿಲ್ಲೆಯ ಹತ್ತು ವಿವಿಧ ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆಗಳಲ್ಲಿ ನಕಲಿ ಚಿನ್ನದ ಮೇಲೆ ಸಾಲ ಪಡೆದ ಒಂಬತ್ತು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯ ಭೋಜ ಶಾಖೆಯ ವ್ಯವಸ್ಥಾಪಕ ಸದಲಗಾ ಗ್ರಾಮದ ಆನಂದ ಚಿದಾನಂದ ಕಮತೆ ಅವರು ದೂರು ನೀಡಿದ ನಂತರ ಈ ಪ್ರಕರಣಗಳು ಬೆಳಕಿಗೆ ಬಂದಿವೆ. ಭೋಜ ಗ್ರಾಮದ ನಿವಾಸಿ ದಾದಾ ಸಾಹೇಬ ದತ್ತು ತಿಲಕ …
Read More »ಬೆಳಗಾವಿ: ಅಧಿಕಾರಿಗಳಿಂದಲೇ ಬ್ಯಾಂಕಿಗೆ ಕನ್ನ!
ಬೆಳಗಾವಿ: ಕರ್ನಾಟಕ ವಿಕಾಸ ಗ್ರಾಮೀಣ (ಕೆವಿಜಿ) ಬ್ಯಾಂಕಿನ ಹುಕ್ಕೇರಿ ಶಾಖೆಯಲ್ಲಿ ₹ 1.73 ಕೋಟಿಗೂ ಅಧಿಕ ಹಣವನ್ನು ಅಕ್ರಮ ವರ್ಗಾವಣೆ ಮಾಡಿಕೊಳ್ಳಲಾಗಿದ್ದು, ಶಾಖಾ ವ್ಯವಸ್ಥಾಪಕ ಸೇರಿ ಆರು ನೌಕರರ ಮೇಲೆ ದೂರು ದಾಖಲಾಗಿದೆ. ಬ್ಯಾಂಕ್ ನೌಕರರೇ ‘ಸ್ಥಿರ ಠೇವಣಿ’ ಮೇಲಿನ ಸಾಲದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ರೀತಿಯ 21 ಮಂದಿಯ ನಕಲಿ ಕಾಗದ ಪತ್ರಗಳನ್ನು ಸಿದ್ಧಪಡಿಸಿ ₹ 1,73,50,000 ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು, ಹಣ …
Read More »ಕಬ್ಬು ಹೋರಾಟವನ್ನು ಕಡೆಗಣಿಸದಿರಿ: ರೈತರ ಕಟ್ಟಕಡೆಯ ಎಚ್ಚರಿಕೆ!
ಬಾಗಲಕೋಟೆ: ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಇಂದು ಮುಧೋಳ ನಗರದಲ್ಲಿ ರೈತ ಮುಖಂಡರ ಜತೆ ಸಭೆ ನಡೆಸಿದರು. ಸಭೆಯಲ್ಲಿ ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಕೂಡ ಹಾಜರಿದ್ದರು. ಈ ವೇಳೆ ‘ಕಬ್ಬು ಬೆಳೆಗಾರರು ಶಾಂತ ರೀತಿಯಲ್ಲಿ ಹೋರಾಟ ಮಾಡಬೇಕು, ಎಂತಹ ಸಂದರ್ಭದಲ್ಲೂ ರೈತರು ಕಾನೂನು ಕೈಗೆ ತೆಗೆದುಕೊಳ್ಳಬಾರದು’ ಎಂಬ ಕಿವಿಮಾತನ್ನು ಹೇಳಿದರು. ಇದೇ ವೇಳೆ ಮಾತನಾಡಿದ ರೈತರು, ‘ಕಬ್ಬಿನ ಹಂಗಾಮು ಪ್ರಾರಂಭವಾಗಿ …
Read More »ಜನಾರ್ದನರೆಡ್ಡಿ ರಾಜಕೀಯದಲ್ಲಿ ಸಕ್ರಿಯ ಆಗುತ್ತಿದ್ದಂತೆ ಗಣಿ ಅಕ್ರಮ ಕೇಸ್‌ಗಳಿಗೆ ಸಿಕ್ಕಿತು ವೇಗ!
ಬಳ್ಳಾರಿ: ಕಾಕತಾಳೀಯವೋ ಏನೋ… ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯದಲ್ಲಿ ಮತ್ತೆ ಸಕ್ರಿಯ ಆಗುತ್ತಿದ್ದಂತೆ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ವೇಗ ಸಿಕ್ಕಿದಂತಾಗಿದೆ. ಸುಪ್ರಿಂ ಕೋರ್ಟ್ ಸೂಚನೆ ಮೇರೆಗೆ ಇಂದಿನಿಂದ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ತ್ವರಿತ ವಿಚಾರಣೆ ನಡೆಸಲಿದೆ. ಹೈದ್ರಾಬಾದ್ನಲ್ಲಿರುವ ಸಿಬಿಐ ವಿಶೇಷ ಕೋರ್ಟ್ನಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆ ಇಂದಿನಿಂದ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸಾಕ್ಷಿ ಉದ್ಯಮಿ ಟಪಾಲ್ ಏಕಾಂಬರಂಗೆ ನ್ಯಾಯಾಲಯಕ್ಕೆಗೆ ಹಾಜರಾಗುವಂತೆ ಸಮನ್ಸ್ …
Read More »ದೆಹಲಿಯಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಲ್ಲ: B.S.Y.
ಬೆಂಗಳೂರು: ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲೆಂದು ದೆಹಲಿಗೆ ತೆರಳುತ್ತಿರುವೆ. ಅಲ್ಲಿಗೆ ಹೋದಾಗ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಕಾವೇರಿ ನಿವಾಸದ ಬಳಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿಎಸ್ವೈ, ಚುನಾವಣಾ ದೃಷ್ಟಿಯಿಂದ ನಡೆಯುತ್ತಿರುವ ಈ ಸಭೆಯಲ್ಲಿ ಪಾಲ್ಗೊಂಡಾಗ ವರಿಷ್ಠರೆಲ್ಲರ ಭೇಟಿ ಸಹಜ. ಔಪಚಾರಿಕವಾಗಿ ಮಾತುಕತೆಯಾಗಬಹುದೇ ಹೊರತು ರಾಜ್ಯ ರಾಜಕಾರಣ, ನಮ್ಮ ಪಕ್ಷದ ಬಗ್ಗೆ ಚರ್ಚಿಸುವುದಿಲ್ಲ ಎಂದು …
Read More »ಮಾರಾಮಾರಿ ಹಂತಕ್ಕೆ ಒಂದೇ ಪಕ್ಷದ ಇಬ್ಬರು ಎಂಎಲ್ಎಗಳ ಬ್ರದರ್ಸ್!
ವಿಜಯಪುರ: ಒಂದೇ ಪಕ್ಷದ ಇಬ್ಬರು ಎಂಎಲ್ಎಗಳ ಸಹೋದರರು ಮಾರಾಮಾರಿ ಹಂತಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರೂ ಕಾಂಗ್ರೆಸ್ ಶಾಸಕರ ಸಹೋದರರೇ. ಒಬ್ಬ ಕಾಂಗ್ರೆಸ್ ಪಕ್ಷದ ಶಾಸಕ ಎಂ.ಬಿ. ಪಾಟೀಲ್ ಸಹೋದರ, ಮತ್ತೊಬ್ಬ ಅದೇ ಕಾಂಗ್ರೆಸ್ ಪಾರ್ಟಿ ಶಾಸಕ ಶಿವಾನಂದ ಪಾಟೀಲ್ ಸಹೋದರ. ಈ ಇಬ್ಬರು ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರ ಗಲಾಟೆಗೆ ಕಾರಣ ಒಂದೇ: ತಳವಾರ ಸಮುದಾಯಕ್ಕೆ …
Read More »ಪೊಲೀಸ್ ಮನೆಗೇ ಹೊಕ್ಕ ಕಳ್ಳರು; ಪರಾರಿ ಆಗುವಾಗ ಅಡ್ಡಬಂದ ಎಎಸ್‌ಐ ಪುತ್ರನಿಗೆ ಗುಂಡೇಟು..
ಪೊಲೀಸೊಬ್ಬರ ಮನೆ ಮೇಲೆಯೇ ಕಳ್ಳರು ದಾಳಿ ಮಾಡಿದ್ದು, ಅಡ್ಡ ಬಂದ ಎಎಸ್‌ಐ ಹಾಗೂ ಅವರ ಪುತ್ರನತ್ತ ಶೂಟ್ ಮಾಡಿದ್ದು, ಎಎಸ್‌ಐ ಪುತ್ರ ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕು ಪೇರೇಸಂದ್ರ ಗ್ರಾಮದಲ್ಲಿ ಎಎಸ್‌ಐ ನಾರಾಯಣಸ್ವಾಮಿ ಮನೆ ಮೇಲೆ ದಾಳಿ ನಡೆದಿದೆ. ಇವರು ಬಾಗೇಪಲ್ಲಿ ಠಾಣೆಯಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮನೆಗೆ ನುಗ್ಗಿದ್ದ ಕಳ್ಳರು, ಮನೆಯಲ್ಲಿದ್ದ ಎಎಸ್‌ಐ ಪತ್ನಿ ಹಾಗೂ ಸೊಸೆಗೆ ಬೆದರಿಸಿ ಮಾಂಗಲ್ಯ ಸರ …
Read More »